»   » ಕಲಾವಿದನಾಗಲು ದಾವಣಗೆರೆ ಗೋವಿಂದೇಗೌಡ ಬೆಂಗಳೂರಿನಲ್ಲಿ ಪಟ್ಟ ಕಷ್ಟ ಅಷ್ಟಿಷ್ಟಲ್ಲ..

ಕಲಾವಿದನಾಗಲು ದಾವಣಗೆರೆ ಗೋವಿಂದೇಗೌಡ ಬೆಂಗಳೂರಿನಲ್ಲಿ ಪಟ್ಟ ಕಷ್ಟ ಅಷ್ಟಿಷ್ಟಲ್ಲ..

Posted By:
Subscribe to Filmibeat Kannada

ಕನ್ನಡ ಕಿರುತೆರೆಯ ಹೆಮ್ಮೆಯ ಕಾರ್ಯಕ್ರಮ 'ಕಾಮಿಡಿ ಕಿಲಾಡಿಗಳು' ಫಿನಾಲೆ ನಿನ್ನೆಯಷ್ಟೇ(ಮಾರ್ಚ್ 12) ಮುಗಿದು, ವಿಜೇತರ ಪಟ್ಟಿ ಹೊರಬಿದ್ದಿದೆ. 'ಕಾಮಿಡಿ ಕಿಲಾಡಿಗಳು' ಶೋ ನಲ್ಲಿ ದಾವಣಗೆರೆಯ ಗೋವಿಂದೇಗೌಡ ಅವರು ಮೂರನೇ ಸ್ಥಾನ ಪಡೆದು ಹೊರಹೊಮ್ಮಿದ್ದಾರೆ.

ಸತತವಾಗಿ 12 ವಾರಗಳು ನಡೆದ 'ಕಾಮಿಡಿ ಕಿಲಾಡಿಗಳು' ಕಾರ್ಯಕ್ರಮದಲ್ಲಿ ಗೋವಿಂದೇಗೌಡ ಪಾಪಿ ಗಂಡನಾಗಿ, ಬಾವ-ಬಾಮೈದ, ಅಪ್ಪನ ಪಾತ್ರಗಳಿಂದ ನಿಮ್ಮನ್ನೆಲ್ಲಾ ನಗಿಸಿದ್ದಾರೆ. ಆದ್ರೆ ಚಿಕ್ಕಂದಿನಿಂದಲೇ ಅಮ್ಮ ಹಾಡುವ ಭಜನೆಗಳು, ಜಾನಪದ ಕಥೆಗಳನ್ನು ಕೇಳಿಕೊಂಡು ಕಲಾವಿದನಾಗಲು ಇವರು ಪಟ್ಟ ಕಷ್ಟ ಅಷ್ಟಿಷಲ್ಲ. ಅವರು ಈ ವೇದಿಕೆಗೆ ಬರುವ ಮೊದಲು ಏನ್ ಮಾಡ್ತಿದ್ರು, ಒಬ್ಬ ಕಲಾವಿದನಾಗಿ ಗುರುತಿಸಿಕೊಳ್ಳಲು ಎಷ್ಟೆಲ್ಲಾ ಕಷ್ಟಪಟ್ಟಿದ್ದಾರೆ ಎಂಬುದು ಮಾತ್ರ ಯಾರಿಗು ತಿಳಿಯದ ವಿಷಯ.

ಅಮ್ಮನ ಪ್ರೀತಿಯನ್ನು ಬಹುಬೇಗ ಕಳೆದುಕೊಂಡ ದಾವಣಗೆರೆ ಗೋವಿಂದೇಗೌಡ ಇಂದು ಒಬ್ಬ ಹಾಸ್ಯ ಕಲಾವಿದನಾಗಿ ನಿಮ್ಮ ಮನಗೆದ್ದಿರಬಹುದು. ಆದರೆ ಅವರು ಬೆಳೆದು ಬಂದ ದಾರಿ ಮಾತ್ರ ಕಷ್ಟಕರವಾದುದು. ಅವರೊಂದಿಗೆ ನಿಮ್ಮ 'ಫಿಲ್ಮಿ ಬೀಟ್' ನಡೆಸಿದ ಸಂದರ್ಶನ ಇಲ್ಲಿದೆ...

ಸಂದರ್ಶನ - ಸುನೀಲ್ ಬಿಂಡಹಳ್ಳಿ

ನಿಮ್ಮ ಹಿನ್ನೆಲೆ ಹೇಳಿ..

-ನಮ್ಮೂರು ಮೂಲತಃ ದಾವಣಗೆರೆ. ಡಿಗ್ರಿ ಮುಗಿದ ನಂತರ ಬೆಂಗಳೂರಿಗೆ ಬಂದೆ. ಬೆಂಗಳೂರಿನ ಮುಕ್ತ ವಿಶ್ವಿವಿದ್ಯಾಲಯದಲ್ಲಿ ಕನ್ನಡ ವಿಷಯದಲ್ಲಿ ಎಂಎ ಸ್ನಾತಕೋತ್ತರ ಪದವಿ ಮುಗಿಸಿದ್ದೀನಿ. ಕಳೆದ 13 ವರ್ಷಗಳಿಂದ ಬೆಂಗಳೂರಿನಲ್ಲೇ ಉಳಿದುಕೊಂಡು ಸಿನಿಮಾ ಮತ್ತು ರಂಗಭೂಮಿ ಎರಡು ಕಡೆ ಕೆಲಸ ಮಾಡ್ತಿದಿನಿ.['ಕಾಮಿಡಿ ಕಿಲಾಡಿಗಳು' ಗೆಲ್ಲದಿದ್ದರೂ, ಬದುಕಿನ ಬಂಡಿಯಲ್ಲಿ ಲೋಕೇಶ್ ಅಪ್ರತಿಮ 'ಸಾಧಕ']

ಸಿನಿಮಾ, ರಂಗಭೂಮಿಯಲ್ಲಿ ಯಾವ ರೀತಿ ಕೆಲಸ ನಿಮ್ಮದು?

-ರಂಗ ಪರಂಪರೆ ನಾಟಕ ಸಂಸ್ಥೆಯಲ್ಲಿ ನಿರ್ದೇಶಕನಾಗಿ, ಕಲಾವಿದನಾಗಿ ಕೆಲಸ ಮಾಡಿದಿನಿ. ಬರಹಗಾರನಾಗಿ 15 ಕ್ಕೂ ಹೆಚ್ಚು ನಾಟಕಗಳನ್ನು ರಚನೆ ಮಾಡಿದಿನಿ. ಅಲ್ಲಿ ಹಾಸ್ಯಕ್ಕೆ ಹೆಚ್ಚು ಪ್ರಾಧಾನ್ಯತೆ ನೀಡಿದ ಪ್ರಯೋಗಾತ್ಮಕ ನಾಟಕಗಳನ್ನು ಮಾಡಿದಿನಿ. ನನ್ನ ಕೆಲವು ನಾಟಕಗಳು 25-50 ಬಾರಿ ಪ್ರದರ್ಶನಗೊಂಡಿವೆ.['ಕಾಮಿಡಿ ಕಿಲಾಡಿ' ಲೋಕೇಶ್ ಕುಮಾರ್ ಗೆ ಡಿಮ್ಯಾಂಡಪ್ಪೋ.. ಡಿಮ್ಯಾಂಡು.!]

ಹೆಚ್ಚು ಬಾರಿ ಪ್ರದರ್ಶನವಾದ ನಿಮ್ಮ ನಾಟಕ?

-'ಹರಿಕಥೆ' ಎಂಬ ಹಾಸ್ಯ ನಾಟಕ 110 ಪ್ರದರ್ಶನ ಕಂಡಿದೆ.[ಕನ್ನಡಿಗರಿಗೆ ಕಚಗುಳಿ ಇಟ್ಟು ನಗಿಸಿದ 'ಕಿಲಾಡಿ' ನರ್ಸ್ ದಿವ್ಯಶ್ರೀ ಸಂದರ್ಶನ]

ಕಲಾವಿದನಾಗುವ ಆಸೆ ಯಾವಾಗ್ಲಿಂದ ಶುರುವಾಗಿತ್ತು?

-ಚಿಕ್ಕಂದಿನಿಂದಲೂ ಆಸಕ್ತಿ ಇತ್ತು. ಯಾಕಂದ್ರೆ ನಮ್ಮ ತಾಯಿ ಭಜನೆಗಳನ್ನು ಹೆಚ್ಚು ಹಾಡುತ್ತಿದ್ದರು. ಜಾನಪದ ಕಥೆಗಳನ್ನು ಹೇಳುತ್ತಿದ್ದರು. ಅವುಗಳನ್ನೆಲ್ಲಾ ಕೇಳುತ್ತಾ ನನಗೆ ಚಿಕ್ಕಂದಿನಿಂದಲೇ ನಟನೆ ಮಾಡಬೇಕೆಂಬ ಆಸೆ ಹೆಚ್ಚಾಗಿತ್ತು. ಅವರಿಂದಲೇ ನನಗೆ ಆಕ್ಟಿಂಗ್ ಮಾಡಲು ಸ್ಫೂರ್ತಿ ಹೆಚ್ಚಿದ್ದು.['ಕಾಮಿಡಿ ಕಲಾವಿದ'ನಾಗಬೇಕೆಂಬ ಕನಸಿಗಾಗಿ 'ಚಕ್ರವ್ಯೂಹ' ಭೇದಿಸಿದ ಪ್ರವೀಣ್ ಕುಮಾರ್ ಗಸ್ತಿ]

ಹಾಸ್ಯ ಮಾಡುವುದು ಸುಲಭವೇ?

-ನಟನೆ ಅನ್ನೋದು ತುಂಬಾ ಕಷ್ಟ. ನನ್ನ ನಟನೆ ಗುರುತಿಸಿಕೊಳ್ಳಲು 12 ವರ್ಷಗಳಿಂದ ಬೆಂಗಳೂರಿನಲ್ಲಿ ಹಗಲು ರಾತ್ರಿ ಕಷ್ಟಪಟ್ಟಿದ್ದೇನೆ. ಅದರೆ ಮೊದಲಿಗೆ ಕಲೆಯನ್ನು ನನ್ನಲ್ಲಿ ನಾಲ್ಕನೇ ತರಗತಿಯಲ್ಲೇ ಗುರುತಿಸಿ ಪ್ರೋತ್ಸಾಹ ನೀಡಿದ್ದು ನಮ್ಮ ಗುರುಗಳು. ಅವರೇ ನನ್ನನ್ನ ಪಿಯುಸಿವರೆಗೂ ಮನೆ ಮಗನ ತರ ಓದಿಸಿದ್ರು. ಅವರು ನನ್ನಲ್ಲಿ ಗುರುತಿಸಿದ ಕಲೆ ಇಂದು ಜನರನ್ನು ನಗಿಸುವುದನ್ನು ಸುಲ
ಭಮಾಡಿಕೊಟ್ಟಿದೆ. ಅಲ್ಲದೇ ಒಂದು ಜೀವನ ರೂಪಿಸಿಕೊಳ್ಳಲು ಸಹಾಯ ಮಾಡಿದೆ. ಬಟ್ ಮೊದಲು ಯಾವುದೇ ಒಂದು ಪಾತ್ರವನ್ನು ನಾವೇ ಎಂಜಾಯ್ ಮಾಡದೇ ಜನರನ್ನು ನಗಿಸುವುದು ಕಷ್ಟ.['ಕಾಮಿಡಿ ಕಿಲಾಡಿ' ಮುತ್ತುರಾಜ್ ಯಾರು? ಅವರ ಹಿನ್ನೆಲೆ ಏನು?]

'ಕಾಮಿಡಿ ಕಿಲಾಡಿಗಳು' ವೇದಿಕೆಯಲ್ಲಿ ಇಷ್ಟವಾದ ಪಾತ್ರ ಯಾವುದು?

-ಈ ಜರ್ನಿಯಲ್ಲಿ ನನಗೆ ಆಲ್ ಮೋಸ್ಟ್ ಎಲ್ಲಾ ಪಾತ್ರಗಳು ಇಷ್ಟವಾಗಿವೆ. ಬಾವ-ಬಾಮೈದ, ಸುಶಿಗೆ ಪಾಪಿ ಗಂಡನಾಗಿ ಅಭಿನಯಿಸಿದ್ದು, ಹೆಚ್ಚಾಗಿ ತಂದೆ ಪಾತ್ರಗಳು ಖುಷಿಕೊಟ್ಟಿವೆ.

ನಿಮ್ಮ ಮುಂದಿನ ಯೋಜನೆ ಏನು?

-ಕಾಮಿಡಿ ಕಿಲಾಡಿಗಳು ನನಗೆ ಒಂದು ಅದ್ಭುತ ವೇದಿಕೆ ಸೃಷ್ಟಿಸಿಕೊಟ್ಟಿದೆ. ಅಲ್ಲಿನ ಎಲ್ಲಾ ತಂತ್ರಜ್ಞರು ಹೆಚ್ಚು ಸಪೋರ್ಟ್ ಮಾಡಿದ್ದಾರೆ. ಅಷ್ಟೆ ಅಲ್ಲದೇ ಜೀ ವಾಹಿನಿ ಸಹಾಯ ಸಹ ಮಾಡುತ್ತದೆ. ಸೋ ಸಿನಿಮಾ ಡೈರೆಕ್ಷನ್ ಮತ್ತು ಆಕ್ಟಿಂಗ್ ಫೀಲ್ಡ್ ನಲ್ಲಿ ಮುಂದುವರೆಯಬೇಕು ಅಂದುಕೊಂಡಿದ್ದೇನೆ. ಸದ್ಯದಲ್ಲೇ 'ಜಂತರ್-ಮಂತರ್ ಚಿತ್ರವನ್ನು ನಿರ್ದೇಶನ ಮಾಡುತ್ತೇನೆ.

ಹಾಸ್ಯ ಕಲಾವಿದರಲ್ಲಿ ನೋವು ಅಡಗಿರುತ್ತಂತೆ, ನಿಮ್ಮ ಪ್ರಕಾರ ಇದು ನಿಜವೇ.?

-ಯಾವುದೇ ಮನುಷ್ಯನಲ್ಲಿ ಒಂದಲ್ಲಾ ಒಂದು ರೀತಿ ಕಷ್ಟ ಇದ್ದೇ ಇರುತ್ತದೆ. ಅದರಲ್ಲೂ ಒಬ್ಬ ನಟನಿಗೆ ಹೆಚ್ಚು ನೋವು ಇರುತ್ತೆ. ಯಾಕಂದ್ರೆ ಕಲಾವಿದನಿಗೆ ಹಲವು ವೇಳೆ ವೇದಿಕೆ ಸಿಗುವುದೇ ಕಷ್ಟ. ಆದ್ದರಿಂದ ಒಬ್ಬ ನಟನಾದವನು ಹೆಚ್ಚು ನೋವುಗಳನ್ನು ಅನುಭವಿಸುತ್ತಿರುತ್ತಾನೆ.

ಈ ಶೋ ನಿಂದ ನಿಮ್ಮ ಜೀವನದಲ್ಲಾದ ಬದಲಾವಣೆ?

-ಒಬ್ಬ ಕಲಾವಿದನಾಗಿ ಗುರುತಿಸಿಕೊಳ್ಳಲು ಸತತವಾಗಿ 12 ವರ್ಷಗಳಿಂದ ಶ್ರಮ ಪಡುತ್ತಿದೆ. ಅದಕ್ಕೆ 'ಕಾಮಿಡಿ ಕಿಲಾಡಿಗಳು' ಉತ್ತಮ ವೇದಿಕೆ ಕಲ್ಪಿಸಿಕೊಟ್ಟಿದೆ. ಈಗ ನನಗೆ ಕರ್ನಾಟಕದ ಜನರ ಪ್ರೀತಿ ಮತ್ತು ಪ್ರೋತ್ಸಾಹ ಎರಡು ಸಿಕ್ಕಿದೆ. ಈಗ ಎಲ್ಲರೂ ನನನ್ನು ಗುರುತಿಸುತ್ತಾರೆ. ಹೆಚ್ಚಾಗಿ ನನಗೆ ನನ್ನ ಲೈಫ್ ಬಗ್ಗೆ ಆತ್ಮ ವಿಶ್ವಾಸ ಹೆಚ್ಚಿದೆ.

ಸಿನಿಮಾಗಳಲ್ಲಿ ಅವಕಾಶ

-ಹಲವು ಸಿನಿಮಾಗಳಿಗೆ ಅವಕಾಶ ಬಂದಿದೆ. ಆದರೆ ಇನ್ನೂ ಯಾವುದಕ್ಕೂ ಒಪ್ಪಿಗೆ ಕೊಟ್ಟಿಲ್ಲ.

ಕುಟುಂಬದ ಪ್ರೋತ್ಸಾಹ ಹೇಗಿದೆ.?

-ನನಗೆ ಅಮ್ಮ ಇಲ್ಲ. ಅಪ್ಪ ಇದ್ದಾರೆ. ಅಣ್ಣ, ಅಕ್ಕ, ದೊಡ್ಡಮ್ಮ ಯಾರು ಸಹ ನಾನು ಈ ಕ್ಷೇತ್ರಕ್ಕೆ ಬಂದಿರುವುದಕ್ಕೆ ವಿರೋಧ ವ್ಯಕ್ತಪಡಿಸಿಲ್ಲ. ಬದಲಿಗೆ ಪ್ರೊತ್ಸಾಹ ನೀಡಿದ್ದಾರೆ.

ಕಾಮಿಡಿ ಕಿಲಾಡಿಗಳು ಜರ್ನಿಯಲ್ಲಿ ಮರೆಯಲಾಗದ ಸನ್ನಿವೇಶ?

-ನನ್ನ ಹುಟ್ಟುಹಬ್ಬದ ಆಚರಣೆ. ಯಾಕಂದ್ರೆ ಕಾರ್ಯಕ್ರಮದಲ್ಲಿ ನಡೆದ ಒಂದು ಸ್ಕಿಟ್ ನಲ್ಲೇ ಬರ್ತ್ ಡೇ ಸೆಲೆಬ್ರೇಟ್ ಮಾಡಿದ್ರು. ಆ ಸನ್ನಿವೇಶವನ್ನು ನಾನು ಯಾವತ್ತು ಮರೆಯೊಲ್ಲ.

ಜೀ ಕನ್ನಡ ವಾಹಿನಿ ಬಗ್ಗೆ ಹೇಳೋದಾದ್ರೆ...?

-ನಮ್ಮ ಬದುಕಿಗೆ ಒಂದು ಟರ್ನಿಂಗ್ ಕೊಟ್ಟ ವೇದಿಕೆ. ಬಹುದೊಡ್ಡ ಕಲಾವಿದರನ್ನು ಒಳಗೊಂಡ ಈ ವೇದಿಕೆಯಲ್ಲಿ ನಮ್ಮನ್ನು ಗುರುತಿಸಿಕೊಳ್ಳಲು ಅವಕಾಶ ಕೊಟ್ಟಿದೆ. 'ಕಾಮಿಡಿ ಕಿಲಾಡಿಗಳು' ಕಾರ್ಯಕ್ರಮಕ್ಕೆ, ನಿರ್ದೇಶಕರಿಗೆ ಜೀವನ ಪರ್ಯಂತ ನನ್ನ ಕೃತಜ್ಞತೆ ಸಲ್ಲಿಸುತ್ತೇನೆ.

English summary
Zee Kannada 'Comedy Kiladigalu' third place winner Davanagere Govindegowda Interview.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada