»   » ವರ್ಷದ ಸೂಪರ್ ಹಿಟ್ ಹಾಡು: ನಿಮ್ಮ ಆಯ್ಕೆ ಯಾವುದು?

ವರ್ಷದ ಸೂಪರ್ ಹಿಟ್ ಹಾಡು: ನಿಮ್ಮ ಆಯ್ಕೆ ಯಾವುದು?

Posted By:
Subscribe to Filmibeat Kannada

ಯಾವುದೇ ಚಿತ್ರ ಹಿಟ್ ಆಗಬೇಕದಿದ್ದರೆ ಒಳ್ಳೆಯ ಕಥೆಯ ಜೊತೆಗೆ ಚಿತ್ರದ ಹಾಡುಗಳೂ ಅಷ್ಟೇ ಮುಖ್ಯ ಎಂದು ವರನಟ ಡಾ. ರಾಜಕುಮಾರ್ ಹೇಳುತ್ತಿದ್ದರು.

ಸಾಹಿತ್ಯ ಕೂಡಾ ಅಷ್ಟೇ ಮುಖ್ಯ ಅಂತ ರಾಜ್ ಕುಮಾರ್ ಹೇಳಿದ್ರೂ ಕೂಡಾ ನಮ್ಮ ಚಿತ್ರೋದ್ಯಮ ಸಾಹಿತ್ಯದ ಬಗ್ಗೆ ಹೆಚ್ಚಿನ ತಲೆಕೆಡಿಸಿಕೊಂಡಂತೆ ಕಾಣುತ್ತಿಲ್ಲ ಬಿಡಿ.

ಯಾವಾಗ ಮಕ್ಕಳ ಬಾಯಲ್ಲಿ ಹಾಡುಗಳು ಗುನುಗುತ್ತದೋ ಆ ಚಿತ್ರ ಹೆಚ್ಚು ಕಮ್ಮಿ ಗೆದ್ದಂತೆ ಎನ್ನುವುದು ಯೋಗರಾಜ್ ಭಟ್ ಅವರ ಅಭಿಪ್ರಾಯ ಕೂಡಾ.

2014ರಲ್ಲಿ ಸುಮಾರು 115ಕ್ಕೂ ಚಿತ್ರಗಳು ಬಿಡುಗಡೆಯಾಗಿವೆ. ಮಾಲಾಶ್ರೀ ಅಭಿನಯದ 'ಘರ್ಷಣೆ' ಚಿತ್ರದ ಮೂಲಕ ಆರಂಭವಾದ 2014ರ ಕನ್ನಡ ಚಿತ್ರಗಳ ಅಭಿಯಾನ ಮಿ.ಮಿಸೆಸ್ ರಾಮಾಚಾರಿ ಮತ್ತು ಜೋತಿ ಆಲಿಯಾಸ್ ಕೋತಿರಾಜ್ ಚಿತ್ರದ ಮೂಲಕ ಮುಕ್ತಾಯಗೊಂಡಿದೆ. [ಸ್ಯಾಂಡಲ್ ವುಡ್ ಮಹಾಚುನಾವಣೆ 2014 - ನಿಮ್ಮ ಮತ ಯಾರಿಗೆ?]

ಈ ವರ್ಷ ಬಿಡುಗಡೆಯಾದ ಚಿತ್ರಗಳಲ್ಲಿ ಸೂಪರ್ ಹಿಟ್ ಹಾಡುಗಳು ಯಾವುವು? ಸ್ಲೈಡಿನಲ್ಲಿ ಮುಂದುವರಿಸಲಾಗಿದೆ..

ಜೀವಾ ಜೀವಾ ನನ್ ಜೀವಾ ನನ್ನ ದೈವಕಣೋ ಇವನು

ಚಿತ್ರ: ಮಾಣಿಕ್ಯ
ಹಾಡಿದವರು : ಶಂಕರ್ ಮಹಾದೇವನ್
ಸಾಹಿತ್ಯ :ಕೆ ಕಲ್ಯಾಣ್
ಸಂಗೀತ : ಅರ್ಜುನ್ ಜನ್ಯಾ

ಗುರುವಾರ ಸಂಜೆ ನಾ ಹೊರಟಿದ್ದೆ

ಚಿತ್ರ : ಪವರ್***
ಹಾಡಿದವರು : ಪುನೀತ್ ರಾಜಕುಮಾರ್
ಸಾಹಿತ್ಯ : ಕವಿರಾಜ್
ಸಂಗೀತ : ಎಸ್ ತಮನ್

ಮನೇಲಿ ಅಪ್ಪಾ..ಸ್ಕೂಲಲಿ ಮೇಷ್ಟ್ರು

ಚಿತ್ರ : ಗಜಕೇಸರಿ
ಹಾಡಿದವರು : ಬಾಬ ಸೆಹಗಲ್
ಸಾಹಿತ್ಯ : ಯೋಗರಾಜ್ ಭಟ್, ಎ ಪಿ ಅರ್ಜುನ್
ಸಂಗೀತ : ವಿ ಹರಿಕೃಷ್ಣ

ಕೈನಾಗೆ ಮೈಕ್ ಇಟ್ಟರೆ, ಅಧ್ಯಕ್ಷ..ಅಧ್ಯಕ್ಷಾ..

ಚಿತ್ರ : ಅಧ್ಯಕ್ಷ
ಹಾಡಿದವರು : ಪುನೀತ್ ರಾಜಕುಮಾರ್, ಎಲ್ ಎನ್ ಶಾಸ್ತ್ರಿ
ಸಾಹಿತ್ಯ : ವಿ ನಾಗೇಂದ್ರ ಪ್ರಸಾದ್
ಸಂಗೀತ : ಅರ್ಜುನ್ ಜನ್ಯಾ

ಸ್ಟಾರ್ ಆದೆ ನಂಗೆ ನೀನು, ರಾಣಿಗೆ ರಾಜಾ ಬಹದ್ದೂರ್

ಚಿತ್ರ : ಬಹದ್ದೂರ್
ಹಾಡಿದವರು : ವಿ ಹರಿಕೃಷ್ಣ
ಸಾಹಿತ್ಯ : ಚೇತನ್ ಕುಮಾರ್
ಸಂಗೀತ : ವಿ ಹರಿಕೃಷ್ಣ

ಕಣ್ಣಲಿ ಬಚ್ಚಿಡಲ, ನನ್ನನೇ ಮುಚ್ಚಿಡಲ, ಚಿನ್ನದಂತಹ ಹುಡುಗ

ಚಿತ್ರ : ಅಂಬರೀಶ
ಹಾಡಿದವರು : ಸೋನು ನಿಗಂ, ಶ್ರೇಯಾ ಘೋಷಾಲ್
ಸಾಹಿತ್ಯ :ನಾಗೇಂದ್ರ ಪ್ರಸಾದ್
ಸಂಗೀತ : ವಿ ಹರಿಕೃಷ್ಣ

ಪೆಸಲ್ಲಾಗಿ ಆರ್ಡರ್ ಕೊಟ್ಟೆ, ಮೇಲೆ ಬ್ರಹ್ಮಂಗೆ, ಸಖತ್ತಾಗಿ ಮಾಡೇ ಕೊಟ್ಟ ನಿನ್ನನ್ನೇ ನಂಗೇ

ಚಿತ್ರ : ಬ್ರಹ್ಮ
ಹಾಡಿದವರು : ಗುರುಕಿರಣ್
ಸಾಹಿತ್ಯ : ಕವಿರಾಜ್
ಸಂಗೀತ : ಗುರುಕಿರಣ್

ನಿಂತೆ ನಿಂತೆ ಕಾಯುತ್ತಾ, ಒಂಟಿ ಕಾಲಲ್ಲಿ

ಚಿತ್ರ : ನಿನ್ನಿಂದಲೇ
ಹಾಡಿದವರು : ವಿಜಯ್ ಪ್ರಕಾಶ್, ಚಿನ್ಮಯಿ, ಸುಧಾಮಯಿ
ಸಾಹಿತ್ಯ : ಕವಿರಾಜ್
ಸಂಗೀತ : ಮಣಿ ಶರ್ಮಾ

ಹೆಂಗೋ ಇದ್ದೆ, ಅಣ್ ತಮ್ಮಾ..

ಚಿತ್ರ : ಮಿಸ್ಟರ್ ಎಂಡ್ ಮಿಸಸ್ ರಾಮಾಚಾರಿ
ಹಾಡಿದವರು : ಯಶ್
ಸಾಹಿತ್ಯ : ಯೋಗರಾಜ್ ಭಟ್
ಸಂಗೀತ : ವಿ ಹರಿಕೃಷ್ಣ

ಸರಸಕೆ ಬಾರೇ ಸರಳ, ಸನಿಹಕೆ ಬಾರೇ ಸರಳ, ನಿನ್ನ ಬ್ಯೂಟಿ ಅತಿ ವಿರಳ

ಚಿತ್ರ : ಕರೋಡ್ ಪತಿ
ಹಾಡಿದವರು : ಕಿರಣ್ ಸಾಗರ್, ಸುಪ್ರಿಯಾ, ಲೋಹಿತ್, ಡೇನಿಯಲ್
ಸಾಹಿತ್ಯ : ಅಭಿಮಾನ್ ರಾಯ್
ಸಂಗೀತ : ಅಭಿಮಾನ್ ರಾಯ್

ಘಾಟಿಯ ಇಳಿದು

ಚಿತ್ರ : ಉಳಿದವರು ಕಂಡಂತೆ
ಹಾಡಿದವರು : ವಿಜಯ್ ಪ್ರಕಾಶ್
ಸಾಹಿತ್ಯ : ರಕ್ಷಿತ್ ಶೆಟ್ಟಿ
ಸಂಗೀತ : ಬಿ ಅಜನೀಶ್ ಲೋಕನಾಥ್

ತಿಂಗಾಳೂ ಬೆಳಗಿದವೋ, ರಂಗೋಲಿ ಮುಡಿದವೋ

ಚಿತ್ರ : ಸಿಂಹಾದ್ರಿ
ಹಾಡಿದವರು : ಶಂಕರ್ ಮಹಾದೇವನ್, ಅರ್ಚನ ರವಿ
ಸಾಹಿತ್ಯ : ಕೆ ಕಲ್ಯಾಣ್
ಸಂಗೀತ : ಅರ್ಜುನ್ ಜನ್ಯ

ಗಾಳಿಯ ಮಾತಲಿ ಏನದು ಆರಂಭ

ಚಿತ್ರ : ಒಗ್ಗರಣೆ
ಹಾಡಿದವರು : ವಿಭವರಿ, ರಂಜಿತ್
ಸಾಹಿತ್ಯ : ಜಯಂತ್ ಕಾಯ್ಕಿಣಿ
ಸಂಗೀತ : ಇಳಯರಾಜ

English summary
Best songs of Kannada movies released during the year 2014.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada