For Quick Alerts
  ALLOW NOTIFICATIONS  
  For Daily Alerts

  ಎಸ್ ಪಿ ಬಾಲಸುಬ್ರಹ್ಮಣ್ಯಂ ಜನ್ಮದಿನ; ಸಂಗೀತ ಸಾಮ್ರಾಜ್ಯವನ್ನಾಳಿದ ಮಹಾನ್ ಗಾಯಕನನ್ನು ನೆನೆದ ಸುಮಲತಾ

  |

  16 ಭಾಷೆ, 40 ಸಾವಿರಕ್ಕೂ ಅಧಿಕ ಹಾಡುಗಳು, ಮೂರು ತಲೆಮಾರು, ಅನೇಕ ಪ್ರಶಸ್ತಿಗಳು, ಆಪಾರ ಗೌರವ 74 ವರ್ಷಗಳ ಜೀವನದಲ್ಲಿ ಎಸ್ ಪಿ ಬಾಲಸುಬ್ರಹ್ಮಣ್ಯಂ ಅವರ ಸಂಪಾದನೆ ಇದು. ಅದ್ಭುತ ಗಾಯನದ ಜೊತೆಗೆ ಉತ್ತಮ ವ್ಯಕ್ತಿತ್ವದ ಮೂಲಕ ಎಸ್ ಪಿ ಬಿ ಕೋಟ್ಯಂತರ ಅಭಿಮಾನಿಗಳ ಹೃದಯದಲ್ಲಿ ನೆಲೆಸಿದ್ದಾರೆ.

  ಇಂದು ಎಸ್ ಪಿ ಬಿ ದೈಹಿಕವಾಗಿ ಇಲ್ಲದಿರಬಹುದು ಆದರೆ ಹಾಡುಗಳ ಮೂಲಕ ಜೀವಂತವಾಗಿದ್ದಾರೆ. ಅಭಿಮಾನಿಗಳನ್ನು ಸದಾ ರಂಜಿಸುತ್ತಿರುತ್ತಾರೆ. ಇಂದು (ಜೂನ್ 4) ಗಾನ ಗಂಧರ್ವ ಎಸ್ ಪಿ ಬಾಲಸುಬ್ರಹ್ಮಣ್ಯಂ ಅವರ ಜನ್ಮದಿನ. 75ನೇ ವರ್ಷದ ಹುಟ್ಟುಹಬ್ಬ. ಎಸ್ ಪಿ ಬಿ ಇಲ್ಲದ ಮೊದಲ ವರ್ಷದ ಹುಟ್ಟುಹಬ್ಬವಿದು. ಅಪಾರ ಸಂಖ್ಯೆಯ ಅಭಿಮಾನಿಗಳು, ಸ್ನೇಹಿತರು, ಶಿಷ್ಯಂದಿರು, ಚಿತ್ರರಂಗದ ಗಣ್ಯರು ಎಸ್ ಪಿ ಬಿ ನೆನಪು ಮಾಡಿಕೊಳ್ಳುತ್ತಿದ್ದಾರೆ.

  ಮೂಲತಃ ತೆಲುಗಿನವರಾದರೂ ಎಸ್ ಪಿ ಬಿಗೆ ಕನ್ನಡಿಗರ ಮೇಲೆ, ಕರ್ನಾಟಕದ ಮೇಲೆ ಅಪಾರವಾದ ಪ್ರೀತಿ, ಗೌರವ. ಇಷ್ಟರ ಮಟ್ಟಿಗೆ ಎಂದರೆ ಮತ್ತೊಂದು ಜನ್ಮ ಎನ್ನುವುದು ಇದ್ದರೆ ಕರ್ನಾಟಕದಲ್ಲಿ ಹುಟ್ಟಬೇಕು ಎನ್ನುತ್ತಿದ್ದರು. ಗಾನ ಗಾರುಡಿಗನಿಗೆ ಕನ್ನಡಿಗರು ಪ್ರೀತಿಯ ಶುಭಾಶಯ ಹೇಳುತ್ತಿದ್ದಾರೆ.

  ಸಂಗೀತ ನಿರ್ದೇಶಕ ಹರಿಕೃಷ್ಣ ಸಾಮಾಜಿಕ ಜಾಲತಾಣದ ಮೂಲಕ ಭಾವುಕ ವಿಶ್ ಮಾಡಿದ್ದಾರೆ. 'ನಿಮ್ಮ ನಂಬರ್ ನಾಟ್ ರೀಚಬಲ್ ಸರ್. ನಿಮಗೆ ಹುಟ್ಟುಹಬ್ಬದ ಶಾಭಾಶಯಗಳು. ನಿಮ್ಮ ಧ್ವನಿ ಯಾವಾಗಲು ಶಾಶ್ವತ' ಎಂದು ಬರೆದುಕೊಂಡಿದ್ದಾರೆ.

  ಇನ್ನು ನಟಿ, ರಾಜಕಾರಣಿ ಸುಮಲತಾ ಅಂಬರೀಶ್ ಕೂಡ ಎಸ್ ಪಿ ಬಿಯ ನೆನಪು ಮಾಡಿಕೊಂಡಿದ್ದಾರೆ. 'ಐದು ದಶಕಗಳ ಕಾಲ ಸಂಗೀತ ಸಾಮ್ರಾಜ್ಯವನ್ನು ಆಳಿದ ಮಹಾನ್ ಗಾಯಕ ಎಸ್.ಪಿ. ಬಾಲಸುಬ್ರಹ್ಮಣ್ಯಂ ಅವರ ಜನ್ಮ ದಿನಕ್ಕೆ ಶುಭಾಶಯಗಳು. ಹಾಡಿನ ಮೂಲಕ ಅಂಬರೀಶ್ ಮತ್ತು ಭಾರತೀಯ ಸಿನಿಮಾ ರಂಗದ ಅದೆಷ್ಟೋ ದಿಗ್ಗಜರ ಚಿತ್ರಗಳಿಗೆ ಶಕ್ತಿ ತುಂಬಿದ ಸಂಗೀತ ಚೇತನ ಇವರಾಗಿದ್ದರು ಎನ್ನುವುದು ನಮಗೆ ಹೆಮ್ಮೆ' ಎಂದು ಬರೆದುಕೊಂಡಿದ್ದಾರೆ.

  ರೆಬಲ್ ಸ್ಟಾರ್ ಅಂಬರೀಶ್ ಅವರ ಅನೇಕ ಸಿನಿಮಾಗಳಿಗೆ ಧ್ವನಿ ನೀಡಿರುವ ಎಸ್ ಬಿ ಬಾಲಸುಬ್ರಹ್ಮಣ್ಯಂ ರೆಬಲ್ ಸ್ಟಾರ್ ಕುಟುಂಬದ ಜೊತೆ ಆತ್ಮೀಯ ಬಾಂಧವ್ಯ ಹೊಂದಿದ್ದರು. ಕನ್ನಡದಲ್ಲೂ ಅಪಾರ ಗೀತೆಗಳಿಗೆ ಧ್ವನಿ ನೀಡಿರುವ ಎಸ್ ಬಿ ಪಿಗೆ ಸಾಮಾಜಿಕ ಜಾಲತಾಣದಲ್ಲಿ ಶುಭಾಶಯಗಳ ಸುರಿಮಳೆಯೇ ಹರಿದುಬರುತ್ತಿದೆ.

  English summary
  SP Balasubrahmanyam's Birth Anniversary: Sumalatha Ambareesh remember veteran singer.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X