»   »  ಹೊಸ ಮುಖಗಳ 'ಅವಲಕ್ಕಿ ಬುವ್ವಲಕ್ಕಿ'

ಹೊಸ ಮುಖಗಳ 'ಅವಲಕ್ಕಿ ಬುವ್ವಲಕ್ಕಿ'

Subscribe to Filmibeat Kannada

ಹೊಸಬರು ಹೊಸ ಹೊಸಆಲೋಚನೆಗಳೊಂದಿಗೆ ಕನ್ನಡ ಚಿತ್ರೋದ್ಯಮಕ್ಕೆ ಧುಮುಕುತ್ತಿದ್ದಾರೆ. ಆ ರೀತಿಯ ಹೊಸ ಐಡಿಯಾನೇ 'ಅವಲಕ್ಕಿ ಬುವ್ವಲಕ್ಕಿ'.ಈ ಚಿತ್ರ ಜುಲೈ 13ರಂದು ಸೆಟ್ಟೇರಲಿದೆ. 'ನೆನಪಿನಂಗಳ' ಎಂಬ ಚಿತ್ರವನ್ನು ಕಷ್ಟಪಟ್ಟು ಕ್ಲೈಮ್ಯಾಕ್ಸ್ ವರೆಗೂ ತಂದು ನಿಲ್ಲಿಸಿರುವ ಧನುಚಂದ್ರ ಮಾವಿನಕುಂಟೆ ನಿರ್ದೇಶನದ ಎರಡನೇ ಚಿತ್ರವಿದು.

ಅಂಬಿಕಾ ಸುಬ್ರಹ್ಮಣ್ಯ, ರಾಜು ಮತ್ತು ಯಶಸ್ ಚಿತ್ರದ ನಿರ್ಮಾಪಕರು. ನಿರ್ಮಾಪಕರಲ್ಲಿ ಒಬ್ಬರಾದ ರಾಜು ಮತ್ತು ನಂದೀಶ್ ಎಂಬ ಹೊಸಬಚಿತ್ರದ ಇಬ್ಬರು ನಾಯಕರು. ತೆಲುಗಿನ 'ಒಕ್ಕ ಊರಿಲೋ' ಎಂಬ ಚಿತ್ರದಲ್ಲಿ ಸಣ್ಣ ಪಾತ್ರದಲ್ಲಿ ನಟಿಸಿದ್ದ ಕೃತ್ತಿಕಾ ಚಿತ್ರದ ನಾಯಕಿ.

ತಾರಾಬಳಗದಲ್ಲಿ ಭವ್ಯ, ರಾಮಕೃಷ್ಣ, ಕರಿಬಸವಯ್ಯ, ನೀನಾಸಂ ಅಶ್ವತ್ಥ್ ಮುಂತಾದವರು ಇದ್ದಾರೆ. ಸಿ ಆರ್ ಬಾಬಿ ಸಂಗೀತ , ರೇಣುಕುಮಾರ್ ಛಾಯಾಗ್ರಹಣ ಚಿತ್ರಕ್ಕಿದೆ. 'ಅವಲಕ್ಕಿ ಬುವಲಕ್ಕಿ' ಕತೆ ಏನು ಎತ್ತ ಎಂಬ ವಿವರಗಳು ಸದ್ಯಕ್ಕೆ ಲಭ್ಯವಿಲ್ಲ!

(ದಟ್ಸ್ ಕನ್ನಡ ಚಿತ್ರವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada