Don't Miss!
- News
ಬೆಂಗಳೂರಿನಲ್ಲಿ ಇಂದು ಬುಧವಾರ ಭಾರೀ ಮಳೆ: ಆರೆಂಜ್ ಅಲರ್ಟ್ ಘೋಷಣೆ
- Lifestyle
ಪ್ಲಾಸ್ಟಿಕ್ ಸರ್ಜರಿ ಕುರಿತ 10 ಆಸಕ್ತಿಕರ ಸಂಗತಿಗಳು
- Sports
ಟಿ20 ಕ್ರಿಕೆಟ್ನಲ್ಲಿ 250 ವಿಕೆಟ್ ಪಡೆದ ಬುಮ್ರಾ: ಈ ಸಾಧನೆ ಮಾಡಿದ ಭಾರತದ ಮೊದಲ ವೇಗದ ಬೌಲರ್
- Finance
ಮೇ 17ರಂದು ವಾಣಿಜ್ಯ ಬೆಳೆ ಅಡಿಕೆ, ಕಾಫಿ, ಮೆಣಸು, ಏಲಕ್ಕಿ ಪೇಟೆ ಧಾರಣೆ
- Automobiles
ಹೊಸ ಕಿಯಾ ಇವಿ6 ಎಲೆಕ್ಟ್ರಿಕ್ ಕಾರು ಮಾಹಿತಿ ಬಹಿರಂಗ: 528 ಕಿ.ಮೀ ರೇಂಜ್, ಅಲ್ಟ್ರಾ-ಫಾಸ್ಟ್ ಚಾರ್ಜಿಂಗ್
- Technology
ಅಪೆಕ್ಸ್ ಲೆಜೆಂಡ್ಸ್ ಮೊಬೈಲ್ ಗೇಮ್ ಬಿಡುಗಡೆ! ಡೌನ್ಲೋಡ್ ಮಾಡುವುದು ಹೇಗೆ?
- Education
Oil India Recruitment 2022 : 16 ನರ್ಸಿಂಗ್ ಟ್ಯೂಟರ್ ಮತ್ತು ಇತರೆ ಹುದ್ದೆಗಳಿಗೆ ನೇರ ಸಂದರ್ಶನ
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಬಂಡೀಪುರದಲ್ಲಿ ರಾತ್ರಿ ಸಫಾರಿ ವಿವಾದ: ವಿಚಾರಣೆಗೆ ಹಾಜರಾದ ನಟ ಧನ್ವೀರ್
ಬಂಡೀಪುರದಲ್ಲಿ ನಟ ಧನ್ವೀರ್ ಗೌಡ ರಾತ್ರಿ ಸಫಾರಿ ನಡೆಸಿದ್ದಾರೆ ಎನ್ನಲಾದ ವಿವಾದಕ್ಕೆ ಸಂಬಂಧಿಸಿದಂತೆ ಅರಣ್ಯಾಧಿಕಾರಿಗಳ ಮುಂದೆ ವಿಚಾರಣೆಗೆ ಹಾಜರಾಗಿ ಸ್ಪಷ್ಟನೆ ನೀಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ನಟ ಧನ್ವೀರ್ ಹಾಗೂ ಸ್ನೇಹಿತರು ಬಂಡೀಪುರದಲ್ಲಿ ರಾತ್ರಿ ಸಮಯದಲ್ಲಿ ಸಫಾರಿ ಮಾಡಿರುವ ವಿಡಿಯೋವೊಂದನ್ನು ಫೇಸ್ಬುಕ್ನಲ್ಲಿ ಪೋಸ್ಟ್ ಮಾಡಿದ್ದರು. ಈ ವಿಡಿಯೋ ಪರಿಸರ ಪ್ರೇಮಿಗಳಿಂದ ತೀವ್ರ ಟೀಕೆಗೆ ಗುರಿಯಾಗಿತ್ತು. ಬಂಡೀಪುರದಲ್ಲಿ ರಾತ್ರಿ ಸಫಾರಿಗೆ ಅವಕಾಶ ಇರಲ್ಲ, ಆದರೂ ನಟನೊಬ್ಬನಿಗೆ ಅನುಮತಿ ಸಿಕ್ಕಿದ್ದು ಹೇಗೆ ಎಂದು ಪ್ರಶ್ನಿಸಿದ್ದರು.
ಕಾನೂನು ಬಾಹಿರವಾಗಿ ರಾತ್ರಿ ಸಫಾರಿ ನಡೆಸಿರುವ ನಟ ಹಾಗೂ ಅನುಮತಿ ನೀಡಿದವರ ವಿರುದ್ಧ ಸೂಕ್ತ ಕ್ರಮ ಜರುಗಿಸಬೇಕು ಎಂಬ ಒತ್ತಾಯವೂ ಕೇಳಿ ಬಂದಿತ್ತು. ಈ ಬಗ್ಗೆ ನಟ ಧನ್ವೀರ್ ಹಾಗೂ ಬಂಡೀಪುರ ಅರಣ್ಯ ಇಲಾಖೆಯ ನಿರ್ದೇಶಕರು ಸ್ಪಷ್ಟನೆ ನೀಡಿದ್ದಾರೆ. ಮುಂದೆ ಓದಿ...

ರಾತ್ರಿ ಸಫಾರಿ ಅಲ್ಲ ಎಂದ ಧನ್ವೀರ್
ರಾತ್ರಿ ಸಮಯದಲ್ಲಿ ಸಫಾರಿ ಮಾಡಿಲ್ಲ, ಅದು ಸಂಜೆ 6.30ರ ಸಮಯ ಇರಬಹುದು. ಸಫಾರಿ ಮುಗಿಸಿ ವಾಪಸ್ ಆಗುವ ಸಂದರ್ಭದಲ್ಲಿ ಹುಲಿ ಎದುರಾಗಿತ್ತು. ಆಗ ಸೆರೆ ಹಿಡಿದಿರುವ ವಿಡಿಯೋ ಎಂದು ಅರಣ್ಯ ಅಧಿಕಾರಿ ನವೀನ್ ಕುಮಾರ್ ಅವರ ಮುಂದೆ ವಿಚಾರಣೆಗೆ ಹಾಜರಾಗಿ ಸ್ಪಷ್ಟನೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.
ಬಂಡೀಪುರದಲ್ಲಿ
ನಟ
ಧನ್ವೀರ್
ರಾತ್ರಿ
ಸಫಾರಿ:
ಆಕ್ರೋಶಗೊಂಡ
ಸಾರ್ವಜನಿಕರು!

ಶನಿವಾರ ವಿಚಾರಣೆಗೆ ಹಾಜರಾದ ನಟ
ರಾತ್ರಿ ಸಫಾರಿಗೆ ಸಂಬಂಧಿಸಿದಂತೆ ಶನಿವಾರ ಬೆಳಗ್ಗೆ ಗೋಪಾಲಸ್ವಾಮಿ ಬೆಟ್ಟ ವಲಯದ ವಲಯಾರಣ್ಯಾಧಿಕಾರಿ ನವೀನ್ ಕುಮಾರ್ ಮುಂದೆ ನಟ ಧನ್ವೀರ್ ವಿಚಾರಣೆಗೆ ಹಾಜರಾಗಿದ್ದರು. ಈ ವೇಳೆ ಸ್ಪಷ್ಟನೆ ನೀಡಿ ಕ್ಷಮೆ ಸಹ ಕೇಳಿದ್ದಾರೆ ಎನ್ನಲಾಗಿದೆ. ವಿಚಾರಣೆಯ ಬಳಿಕ ಮೇಲಾಧಿಕಾರಿಗಳಿಗೆ ಈ ಬಗ್ಗೆ ವರದಿ ನೀಡಲು ನವೀನ್ ಕುಮಾರ್ ಮುಂದಾಗಿದ್ದಾರೆ.

ಧನ್ವೀರ್ ಪ್ರತಿಕ್ರಿಯೆ
''ಗುರುವಾರ ಸಂಜೆ 4.30 ರಿಂದ 6.30ರ ವೇಳೆಯಲ್ಲಿ ಸಫಾರಿ ಹೋಗಿದ್ವಿ. ಇಡೀ ಕಾಡು ಸುತ್ತಾಡಿದರೂ ನೋಡಲು ಏನು ಸಿಕ್ಕಿಲ್ಲ. ಕೊನೆಗೆ ವಾಪಾಸಾಗುತ್ತಿರಬೇಕಾದರೆ 6.31ಕ್ಕೆ ಒಂದು ಹುಲಿ ನಮ್ಮ ವಾಹನದ ಮುಂದೆ ನಡೆದುಕೊಂಡು ಹೋಯ್ತು. ಅದನ್ನು ವಿಡಿಯೋದಲ್ಲಿ ಸೆರೆ ಹಿಡಿದೆ ಅಷ್ಟೆ. ಶುಕ್ರವಾರ ಬೆಳಗ್ಗೆ ಆ ವಿಡಿಯೋವನ್ನ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದೆ. ಜೊತೆಗೆ ಅರಣ್ಯ ಇಲಾಖೆಯ ವಾಹನದ ನಾವು ಹೋಗಿದ್ದು, ಅದು 6.30ರವರೆಗೆ ಮಾತ್ರ ಲಭ್ಯವಿರೋದು. ಸರ್ಕಾರ ಕೊಟ್ಟಿರೋ ಸಮಯದ ಸಫಾರಿ ಮುಗಿಸಿ ವಾಪಾಸಾಗಿದ್ದೇವೆ'' ಸ್ಪಷ್ಟನೆ ನೀಡಿದ್ದಾರೆ.
ಬಂಡೀಪುರದಲ್ಲಿ
ನಟ
ಧನ್ವಿರ್
ನೈಟ್
ಸಫಾರಿ:
ಅರಣ್ಯಾಧಿಕಾರಿ
ಹೇಳಿದ್ದು
ಏನು?

ವರದಿ ಕೇಳಿದ್ದ ನಿರ್ದೇಶಕ ಬಾಲಚಂದ್ರ
ಬಂಡೀಪುರದಲ್ಲಿ ರಾತ್ರಿ ಸಮಯ ಸಫಾರಿ ಮಾಡಲು ಅನುಮತಿ ಇರುವುದಿಲ್ಲ. ನಟ ಧನ್ವೀರ್ ಸಹ ರಾತ್ರಿ ಸಫಾರಿ ಮಾಡಿಲ್ಲ, ಸಂಜೆ ಸಫಾರಿ ಮುಗಿಸಿ ವಾಪಸ್ ಆಗುವ ವೇಳೆ ಸೆರೆಹಿಡಿದಿರುವ ವಿಡಿಯೋ ಇದು. ಈ ಬಗ್ಗೆ ಸಂಕ್ಷಿಪ್ತ ವರದಿ ಕೇಳಿದ್ದೇನೆ. ತಪ್ಪು ಕಂಡು ಬಂದಲ್ಲಿ ಕ್ರಮ ಜರುಗಿಸಲಾಗುವುದು ಎಂದು ಬಂಡೀಪುರ ಹುಲಿ ಯೋಜನೆ ನಿರ್ದೇಶಕ ಬಾಲಚಂದ್ರ ಹೇಳಿದ್ದರು.