Just In
Don't Miss!
- News
ಏ. 14ರಂದು ದೇಶದ ವಿವಿಧ ನಗರಗಳಲ್ಲಿ ಚಿನ್ನದ ದರ ಅಲ್ಪ ಇಳಿಕೆ
- Sports
ಮುಂಬೈ ವಿರುದ್ಧ ಸೋಲು ; ಕ್ಷಮೆಯಾಚಿಸಿದ ಶಾರುಖ್ ಖಾನ್
- Automobiles
ಹೆರ್ಮೆಸ್ 75 ವಾಣಿಜ್ಯ ಬಳಕೆಯ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ ಮಾಡಿದ ಕಬೀರಾ ಮೊಬಿಲಿಟಿ
- Finance
ಜೂನ್ 1ರಿಂದ ಚಿನ್ನಾಭರಣಗಳ ಮೇಲೆ ಹಾಲ್ಮಾರ್ಕ್ ಕಡ್ಡಾಯ
- Lifestyle
ವರ್ಷದ ಮೊದಲ ರಾಶಿ ಮೇಷಗೆ ಏ.14ಕ್ಕೆ ಸೂರ್ಯ ಸಂಚಾರ: ಇದರಿಂದ ನಿಮ್ಮ ರಾಶಿಯ ಮೇಲಾಗಲಿದೆ ಈ ಪರಿಣಾಮ
- Education
WCL Recruitment 2021: 44 ಮೆಡಿಕಲ್ ಸ್ಪೆಷಲಿಸ್ಟ್ ಮತ್ತು ಆಫೀಸರ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಪುನೀತ್ ರಾಜ್‌ಕುಮಾರ್ ದೊಡ್ಡತನಕ್ಕೆ ಉದಾಹರಣೆ ನೀಡಿದ ನಟಿ ಆಶಿತಾ ಚಂದ್ರಪ್ಪ
ನಟಿ ಆಶಿತಾ ಚಂದ್ರಪ್ಪ ಕೆಲವು ದಿನಗಳ ಹಿಂದಷ್ಟೆ ವಿವಾಹವಾಗಿದ್ದಾರೆ. ಕೆಲವು ಆತ್ಮೀಯ ಸ್ನೇಹಿತರು, ಬಂಧುಗಳ ಎದುರಿಗೆ ಮಾರ್ಚ್ 31 ರಂದು ರೋಹನ್ ರಾಘವೇಂದ್ರ ಎಂಬುವರ ಕೈ ಹಿಡಿದಿದ್ದಾರೆ ಆಶಿತಾ ಚಂದ್ರಪ್ಪ.
ಮದುವೆ ಮುಗಿದ ಕೆಲವೇ ದಿನಗಳಲ್ಲಿ ಮದುವೆ ಮನೆಯಲ್ಲಿ ನಡೆದ ಅಚ್ಚರಿಯ, ಸುಂದರ ಸಂಗತಿಯೊಂದನ್ನು ಸಾಮಾಜಿಕ ಜಾಲತಾಣದ ಮೂಲಕ ಹಂಚಿಕೊಂಡಿದ್ದಾರೆ ಆಶಿತಾ. ಬಿಗ್‌ಬಾಸ್ ಮಾಜಿ ಸ್ಪರ್ಧಿಯೂ ಆಗಿರುವ ಆಶಿತಾ ಹಂಚಿಕೊಂಡಿರುವ ವಿಷಯ ನಟ ಪುನೀತ್ ರಾಜ್‌ಕುಮಾರ್ ಹಾಗೂ ಅವರ ಪತ್ನಿ ಅಶ್ವಿನಿ ಅವರಿಗೆ ಸಂಬಂಧಿಸಿದ್ದು.
'ನಿರೀಕ್ಷಿಸದ ಕೆಲವು ಸಂಗತಿಗಳು ನಡೆದುಬಿಟ್ಟಾಗ ಅದು ನೀಡುವ ಖುಷಿ ಅತ್ಯದ್ಭುತ. ಹಾಗೆಯೇ ನಿರೀಕ್ಷಿಸಿದ ಸಂಗತಿಗಳು ನಡೆಯದೇ ಇದ್ದಾಗ ಆಗುವ ಬೇಸರವೂ ಸಹ ಹೆಚ್ಚು. ನಿರೀಕ್ಷಿಸಿದ್ದ ಕೆಲವರು ಮದುವೆಗೆ ಬರದೆ ಗೆಳೆತನ ನಿಜವೇನಾ ಎಂಬ ಅನುಮಾನ ಉಂಟಾಗುವಂತೆ ಮಾಡಿದರು. ಕೆಲವರು ಕೋವಿಡ್ ಕಾರಣ ನೀಡಿ ತಪ್ಪಿಸಿಕೊಂಡರು' ಎಂದು ತಮ್ಮ ಮದುವೆಗೆ ಆಗಮಿಸಿದವರು, ಆಗಮಿಸದವರ ಬಗ್ಗೆ ಹೇಳಿದ್ದಾರೆ ಆಶಿತಾ ಚಂದ್ರಪ್ಪ.
'ಆದರೆ ನಟ ಪುನೀತ್ ರಾಜ್‌ಕುಮಾರ್ ಅವರು ತಮ್ಮ 'ಯುವರತ್ನ' ಸಿನಿಮಾದ ಬಿಡುಗಡೆ ಮುನ್ನಾದಿನ, ಬಹಳ ಬ್ಯುಸಿ ಶೆಡ್ಯೂಲ್‌ನ ನಡುವೆಯೂ ನನಗಾಗಿ ನಮ್ಮ ಕುಟುಂಬದ ಮೇಲಿನ ಪ್ರೀತಿಗಾಗಿ ನನ್ನ ಮದುವೆಗೆ ಬಂದು ನನಗೆ ಹಾಗೂ ರೋಹನ್‌ಗೆ ಆಶೀರ್ವಾದ ಮಾಡಿದರು. ಅವರ ಸರಳತೆಗೆ ಎಷ್ಟು ಧನ್ಯವಾದ ಹೇಳಿದರೂ ಸಾಲದು' ಎಂದಿದ್ದಾರೆ ಆಶಿತಾ.
'ಕೆಲವು ದಿನಗಳ ಹಿಂದೆಯಷ್ಟೆ ನಾನು ಹಾಗೂ ಅಪ್ಪ ಕೋವಿಡ್ ಪಾಸಿಟಿವ್ ಆಗಿದ್ದೆವು. ಮದುವೆ ಕಾರ್ಯಕ್ರಮವನ್ನು ರದ್ದು ಮಾಡಿಬಿಡೋಣ ಎಂದುಕೊಂಡಿದ್ದೆವು. ನಮ್ಮಿಂದ ಬೇರೆಯವರಿಗೆ ಸಮಸ್ಯೆ ಆಗುವುದು ಬೇಡ ಎಂಬುದು ನಮ್ಮ ಉದ್ದೇಶ ಆಗಿತ್ತು. ಆದರೆ ಸಮಯಕ್ಕೆ ಸರಿಯಾಗಿ ಎಲ್ಲವೂ ಸರಿಹೋಗಿ ಕಾರ್ಯಕ್ರಮ ಅಂದುಕೊಂಡಂತೆ ನಡೆಯಿತು' ಎಂದಿದ್ದಾರೆ ಆಶಿತಾ ಚಂದ್ರಪ್ಪ.
ದರ್ಶನ್ ಅನ್ನು ಅಣ್ಣ ಎಂದು ಕರೆಯುವ ಆಶಿತಾ, ದರ್ಶನ್ ಜೊತೆಗೆ ಆತ್ಮೀಯ ಬಾಂಧವ್ಯ ಹೊಂದಿದ್ದಾರೆ. ಆದರೆ ಮದುವೆಗೆ ನಟ ದರ್ಶನ್ ಬಂದಂತಿಲ್ಲ. ಆಶಿತಾ ಅವರ ಮದುವೆಗೆ ಹಲವು ಗೆಳೆಯರು ಆಗಮಿಸಿದ್ದರು, ನಟ ಜೆಕೆ ಸಹ ಆಗಮಿಸಿದ್ದರು.
ನಟಿ ಆಶಿತಾ ಚಂದ್ರಪ್ಪ, ನೀಲಿ, ಜೊತೆ-ಜೊತೆಯಲಿ, ರಾಧಾ-ರಮಣ ಇನ್ನೂ ಕೆಲವು ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಕೆಲವು ಸಿನಿಮಾಗಳಲ್ಲಿಯೂ ಪಾತ್ರವಹಿಸಿರುವ ಆಶಿತಾ ಬಿಗ್‌ಬಾಸ್ ಐದನೇ ಸೀಸನ್‌ನಲ್ಲಿ ಸ್ಪರ್ಧಿಯಾಗಿ ಪಾಲ್ಗೊಂಡಿದ್ದರು.