»   » ಬಹುಭಾಷಾ ನಟಿ ಪೂಜಾ ಉಮಾಶಂಕರ್ ಮದುವೆ ಆಲ್ಬಂ

ಬಹುಭಾಷಾ ನಟಿ ಪೂಜಾ ಉಮಾಶಂಕರ್ ಮದುವೆ ಆಲ್ಬಂ

Posted By:
Subscribe to Filmibeat Kannada

ಕರ್ನಾಟಕ ಮೂಲದ ಭಾರತೀಯ-ಶ್ರೀಲಂಕಾದ ನಟಿ ಪೂಜಾ ಗೌತಮಿ ಉಮಾಶಂಕರ್ ಇತ್ತೀಚೆಗಷ್ಟೇ ಮದುವೆ ಆಗಿದ್ದಾರೆ. ಅಂದಹಾಗೆ ಇವರ ಮದುವೆ ಶ್ರೀಲಂಕಾದ ಉದ್ಯಮಿ ಪ್ರಸನ್ ಡೇವಿಡ್ ವೆಧಾಕನ್ ಜೊತೆ ನೆರವೇರಿದೆ.[ಕನ್ನಡದ ಗೊಂಬೆ ಪೂಜಾ ಸಿನಿ ಪುರಾಣ]

ಪೂಜಾ ಗೌತಮಿ ಉಮಾಶಂಕರ್ ಮೊದಲಿಗೆ ತಮಿಳು ಚಿತ್ರ ರಂಗದಲ್ಲಿ ಕಾಣಿಸಿಕೊಂಡಿದ್ದರು. ನಂತರ ಸಿಂಹಳ, ಮಲಯಾಳಂ ಮತ್ತು ಇಂಗ್ಲೀಷ್‌ ಚಿತ್ರಗಳಲ್ಲೂ ನಟಿಸಿದ್ದು ಭಾರತೀಯ ಮೂಲದ ಶ್ರೀಲಂಕಾ ಬಹುಭಾಷಾ ನಟಿಯಾಗಿ ಗುರುತಿಸಿಕೊಂಡಿದ್ದಾರೆ. ಪೂಜಾ ಗೌತಮಿ ಉಮಾಶಂಕರ್ ಮದುವೆ ಕುರಿತ ಇನ್ನಷ್ಟು ಮಾಹಿತಿಗಳನ್ನು ಮುಂದೆ ಓದಿರಿ.[ಚೆಂದದ ಗೊಂಬೆ ಪೂಜಾ ಮದುವೆ ಸಂಭ್ರಮ]

ಪೂಜಾ ಗೌತಮಿ ಉಮಾಶಂಕರ್ ಮತ್ತು ಪ್ರಸನ್ ಡೇವಿಡ್ ವೆಧಾಕನ್ ಮದುವೆ

ಪೂಜಾ ಗೌತಮಿ ಉಮಾಶಂಕರ್ ಮೂಲತಃ ಕರ್ನಾಟಕದ ಶೃಂಗೇರಿಯವರು. ಮಾಡೆಲ್‌ ಹಾಗು ಬಹುಭಾಷಾ ನಟಿಯಾಗಿರುವ ಪೂಜಾ ಗೌತಮಿ ಉಮಾಶಂಕರ್ ಈಗ ಶ್ರೀಲಂಕಾದ ಉದ್ಯಮಿ ಪ್ರಸನ್ ಡೇವಿಡ್ ವೆಧಾಕನ್ ಎಂಬುವವರೊಂದಿಗೆ ಇತ್ತೀಚೆಗಷ್ಟೆ ಹಸಮಣೆ ಏರಿದ್ದಾರೆ.[ಹಾಯ್ ಬೆಂಗ್ಳೂರ್ ವರದಿ ಬಂಡಲ್: ನಟಿ ಪೂಜಾ]

ಕ್ರಿಶ್ಚಿಯನ್ ಸಂಪ್ರದಾಯದಂತೆ ಮದುವೆ

ಪೂಜಾ ಗೌತಮಿ ಉಮಾಶಂಕರ್ ಮತ್ತು ಪ್ರಸನ್ ಡೇವಿಡ್ ವೆಧಾಕನ್ ರ ಮದುವೆ ಡಿಸೆಂಬರ್ 18 ರಂದು ಕೊಲಂಬೊ ದಲ್ಲಿ ಕ್ರಿಶ್ಚಿಯನ್ ಸಂಪ್ರದಾಯದಂತೆ ನೆರವೇರಿತು.[ಚಂದನದ ಗೊಂಬೆ ಪೂಜಾ ಉಮಾಶಂಕರ್ ಮದ್ವೆ]

ಆಪ್ತರಿಗೆ ಮಾತ್ರ ಆಹ್ವಾನ ನೀಡಿ ಮದುವೆ

ನಟಿ ಪೂಜಾ ಗೌತಮಿ ಉಮಾಶಂಕರ್ ಮತ್ತು ಪ್ರಸನ್ ಡೇವಿಡ್ ವೆಧಾಕನ್ ಮದುವೆಗೆ ಕುಟುಂಬಸ್ಥರು, ಆಪ್ತರಿಕೆ ಮಾತ್ರ ಆಹ್ವಾನ ನೀಡಲಾಗಿತ್ತು.

ಪೂಜಾ ಗೌತಮಿ ಉಮಾಶಂಕರ್ ಬಹುಭಾಷಾ ನಟಿ

2003 ರಲ್ಲಿ ಮಾಧವನ್ ಜತೆ 'ಜೇ ಜೇ' ಚಿತ್ರದ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟ ಪೂಜಾ 12 ತಮಿಳು ಚಿತ್ರಗಳು, 5 ಕ್ಕಿಂತ ಹೆಚ್ಚು ಸಿಂಹಳ ಚಿತ್ರಗಳು, ಒಂದೆರಡು ತೆಲುಗು ಮತ್ತು ಮಲಯಾಳಂ ಚಿತ್ರಗಳಲ್ಲಿ ನಟಿಸಿದ್ದಾರೆ. ಹಾಗೂ ಎರಡು ಇಂಗ್ಲೀಷ್ ಚಿತ್ರಗಳಲ್ಲೂ ನಟಿಸಿದ್ದಾರೆ.

ಪೂಜಾ ಶೃಗೇರಿ ಮೂಲದವರು

ಪೂಜಾ ಅವರ ತಂದೆ ಎಚ್‌ ಆರ್ ಉಮಾಶಂಕರ್ ಅವರು ಕರ್ನಾಟಕದ ಶೃಂಗೇರಿ ಮೂಲದವರಾಗಿದ್ದು, ಪೂಜಾ ಅವರು ಆಲ್ದೂರು ಹಾಗೂ ಬೆಂಗಳೂರಿನಲ್ಲಿ ಶಾಲೆ, ಕಾಲೇಜು ಶಿಕ್ಷಣ ಮುಗಿಸಿ ನಂತರ ಸಿನಿಮಾ ರಂಗಕ್ಕೆ ಕಾಲಿಟ್ಟರು.

ಸ್ಟಾರ್ ನಟರ ಜೊತೆ ಅಭಿನಯ

ಪೂಜಾ ಗೌತಮಿ ಉಮಾಶಂಕರ್ ಖ್ಯಾತ ಅಜಿತ್, ಪ್ರಶಾಂತ್, ಜೀವಾ ಸೇರಿದಂತೆ ಹಲವು ಸ್ಟಾರ್ ನಟರ ಜೊತೆ ಅಭಿನಯಿಸಿದ್ದಾರೆ.

25 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟನೆ

ಪೂಜಾ ಗೌತಮಿ ಉಮಾಶಂಕರ್ ತಮಿಳು, ಸಿಂಹಳ, ಇಂಗ್ಲೀಷ್, ತೆಲುಗು, ಮಲಯಾಳಂ ಸೇರಿದಂತೆ ಒಟ್ಟಾರೆ 25 ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.

English summary
Pooja Gauthami Umashankar, mononymously known as Pooja, is an Indian-Sri Lankan actress, who has primarily appeared in Tamil films as well as Sinhala, Malayalam and amateur films. Indian Sri Lankan actress Pooja Umashankar Married Prasan David Vedhakan

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada