For Quick Alerts
  ALLOW NOTIFICATIONS  
  For Daily Alerts

  'ಕುರುಕ್ಷೇತ್ರ' ಸಿನಿಮಾದಲ್ಲಿ ನಾನು ನಟಿಸುತ್ತಿಲ್ಲ : ಅಂಬರೀಶ್ ಡೈರೆಕ್ಟ್ ಹಿಟ್

  By Naveen
  |

  ಸ್ಯಾಂಡಲ್ ವುಡ್ ನಲ್ಲಿ ಶುರುವಾಗುತ್ತಿರುವ 'ಕುರುಕ್ಷೇತ್ರ' ಸಿನಿಮಾದ ಬಗ್ಗೆ ದಿನಕ್ಕೊಂದು ಸುದ್ದಿ ಹರಿದಾಡುತ್ತಿದೆ. ಇವತ್ತು 'ಕುರುಕ್ಷೇತ್ರ' ಚಿತ್ರದ ಬಗ್ಗೆ ಒಂದು ಬೇಸರದ ಸುದ್ದಿ ಹೊರಬಿದ್ದಿದೆ. ನಟ ಅಂಬರೀಶ್ 'ಕುರುಕ್ಷೇತ್ರ' ಚಿತ್ರದಲ್ಲಿ ನಟಿಸುತ್ತಿಲ್ಲ ಎಂದು ಹೇಳಿದ್ದಾರೆ

  ತಮ್ಮ ಹುಟ್ಟುಹಬ್ಬದ ವಿಶೇಷವಾಗಿ ಸುದ್ದಿ ವಾಹಿನಿಗಳೊಂದಿಗೆ ಮಾತನಾಡಿದ ಅಂಬರೀಶ್ 'ಕುರುಕ್ಷೇತ್ರ' ಚಿತ್ರದ ಬಗ್ಗೆ ತಮ್ಮ ಹೇಳಿಕೆಯನ್ನು ನೀಡಿದ್ದಾರೆ. ಅಂದಹಾಗೆ, ಭೀಷ್ಮ ಪಾತ್ರದಲ್ಲಿ ಕಾಣಿಸಿಕೊಳ್ಳಬೇಕಿದ್ದ ಅಂಬರೀಶ್ ಈ ಚಿತ್ರದ ಬಗ್ಗೆ ಮೊದಲ ಬಾರಿ ಮಾತನಾಡಿದ್ದಾರೆ. ಮುಂದೆ ಓದಿ....

  'ಕುರುಕ್ಷೇತ್ರ'ದಲ್ಲಿ ನಾನಿಲ್ಲ

  'ಕುರುಕ್ಷೇತ್ರ'ದಲ್ಲಿ ನಾನಿಲ್ಲ

  ಕನ್ನಡದ ಬಹುನಿರೀಕ್ಷಿತ ಚಿತ್ರ ''ಕುರುಕ್ಷೇತ್ರ ಸಿನಿಮಾದಲ್ಲಿ ನಾನಿಲ್ಲ'' ಅಂತ ಅಂಬರೀಶ್ ಕಡ್ಡಿ ತುಂಡು ಮಾಡಿದಂತೆ ಹೇಳಿ ಬಿಟ್ಟಿದ್ದಾರೆ.

  ಅಂಬಿ ಹೇಳಿಕೆ

  ಅಂಬಿ ಹೇಳಿಕೆ

  ''ಭೀಷ್ಮ ಪಾತ್ರವನ್ನು ಯಾರು ಬೇಕಾದರೂ ನಟಿಸಬಹುದು. ನಾನೇ ಯಾಕೆ ಮಾಡಬೇಕು?'' ಅಂತ ಅಂಬರೀಶ್ ಪ್ರಶ್ನಿಸಿದ್ದಾರೆ.['ಕುರುಕ್ಷೇತ್ರ'ದ ಬಗ್ಗೆ ಮಹತ್ವದ ರಹಸ್ಯ ಬಿಚ್ಚಿಟ್ಟ ನಿರ್ದೇಶಕ ನಾಗಣ್ಣ]

  ಯಾರು ಬೇಕಾದರೂ ಆಗಬಹುದು

  ಯಾರು ಬೇಕಾದರೂ ಆಗಬಹುದು

  ''ಬಿಳಿ ಗಡ್ಡ ಹಾಕಿಕೊಂಡರೆ.. ಯಾರು ಬೇಕಾದರೂ ಭೀಷ್ಮ ಆಗಬಹುದು'' ಅಂತ ರೆಬೆಲ್ ಆಗಿ ಅಂಬಿ ಹೇಳಿದ್ದಾರೆ.

  'ಮಹಾ ಭಾರತ' ಚಿತ್ರದಲ್ಲಿಯೂ ನಟಿಸುತ್ತಿಲ್ಲ

  'ಮಹಾ ಭಾರತ' ಚಿತ್ರದಲ್ಲಿಯೂ ನಟಿಸುತ್ತಿಲ್ಲ

  'ಕುರುಕ್ಷೇತ್ರ' ಸಿನಿಮಾದ ಜೊತೆಗೆ 1000 ಕೋಟಿಯ 'ದಿ ಮಹಾಭಾರತ' ಚಿತ್ರದಲ್ಲಿಯೂ ಅಂಬರೀಶ್ ನಟಿಸುವುದಿಲ್ಲವಂತೆ.[ಸುಳ್ಳೇ ಸುಳ್ಳು... ದರ್ಶನ್ 'ಕುರುಕ್ಷೇತ್ರ'ದ ಬಗ್ಗೆ ಕೇಳಿಬಂದಿದ್ದೆಲ್ಲ ಬರೀ ಸುಳ್ಳು.!]

  ಬಾಹುಬಲಿ ಬಗ್ಗೆ

  ಬಾಹುಬಲಿ ಬಗ್ಗೆ

  ''ಬಾಹುಬಲಿ ಸಿನಿಮಾದ ಕಥೆಯ ಬಗ್ಗೆ ಜನರಿಗೆ ಗೊತ್ತಿರಲಿಲ್ಲ. ಆದರೆ ಮಹಾಭಾರತ, ರಾಮಾಯಣದ ಕಥೆ ಚಿಕ್ಕ ಮಕ್ಕಳಿಗೂ ಗೊತ್ತಿದೆ'' ಈ ರೀತಿ ಹೇಳುವ ಮೂಲಕ ಕಥೆ ಗೊತ್ತಿರುವ 'ಕುರುಕ್ಷೇತ್ರ'ವನ್ನು ಜನ ಒಪ್ಪಿಕೊಳ್ಳುತ್ತಾರಾ ಅಂತ ಪರೋಕ್ಷವಾಗಿ ಹೇಳಿದ್ದಾರೆ.

  ನಾಗಣ್ಣ ಸುಳ್ಳು ಹೇಳಿದ್ರಾ?

  ನಾಗಣ್ಣ ಸುಳ್ಳು ಹೇಳಿದ್ರಾ?

  ನಿರ್ದೇಶಕ ನಾಗಣ್ಣ 'ಕುರುಕ್ಷೇತ್ರ' ಚಿತ್ರದಲ್ಲಿ ಭೀಷ್ಮನಾಗಿ ಅಂಬರೀಶ್ ನಟಿಸುವುದು ಪಕ್ಕಾ ಅಂತ ಹೇಳಿಕೊಂಡು ಬಂದಿದ್ದರು. ಆದರೆ, ಈಗ ಅಂಬಿ ತಮ್ಮ ನಿಲುವನ್ನು ತಿಳಿಸಿದ್ದಾರೆ.[ದರ್ಶನ್ 'ಕುರುಕ್ಷೇತ್ರ'ದ ಬಗ್ಗೆ ಬಿಸಿ ಬಿಸಿ ಸುದ್ದಿ: ಅಪ್ಪಿ-ತಪ್ಪಿ ಸತ್ಯ ಆಗ್ಬಿಟ್ರೆ.?]

  ಉಳಿದವರ ಕಥೆ ಏನು

  ಉಳಿದವರ ಕಥೆ ಏನು

  ದರ್ಶನ್ 'ಕುರುಕ್ಷೇತ್ರ' ಚಿತ್ರದ ಫೋಟೋ ಶೂಟ್ ನಲ್ಲಿ ಭಾಗಿಯಾಗಿದ್ದರು. ದರ್ಶನ್ ರವರನ್ನ ಹೊರತು ಪಡಿಸಿ ಬೇರೆ ಯಾವ ನಟರೂ ಇದುವರೆಗೆ ಸಿನಿಮಾದ ಕೆಲಸದಲ್ಲಿ ತೊಡಗಿಸಿಕೊಂಡಿಲ್ಲ.

  ಜುಲೈ 27ಕ್ಕೆ ಶೂಟಿಂಗ್

  ಜುಲೈ 27ಕ್ಕೆ ಶೂಟಿಂಗ್

  ನಿರ್ದೇಶಕ ನಾಗಣ್ಣ ಮತ್ತು ನಿರ್ಮಾಪಕ ಮುನಿರತ್ನ ಜುಲೈ 27ಕ್ಕೆ ಚಿತ್ರದ ಚಿತ್ರೀಕರಣವನ್ನು ಶುರು ಮಾಡುವುದಕ್ಕೆ ಪ್ಲಾನ್ ಮಾಡಿದ್ದರು. ಆದರೆ ಇನ್ನೂ ಬಹುತೇಕ ಸ್ಟಾರ್ ಗಳು ಸಿನಿಮಾದಲ್ಲಿ ನಟಿಸುವುದರ ಬಗ್ಗೆ ಬಾಯಿ ಬಿಟ್ಟಿಲ್ಲ.[ದರ್ಶನ್ 'ಕುರುಕ್ಷೇತ್ರ'ದಲ್ಲಿ ಶ್ರೀ ಕೃಷ್ಣನ ಪಾತ್ರ ಸೇಲ್ ಆಗೋಯ್ತು!]

  English summary
  Kannada Actor Ambareesh clarifies that he is not acting in Darshan starrer Kannada Movie 'Kurukshetra'

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X