»   » ಚಿತ್ರಗಳು: ಅಮೂಲ್ಯ-ಜಗದೀಶ್ ವೈಭವದ ಆರತಕ್ಷತೆ ನೋಡಿ ಕಣ್ತುಂಬಿಕೊಳ್ಳಿ

ಚಿತ್ರಗಳು: ಅಮೂಲ್ಯ-ಜಗದೀಶ್ ವೈಭವದ ಆರತಕ್ಷತೆ ನೋಡಿ ಕಣ್ತುಂಬಿಕೊಳ್ಳಿ

Posted By:
Subscribe to Filmibeat Kannada

ಆದಿ ಚುಂಚನಗಿರಿಯಲ್ಲಿ ಶಾಸ್ತ್ರ, ಸಂಪ್ರಾದಯವಾಗಿ ವಿವಾಹವಾದ ನಟಿ ಅಮೂಲ್ಯ ಮತ್ತು ಜಗದೀಶ್ ಅವರ ಆರತಕ್ಷತೆ ಕಾರ್ಯಕ್ರಮ ನಿನ್ನೆಯಷ್ಟೇ (ಮೇ 17) ಬೆಂಗಳೂರಿನಲ್ಲಿ ಅದ್ದೂರಿಯಾಗಿ ನಡೆದಿದೆ.

ಕನಕಪುರ ರಸ್ತೆಯ ಕನ್ವೆನ್ಷನ್ ಹಾಲ್ ನಲ್ಲಿ ಅಮೂಲ್ಯ-ಜಗದೀಶ್ ಅವರ ನಿಶ್ಚಿತಾರ್ಥ ನೆರವೇರಿದ್ದು, ನವಜೋಡಿಗಳಿಗೆ ಶುಭಕೋರಲು ಚಿತ್ರರಂಗದ ಗಣ್ಯರು, ರಾಜಕೀಯ ಗಣ್ಯರು ಹಾಗೂ ಸಾವಿರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಆಗಮಿಸಿದ್ದರು.['ಅಮೂಲ್ಯ-ಜಗದೀಶ್' ಆರತಕ್ಷತೆ: ಅಭಿಮಾನಿಗಳಿಗೆ 'ಫೇಸ್ ಬುಕ್' ಆಹ್ವಾನ]

ಹಾಗಾದ್ರೆ, ಅಮ್ಮು-ಜಗ್ಗಿ ಆರತಕ್ಷತೆಯಲ್ಲಿ ಏನೆಲ್ಲಾ ವಿಶೇಷತೆ ಇತ್ತು? ಯಾರೆಲ್ಲಾ ಗಣ್ಯರು ಭಾಗಿಯಾಗಿದ್ದರು? ಎಂಬುದನ್ನ ಮುಂದೆ ಚಿತ್ರಗಳ ಸಮೇತ ನೋಡಿ......

ಅಮೂಲ್ಯ-ಜಗದೀಶ್ ವೈಭವದ ಆರತಕ್ಷತೆ

ಮೇ 16 ರಂದು ನಟಿ ಅಮೂಲ್ಯ ಮತ್ತು ಜಗದೀಶ್ ಅವರ ಆರತಕ್ಷತೆ ವೈಭವದಿಂದ ಅದ್ದೂರಿಯಾಗಿ ನಡೆಯಿತು. ಬೆಂಗಳೂರಿನ ಕನಕಪುರ ರಸ್ತೆಯ ಕನ್ವೆನ್ಷನ್ ಹಾಲ್ ನಲ್ಲಿ ವೆಡ್ಡಿಂಗ್ ರಿಸಪ್ಷನ್ ನೆರವೇರಿತು. ಅಮೂಲ್ಯ ಹಾಗೂ ಜಗದೀಶ್ ಅವರ ಸ್ನೇಹಿತರು, ಕುಟುಂಬದವರು, ಗಣ್ಯರು ಎಲ್ಲರು ಸಾಕ್ಷಿಯಾದರು.

ಬೋಜ್ ಪುರಿ ಶೈಲಿಯಲ್ಲಿ ನವಜೋಡಿಗಳು ಮಿಂಚು

ಅಮೂಲ್ಯ ಮತ್ತು ಜಗದೀಶ್ ತಮ್ಮ ಆರತಕ್ಷತೆ ಕಾರ್ಯಕ್ರಮದಲ್ಲಿ ರಾಜ-ರಾಣಿಯಂತೆ ಮಿಂಚುತ್ತಿದ್ದರು. ಅಮೂಲ್ಯ ಕೆಂಪು ಬಣ್ಣದ ಲೆಹೆಂಗಾ ತೊಟ್ಟಿದ್ದರೇ, ಜಗದೀಶ್ ಅವರು ನೀಲಿ ಬಣ್ಣದ ಬೋಜ್ ಪುರಿ ಸೂಟ್ ತೊಟ್ಟು ಕಂಗೊಳಿಸುತ್ತಿದ್ದರು.[ಚಿತ್ರಗಳು: ಪಂಚತಾರಾ ಹೋಟೆಲ್ ನಲ್ಲಿ 'ಅಮೂಲ್ಯ-ಜಗದೀಶ್' ವೆಡ್ಡಿಂಗ್ ಪಾರ್ಟ]

ಅರಮನೆಯಂತೆ ಸಿಂಗಾರ

ಅಮೂಲ್ಯ-ಜಗದೀಶ್ ಆರತಕ್ಷತೆಗಾಗಿ ಕನ್ವೆಂಕ್ಷನ್ ಹಾಲ್ ನ್ನ ವೈಭವದಿಂದ ಅರಮನೆಯಂತೆ ಸಿಂಗಾರಗೊಳಿಸಲಾಗಿತ್ತು. ಆರಂಭದಲ್ಲಿ ಏಳು ಬಾಗಿಲು ನಿರ್ಮಾಣ ಮಾಡಲಾಗಿತ್ತು. ಅರೇಬಿಕ್ ಶೈಲಿಯ ವಸ್ತುಗಳನ್ನ ಬಳಿಸಿ ಹಾಲ್ ಸಿದ್ದ ಮಾಡಲಾಗಿತ್ತು.

ಹೂವಿನ ಅಲಂಕಾರದ ಮೆರಗು

ಅಮ್ಮು-ಜಗ್ಗಿ ಆರತಕ್ಷತೆಗೆ ವೈಭವದ ಹೂವಿನ ಅಲಂಕಾರ ಮಾಡಲಾಗಿತ್ತು. ದೇಶ ವಿದೇಶಗಳ 40 ಬಗೆಯ ಹೂವುಗಳನ್ನ ತರಿಸಿ ಶೃಂಗಾರಗೊಳಿಸಲಾಗಿತ್ತು. ಇಡೀ ಹಾಲ್ ಪೂರ್ತಿ ಕೆಂಪು ಮತ್ತು ಬಿಳಿಯ ಹೂವುಗಳಿಂದ ಕಂಗೊಳಿಸುತ್ತಿತ್ತು,[ಮದುವೆ ನಂತರ ಫೇಸ್‌ಬುಕ್ ಲೈವ್ ಬಂದಿದ್ದ ಅಮೂಲ್ಯ ಹೇಳಿದ್ದೇನು?]

ಯಾರೆಲ್ಲಾ ಭಾಗಿಯಾಗಿದ್ದರು?

ಆದಿ ಚುಂಚನಗಿರಿಯ ಬಾಲಗಂಗಾಧರನಾಥ ನಿರ್ಮಲಾನಂದ ಸ್ವಾಮಿಜೀ, ರಮೇಶ್ ಅರವಿಂದ್ ದಂಪತಿ, ಗುರು ಕಿರಣ್ ದಂಪತಿ, ಯೋಗರಾಜ್ ಭಟ್, ಆರ್ ಅಶೋಕ್, ಡಿಕೆ ಶಿವಕುಮಾರ್, ವಿ.ಸೋಮಣ್ಣ, ರಾಮಲಿಂಗಾ ರೆಡ್ಡಿ, ಟಿ.ಎಸ್ ನಾಗಾಭರಣ, ದೊಡ್ಡಣ್ಣ, ಲಹರಿ ವೇಲು, ಗಿರಿಜಾ ಲೋಕೇಶ್, ನೇಹಾ ಪಾಟೀಲ್, ರೂಪಿಕಾ, ಶ್ರೀನಾಥ್ ಸೇರಿದಂತೆ ಹಲವು ರಾಜಕೀಯ ಹಾಗೂ ಸಿನಿಮಾ ಗಣ್ಯರು ಭಾಗಿಯಾಗಿದ್ದರು.

ಬಗೆ ಬಗೆ ಖಾದ್ಯಗಳು

ಆರತಕ್ಷತೆ ಕಾರ್ಯಕ್ರಮಕ್ಕೆ ಆಗಮಿಸುವ ಗಣ್ಯರು ಹಾಗೂ ಜನಗಳಿಗೆ ಬಗೆ ಬಗೆ ಖಾದ್ಯಗಳನ್ನ ಸಿದ್ದ ಮಾಡಲಾಗಿತ್ತು. 10 ಸಾವಿರ ಅಭಿಮಾನಿಗಳಿಗೆ ಹಾಗೂ 2 ಸಾವಿರ ಗಣ್ಯರಿಗೆ ಪ್ರತ್ಯೇಕ ಊಟದ ವ್ಯವಸ್ಥೆ ಮಾಡಲಾಗಿತ್ತು.[ಅಭಿಜಿತ್ ಶುಭ ಲಗ್ನದಲ್ಲಿ ಅಮೂಲ್ಯಗೆ ಜಗದೀಶ್ 'ಮಾಂಗಲ್ಯ ಧಾರಣೆ']

ಮೇ 14 ರಂದು ವೆಡ್ಡಿಂಗ್ ಪಾರ್ಟಿ

ಮೇ 14 ರಂದು ಬೆಂಗಳೂರಿನ ಪ್ರತಿಷ್ಟಿತ ಪಂಚತಾರಾ ಹೋಟೆಲ್ ಗಳಲ್ಲಿ ಒಂದಾದ ಐಟಿಸಿ ಗಾರ್ಡೇನಿಯಾದಲ್ಲಿ ಅಮೂಲ್ಯ-ಜಗದೀಶ್ (ಎ.ಜೆ) ಮದುವೆ ಪಾರ್ಟಿ ಧೂಂ ಧಾಂ ಆಗಿ ನಡೆಯಿತು. ಚಿತ್ರರಂಗದ ಹಾಗೂ ರಾಜಕೀಯ ಗಣ್ಯರು ಭಾಗವಹಿಸಿದ್ದರು.

ಮೇ 12 ರಂದು ಮಾಂಗಲ್ಯದಾರಣೆ

ಇನ್ನು ಮೇ 12 ರಂದು ಮಂಡ್ಯ ಜಿಲ್ಲೆಯ ಆದಿಚುಂಚನಗಿರಿ ಕ್ಷೇತ್ರದ ಕಾಲಭೈರವೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಜಗದೀಶ್ ಮತ್ತು ಅಮೂಲ್ಯ ವಿವಾಹ ನೆರವೇರಿತು. ಮಧ್ಯಾಹ್ನ 12.30 ರ ಸುಮಾರಿಗೆ ಅಮೂಲ್ಯ ರವರ ಕೊರಳಿಗೆ ಜಗದೀಶ್ ಮಾಂಗಲ್ಯಧಾರಣೆ ಮಾಡಿದ್ದರು.

English summary
Kannada Actress Amulya and Jagadish Reception. Check out in Pics

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada