»   » ಸದ್ಯ.! ವರ್ಮಾ ಟ್ವಿಟ್ಟರ್ ಗೆ ವಿದಾಯ ಹೇಳಿದ್ದೇ ಒಳ್ಳೇದಾಯ್ತು.!

ಸದ್ಯ.! ವರ್ಮಾ ಟ್ವಿಟ್ಟರ್ ಗೆ ವಿದಾಯ ಹೇಳಿದ್ದೇ ಒಳ್ಳೇದಾಯ್ತು.!

Posted By:
Subscribe to Filmibeat Kannada

ರಾಮ್ ಗೋಪಾಲ್ ವರ್ಮಾ ಇಡೀ ಭಾರತ ಚಿತ್ರರಂಗದಲ್ಲಿಯೇ ದೊಡ್ಡ ಹೆಸರು ಮಾಡಿರುವ ನಿರ್ದೇಶಕ. ಪ್ರತಿಭೆ ಜೊತೆ ವಿವಾದಗಳಲ್ಲೂ ರಾಮ್ ಗೋಪಾಲ್ ವರ್ಮಾ ಹೆಸರುವಾಸಿ. ತಮಗೆ ಬೇಡದ ವಿಷಯವಾಗಿದ್ದರೂ, ಅದಕ್ಕೆ ಮೂಗು ತೂರಿಸಿ ಟ್ವಿಟ್ಟರ್ ನಲ್ಲಿ ಮನಬಂದಂತೆ ಟ್ವೀಟ್ ಮಾಡುತ್ತಿದ್ದರು ವರ್ಮಾ ಸಾಹೇಬ್ರು.

ಟ್ವಿಟ್ಟರ್ ನಲ್ಲಿ ಸದಾ ಸಕ್ರಿಯರಾಗಿರುತ್ತಿದ್ದ ರಾಮ್ ಗೋಪಾಲ್ ವರ್ಮಾ, ತಮ್ಮ ಟ್ವೀಟ್ ಗಳ ಮೂಲಕ ಕಾಂಟ್ರವರ್ಸಿ ಕಿಂಗ್ ಎಂತಲೇ 'ಕು'ಖ್ಯಾತಿ ಗಳಿಸಿದ್ದರು.[ಟ್ವಿಟ್ಟರ್ ಲೋಕಕ್ಕೆ ದಿಢೀರ್ ಗುಡ್ ಬೈ ಹೇಳಿದ ರಾಮ್ ಗೋಪಾಲ್ ವರ್ಮಾ.!]

ಈಗ ರಾಮ್ ಗೋಪಾಲ್ ವರ್ಮಾ ಟ್ವಿಟ್ಟರ್ ಗೆ ಗುಡ್ ಬಾಯ್ ಹೇಳಿರಬಹುದು. ಆದರೆ, ಇದೇ ವರ್ಮ ಟ್ವಿಟ್ಟರ್ ನಲ್ಲಿ ಏನೆಲ್ಲ ರಗಳೆ ಮಾಡಿಕೊಂಡಿದ್ದರು ಗೊತ್ತಾ.?

ಕನ್ನಡಿಗರನ್ನು ಕೆಣಕ್ಕಿದ್ದ ವರ್ಮ

'ಬಾಹುಬಲಿ' ಸಿನಿಮಾಗೆ ಕರ್ನಾಟಕದಲ್ಲಿಯೂ ದೊಡ್ಡ ಪ್ರತಿಕ್ರಿಯೆ ಸಿಕ್ಕಾಗ ವರ್ಮಾ ಕನ್ನಡಿಗರನ್ನೂ ಕೆಣಕಿದ್ದರು. ''ಇದು ಕನ್ನಡಿಗರ ಹಿನ್ನಡೆ, ಪರಭಾಷಾ ಸಿನಿಮಾವನ್ನು ವಿರೋಧಿಸುವ ಕನ್ನಡಿಗರು, ಮೊದಲು ಪರಭಾಷೆ ಸಿನಿಮಾಗಳನ್ನು ನೋಡುವ ಕನ್ನಡಿಗರ ವಿರುದ್ಧ ಹೋರಾಟ ಮಾಡಿ'' ಎಂದು ಟ್ವೀಟ್ ಮಾಡಿದ್ದರು.

ವಿಷ್ಣುವರ್ಧನ್ ಬಗ್ಗೆ ಟ್ವೀಟ್

'ಕೋಟಿಗೊಬ್ಬ 2' ಚಿತ್ರ ಬಂದ ಸಂದರ್ಭದಲ್ಲಿ ನಟ ವಿಷ್ಣುವರ್ಧನ್ ಬಗ್ಗೆ ಸಹ ವರ್ಮಾ ಹಗುರವಾಗಿ ಮಾತನಾಡಿದ್ದರು. ಆಗ ವಿಷ್ಣು ಅಭಿಮಾನಿಗಳು ಆರ್ ಜಿ ವಿ ವಿರುದ್ಧ ಕೋಪಗೊಂಡಿದ್ದರು.[ಮುಂಬೈ ಕತ್ತಲೆ ಪ್ರಪಂಚವನ್ನ ಬೆತ್ತಲಾಗಿ ತೋರಿಸಿದ ವರ್ಮ]

ವಿರಾಟ್ - ಅನುಷ್ಕ ಬಗ್ಗೆ ಟ್ವೀಟ್

ಕಳೆದ ಬಾರಿ ಭಾರತ ಕ್ರಿಕೆಟ್ ತಂಡ ವಿಶ್ವಕಪ್ ಸೆಮಿ ಫೈನಲ್ಸ್ ನಲ್ಲಿ ಸೋತಾಗ ವಿರಾಟ್ ಕೋಹ್ಲಿ ಮತ್ತು ಅನುಷ್ಕ ಶರ್ಮ ಬಗ್ಗೆ ಟ್ವೀಟ್ ಮಾಡಿ ವಿವಾದವನ್ನ ಮೈ ಮೇಲೆ ಎಳೆದುಕೊಂಡಿದ್ದರು ವರ್ಮಾ.

ಪೊಲೀಸ್ ಅವತಾರ

'ನಾನೇ ಪೊಲೀಸ್ ಆಗಿದ್ದೀನಿ' ಅಂತ ಒಮ್ಮೆ ಟ್ವೀಟ್ ಮಾಡಿ ವರ್ಮಾ ಎಲ್ಲರನ್ನೂ ಕನ್ಫ್ಯೂಸ್ ಮಾಡಿದ್ದರು.[ಕನ್ನಡಿಗರ ರೋಷಾಗ್ನಿ ಹೊತ್ತಿ ಉರಿಯುವಂತೆ ಮಾಡಿದ ವರ್ಮ]

ಚಿರಂಜೀವಿ ಬಗ್ಗೆ

ನಟ ಚಿರಂಜೀವಿ 150ನೇ ಸಿನಿಮಾಗೆ ಯಾರು ನಿರ್ದೇಶಕ ಎನ್ನುವ ಪ್ರಶ್ನೆ ಜೋರಾಗಿದ್ದಾಗ ವರ್ಮಾ ಚಿರು 150ನೇ ಚಿತ್ರವನ್ನು ಅವರೇ ನಿರ್ದೇಶನ ಮಾಡಲಿದ್ದಾರೆ ಅಂತ ಹೇಳಿಕೊಂಡಿದ್ದರು.

ಅಮೀರ್ ಖಾನ್ ಬಗ್ಗೆ

'ನನ್ನ ಪಾಲಿಗೆ ಅಮೀರ್ ಖಾನ್ ದೇವರು' ಅಂತ ಹೇಳಿ ಅಮೀರ್ ಖಾನ್ ರನ್ನು ಸಹ ಒಮ್ಮೆ ಇಕ್ಕಟ್ಟಿಗೆ ಸಿಲುಕಿಸಿದ್ದರು ವರ್ಮಾ.[ಟೈಗರ್ ಶ್ರಾಫ್ 'ನಪುಂಸಕ': ಜಾಕಿ ಶ್ರಾಫ್ ಮಗನಿಗೆ ವರ್ಮ ಕಮೆಂಟ್]

ದೇವರಿಗೆ ಟ್ವೀಟ್

ಗಣೇಶ ಹಬ್ಬಕ್ಕೆ ನೇರವಾಗಿ ಗಣೇಶನಿಗೆ ಟ್ವೀಟ್ ಮಾಡಿ ಕೆಲ ಪ್ರಶ್ನೆಗಳನ್ನು ಮುಂದಿಟ್ಟಿದ್ದರು ವರ್ಮಾ.

ಮಹಿಳೆಯರ ಬಗ್ಗೆ

ವಿಶ್ವ ಮಹಿಳಾ ದಿನಾಚರಣೆಗೆ ಎಲ್ಲ ಮಹಿಳೆಯರು ಸನ್ನಿ ಲಿಯೋನ್ ರೀತಿ ಖುಷಿಯನ್ನು ನೀಡಬೇಕು ಅಂತ ಟ್ವೀಟ್ ಮಾಡಿ ವರ್ಮಾ ವಿವಾದ ಹುಟ್ಟಿಸಿದ್ದರು.[ಕನ್ನಡ ಪ್ರತಿಭೆಗೆ ಮತ್ತೆ ಮಣೆ ಹಾಕಿದ ವರ್ಮಾ]

ಶ್ರೀದೇವಿಗೆ ಕಿರಿಕ್

ಬಾಲಿವುಡ್ ನಟಿ ಶ್ರೀದೇವಿ ಬಗ್ಗೆ ಸಾಕಷ್ಟು ಬಾರಿ ಟ್ವೀಟ್ ಮಾಡಿದ್ದ ವರ್ಮಾ ಕೊನೆಗೆ ಅವರ ಹೆಸರಿನಲ್ಲಿ ಸಿನಿಮಾ ಬೇರೆ ಮಾಡಿದ್ದರು.

English summary
Director 'Ram Gopal Varma's Controversial Tweets
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada