»   » ದುನಿಯಾ ವಿಜಯ್ ಆರ್ ಎಕ್ಸ್ ಸೂರಿ ರಿಲೀಸ್ಗೆ ರೆಡಿ

ದುನಿಯಾ ವಿಜಯ್ ಆರ್ ಎಕ್ಸ್ ಸೂರಿ ರಿಲೀಸ್ಗೆ ರೆಡಿ

Posted By:
Subscribe to Filmibeat Kannada

ದುನಿಯ ವಿಜಯ್ ಅವರ ಅಭಿನಯದ, ಸುರೇಶ್ ಆರ್ಟ್ಸ್ ಸಂಸ್ಥೆ ನಿರ್ಮಾಣದ ನಾಲ್ಕನೇ ಸಿನಿಮಾ 'ಆರ್ ಎಕ್ಸ್ ಸೂರಿ' ಚಿತ್ರ ಜೂನ್ ತಿಂಗಳಲ್ಲೇ ತೆರೆಗೆ ಬರುವ ಸಾಧ್ಯತೆ ಇದೆ. ರಾಯಲ ಸೀಮೆಯನ್ನು ಆಳಿದ ಪೆರಿಟಾಲ ಸೂರಿ ಮತ್ತು ಪೆರಿಟಾಲ ರವಿ ರೌಡಿಗಳ ಬದುಕಿನ ಕಥಾ ಹಂದರ ಹೊಂದಿರುವ ದ್ವೇಷ ಹಾಗು ಪ್ರೀತಿಯ ಕಥೆ ಹೊಂದಿದೆ ಎನ್ನಲಾಗಿದೆ. ಅದರೆ, ಇಲ್ಲ ಇಲ್ಲ ಹಾಗೇನಿಲ್ಲ ಎಂದು ನಿರ್ದೇಶಕ ಶ್ರೀಜೆ ಹೇಳಿದ್ದಾರೆ.

ಶ್ರೀಜೆ ಅವರು ಮೊದಲ ಬಾರಿಗೆ ಆಕ್ಷನ್ ಕಟ್ ಹೇಳಿರುವ ಈ ಚಿತ್ರದಲ್ಲಿ ರೌಡಿಸಂ ಬದುಕಿನ ಬಗ್ಗೆ ಅನೇಕ ಮಜಲುಗಳನ್ನು ತೆರೆದಿಟ್ಟಿದ್ದಾರಂತೆ. ರೌಡಿಗಳಿಗಿಂತ ಅವರ ಹಿಂದೆ ಮುಂದೆ ಓಡಾಡುವ ವ್ಯಕ್ತಿಗಳ ಮೇಲೆ ಶ್ರೀಜೆ ಕಾಳಜಿ ವಹಿಸಿ ಚಿತ್ರ ನಿರ್ದೇಶನ ಮಾಡಿದ್ದಾರೆ.

ದುನಿಯಾ ವಿಜಯ್ ಜೊತೆ ಖಳ ನಟನಾಗಿ ರವಿಶಂಕರ್ ಇದ್ದಾರೆ. ಗುಜರಾತಿ ಮೂಲದ ಆಕಾಂಕ್ಷ ನಾಯಕಿ. ಬುಲೆಟ್ ಪ್ರಕಾಶ್, ಸಾಧು ಕೋಕಿಲ, ವಿನಯಾ ಪ್ರಕಾಶ್, ಅವಿನಾಶ್, ರಾಜೀವ್, ಪ್ರಶಾಂತ್ ಸಿದ್ದಿ, ದೇವ್ ಹಾಗೂ ಇತರರು ತಾರಾಗಣದಲ್ಲಿ ಇದ್ದಾರೆ.

ಐದು ಸಾಹಸ ದೃಶ್ಯಗಳನ್ನು ಡಿಫರೆಂಟ್ ಡ್ಯಾನಿ ಹಾಗೂ ವಿನೋದ್ ನಿರ್ವಹಿಸಿದ್ದಾರೆ. ಕಲೈ ನೃತ್ಯ, ಎಚ್ ವೇಣು ಅವರ ಛಾಯಾಗ್ರಹಣ, ಅರ್ಜುನ್ ಜನ್ಯ ಸುಮಧುರವಾದ ಸಂಗೀತ ಒದಗಿಸಿದ್ದಾರೆ.

Duniya Vijay Starrer RX Soori is likely to release by june end

ಮತ್ತೊಂದು ರೌಡಿಸಂ ಕಥೆ ತೆರೆಗೆ: 40 ವರ್ಷದ ಮೇಲೆ ಬದ್ಕಿದ್ರೆ ಅವನು ರೌಡಿನೆ ಅಲ್ಲ.... ಎಂಬ ಅಡಿಬರಹ ಹೊಂದಿರುವ `ಗಣಪ' ಚಿತ್ರ ಕೂಡಾ ಬಿಡುಗಡೆ ಸಿದ್ಧವಾಗಿದೆ ಎಂದು ಪಿ 2 ಎಂಟರ್ಟೈನ್ಮೆಂಟ್ ನಿರ್ಮಾಪಕರಾದ ಪ್ರೇಮ್ ಹಾಗೂ ಪರಮೇಶ್ ಅವರು ತಿಳಿಸಿದ್ದಾರೆ.

'ಗಣಪ' ಚಿತ್ರಕ್ಕೆ ಚೆನ್ನೈ, ಬೆಂಗಳೂರು, ಮುಂಬೈ, ಮದುರೈ, ಕಾರೈಕುಡಿ ಸ್ಥಳಗಳಲ್ಲಿ ಪ್ರಭು ಶ್ರೀನಿವಾಸ್ ಅವರ ನಿರ್ದೇಶನದಲ್ಲಿ ಒಟ್ಟು 112 ದಿವಸಗಳ ಚಿತ್ರೀಕರಣ ಮಾಡಲಾಗಿದೆ.

ಆನಂದ್ ಆಡಿಯೋ ಹೊರತಂದಿರುವ ಹಾಡುಗಳಿಗೆ ಉತ್ತಮ ಪ್ರತಿಕ್ರಿಯೆ ದೊರಕಿಸಿಕೊಂಡಿರುವ `ಗಣಪ' ಚಿತ್ರದ ನಾಯಕ ನಿರ್ಮಾಪಕ ಆನೇಕಲ್ ಬಾಲರಾಜ್ ಅವರ ಪುತ್ರ ಸಂತೋಷ್ ವಿಶೇಷ ತರಬೇತಿಯನ್ನು ಮಾಡಿಕೊಂಡು ಕ್ಯಾಮರಾ ಮುಂದೆ ಬಂದಿದ್ದಾರೆ.

ಪ್ರಿಯಾಂಕ ಚಿತ್ರದ ಕಥಾ ನಾಯಕಿ. ನಿರ್ದೇಶಕ ಪ್ರಭು ಶ್ರೀನಿವಾಸ್ ಈ ಹಿಂದೆ 'ಜೀವ' ಎಂಬ ಸಿನೆಮಾ ನಿರ್ದೇಶನ ಮಾಡಿದ್ದವರು. `ಗಣಪ' ಚಿತ್ರದ ಮೂಲಕ ಅನೇಕ ಹೊಸ ಪ್ರತಿಭೆಗಳನ್ನು ಪರಿಚಯ ಮಾಡಿದ್ದಾರೆ.ಪೆಟ್ರೋಲ್ ಪ್ರಸನ್ನ ಹಾಗೂ ಸುಚಿತ್ರಾ (ಡಿಸ್ಕೋ ಶಾಂತಿ ಸಹೋದರಿ) ಅವರಿಗೆ ವಿಶೇಷವಾದ ಒಂದು ಹಾಡು ಸಹ ಈ ಚಿತ್ರದಲ್ಲಿದೆ.

English summary
Duniya Vijay Starrer RX Soori movie is likely to release by the end of June 2015. The novie is touted to be a romantic-action entertainer directed by Sree Jay. Another film based on Rowdism subject' Ganapa' is also set to release soon.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada