For Quick Alerts
  ALLOW NOTIFICATIONS  
  For Daily Alerts

  ನಟಿ ಸಿಂಧು ಮೆನನ್ ವಿರುದ್ಧ ಎಫ್.ಐ.ಆರ್ ದಾಖಲು

  By Bharath Kumar
  |
  ಸಿಂಧೂ ಮೆನನ್ ಅವರಿಂದ ಸರ್ಕಾರಿ ಬ್ಯಾಂಕ್ ಒಂದಕ್ಕೆ ವಂಚನೆ | Filmibeat Kannada

  ಬಹುಭಾಷಾ ನಟಿ ಸಿಂಧು ಮೆನನ್ ವಿರುದ್ಧ ಬೆಂಗಳೂರಿನ RMC Yard ಪೊಲೀಸ್ ಠಾಣೆಯಲ್ಲಿ ಎಫ್.ಐ.ಆರ್ ದಾಖಲಾಗಿದೆ. ಬರೋಡ ಬ್ಯಾಂಕಿಗೆ ವಂಚನೆ ಮಾಡಿರುವ ಆರೋಪದಲ್ಲಿ ಸಿಂಧು ಮೆನನ್ ಸಹೋದರ ಸೇರಿದಂತೆ ಹಲವರ ಮೇಲೆ ಪ್ರಕರಣ ದಾಖಲಾಗಿದೆ.

  ನಕಲಿ ದಾಖಲೆಗಳನ್ನ ಸೃಷ್ಟಿಸಿ ಬ್ಯಾಂಕಿನಿಂದ ಸುಮಾರು 36 ಲಕ್ಷ ರೂಪಾಯಿ ಸಾಲ ಪಡೆದು ಬ್ಯಾಂಕಿಗೆ ವಂಚನೆ ಮಾಡಿದ್ದಾರೆ ಎಂಬ ಆರೋಪದಡಿ ಎಫ್.ಐ.ಆರ್ ದಾಖಲಾಗಿದೆ.

  ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಈಗಾಗಲೇ ಸಿಂಧು ಮೆನನ್ ಸಹೋದರ ಮನೋಜ್ ಕಾರ್ತಿಕೇಯನ್ ವರ್ಮಾ, ನಾಗಶ್ರೀ ಶಿವಣ್ಣ ಅವರನ್ನ ಬಂಧಿಸಲಾಗಿದೆ. ಪ್ರಕರಣದ ಮೂರನೇ ಆರೋಪಿ ಸಿಂಧು ಮೆನನ್ ಅವರಿಗಾಗಿ ಹುಡುಕಾಟ ನಡೆಸಲಾಗುತ್ತಿದೆ.

  ಬ್ಯಾಂಕ್ ಆಫ್ ಬರೋಡದ ಮ್ಯಾನೇಜರ್ ರಮೇಶ್ ಅವರು ಜನವರಿ 10 ರಂದು ನೀಡಿದ್ದ ದೂರಿನ ಅನ್ವಯ ಎಫ್.ಐ.ಆರ್ ದಾಖಲಾಗಿದ್ದು, ಸಿಂಧು ಮೆನನ್ ಸಹೋದರ ಬ್ಯಾಂಕಿನಿಂದ ಸಾಲ ಪಡೆದಿದ್ದರು ಎನ್ನಲಾಗಿದೆ. ಈ ಹಣವನ್ನ ಸಿಂಧು ಮೆನನ್ ಕೂಡ ಬಳಸಿಕೊಂಡಿರುವ ದಾಖಲೆಗಳಿದ್ದು, ಅವರ ಮೇಲೂ ಎಫ್.ಐ.ಆರ್ ರಿಜಿಸ್ಟಾರ್ ಆಗಿದೆ.

  ಸದ್ಯ, ಸಿಂಧು ಮೆನನ್ ಅಮೇರಿಕಾದಲ್ಲಿದ್ದಾರೆ ಎಂಬ ಮಾಹಿತಿ ಪೊಲೀಸರಿಗೆ ಲಭ್ಯವಾಗಿದೆಯಂತೆ. ಈ ಬಗ್ಗೆ ಖಚಿತ ಪಡಿಸಿರುವ ಉತ್ತರ ವಲಯದ ಡಿಸಿಪಿ ಚೇತನ್ ಸಿಂಗ್ ರಾಥೋಡ್ ''ಈ ಪ್ರಕರಣದಲ್ಲಿ ಇಬ್ಬರನ್ನ ಬಂಧಿಸಲಾಗಿದೆ. ಸಿಂಧು ಮೆನನ್ ಪರೋಕ್ಷವಾಗಿ ಇದಕ್ಕೆ ಸಹಕರಿಸಿರಬಹುದು. ಅವರನ್ನ ಕರೆಸಿ ವಿಚಾರಣೆ ನಡೆಸಲಾಗುತ್ತೆ. ಆರೋಪ ಸಾಬೀತಾದ್ರೆ ಬಂಧಿಸಲಾಗುತ್ತೆ'' ಎಂದಿದ್ದಾರೆ.

  ಕನ್ನಡ, ತಮಿಳುಮ ತೆಲುಗು ಹಾಗೂ ಮಲಯಾಳಂ ಚಿತ್ರಗಲ್ಲಿ ನಟಿಸಿರುವ ಸಿಂಧು ಮೆನನ್ ಕನ್ನಡದ 'ನಂದಿ', 'ಖುಷಿ', 'ಧರ್ಮ', 'ಯಾರೇ ನೀ ಹುಡುಗಿ' ಅಂತಹ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.

  English summary
  FIR filed against South Actress sindhu menon in RMC Yard Police station at Bangalore.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X