»   » ಬರ್ತಡೇ ಪಾರ್ಟಿಯಲ್ಲಿ ಮೈಚಳಿ ಬಿಟ್ಟು ಕುಣಿದ 'ತುಪ್ಪದ ಬೆಡಗಿ' ರಾಗಿಣಿ

ಬರ್ತಡೇ ಪಾರ್ಟಿಯಲ್ಲಿ ಮೈಚಳಿ ಬಿಟ್ಟು ಕುಣಿದ 'ತುಪ್ಪದ ಬೆಡಗಿ' ರಾಗಿಣಿ

Posted By:
Subscribe to Filmibeat Kannada

ಸ್ಯಾಂಡಲ್ ವುಡ್ ನ ಗ್ಲಾಮರ್ ಗರ್ಲ್ ರಾಗಿಣಿ ದ್ವಿವೇದಿ ಇಂದು ಹುಟ್ಟುಹಬ್ಬದ ಸಂಭ್ರಮ. ಈ ವರ್ಷ ರಾಗಿಣಿ ತಮ್ಮ ಜನ್ಮದಿನವನ್ನ ತುಂಬ ಸ್ಪೆಷಲ್ ಆಗಿ ಆಚರಿಸಿಕೊಂಡರು. ಬರ್ತಡೇ ವಿಶೇಷವಾಗಿ ಒಂದು ಸಖತ್ ಪಾರ್ಟಿ ಕೂಡ ಆಯೋಜನೆ ಮಾಡಿದ್ದರು.

ಹುಟ್ಟುಹಬ್ಬದ ಅಂಗವಾಗಿ ನಿನ್ನೆ (ಮೇ 23) ರಾತ್ರಿ ಯಲಹಂಕದಲ್ಲಿ ಇರುವ ತಮ್ಮ ಅಪಾರ್ಟ್ ಮೆಂಟ್ ನಲ್ಲಿ ರಾಗಿಣಿ ಪಾರ್ಟಿಯನ್ನು ಇಟ್ಟುಕೊಂಡಿದ್ದರು. ಈ ಕಾರ್ಯಕ್ರಮದಲ್ಲಿ ಮುಖ್ಯವಾಗಿ ರಾಗಿಣಿ ಕುಟುಂಬದ ಸದಸ್ಯರು ಮತ್ತು ಮಾಧ್ಯಮದ ಗೆಳೆಯರು ಮಾತ್ರ ಭಾಗಿಯಾಗಿದ್ದರು.['ಸೂಪರ್' ಆಗೊಂದು 'ಟಾಕ್ ಶೋ', ಮೊದಲ ವಾರ ರಕ್ಷಿತಾ-ರಾಗಿಣಿ ಅತಿಥಿ]

ಪಾರ್ಟಿ ಮೂಡ್ ನಲ್ಲಿದ್ದ ರಾಗಿಣಿ ಮೈ ಚಳಿ ಬಿಟ್ಟು ಸಖತ್ ಆಗಿ ಸ್ಟೆಪ್ ಹಾಕಿದ್ದಾರೆ. ರಾತ್ರಿ 12 ಗಂಟೆವರೆಗೂ ನಡೆದ ರಾಗಿಣಿ ಅವರ ಬರ್ತಡೇ ಪಾರ್ಟಿಯ ಕಲರ್ ಫುಲ್ ಝಲಕ್ ಇಲ್ಲಿದೆ....

'ಬರ್ತಡೇ ವೀಕ್'

'ಬರ್ತಡೇ ವೀಕ್' ಎನ್ನುವ ಹೆಸರಿನಲ್ಲಿ ತಮ್ಮ ಈ ವರ್ಷದ ಬರ್ತಡೇ ಸೆಲಬ್ರೇಷನ್ ನ ವಾರದ ಮುಂಚೆಯಿಂದಲೇ ರಾಗಿಣಿ ಶುರು ಮಾಡಿದ್ದರು.

ನಿನ್ನೆ ಪಾರ್ಟಿ

ಯಲಹಂಕದ ತಮ್ಮ ಅಪಾರ್ಟ್ ಮೆಂಟಿನಲ್ಲಿ ಕೇಕ್ ಕಟ್ ಮಾಡಿ ರಾಗಿಣಿ ಹುಟ್ಟುಹಬ್ಬ ಆಚರಿಸಿದರು. ಅದರ ಬಳಿಕ ಒಂದು ಸ್ಪೆಷಲ್ ಪಾರ್ಟಿ ಯನ್ನು ಸಹ ಇಟ್ಟುಕೊಂಡಿದ್ದರು.[ಕುಲದೇವಿ ದರ್ಶನಕ್ಕಾಗಿ ಪಂಜಾಬ್ ಪ್ರವಾಸದಲ್ಲಿ ರಾಗಿಣಿ ದ್ವಿವೇದಿ]

ಆಪ್ತರಿಗೆ ಮಾತ್ರ

ಆಪ್ತರಿಗೆ ಮಾತ್ರ ಈ ಪಾರ್ಟಿ ಆಯೋಜಿಸಿದ್ದು, ರಾಗಿಣಿ ಕುಟುಂಬ ಮತ್ತು ಕೆಲ ಮಾಧ್ಯಮ ಸ್ನೇಹಿತರು ಮಾತ್ರ ಪಾರ್ಟಿಯಲ್ಲಿ ಭಾಗಿಯಾಗಿದ್ದರು.

ಅಪ್ಪ, ಅಮ್ಮ ಭಾಗಿ

ರಾಗಿಣಿ ತಂದೆ ಮತ್ತು ತಾಯಿ ಈ ಸೆಲಬ್ರೇಷನ್ ನಲ್ಲಿ ಭಾಗಿಯಾಗಿ ಮಗಳಿಗೆ ಸಾಥ್ ನೀಡಿದ್ದರು.[ಗೋವಾ ಬೀಚಲ್ಲಿ ಬಿಕಿನಿ ತೊಟ್ಟ ನಟಿ ರಾಗಿಣಿಯ ವಯ್ಯಾರ ನೋಡಿರಣ್ಣೋ..]

ಸಖತ್ ಡ್ಯಾನ್ಸ್

ಈ ಸ್ಪೆಷಲ್ ಪಾರ್ಟಿಯ ಹೈಲೈಟ್ ಅಂದ್ರೆ ಡ್ಯಾನ್ಸ್. ರಾಗಿಣಿ ತುಪ್ಪ.. ಬೇಕಾ ತುಪ್ಪ.. ಅಂತ ಮೈ ಚಳಿ ಬಿಟ್ಟು ಕುಣಿದರು.

ರಾತ್ರಿ 12 ಗಂಟೆಯವರೆಗೆ ಪಾರ್ಟಿ

ನಿನ್ನೆ ರಾತ್ರಿ 12 ಗಂಟೆಯವರೆಗೆ ರಾಗಿಣಿ ಸ್ಪೆಷಲ್ ಪಾರ್ಟಿ ನಡೆಯಿತು. ಹಾಡು ಡ್ಯಾನ್ಸ್ ಮಾಡಿ ಬಂದ ಅತಿಥಿಗಳೆಲ್ಲ ಸಖತ್ ಖುಷಿ ಪಟ್ಟರು.

ಡಿನ್ನರ್

ಈ ಪಾರ್ಟಿಯಲ್ಲಿ ಪಂಜಾಬಿ ಸ್ಟೈಲ್ ನಲ್ಲಿ ಡಿನ್ನರ್ ಕೂಡ ಇತ್ತು.

ಅಭಿಮಾನಿಗಳ ಜೊತೆ ಆಚರಣೆ

ಪ್ರತಿ ವರ್ಷದಂತೆ ಈ ವರ್ಷ ಕೂಡ ತಮ್ಮ ಅಭಿಮಾನಿಗಳ ಜೊತೆ ರಾಗಿಣಿ ಹುಟ್ಟುಹಬ್ಬವನ್ನು ಆಚರಣೆ ಮಾಡಿಕೊಂಡಿದ್ದಾರೆ.

English summary
Kannada Actress Ragini Dwivedi 26th Birthday Special Party. Check out the pics.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada