For Quick Alerts
  ALLOW NOTIFICATIONS  
  For Daily Alerts

  ಈ ವಾರದ ಕನ್ನಡ ಚಿತ್ರಗಳ ಪೈಕಿ ನಿಮ್ಮ ಆಯ್ಕೆ ಯಾವುದು?

  By Bharath Kumar
  |

  ಜೂನ್ ತಿಂಗಳು ಸ್ಯಾಂಡಲ್ ವುಡ್ ಗೆ ಸುಗ್ಗಿ ಕಾಲ. ಮೊದಲ ವಾರದಿಂದಲೇ ಸಿನಿಮಾಗಳ ಪರ್ವ ಶುರುವಾಗಿದ್ದು, ಈಗ ಎರಡನೇ ವಾರವೂ ಸಾಲು ಸಾಲು ಸಿನಿಮಾ ಬಿಡುಗಡೆಯಾಗುತ್ತಿದೆ.

  ಈ ವಾರ ತೆರೆ ಮೇಲೆ ನಾಲ್ಕು ವಿಭಿನ್ನ ಸಿನಿಮಾಗಳು ಬರುತ್ತಿದೆ. ನಟಿ ಮೇಘನಾ ರಾಜ್ ಅಭಿನಯದ ಎರಡು ಚಿತ್ರಗಳು ಒಂದೇ ದಿನ ರಿಲೀಸ್ ಆಗುತ್ತಿದೆ. ಯುವ ನಟ ಅರ್ಜುನ್ ದೇವ್ ಹೊಸ 'ಯುಗಪುರುಷ'ನಾಗಿ ಸ್ಯಾಂಡಲ್ ವುಡ್ ಗೆ ಪರಿಚಯವಾಗ್ತಿದ್ದಾರೆ. ಇನ್ನು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಚಿತ್ರವೊಂದು ರೀ-ರಿಲೀಸ್ ಆಗುತ್ತಿದೆ.[ಮೇಘನಾ ರಾಜ್ ಅಭಿನಯದ 2 ಚಿತ್ರಗಳು ಒಂದೇ ದಿನ ರಿಲೀಸ್.!]

  ಹಾಗಾದ್ರೆ, ಈ ವಾರ ಯಾವ ಯಾವ ಚಿತ್ರಗಳು ಗಾಂಧಿನಗರಕ್ಕೆ ಕಾಲಿಡುತ್ತಿದೆ, ಅದರ ವಿಶೇಷತೆಗಳೇನು ಎಂಬುದನ್ನ ಮುಂದೆ ನೋಡಿ.....

  ಮೇಘನಾ ರಾಜ್ 'ಜಿಂದಾ'

  ಮೇಘನಾ ರಾಜ್ 'ಜಿಂದಾ'

  ನಟಿ ಮೇಘನಾ ರಾಜ್ ಮುಖ್ಯ ಭೂಮಿಕೆಯಲ್ಲಿ ಅಭಿನಯಿಸಿರುವ 'ಜಿಂದಾ' ಚಿತ್ರ ಈ ವಾರ ಥಿಯೇಟರ್ ಅಂಗಳಕ್ಕೆ ಕಾಲಿಡುತ್ತಿದೆ. ಮೇಘನಾ ಜೊತೆಯಲ್ಲಿ ಅರುಣ್, ಲೋಕಿ, ಕೃಷ್ಣಚಂದ್ರ ಯುವರಾಜ, ದೇವ್ ತಾಳಿಕೋಟೆ, ಅನಿರುದ್ಧ್ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಇನ್ನೂ ಪೊಲೀಸ್ ಗೆಟಪ್ ನಲ್ಲಿ ಡೈನಾಮಿಕ್ ಹೀರೋ ದೇವರಾಜ್ ನಟಿಸಿದ್ದು, ಕೆಲವು ಹಿರಿಯ ಕಲಾವಿದರು ತೆರೆಹಂಚಿಕೊಂಡಿದ್ದಾರೆ. ಮುಸ್ಸಂಜೆ ಮಹೇಶ್ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದು, ದತ್ತಾತ್ತೇಯ ಬಚ್ಚೇಗೌಡ ಈ ಚಿತ್ರವನ್ನು ನಿರ್ಮಿಸಿದ್ದಾರೆ. ಶ್ರೀಧರ್ ವಿ.ಸಂಭ್ರಮ ಸಂಗೀತ ಸಂಯೋಜನೆ ನೀಡಿದ್ದಾರೆ.[ರಿಯಲ್ ಗ್ಯಾಂಗ್ ಸತ್ಯ ಕಥೆಯ 'ಜಿಂದಾ' ಟ್ರೈಲರ್ ಹೇಗಿದೆ ನೋಡಿ.. ]

  ವಿವಾದದಿಂದ ಸುದ್ದಿಯಾಗಿದ್ದ 'ಜಿಂದಾ'

  ವಿವಾದದಿಂದ ಸುದ್ದಿಯಾಗಿದ್ದ 'ಜಿಂದಾ'

  'ಜಿಂದಾ' ಚಿತ್ರದಲ್ಲಿ ನಟಿ ಮೇಘನಾ ರಾಜ್ ಗಂಡಸರ ಬಗ್ಗೆ ಅವಹೇಳನಕಾರಿ ಹೇಳಿರುವ ಡೈಲಾಗ್ ವಿರೋಧಿಸಿ ಕೆಲವು ಸಂಘಟನೆಗಳು ಪ್ರತಿಭಟನೆ ಮಾಡಿದ್ದವು. ಚಿತ್ರದಿಂದ ಈ ಡೈಲಾಗ್ ತೆಗೆಯುವಂತೆ ಆಗ್ರಹಿಸಿದ್ದರು. ಆದ್ರೆ, ಇದ್ಯಾವುದಕ್ಕೂ ತಲೆಕೆಡಿಸಿಕೊಳ್ಳದ ಚಿತ್ರತಂಡ ಈ ವಾರ ತೆರೆಗೆ ಬರುತ್ತಿದೆ.[ಮೇಘನಾ ರಾಜ್ 'ಡೈಲಾಗ್' ವಿರುದ್ಧ ಸಿಡಿದೆದ್ದ ನಿಷ್ಠಾವಂತ ಗಂಡೈಕ್ಳು.!]

  ನೂರೊಂದು ನೆನಪು

  ನೂರೊಂದು ನೆನಪು

  'ಆ ದಿನಗಳು' ಖ್ಯಾತಿಯ ಚೇತನ್ ಹಾಗೂ ನಟಿ ಮೇಘನಾ ರಾಜ್ ಮುಖ್ಯ ಭೂಮಿಕೆಯಲ್ಲಿ ಅಭಿನಯಿಸಿರುವ ಚಿತ್ರ 'ನೂರೊಂದು ನೆನಪು'. ಇವರ ಜೊತೆಯಲ್ಲಿ ಡಿಂಗ್ರಿ ನಾಗರಾಜ್ ಅವರ ಮಗ ರಾಜ್ ವರ್ಧನ್, ಸುಶ್ಮಿತಾ ಜೋಶಿ, ಅರ್ಚನಾ ಕೂಡ ಕಾಣಿಸಿಕೊಂಡಿದ್ದಾರೆ. ಈ ಚಿತ್ರಕ್ಕೆ ಕುಮಾರೇಶ್ ಎಂಬುವರು ಆಕ್ಟನ್ ಕಟ್ ಹೇಳಿದ್ದು, ಇದು ಇವರಿಗೆ ಚೊಚ್ಚಲ ಚಿತ್ರ. ಬೆಳಗಾವಿ ಮೂಲದ ಸೂರಜ್ ದೇಸಾಯಿ, ಮನೀಶ್ ದೇಸಾಯಿ ಚಿತ್ರಕ್ಕೆ ಬಂಡವಾಳ ಹಾಕಿದ್ದಾರೆ. ಗಗನ್ ಬದೇರಿಯಾ ಸಂಗೀತ ಸಂಯೋಜನೆ ಮಾಡಿದ್ದಾರೆ.[ಟ್ರೈಲರ್: ನೆನಪುಗಳನ್ನ ಹೊತ್ತು ಬರುತ್ತಿದೆ 'ನೂರೊಂದು ನೆನಪು']

  ರೆಟ್ರೋ ಸ್ಟೈಲ್ ಸಿನಿಮಾ

  ರೆಟ್ರೋ ಸ್ಟೈಲ್ ಸಿನಿಮಾ

  ಅಂದ್ಹಾಗೆ, 'ನೂರೊಂದು ನೆನಪು' ಮರಾಠಿ ಆಧಾರಿತ ಚಿತ್ರವಾಗಿದೆ. ಖ್ಯಾತ ಬರಹಗಾರ ಸುಹಾಸ್ ಶಿರ್ವ್ಕಾರ್ ಬರೆದಿರುವ ಮರಾಠಿ ಕಥೆಯನ್ನ ತಮ್ಮ ನೆಟಿವಿಟಿಗೆ ತಕ್ಕಂತೆ ಬದಲಿಸಿ ಸಿನಿಮಾ ಮಾಡಲಾಗಿದೆ. ಈ ಚಿತ್ರ ಸಂಪೂಣವಾಗಿ ರೆಟ್ರೋ ಸ್ಟೈಲ್ ನಲ್ಲಿ ಮೂಡಿಬಂದಿರುವುದು ವಿಶೇಷವಾಗಿದೆ. 80 ರ ದಶಕದ ಕಥಾಹಂದರವನ್ನ ಈ ಚಿತ್ರ ಹೊಂದಿದ್ದು, ಅಂದಿನ ಕಾಲಘಟ್ಟದ ಕಾಲೇಜು ದಿನಗಳನ್ನ ನೆನಪಿಸುವಂತಹ ಚಿತ್ರಕಥೆ ಇರಲಿದೆಯಂತೆ.

  ಹೊಸ 'ಯುಗಪುರುಷ'

  ಹೊಸ 'ಯುಗಪುರುಷ'

  ಕ್ರೇಜಿಸ್ಟಾರ್ ರವಿಚಂದ್ರನ್ ಅಭಿಮಾನಿ ಪಾತ್ರದಲ್ಲಿ ಅರ್ಜುನ್ ದೇವ್ ಅಭಿನಯಿಸಿರುವ ಹೊಸ ಸಿನಿಮಾ 'ಯುಗಪುರುಷ'. 'ಮನಸುಗಳ ಮಾತು ಮಧುರ', 'ಗೌರಿ ಪುತ್ರ' ಅಂತಹ ಸಿನಿಮಾ ನಿರ್ದೇಶನ ಮಾಡಿದ್ದ ಮಂಜು ಮುಸ್ಕಲ್ಮಿಟ್ಟಿ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ತೆಲುಗು ಸಿನಿಮಾಗಳಲ್ಲಿ ಗುರುತಿಸಿಕೊಂಡಿರುವ ಪೂಜಾ ಝವೇರಿ ನಾಯಕಿ. ಧನ್ ಪಾಲ್ ಸಿಂಗ್ ರಜಪುತ್ ಸಂಗೀತ, ನವೀನ್ ಕೃಷ್ಣ ಸಂಭಾಷಣೆ ಇದೆ. ಇದೊಂದು ಪಕ್ಕಾ ಕಮರ್ಷಿಯಲ್ ಎಲಿಮೆಂಟ್ಸ್ ಹೊಂದಿರುವ ಪ್ರೇಮಕಥೆ. ಈ ಚಿತ್ರವೂ ಈ ವಾರ ಬೆಳ್ಳಿತೆರೆಯಲ್ಲಿ ರಾರಾಜಿಸಲಿದೆ.[ರಾಮನಗರದಲ್ಲಿ ಚಲನಚಿತ್ರ ನಟನ ಮೇಲೆ ಹಲ್ಲೆಗೆ ಯತ್ನ: ಕಾರು ಜಖಂ]

  ದರ್ಶನ್ 'ಶಾಸ್ತ್ರಿ'

  ದರ್ಶನ್ 'ಶಾಸ್ತ್ರಿ'

  ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯಿಸಿದ್ದ ಸೂಪರ್ ಹಿಟ್ ಸಿನಿಮಾ 'ಶಾಸ್ತ್ರಿ' ರೀ-ರಿಲೀಸ್ ಆಗ್ತಿದೆ. ಹೊಸ ತಂತ್ರಜ್ಞಾನದಲ್ಲಿ 5.1 ಡಿಜಿಟಲ್ ಆಡಿಯೋ ವರ್ಷನ್ ನಲ್ಲಿ 'ಶಾಸ್ತ್ರಿ' ಈ ವಾರ ಮತ್ತೆ ತೆರೆಗೆ ಬರುತ್ತಿದೆ. 'ಶಾಸ್ತ್ರಿ'.....2006 ರಲ್ಲಿ ಬಿಡುಗಡೆಯಾಗಿದ್ದ ಚಿತ್ರ. ಪಿ.ಎನ್ ಸತ್ಯ ಈ ಚಿತ್ರವನ್ನ ನಿರ್ದೇಶನ ಮಾಡಿದ್ದರು. ದರ್ಶನ್ ಎರಡು ವಿಭಿನ್ನ ಶೇಡ್ ಗಳಲ್ಲಿ ಅಭಿನಯಿಸಿದ್ದರು. ದರ್ಶನ್ ಗೆ ನಾಯಕಿಯಾಗಿ ನಟಿ ಮಾನ್ಯ ಬಣ್ಣ ಹಚ್ಚಿದ್ದರು. ಸಾಧು ಕೋಕಿಲಾ ಅವರು ಸಂಗೀತ ನೀಡಿದ್ದರು.[ಗಾಂಧಿನಗರಕ್ಕೆ ಮತ್ತೆ ದರ್ಶನ್ 'ಶಾಸ್ತ್ರಿ' ಎಂಟ್ರಿ.!]

  ನಿಮ್ಮ ಆಯ್ಕೆ ಯಾವುದು?

  ನಿಮ್ಮ ಆಯ್ಕೆ ಯಾವುದು?

  'ಜಿಂದಾ', 'ನೂರೊಂದು ನೆನಪು', 'ಯುಗ ಪುರುಷ' ಮತ್ತು 'ಶಾಸ್ತ್ರಿ' ಈ ನಾಲ್ಕು ಕನ್ನಡ ಸಿನಿಮಾಗಳಲ್ಲಿ ಈ ವಾರ ನಿಮ್ಮ ಮೊದಲ ಆಯ್ಕೆ ಯಾವುದು ಎಂದು ಕೆಳಗೆ ನೀಡಲಾಗಿರುವ ಕಾಮೆಂಟ್ ಬಾಕ್ಸ್ ನಲ್ಲಿ ತಿಳಿಸಿ.

  English summary
  Kannada Actor Chethan Starrer Kannada Movie 'Noorondu Nenapu', Actress Meghana Raj Starrer 'Jindaa', Arjun Dev Starrer 'Yugapurusha' And Challenging Star Darshan Starrer 'Shastri' Movies are Releasing on June 9th.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X