»   » 2014ನೇ ಸಾಲಿನ ರಾಜ್ಯ ಚಲನಚಿತ್ರ ಪ್ರಶಸ್ತಿ ಪ್ರಕಟ: ವಿಜಯ್ ಶ್ರೇಷ್ಠ ನಟ

2014ನೇ ಸಾಲಿನ ರಾಜ್ಯ ಚಲನಚಿತ್ರ ಪ್ರಶಸ್ತಿ ಪ್ರಕಟ: ವಿಜಯ್ ಶ್ರೇಷ್ಠ ನಟ

Posted By:
Subscribe to Filmibeat Kannada

2014-15ನೇ ಸಾಲಿನ ರಾಜ್ಯ ಚಲನಚಿತ್ರ ಪ್ರಶಸ್ತಿ ಪಟ್ಟಿಯನ್ನು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಸಚಿವ ರೋಷನ್ ಬೇಗ್ ಅವರು ಶುಕ್ರವಾರ (ಫೆಬ್ರವರಿ 12) ಸಂಜೆ ಪ್ರಕಟಿಸಿದರು. 'ಅತ್ಯುತ್ತಮ ನಟನಾಗಿ ಸಂಚಾರಿ ವಿಜಯ್ ಹಾಗೂ ಅತ್ಯುತ್ತಮ ನಟಿಯಾಗಿ ಲಕ್ಷ್ಮಿ ಗೋಪಾಲಸ್ವಾಮಿ ಆಯ್ಕೆಯಾಗಿದ್ದಾರೆ.

ಪ್ರಶಸ್ತಿ ವಿಜೇತರ ಪಟ್ಟಿ: 2011 | 2012 | 2013

ಪ್ರಶಸ್ತಿಗಳಿಗೆ ಅರ್ಹರನ್ನು ಗುರುತಿಸುವಲ್ಲಿ ಸಮಿತಿಯು ಅತ್ಯಂತ ಪ್ರಾಮಾಣಿಕವಾಗಿ ಹಾಗೂ ಪಾರದರ್ಶಕವಾಗಿ ಕಾರ್ಯನಿರ್ವಹಿಸಿದೆ ಎಂದು ಸಚಿವ ರೋಷನ್ ಬೇಗ್ ತಿಳಿಸಿದರು. ಒಟ್ಟು 29 ವಿಭಾಗಗಳಲ್ಲಿ ಪ್ರಶಸ್ತಿಗಳನ್ನು ಪ್ರಕಟಿಸಲಾಗಿದೆ ಎಂದು ಆಯ್ಕೆ ಸಮಿತಿ ಮುಖ್ಯಸ್ಥ ಶಿವರುದ್ರಪ್ಪ ಹೇಳಿದ್ದಾರೆ.

Karnataka state film awards 2014 announced

2014ನೇ ಸಾಲಿನ ರಾಜ್ಯ ಚಲನಚಿತ್ರ ಪ್ರಶಸ್ತಿ ಪ್ರಕಟ:

 ಸಂಖ್ಯೆ ಪ್ರಶಸ್ತಿಗಳ ವಿವರ
ಪ್ರಶಸ್ತಿ ವಿಜೇತರು
ಪ್ರಶಸ್ತಿ ಮೊತ್ತದ ವಿವರ
1 ಡಾ. ರಾಜ್‍ಕುಮಾರ್ ಪ್ರಶಸ್ತಿ   ಬಸಂತ್ ಕುಮಾರ್ ಪಾಟೀಲ್  ಎರಡು ಲಕ್ಷ ರೂ.ಗಳ ನಗದು ಮತ್ತು ಚಿನ್ನದ ಪದಕ
2  ಪುಟ್ಟಣ್ಣ ಕಣಗಾಲ್ ಪ್ರಶಸ್ತಿ  ಬರಗೂರು ರಾಮಚಂದ್ರಪ್ಪ  ಎರಡು ಲಕ್ಷ ರೂ.ಗಳ ನಗದು ಮತ್ತು ಚಿನ್ನದ ಪದಕ
3  ಡಾ. ವಿಷ್ಣುವರ್ಧನ್ ಪ್ರಶಸ್ತಿ  ಸುರೇಶ್ ಕೃಷ್ಣ ಅರಸ್, ಸಂಕಲನಕಾರ ಎರಡು ಲಕ್ಷ ರೂ.ಗಳ ನಗದು ಮತ್ತು ಚಿನ್ನದ ಪದಕ 
4 ಪ್ರಥಮ ಅತ್ಯುತ್ತಮ ಚಿತ್ರ : ಹರಿವು ನಿರ್ಮಾಪಕ (ಕೆ.ಸಿ.ಎನ್. ಗೌಡ ಪ್ರಶಸ್ತಿ) ಅವಿನಾಶ. ಯು.ಶೆಟ್ಟಿ
ಬಿ) ನಿರ್ದೇಶಕ (ಹೆಚ್.ಎಲ್.ಎನ್. ಸಿಂಹ ಪ್ರಶಸ್ತಿ) ಮಂಜುನಾಥ್.ಎಸ್.(ಮಂಸೋರೆ)
ನಿರ್ಮಾಪಕ  ಹಾಗೂ ನಿರ್ದೇಶಕ ಇಬ್ಬರಿಗೂ ತಲಾ

ಒಂದು ಲಕ್ಷ ರೂ.ಗಳ ನಗದು ಹಾಗೂ 50 ಗ್ರಾಂನ ಚಿನ್ನದ ಪದಕ

5 ದ್ವಿತೀಯ ಅತ್ಯುತ್ತಮ ಚಿತ್ರ : ಅಭಿಮನ್ಯು ನಿರ್ಮಾಪಕ,ನಿರ್ದೇಶಕ ಅರ್ಜುನ್ ಸರ್ಜಾ ನಿರ್ಮಾಪಕ ಹಾಗೂ ನಿರ್ದೇಶಕ ಇಬ್ಬರಿಗೂ ತಲಾ ಎಪ್ಪತ್ತೈದು ಸಾವಿರ ರೂ.ಗಳ ನಗದು ಹಾಗೂ 100 ಗ್ರಾಂನ ಬೆಳ್ಳಿ ಪದಕ
6 ತೃತೀಯ ಅತ್ಯುತ್ತಮ ಚಿತ್ರ : ಹಗ್ಗದ ಕೊನೆ ನಿರ್ಮಾಪಕ : ದಯಾಳ್ ಪದ್ಮನಾಭನ್ ಮತ್ತು ಉಮೇಶ್ ಬಣಕಾರ್
ನಿರ್ದೇಶಕ ಶ್ರೀ ದಯಾಳ್ ಪದ್ಮನಾಭನ್
ನಿರ್ಮಾಪಕ ಹಾಗೂ ನಿರ್ದೇಶಕ ಇಬ್ಬರಿಗೂ ತಲಾ ಐವತ್ತು ಸಾವಿರ ರೂ.ಗಳ ನಗದು ಹಾಗೂ 100 ಗ್ರಾಂನ ಬೆಳ್ಳಿ ಪದಕ  
7 ವಿಶೇಷ ಸಾಮಾಜಿಕ ಕಾಳಜಿಯ ಚಿತ್ರ : ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ (ತುಳು) ನಿರ್ಮಾಪಕ ಶ್ರೀ ರಾಜಶೇಖರ್ ಕೋಟ್ಯಾನ್
ನಿರ್ದೇಶಕ ಶ್ರೀ ಶೇಖರ್ ಕೋಟ್ಯಾನ್
ನಿರ್ಮಾಪಕ ಹಾಗೂ ನಿರ್ದೇಶಕ ಇಬ್ಬರಿಗೂ ತಲಾ ಎಪ್ಪತ್ತೈದು ಸಾವಿರ ರೂ.ಗಳ ನಗದು ಹಾಗೂ 100 ಗ್ರಾಂನ ಬೆಳ್ಳಿ ಪದಕ 
8 ಅತ್ಯುತ್ತಮ ಜನಪ್ರಿಯ ಮನರಂಜನಾ ಚಿತ್ರ : ಗಜಕೇಸರಿ ನಿರ್ಮಾಪಕ (ನರಸಿಂಹರಾಜು ಪ್ರಶಸ್ತಿ) ಜಯಣ್ಣ ಮತ್ತು ಭೋಗೇಂದ್ರ
ನಿರ್ದೇಶಕ : ಕೃಷ್ಣ
ನಿರ್ಮಾಪಕ ಹಾಗೂ ನಿರ್ದೇಶಕ ಇಬ್ಬರಿಗೂ ತಲಾ ಐವತ್ತು ಸಾವಿರ ರೂ.ಗಳ ನಗದು ಹಾಗೂ 100 ಗ್ರಾಂನ ಬೆಳ್ಳಿ ಪದಕ 
9 ಅತ್ಯುತ್ತಮ ಮಕ್ಕಳ ಚಿತ್ರ : ಹಾಡು ಹಕ್ಕಿ ಹಾಡು ನಿರ್ಮಾಪಕ : ಎಂ.ನಾಗರಾಜು
ನಿರ್ದೇಶಕ : ನಾಗರಾಜ ಕೋಟೆ
ನಿರ್ಮಾಪಕ ಹಾಗೂ ನಿರ್ದೇಶಕ ಇಬ್ಬರಿಗೂ ತಲಾ  ಐವತ್ತು ಸಾವಿರ ರೂ.ಗಳ ನಗದು ಹಾಗೂ 100 ಗ್ರಾಂನ ಬೆಳ್ಳಿ ಪದಕ
10 ಪ್ರಥಮ ನಿರ್ದೇಶನದ ಅತ್ಯುತ್ತಮ ಚಿತ್ರ ಪ್ರಶಸ್ತಿ : ಉಳಿದವರು ಕಂಡಂತೆ

ನಿರ್ಮಾಪಕ : ಹೇಮಂತ್

ನಿರ್ದೇಶಕ : ರಕ್ಷಿತ್ ಶೆಟ್ಟಿ

 ನಿರ್ಮಾಪಕ ಹಾಗೂ ನಿರ್ದೇಶಕ ಇಬ್ಬರಿಗೂ ತಲಾ ಐವತ್ತು ಸಾವಿರ ರೂ.ಗಳ ನಗದು ಹಾಗೂ 100 ಗ್ರಾಂನ ಬೆಳ್ಳಿ ಪದಕ
11 ಅತ್ಯುತ್ತಮ ಪ್ರಾದೇಶಿಕ ಭಾಷಾ ಚಿತ್ರ : ವಿಷದ ಮಳೆ
(ತುಳು, ಕೊಡವ, ಕೊಂಕಣಿ, ಬಂಜಾರ, ಬ್ಯಾರಿ)

ನಿರ್ಮಾಪಕ: ಆತ್ಮಶ್ರೀ

ನಿರ್ದೇಶಕ: ಅಂಬಳಿಕೆ ರವಿ

ನಿರ್ಮಾಪಕ ಹಾಗೂ ನಿರ್ದೇಶಕ ಇಬ್ಬರಿಗೂ ತಲಾ ಐವತ್ತು ಸಾವಿರ ರೂ.ಗಳ ನಗದು ಹಾಗೂ 100 ಗ್ರಾಂನ ಬೆಳ್ಳಿ ಪದಕ 
12  ಅತ್ಯುತ್ತಮ ನಟ (ಸುಬ್ಬಯ್ಯ ನಾಯ್ಡು ಪ್ರಶಸ್ತಿ)
 ಸಂಚಾರಿ ವಿಜಯ್ (ನಾನು ಅವನಲ್ಲ ಅವಳು)
 ಇಪ್ಪತ್ತು ಸಾವಿರ ರೂ.ಗಳ ನಗದು ಹಾಗೂ 100 ಗ್ರಾಂ ಬೆಳ್ಳಿಯ ಪದಕ
13  ಅತ್ಯುತ್ತಮ ನಟಿ ಲಕ್ಷ್ಮಿ ಗೋಪಾಲಸ್ವಾಮಿ (ವಿದಾಯ)  ಇಪ್ಪತ್ತು ಸಾವಿರ ರೂ.ಗಳ ನಗದು ಹಾಗೂ 100 ಗ್ರಾಂ ಬೆಳ್ಳಿಯ ಪದಕ
14  ಅತ್ಯುತ್ತಮ ಪೋಷಕ ನಟ
(ಕೆ.ಎಸ್.ಅಶ್ವಥ್ ಪ್ರಶಸ್ತಿ)
 ಅರುಣ್ ದೇವಸ್ಯ
ಚಿತ್ರ :ನಾಯಕನಹಟ್ಟಿ ಶ್ರೀ ತಿಪ್ಪೇರುದ್ರಸ್ವಾಮಿ ಮಹಾತ್ಮೆ
 ಇಪ್ಪತ್ತು ಸಾವಿರ ರೂ.ಗಳ ನಗದು ಹಾಗೂ 100 ಗ್ರಾಂ ಬೆಳ್ಳಿಯ ಪದಕ
15 ಅತ್ಯುತ್ತಮ ಪೋಷಕ ನಟಿ  ಡಾ|| ಬಿ.ಜಯಶ್ರೀ
ಚಿತ್ರ : ಕೌದಿ
  ಇಪ್ಪತ್ತು ಸಾವಿರ ರೂ.ಗಳ ನಗದು ಹಾಗೂ ಬೆಳ್ಳಿಯ ಪದಕ
16  ಅತ್ಯುತ್ತಮ ಕತೆ  ಲಿವಿಂಗ್ ಸ್ಮೈಲ್ ವಿದ್ಯಾ
ಚಿತ್ರ : ನಾನು ಅವನಲ್ಲ ಅವಳು
 ಇಪ್ಪತ್ತು ಸಾವಿರ ರೂ.ಗಳ ನಗದು ಹಾಗೂ ಬೆಳ್ಳಿಯ ಪದಕ
17  ಅತ್ಯುತ್ತಮ ಚಿತ್ರಕತೆ ಪಿ.ಶೇಷಾದ್ರಿ
ಚಿತ್ರ : ವಿದಾಯ
 ಇಪ್ಪತ್ತು ಸಾವಿರ ರೂ.ಗಳ ನಗದು ಹಾಗೂ ಬೆಳ್ಳಿಯ ಪದಕ
18  ಅತ್ಯುತ್ತಮ ಸಂಭಾಷಣೆ ಬಿ.ಎಲ್.ವೇಣು
ಚಿತ್ರ :ತಿಪ್ಪಜ್ಜಿ ಸರ್ಕಲ್
ಇಪ್ಪತ್ತು ಸಾವಿರ ರೂ.ಗಳ ನಗದು ಹಾಗೂ ಬೆಳ್ಳಿಯ ಪದಕ 
19  ಅತ್ಯುತ್ತಮ ಛಾಯಾಗ್ರಹಣ ಸತ್ಯ ಹೆಗಡೆ
ಚಿತ್ರ : ರಾಟೆ
 ಇಪ್ಪತ್ತು ಸಾವಿರ ರೂ.ಗಳ ನಗದು ಹಾಗೂ ಬೆಳ್ಳಿಯ ಪದಕ
20  ಅತ್ಯುತ್ತಮ ಸಂಗೀತ ನಿರ್ದೇಶನ ಬಿ.ಅಜನೀಶ್ ಲೋಕನಾಥ್
ಚಿತ್ರ :ಉಳಿದವರು ಕಂಡಂತೆ
 ಇಪ್ಪತ್ತು ಸಾವಿರ ರೂ.ಗಳ ನಗದು ಹಾಗೂ ಬೆಳ್ಳಿಯ ಪದಕ
21  ಅತ್ಯುತ್ತಮ ಸಂಕಲನ  ಶ್ರೀಕಾಂತ
ಚಿತ್ರ : ಉಗ್ರಂ
 ಇಪ್ಪತ್ತು ಸಾವಿರ ರೂ.ಗಳ ನಗದು ಹಾಗೂ ಬೆಳ್ಳಿಯ ಪದಕ
22  ಅತ್ಯುತ್ತಮ ಬಾಲ ನಟ ಮಾಸ್ಟರ್ ಸ್ನೇಹಿತ್
ಚಿತ್ರ : ಸಚ್ಚಿನ್ ತೆಂಡೊಲ್ಕರ್ ಅಲ್ಲ
 ಇಪ್ಪತ್ತು ಸಾವಿರ ರೂ.ಗಳ ನಗದು ಹಾಗೂ ಬೆಳ್ಳಿಯ ಪದಕ
23  ಅತ್ಯುತ್ತಮ ಬಾಲ ನಟಿ ಕು|| ಲಹರಿ
ಚಿತ್ರ: ಆಟ-ಪಾಠ
 ಇಪ್ಪತ್ತು ಸಾವಿರ ರೂ.ಗಳ ನಗದು ಹಾಗೂ ಬೆಳ್ಳಿಯ ಪದಕ
24  ಅತ್ಯುತ್ತಮ ಕಲಾ ನಿರ್ದೇಶನ ಚಂದ್ರಕಾಂತ್
ಚಿತ್ರ : ನೂರಾನಲವತ್ಮೂರು
 ಇಪ್ಪತ್ತು ಸಾವಿರ ರೂ.ಗಳ ನಗದು ಹಾಗೂ ಬೆಳ್ಳಿಯ ಪದಕ
25  ಅತ್ಯುತ್ತಮ ಗೀತ ರಚನೆ

ಹುಲಿಕುಂಟೆ ಮೂರ್ತಿ
ಗೀತೆ : ಬೆಳಕ ಬತ್ತಲೆಯೊಳಗೆ ಬದುಕೊಂದು ಭ್ರಮೆಯವ್ವ ಕತ್ತಲ ಕಣ್ಣೊಳಗೆ ನೂರು ಬಣ್ಣದ ಹಾಡು
ಚಿತ್ರ : ಕೌದಿ

 ಇಪ್ಪತ್ತು ಸಾವಿರ ರೂ.ಗಳ ನಗದು ಹಾಗೂ ಬೆಳ್ಳಿಯ ಪದಕ
26 ಅತ್ಯುತ್ತಮ ಹಿನ್ನಲೆ ಗಾಯಕ

ಚಿಂತನ್
ಹಾಡು : ಸಾಹೋರೆ ಸಾಹೋರೆ ನೀನೇ ಕಣೋ
ಚಿತ್ರ : ಗಜಕೇಸರಿ

ಇಪ್ಪತ್ತು ಸಾವಿರ ರೂ.ಗಳ ನಗದು ಹಾಗೂ ಬೆಳ್ಳಿಯ ಪದಕ
27  ಅತ್ಯುತ್ತಮ ಹಿನ್ನಲೆ ಗಾಯಕಿ ವಿದ್ಯಾ ಮೋಹನ್
ಗೀತೆ : ಕಣ್ಣೆ ಇಲ್ಲದ ಮೇಲೆ ಕಣ್ಣೀರ್ ಎಲ್ಲಿ ನಾಳೆ
ಚಿತ್ರ : ಸಚ್ಚಿನ್ ತೆಂಡೊಲ್ಕರ್ ಅಲ್ಲ
ಇಪ್ಪತ್ತು ಸಾವಿರ ರೂ.ಗಳ ನಗದು ಹಾಗೂ ಬೆಳ್ಳಿಯ ಪದಕ
28 ತೀರ್ಪುಗಾರರ ವಿಶೇಷ ಪ್ರಶಸ್ತಿ  ಜ್ಯೋತಿರಾಜ್ ವಿಭಾಗ : ಸಾಹಸ ಚಿತ್ರ : ಜ್ಯೋತಿ ಅಲಿಯಾಸ್ ಕೋತಿರಾಜ್  
English summary
Karnataka state film awards 2014 announced. Here is the complete list. Best actor Sanchari Vijay, Best actress Lakshmi Gopalaswamy, Best film Harivu.The awards list announced by Information minister Roshan Baig on 12th Feb.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada