»   » ಕನ್ನಡ ನಟರನ್ನ ಅವಮಾನಿಸಿದ್ದಕ್ಕೆ ಗರಂ ಆದ ಸುದೀಪ್!

ಕನ್ನಡ ನಟರನ್ನ ಅವಮಾನಿಸಿದ್ದಕ್ಕೆ ಗರಂ ಆದ ಸುದೀಪ್!

Posted By:
Subscribe to Filmibeat Kannada

ಸ್ಯಾಂಡಲ್ ವುಡ್ ನಲ್ಲಿ ಸ್ಟಾರ್ ವಾರ್ ಇದೆ. ಪರಸ್ಪರ ನಟರ ನಡುವೆ ಕಾಂಪಿಟೇಶನ್ ಇದೆ. ಹೀಗಾಗಿ ಒಬ್ಬರನ್ನ ಕಂಡರೇ ಮತ್ತೊಬ್ಬರಿಗೆ ಆಗಲ್ಲ ಎನ್ನುವ ಮಾತಿದೆ. ಆದ್ರೆ, ನಿಜವಾಗಲೂ ನಟರ ನಡುವೆ ಮುನಿಸು, ಕೋಪ ಇಲ್ಲ. ಇದೆಲ್ಲಾ ಅವರ ಅಭಿಮಾನಿಗಳ ನಡುವೆ ಮಾತ್ರ ಇರೋದು.

ಇದಕ್ಕೆ ತಾಜಾ ಉದಾಹರಣೆ, ಕಿಚ್ಚ ಸುದೀಪ್ ಹಾಗೂ ಅವರ ಅಭಿಮಾನಿಯ ನಡುವೆ ನಡೆದ ಒಂದು ಘಟನೆ. ಹೌದು, ತಮ್ಮ ನೆಚ್ಚಿನ ನಟನನ್ನ ಹೊಗಳಲು ಅಥವಾ ಅವರ ಸಿನಿಮಾಗಳನ್ನ ಹೊಗಳುವ ಭರದಲ್ಲಿ ಇತರೆ ನಟರನ್ನ ಪರೋಕ್ಷವಾಗಿ ಹೀಯಾಳಿಸುವ ಅಭಿಮಾನಿಗಳು ಹೆಚ್ಚು. ಇದೇ ರೀತಿ ಸುದೀಪ್ ಅಭಿಮಾನಿಯೊಬ್ಬರು ಟ್ವೀಟ್ ಮಾಡಿದ್ದರು.[ಕುಂದಾನಗರಿಯಲ್ಲಿ ಅಬ್ಬರಿಸುತ್ತಿರುವ ಖತರ್ನಾಕ್ 'ವಿಲನ್']

ಇಂತಹ ಅಭಿಮಾನ ಹಾಗೂ ಅಭಿಮಾನಿಗಳ ವಿರುದ್ಧ ಅಭಿನಯ ಚಕ್ರವರ್ತಿ ಗರಂ ಆಗಿದ್ದು, ಅದಕ್ಕೆ ಖಡಕ್ ಉತ್ತರ ಕೊಟ್ಟಿದ್ದಾರೆ. ಮುಂದೆ ಓದಿ.....

ಸಹ ನಟರ ಬೆಂಬಲಕ್ಕೆ ನಿಂತ ಸುದೀಪ್!

ತಮ್ಮ ನೆಚ್ಚಿನ ನಟನನ್ನ ಮೆಚ್ಚಿಸಲು ಅಭಿಮಾನಿಗಳು ಬೇರೆ ನಟರನ್ನ ಹೀಯಾಳಿಸುತ್ತಾರೆ. ಆದ್ರೆ, ಇಂತಹ ಸಂಸ್ಕೃತಿಯನ್ನ ಸುದೀಪ್ ವಿರೋಧಿಸುತ್ತಾರೆ. ಎಲ್ಲರೂ ಒಂದೇ ಎಂಬ ಮನೋಭಾವ ಮೂಡಿಸುವ ಪ್ರಯತ್ನ ಮಾಡುತ್ತಾರೆ. ಇದಕ್ಕೆ ಮತ್ತೊಂದು ಉದಾಹರಣೆ ಇಲ್ಲಿದೆ.[ಇಂಥ ಅಭಿಮಾನಿಗಳಿದ್ರೆ, ಕಿಚ್ಚನ ಸ್ವರ್ಗಕ್ಕೆ ಕಿಚ್ಚು ಹಚ್ಚಿದಂತೆ.!]

ಅಭಿಮಾನಿ ಮಾಡಿದ್ದ ಟ್ವೀಟ್!

ಸುದೀಪ್‌ ಅವರ ಅಭಿಮಾನಿಯೊಬ್ಬ ''ಬೇರೆ ನಟರು ಒಂದೇ ರೀತಿಯ ಮಾಸ್ ಪಾತ್ರಗಳನ್ನ ಮಾಡುತ್ತಾರೆ. ಆದ್ರೆ, ಸುದೀಪ್‌ ಅವರ ಪಾತ್ರಗಳು ನೋಡಿ, ಒಂದಕ್ಕಿಂತ ಮತ್ತೊಂದು ಎಷ್ಟು ಬದಲಾವಣೆ ಹೊಂದಿದೆ'' ಎಂದು ಸುದೀಪ್ ಅವರ ಸಿನಿಮಾಗಳ ಫೋಟೋ ಸಮೇತ ಪೋಸ್ಟ್ ಮಾಡಿದ್ದರು.[ಶೂಟಿಂಗ್ ಗೆ 'ವಿಲನ್' ಎಂಟ್ರಿ: ಇಷ್ಟವಿಲ್ಲದಿದ್ರು ಸೆಲ್ಫಿ ಪೋಸ್ಟ್ ಮಾಡಿದ ಸುದೀಪ್]

ಅಭಿಮಾನಿಗೆ ಕಿಚ್ಚನ ಖಡಕ್ ಉತ್ತರ

''ಮೆಚ್ಚುಗೆ ಕೇವಲ ಹೋಲಿಕೆಯಿಂದ ಬರುವುದಿಲ್ಲ. ನನ್ನ ಸಹ ನಟರನ್ನ ಅವಮಾನಿಸುವಂತಹ ಏನೇ ಆಗಲಿ ಅಥವಾ ಯಾವುದೇ ಪದವನ್ನಾಗಲಿ ನಾನು ಎಂದಿಗೂ ಪ್ರೋತ್ಸಾಹಿಸುವುದಿಲ್ಲ'' ಎಂದು ಅಭಿಮಾನಿಯ ಟ್ವೀಟ್ ಗೆ ಸುದೀಪ್ ಖಡಕ್ ಆಗಿ ಉತ್ತರಿಸಿದ್ದಾರೆ.[ಇದನ್ನ ಸುದೀಪ್ ರವರಿಂದ ಯಾರೂ ನಿರೀಕ್ಷಿಸಿರಲಿಲ್ಲ.! ಅದು ದರ್ಶನ್ ಕುರಿತಾಗಿ.!]

ಒಗ್ಗಟ್ಟಿನ ಮಂತ್ರ ಜಪಿಸಿದ ನಲ್ಲ!

ಈ ಮೂಲಕ ಕನ್ನಡ ನಟರು ಎಲ್ಲರೂ ಒಗ್ಗಟ್ಟಾಗಿದ್ದೇವೆ. ನಟರ ಮಧ್ಯೆ ಪರಸ್ಪರ ಬಾಂಧವ್ಯ ಚೆನ್ನಾಗಿದೆ. ಸುಮ್ಮ ಸುಮ್ಮನೆ ಅಭಿಮಾನಿಗಳು ಕಿತ್ತಾಡಬೇಡಿ ಎಂದು ಸ್ವತಃ ಸುದೀಪ್ ಅವರೇ ತಮ್ಮ ಅಭಿಮಾನಿಗಳಿಗೆ ಸಂದೇಶ ನೀಡಿದರು.

English summary
Sudeep Says Won't encourage humiliating fellow actors. A fan of Kichcha Sudeep, in an attempt to show his adoration for his idol, seems to have upset Sudeep.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada