2022ರಲ್ಲಿ ನೂರು ಕೋಟಿ ಕಲೆಕ್ಷನ್ ಮಾಡಿದ ಭಾರತದ 30 ಚಿತ್ರಗಳ ಪಟ್ಟಿ

ಕೊರೊನಾ ವೈರಸ್ ಕಾರಣದಿಂದಾಗಿ ಉಂಟಾದ ಚಿತ್ರಮಂದಿರ ಲಾಕ್ ಡೌನ್ ಹಾಗೂ 50% ಪ್ರೇಕ್ಷಕರಿಗೆ ಮಾತ್ರ ಎಂಬ ನಿಯಮಗಳಿಂದಾಗಿ ಕಳೆದ ಎರಡು ವರ್ಷಗಳು ಸಿನಿಮಾ ಕ್ಷೇತ್ರ ದೊಡ್ಡ ಮಟ್ಟದಲ್ಲಿ ಹಿನ್ನಡೆ ಅನುಭವಿಸಿತ್ತು. ಲಾಕ್ ಡೌನ್ ಸಮಸ್ಯೆಯಿಂದಾಗಿ ಕಳೆದ ವರ್ಷ ಬಿಡುಗಡೆಯಾಗಬೇಕಿದ್ದ ಚಿತ್ರಗಳೆಲ್ಲಾ ಈ ವರ್ಷಕ್ಕೆ ಮುಂದೂಡಲ್ಪಟ್ಟಿದ್ದವು. ಸದ್ಯ ಈ ವರ್ಷ ಲಾಕ್ ಡೌನ್ ರೀತಿಯ ಯಾವುದೇ ಸಮಸ್ಯೆ ಇಲ್ಲದೇ ಎರಡು ವರ್ಷಗಳ ಬಳಿಕ ಸಂಪೂರ್ಣವಾಗಿ ಚಿತ್ರಮಂದಿರಗಳು ಕೆಲಸ ನಿರ್ವಹಿಸಿವೆ.

ಇನ್ನು ಇದಕ್ಕೆ ತಕ್ಕಂತೆ ಈ ವರ್ಷ ಒಳ್ಳೊಳ್ಳೆ ಚಿತ್ರಗಳು ತೆರೆಕಂಡಿದ್ದು ಜನರನ್ನು ಮತ್ತೆ ಚಿತ್ರಮಂದಿರಗಳಿಗೆ ಕರೆತರುವಲ್ಲಿ ಯಶಸ್ವಿಯಾಗಿವೆ. ಇನ್ನು ಈ ವರ್ಷ ಎರಡು ಚಿತ್ರಗಳು ಸಾವಿರ ಕೋಟಿ ಗಳಿಸಿದರೆ, ಎರಡು ಚಿತ್ರಗಳು 400 ಕೋಟಿ ಹಾಗೂ ಎರಡು ಚಿತ್ರಗಳು 500 ಕೋಟಿ ಕಲೆಕ್ಷನ್ ಮಾಡಿವೆ. ಈ ಚಿತ್ರಗಳೂ ಸೇರಿದಂತೆ ಈ ವರ್ಷ ಒಟ್ಟು 30 ಚಿತ್ರಗಳು ನೂರು ಕೋಟಿ ಕ್ಲಬ್ ಸೇರಿವೆ.

ವಿಶೇಷವೆಂದರೆ ಈ ವರ್ಷ ಭಾರತದ ಪ್ರಮುಖ ಚಿತ್ರರಂಗಗಳಾದ ಸ್ಯಾಂಡಲ್‌ವುಡ್, ಟಾಲಿವುಡ್, ಕಾಲಿವುಡ್, ಮಾಲಿವುಡ್ ಹಾಗೂ ಬಾಲಿವುಡ್ ಈ ಎಲ್ಲಾ ಚಿತ್ರರಂಗಗಳಲ್ಲಿಯೂ ಸಹ ನೂರು ಕೋಟಿ ಗಳಿಸಿದ ಚಿತ್ರಗಳಿವೆ. ಹಾಗಿದ್ದರೆ ಯಾವ ಚಿತ್ರರಂಗಗಳ ಯಾವ ಚಿತ್ರಗಳು ನೂರು ಕೋಟಿಗೂ ಅಧಿಕ ಕಲೆಕ್ಷನ್ ಮಾಡಿದವು ಎಂಬ ಮಾಹಿತಿ ಈ ಕೆಳಕಂಡಂತಿದೆ.

ಬಾಲಿವುಡ್

ಬಾಲಿವುಡ್

1. ಬ್ರಹ್ಮಾಸ್ತ್ರ : 431 ಕೋಟಿ ರೂಪಾಯಿ ಗ್ರಾಸ್

2. ದ ಕಾಶ್ಮೀರ್ ಫೈಲ್ಸ್ : 340 ಕೋಟಿ ರೂಪಾಯಿ ಗ್ರಾಸ್

3. ದೃಶ್ಯಂ 2: 286 ಕೋಟಿ ರೂಪಾಯಿ ಗ್ರಾಸ್

4. ಭೂಲ್ ಬುಲಯ್ಯ 2: 266 ಕೋಟಿ ರೂಪಾಯಿ ಗ್ರಾಸ್

5. ಗಂಗೂಬಾಯಿ ಕಾತಿಯಾವಾಡಿ: 209 ಕೋಟಿ ರೂಪಾಯಿ ಗ್ರಾಸ್

6. ವಿಕ್ರಮ್ ವೇದ: 135 ಕೋಟಿ ರೂಪಾಯಿ ಗ್ರಾಸ್

7. ಜುಗ್ ಜುಗ್ ಜೀಯೋ: 135 ಕೋಟಿ ರೂಪಾಯಿ ಗ್ರಾಸ್

8. ಲಾಲ್ ಸಿಂಗ್ ಛಡ್ಡಾ: 133 ಕೋಟಿ ರೂಪಾಯಿ ಗ್ರಾಸ್

ಕಾಲಿವುಡ್

ಕಾಲಿವುಡ್

1. ಪೊನ್ನಿಯನ್ ಸೆಲ್ವನ್ 1: 505 ಕೋಟಿ ರೂಪಾಯಿ ಗ್ರಾಸ್

2. ವಿಕ್ರಮ್ 500 ಕೋಟಿ ರೂಪಾಯಿ ಗ್ರಾಸ್

3. ಬೀಸ್ಟ್ 243 ಕೋಟಿ ರೂಪಾಯಿ ಗ್ರಾಸ್

4. ವಾಲಿಮೈ 194 ಕೋಟಿ ರೂಪಾಯಿ ಗ್ರಾಸ್

5. ಡಾನ್ : 117 ಕೋಟಿ ರೂಪಾಯಿ ಗ್ರಾಸ್

6. ತಿರುಚಿತ್ರಾಂಬಲಂ: 115 ಕೋಟಿ ರೂಪಾಯಿ ಗ್ರಾಸ್

7. ಈಟಿ: 110 ಕೋಟಿ ರೂಪಾಯಿ ಗ್ರಾಸ್

8. ಸರ್ದಾರ್: 100 ಕೋಟಿ ರೂಪಾಯಿ ಗ್ರಾಸ್

ಟಾಲಿವುಡ್

ಟಾಲಿವುಡ್

1. ಆರ್ ಆರ್ ಆರ್ : 1200 ಕೋಟಿ ರೂಪಾಯಿ ಗ್ರಾಸ್

2. ಸರ್ಕಾರು ವಾರಿ ಪಾಟ : 205 ಕೋಟಿ ರೂಪಾಯಿ ಗ್ರಾಸ್

3. ಭೀಮ್ಲಾ ನಾಯಕ್ : 180 ಕೋಟಿ ರೂಪಾಯಿ ಗ್ರಾಸ್

4. ರಾಧೆ ಶ್ಯಾಮ್ : 177 ಕೋಟಿ ರೂಪಾಯಿ ಗ್ರಾಸ್

5. ಎಫ್ 3: ಫನ್ ಅಂಡ್ ಫ್ರಸ್ಟ್ರೇಷನ್: 134 ಕೋಟಿ ರೂಪಾಯಿ ಗ್ರಾಸ್

6. ಕಾರ್ತಿಕೇಯ 2: 118 ಕೋಟಿ ರೂಪಾಯಿ ಗ್ರಾಸ್

7. ಸೀತಾ ರಾಮಮ್ 105 ಕೋಟಿ ರೂಪಾಯಿ ಗ್ರಾಸ್

8. ಗಾಡ್ ಫಾದರ್: 105 ಕೋಟಿ ರೂಪಾಯಿ ಗ್ರಾಸ್

ಸ್ಯಾಂಡಲ್‌ವುಡ್

ಸ್ಯಾಂಡಲ್‌ವುಡ್

1. ಕೆಜಿಎಫ್ ಚಾಪ್ಟರ್ 2: 1250 ಕೋಟಿ ರೂಪಾಯಿ ಗ್ರಾಸ್

2. ಕಾಂತಾರ : 404 ಕೋಟಿ ರೂಪಾಯಿ ಗ್ರಾಸ್

3. ವಿಕ್ರಾಂತ್ ರೋಣ: 184 ಕೋಟಿ ರೂಪಾಯಿ ಗ್ರಾಸ್

4. ಜೇಮ್ಸ್: 150 ಕೋಟಿ ರೂಪಾಯಿ ಗ್ರಾಸ್

5. 777 ಚಾರ್ಲಿ: 105 ಕೋಟಿ ರೂಪಾಯಿ ಗ್ರಾಸ್

ಮಾಲಿವುಡ್

ಮಾಲಿವುಡ್

ಭೀಷ್ಮ ಪರ್ವಮ್: 100 ಕೋಟಿ ರೂಪಾಯಿ ಗ್ರಾಸ್

More from Filmibeat

English summary
List of Indian movies which have entered 100 crore club in 2022. Take a look
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X