twitter
    For Quick Alerts
    ALLOW NOTIFICATIONS  
    For Daily Alerts

    ಮಾರ್ಚ್ 2 ರಿಂದ ಚಿತ್ರಮಂದಿರಗಳಲ್ಲಿ ಸಿನಿಮಾ ಪ್ರದರ್ಶನ ಇಲ್ಲ

    By Bharath Kumar
    |

    ಮಾರ್ಚ್ 2 ರಿಂದ ಯಾವುದೇ ಹೊಸ ಸಿನಿಮಾಗಳು ಬಿಡುಗಡೆಯಾಗುವುದಿಲ್ಲ. ಕನ್ನಡ, ತೆಲುಗು, ಮಲಯಾಳಂ ಹಾಗೂ ತಮಿಳು ಚಿತ್ರಗಳು ಸೇರಿದಂತೆ ಇನ್ನಿತರ ಯಾವುದೇ ಭಾಷೆಯ ಚಿತ್ರಗಳು ಕೂಡ ರಿಲೀಸ್ ಆಗುವುದಿಲ್ಲ.

    ಹೀಗಂತ ಸ್ವತಃ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಮತ್ತು ದಕ್ಷಿಣ ಭಾರತ ಚಲನಚಿತ್ರ ವಾಣಿಜ್ಯ ಮಂಡಳಿ ಸ್ಪಷ್ಟಪಡಿಸಿದೆ. ಯುಎಫ್ಓ ಕ್ಯೂಬ್ ಮತ್ತು digital service provider ಸಂಸ್ಥೆಯ ವಿರುದ್ಧ ದಕ್ಷಿಣ ಭಾರತ ನಿರ್ಮಾಪಕರು ಪ್ರತಿಭಟನೆ ಮಾಡುತ್ತಿದ್ದು, ಬಾಡಿಗೆ ಮೊತ್ತ ಕಡಿಮೆ ಮಾಡಬೇಕು ಎಂದು ಒತ್ತಾಯಿಸುತ್ತಿದೆ.

    ಕಳೆದ ಮೂರು ತಿಂಗಳಿಂದ ufo ಮತ್ತು cubes ವೆಚ್ಚ ದುಬಾರಿಯಾಗ್ತಿದೆ. ಕರ್ನಾಟಕ, ತಮಿಳುನಾಡು, ಕೇರಳ, ಆಂಧ್ರ, ತೆಲಂಗಾಣ, ಪಾಂಡಿಚೇರಿ ರಾಜ್ಯಗಳ ನಿರ್ಮಾಪಕರು ಅವರಿಗೆ ಸಹಕಾರ ನೀಡಲ್ಲ. ಮಾರ್ಚ್ 2 ರಿಂದ ನಾವು ಅವರಿಗೆ ನಾವು ಯಾವುದೇ ಕಂಟೆಂಟ್ ಕೊಡಲ್ಲ. ನಾವು 25ರಷ್ಟು ಕಡಿಮೆ ಮಾಡುವಂತೆ ಹೇಳಿದ್ವಿ. ಆದ್ರೆ ಅವರು 9 ಪರ್ಸೆಂಟ್ ಕಡಿಮೆ ಮಾಡ್ತೀವಿ ಎನ್ನುತ್ತಿದ್ದಾರೆ. ಹೀಗಾಗಿ ಪರ್ಯಾಯ ಮಾರ್ಗ ಹುಡುಕಲು ಈ ನಿರ್ಧಾರ ತೆಗೆದುಕೊಂಡಿದ್ದೇವೆ ಎಂದು ತಿಳಿಸಿದ್ದಾರೆ.

    No Kannada Films will be released from March 2

    ಸದ್ಯ, ಪ್ರದರ್ಶನವಾಗುತ್ತಿರುವ ಚಿತ್ರಗಳು ಮಾತ್ರ ಮುಂದುವರೆಯಲಿದ್ದು, ಹೊಸ ಸಿನಿಮಾಗಳು ರಿಲೀಸ್ ಆಗುವುದಿಲ್ಲ. ಅಷ್ಟರೊಳಗೆ ಏನಾದರೂ ಸಂಧಾನವಾದರೇ, ಎಂದಿನಂತೆ ಸಿನಿಮಾ ಪ್ರದರ್ಶನವಾಗುವ ಸಾಧ್ಯತೆ ಇದೆ.

    English summary
    South indian film chamber of commerce is most likely to strike from March 2, condemning the high rental prices of QUBE and UFO. Now, it has been officially confirmed through a press statement from TFPC.
    Friday, February 23, 2018, 17:47
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X