For Quick Alerts
  ALLOW NOTIFICATIONS  
  For Daily Alerts

  ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿಮಾನಿಗಳಿಗೆ ಬೇಸರದ ಸುದ್ದಿ: ಏನದು?

  |

  ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಟನೆಯ 'ಯುವರತ್ನ' ಸಿನಿಮಾಗಾಗಿ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಭಾರಿ ಕುತೂಹಲ ಮೂಡಿಸಿರುವ ಯುವರತ್ನ ಸಿನಿಮಾ ಏಪ್ರಿಲ್ 1ಕ್ಕೆ ತೆರೆಗೆ ಬರುತ್ತಿದೆ. ಕನ್ನಡ ಮತ್ತು ತೆಲುಗು ಎರಡು ಭಾಷೆಯಲ್ಲೂ ಏಕಕಾಲಕ್ಕೆ ರಿಲೀಸ್ ಆಗುತ್ತಿದೆ.

  ಈಗಾಗಲೇ ಸಿನಿಮಾದಿಂದ ಎರಡು ಹಾಡುಗಳು ರಿಲೀಸ್ ಆಗಿದ್ದು ಅಭಿಮಾನಿಗಳ ನಿದ್ದೆಗೆಡಿಸಿದೆ. ಇದೀಗ ಮೂರನೆ ಹಾಡು ರಿಲೀಸ್ ಗೆ ಸಿದ್ಧವಾಗಿತ್ತು. ಫೆಬ್ರವರಿ 21ಕ್ಕೆ ಮೂರನೇ ಹಾಡನ್ನು ರಿಲೀಸ್ ಮಾಡುವುದಾಗಿ ಸಿನಿಮಾತಂಡ ಅನೌನ್ಸ್ ಮಾಡಿತ್ತು. 3ನೇ ಹಾಡು ಹೇಗಿರಲಿದೆ ಎನ್ನುವ ಕುತೂಹಲದಿಂದ ಅಭಿಮಾನಿಗಳು ಕಾಯುತ್ತಿದ್ದರು. ಆದರೀಗ ಹಾಡು ರಿಲೀಸ್ ಆಗುವುದಿಲ್ಲ ಎನ್ನುವ ಸುದ್ದಿ ಹೊರಬಿದ್ದಿದೆ.

  ಪುನೀತ್ ರಾಜ್ ಕುಮಾರ್ ಅಭಿಮಾನಿಗಳಿಗೆ ಭರ್ಜರಿ ಸುದ್ದಿ: ಬರ್ತಿದೆ 'ಸೋಲ್ ಆಫ್ ಯುವರತ್ನ'

  ಪುನೀತ್ ರಾಜ್ ಕುಮಾರ್ ವಿಡಿಯೋ ಮೂಲಕ ಹಾಡು ರಿಲೀಸ್ ಆಗುತ್ತಿಲ್ಲ ಎನ್ನುವ ವಿಚಾರವನ್ನು ಅಭಿಮಾನಿಗಳಿಗೊಂದಿಗೆ ಹಂಚಿಕೊಂಡಿದ್ದಾರೆ. ತಾಂತ್ರಿಕ ಸಮಸ್ಯೆಯಿಂದ ಹಾಡು ರಿಲೀಸ್ ಆಗುತ್ತಿಲ್ಲ ಎಂದಿದ್ದಾರೆ. 'ಯುವರತ್ನ ಸಿನಿಮಾದ 3ನೇ ಹಾಡು 21ಕ್ಕೆ ರಿಲೀಸ್ ಆಗಬೇಕಿತ್ತು. ಆದರೆ ಚಿಕ್ಕ ತಾಂತ್ರಿಕ ಸಮಸ್ಯೆಯಿಂದ ಮುಂದಕ್ಕೆ ಹಾಕಲಾಗಿದೆ. ಆದಷ್ಟು ಬೇಗ ಆ ಹಾಡನ್ನು ರಿಲೀಸ್ ಮಾಡುತ್ತೇವೆ. ಎಲ್ಲರೂ ಸಹಕರಿಸುತ್ತೀರಿ ಎಂದು ಭಾವಿಸುತ್ತೇನೆ' ಎಂದು ಹೇಳಿದ್ದಾರೆ.

  ಪಾಠಶಾಲಾ ಸೋಲ್ ಆಫ್ ಯುವರತ್ನ ಹಾಡಿಗಾಗಿ ಕಾದುಕುಳಿತಿದ್ದ ಅಭಿಮಾನಿಗಳಿಗೆ ಈ ಸುದ್ದಿ ನಿರಾಸೆ ಮೂಡಿಸಿದೆ. ಈಗಾಗಲೇ ಚಿತ್ರದ ಪ್ರಮೋಷನ್ ಕೆಲಸಗಳು ಪ್ರಾರಂಭವಾಗಿದ್ದು ವಿಭಿನ್ನ ರೀತಿಯಲ್ಲಿ ಪ್ರಚಾರ ಪ್ರಾರಂಭವಾಗಿದೆ.

  ಯುವರತ್ನ, ಸಂತೋಷ್ ಆನಂದ್ ರಾಮ್ ಮತ್ತು ಪವರ್ ಸ್ಟಾರ್ ಕಾಂಬಿನೇಷನ್ ನಲ್ಲಿ ಬರ್ತಿರುವ ಎರಡನೇ ಸಿನಿಮಾ ಇದಾಗಿದೆ. ಚಿತ್ರದಲ್ಲಿ ಪುನೀತ್ ಗೆ ನಾಯಕಿಯಾಗಿ ಸಯೇಶಾ ಸೈಗಲ್ ಕಾಣಿಸಿಕೊಂಡಿದ್ದಾರೆ. ಸಯೇಶಾ ಅವರಿಗೆ ಇದು ಮೊದಲ ಕನ್ನಡ ಸಿನಿಮಾವಾಗಿದ್ದು, ಚಿತ್ರದ ಬಗ್ಗೆ ಸಖತ್ ಎಕ್ಸಾಯಿಟ್ ಆಗಿದ್ದಾರೆ.

  ದರ್ಶನ್ ಬಿಟ್ಟು ಪುನೀತ್ ಕಡೆ ಮುಖ ಮಾಡಿದ ದಿನಕರ್ | Filmibeat Kannada

  ಇನ್ನು ಚಿತ್ರದಲ್ಲಿ ಸೋನು ಗೌಡ, ರಾಧಿಕಾ ಶರತ್ ಕುಮಾರ್ ಕಾವ್ಯ ಶೆಟ್ಟಿ, ಧನಂಜಯ್, ದಿಗಂತ್, ಮತ್ತು ಪ್ರಕಾಶ್ ರೈ ಸೇರಿದಂತೆ ದೊಡ್ಡ ತಾರಬಳಗವೇ ಇದೆ.

  English summary
  Puneeth Rajkumar starrer Yuvarathnaa movie 3rd single release postponed due to technical issue.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X