»   » 'ಕಿರಿಕ್ ಪಾರ್ಟಿ' ವೀಕೆಂಡ್ ಕಲೆಕ್ಷನ್, ಗಲ್ಲಾಪೆಟ್ಟಿಗೆ ಉಡೀಸ್!

'ಕಿರಿಕ್ ಪಾರ್ಟಿ' ವೀಕೆಂಡ್ ಕಲೆಕ್ಷನ್, ಗಲ್ಲಾಪೆಟ್ಟಿಗೆ ಉಡೀಸ್!

Posted By:
Subscribe to Filmibeat Kannada

ಹಾಸ್ಟೆಲ್‌ ನಲ್ಲಿ ಗಲಾಟೆ ಮಾಡಿಕೊಂಡು, ಕೊನೆ ಬೆಂಚಿನಲ್ಲಿ ಕೂತ್ಕೊಂಡು, ಕ್ಲಾಸ್ ಗಳಿಗೆ ಬಂಕ್ ಹಾಕ್ಕೊಂಡು, ಲೆಕ್ಚರರ್ಸ್ ಹತ್ರ ಬೈಸ್ಕೊಂಡು, ಹುಡುಗೀರ್ ಹಿಂದೆ ಓಡಾಡಿಕ್ಕೊಂಡು, ಫ್ರೆಂಡ್ಸ್ ಜತೆ ಕಿತ್ತಾಡ್ಕೊಂಡು, ಟ್ರಿಪ್, ಲವ್, ಕಾಲೇಜ್ ಎಲೆಕ್ಷನ್, ಫೈಟ್ ಹೀಗೆ ಹಲವು ಕಾಲೇಜು ಸನ್ನಿವೇಶಗಳನ್ನು ನೆನಪಿಸಿ ಹೊಸ ವರ್ಷಕ್ಕೆ 'ಕಿರಿಕ್‌ ಪಾರ್ಟಿ' ಸಿನಿಮಾ ಮನರಂಜನೆಯಲ್ಲಿ ಉತ್ತಮ ಪಾರ್ಟಿ ನೀಡುತ್ತಿದೆ. ಅಷ್ಟು ಮಾತ್ರವಲ್ಲದೇ ಈಗ ಗಲ್ಲಾ ಪೆಟ್ಟಿಗೆ ತುಂಬಿಸುವುದರಲ್ಲೂ 'ಕಿರಿಕ್ ಪಾರ್ಟಿ' ಅದ್ಭುತ ಓಪೆನಿಂಗ್ ಮಾಡಿದೆ.['ಕಿರಿಕ್ ಪಾರ್ಟಿ' ವಿಮರ್ಶೆ: ಮತ್ತೆ ನೆನಪಾಗುತ್ತಿದೆ ಕಾಲೇಜಿನ 'ಜಾಲಿಲೈಫ್'!]

ಹೌದು, ರಕ್ಷಿತ್ ಶೆಟ್ಟಿ ಮುಖ್ಯ ಭೂಮಿಕೆಯ 'ಕಿರಿಕ್ ಪಾರ್ಟಿ' ಬಿಡುಗಡೆ ಆದ 3 ದಿನಗಳಲ್ಲಿ ಬಾಕ್ಸ್‌ ಆಫೀಸ್ ಗೆ 6 ಕೋಟಿ ಗಳಿಸಿಕೊಟ್ಟಿದೆ ಎಂದು ಮೂಲಗಳ ಪ್ರಕಾರ ತಿಳಿಯಲಾಗಿದೆ. ಸ್ಯಾಡಲ್‌ ವುಡ್‌ ಸಿನಿಮಾಗಳ ಪೈಕಿ ಬಿಗ್ಗೆಸ್ಟ್ ಓಪನಿಂಗ್ ಪಡೆದ ಚಿತ್ರ ಎಂಬ ಹೆಗ್ಗಳಿಕೆಗೂ 'ಕಿರಿಕ್ ಪಾರ್ಟಿ' ಪಾತ್ರವಾಗಿದೆ.

Rakshit Shetty starrer 'kirik Party' Movie grabbed 6 crores in three Days

ರಿಷಬ್ ಶೆಟ್ಟಿ ಆಕ್ಷನ್ ಕಟ್ ಹೇಳಿ, ಅಜನೀಶ್ ಲೋಕನಾಥ್ ಸಂಗೀತ ನಿರ್ದೇಶನ ದೊಂದಿಗೆ ಮೂಡಿ ಬಂದಿರುವ, ವಿದ್ಯಾರ್ಥಿ ಜೀವನವನ್ನ ಎಂಜಾಯ್ ಮಾಡಿದ ಪ್ರತಿಯೊಬ್ಬರನ್ನ ಕಾಡುವ 'ಕಿರಿಕ್ ಪಾರ್ಟಿ' ಚಿತ್ರ ಈಗ ವೀಕೆಂಡ್ ಮಾತ್ರವಲ್ಲದೇ, ವೀಕ್ ಡೇ ಗಳಲ್ಲೂ ಸಹ ಸ್ಟ್ರಾಂಗ್ ಆಗೇ ಶೋ ಬುಕ್ಕಿಂಗ್ ಪಡೆಯುತ್ತಿದೆ.[ಟ್ವಿಟ್ಟರ್ ನಲ್ಲೂ 'ಕಿರಿಕ್ ಪಾರ್ಟಿ' ಹೈಕ್ಳ ಹವಾ ಜೋರಾಗಿದೆ!]

Rakshit Shetty starrer 'kirik Party' Movie grabbed 6 crores in three Days

ಸಿನಿ ಪ್ರಿಯರಿಗೆ ತಮ್ಮ ಕಾಲೇಜು ದಿನಗಳ ಕಿರಿಕ್‌ ಮತ್ತು ಪಾರ್ಟಿಗಳನ್ನು ನೆನಪು ಮಾಡಿಕೊಡುವ 'ಕಿರಿಕ್ ಪಾರ್ಟಿ' ಚಿತ್ರ ನೋಡಲು ಹೆಚ್ಚು ಬೇಡಿಕೆ ಇರುವುದರಿಂದ ಹಲವು ಕಡೆಗಳಲ್ಲಿ ಶೋ'ಗಳನ್ನು ಹೆಚ್ಚಿಸಲಾಗಿದೆಯಂತೆ. ಇನ್ನೂ 'ಕಿರಿಕ್ ಪಾರ್ಟಿ' ಸಿನಿಮಾ ಮೊದಲ 7 ದಿನಗಳಲ್ಲಿ 12 ಕೋಟಿ ಗಳಿಸುವ ನಿರೀಕ್ಷೆ ಇದೆ ಎಂದು ಹೇಳಲಾಗಿದೆ.['ಕಿರಿಕ್ ಪಾರ್ಟಿ' ನೋಡಿದ ವಿಮರ್ಶಕರು ಮಾಡಿದ ಕಾಮೆಂಟ್ಸ್ ಇವು..]

English summary
Kannada Actor Rakshit Shetty starrer 'kirik Party' Movie has got a tremendous opening at the box office. In three days till Sunday the film has grabbed around Rs 6 crores at the box office according to sources.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada