»   » ರವಿಚಂದ್ರನ್ ಅವರಿಂದ ಕೇಸ್ ಹಾಕಿಸಿಕೊಂಡಿದ್ದ ಹೀರೋಯಿನ್ ಇವರೇ.!

ರವಿಚಂದ್ರನ್ ಅವರಿಂದ ಕೇಸ್ ಹಾಕಿಸಿಕೊಂಡಿದ್ದ ಹೀರೋಯಿನ್ ಇವರೇ.!

Posted By:
Subscribe to Filmibeat Kannada

ಕ್ರೇಜಿ ಸ್ಟಾರ್ ರವಿಚಂದ್ರನ್ ಸಿನಿಮಾಗಳಲ್ಲಿ ಹೀರೋಯಿನ್ ಗಳಿಗೆ ವಿಶೇಷ ಸ್ಥಾನವಿರುತ್ತದೆ. ಇದೇ ಕಾರಣದಿಂದ ರವಿಚಂದ್ರನ್ ಅವರ ಚಿತ್ರಗಳಲ್ಲಿ ನಟಿಸಬೇಕು ಅಂತ ಅದೆಷ್ಟೋ ಹೀರೋಯಿನ್ ಗಳು ಕಾಯುತ್ತಿರುತ್ತಾರೆ. ಹೀಗಿರುವಾಗ ಇಲ್ಲೊಬ್ಬ ನಟಿ ರವಿಚಂದ್ರನ್ ಅವರಿಂದಲೇ ಕೇಸ್ ಹಾಕಿಸಿಕೊಂಡಿದ್ದರಂತೆ.

ರವಿಚಂದ್ರನ್ ಒಮ್ಮೆ ತಮ್ಮ ಜೊತೆ ನಟಿಸಿದ್ದ ನಟಿಯ ಮೇಲೆ ಒಂದು ರೂಪಾಯಿ ಡಿಫಮೇಷನ್ ಕೇಸ್ ಹಾಕಿದ್ದರಂತೆ. ಈ ವಿಷಯವನ್ನು ಇತ್ತೀಚಿಗಷ್ಟೆ ರವಿಮಾಮ 'ಸೂಪರ್ ಟಾಕ್ ಟೈಮ್' ರಿಯಾಲಿಟಿ ಕಾರ್ಯಕ್ರಮದಲ್ಲಿ ಹೇಳಿಕೊಂಡಿದ್ದಾರೆ. ಮುಂದೆ ಓದಿ....

[ಯಾರು ಏನೇ ಹೇಳಿದ್ರೂ, ಕುರುಕ್ಷೇತ್ರದಲ್ಲಿ 'ನಾನೇ' ಕೃಷ್ಣ.!]

ಬಿಂದಿಯಾ ಮೇಲೆ ಕೇಸ್

'ಹಳ್ಳಿಮೇಷ್ಟ್ರು' ಸಿನಿಮಾದಲ್ಲಿ ರವಿಚಂದ್ರನ್ ಜೊತೆ ನಟಿಸಿದ್ದ ನಟಿ ಬಿಂದಿಯಾ ಮೇಲೆ ರವಿಚಂದ್ರನ್ ಕೇಸ್ ಹಾಕಿದ್ದರಂತೆ.

ರವಿಚಂದ್ರನ್ ಬಗ್ಗೆ ಸುಳ್ಳು ಆರೋಪ

ನಟಿ ಬಿಂದಿಯಾ ಸಂದರ್ಶನವೊಂದರಲ್ಲಿ ರವಿಚಂದ್ರನ್ ಮೇಲೆ ಸುಳ್ಳು ಆರೋಪ ಮಾಡಿದ್ದರಂತೆ. 'ಶೂಟಿಂಗ್ ವೇಳೆ ರಾತ್ರಿ ರವಿಚಂದ್ರನ್ ನನ್ನ ಮೇಲೆ ರೇಪ್ ಮಾಡುವುದಕ್ಕೆ ಪ್ರಯತ್ನ ಪಟ್ಟರು' ಅಂತ ಬಿಂದಿಯಾ ಬಾಯಿಗೆ ಬಂದ ಹಾಗೆ ಮಾತನಾಡಿದ್ದರಂತೆ.

[ಸ್ಯಾಂಡಲ್ ವುಡ್ 'ಕನಸುಗಾರ'ನಿಗೆ 56ನೇ ಜನುಮದಿನ ಸಂಭ್ರಮ]

ಕೋರ್ಟ್ ಗೆ ಕರೆಸಿದ್ದ ರವಿಚಂದ್ರನ್

ಆ ಸುದ್ದಿ ಕೇಳಿ ಶಾಕ್ ಆದ ರವಿಚಂದ್ರನ್ ಎಲ್ಲರಿಗೂ ಸತ್ಯ ತಿಳಿಸುವುದಕ್ಕೆ ಬಿಂದಿಯಾ ಅವರ ವಿರುದ್ಧ ಕೇಸ್ ಹಾಕಿ ಅವರನ್ನು ಕೋರ್ಟ್ ಗೆ ಎಳೆದಿದ್ದರಂತೆ.

[ರವಿಚಂದ್ರನ್ ಅವರನ್ನ 'ಏಕಾಂಗಿ' ಮಾಡಿದ್ದು ದರ್ಶನ್ ಅಂತೆ..!]

ಸತ್ಯ ಬಾಯಿಬಿಟ್ಟ ನಟಿ

ಕೋರ್ಟ್ ನಲ್ಲಿ ತನ್ನ ತಪ್ಪು ಒಪ್ಪಿಕೊಂಡ ಬಿಂದಿಯಾ 'ನಾನು ಹೇಳಿದ್ದು ಎಲ್ಲ ಸುಳ್ಳು' ಅಂತ ರವಿಚಂದ್ರನ್ ಅವರಿಗೆ ಕ್ಷಮೆ ಕೇಳಿದ್ದರಂತೆ.

ಒಂದು ರೂಪಾಯಿ ಡಿಫಮೇಷನ್ ಕೇಸ್

ಬೇಕಾಬಿಟ್ಟಿ ಹೇಳಿಕೆ ನೀಡಿದ್ದ ಬಿಂದಿಯಾಗೆ ಸರಿಯಾಗಿ ಬುದ್ಧಿ ಕಲಿಸುವುದಕ್ಕೆ ರವಿಚಂದ್ರನ್ ಕೇವಲ ಒಂದೇ ಒಂದು ರೂಪಾಯಿ ಡಿಫಮೇಷನ್ ಕೇಸ್ ಹಾಕಿದ್ದರಂತೆ.

[ಓದುಗರ ಆಯ್ಕೆ: ರವಿಚಂದ್ರನ್ ಗೆ 'ಫಿಲ್ಮಿಬೀಟ್ ಕನ್ನಡ'ದಿಂದ ಪ್ರೀತಿಯ ಸನ್ಮಾನ]

ಕೋರ್ಟ್ ಮೆಟ್ಟಿಲು ಹತ್ತಿರಲಿಲ್ಲ.!

ರವಿಚಂದ್ರನ್ ಎಂದಿಗೂ ಕೋರ್ಟ್, ಕಚೇರಿ ಅಂತ ಅಲೆದವರಲ್ಲ. ಆದರೆ ಈ ವಿಷಯದಲ್ಲಿ ಮೊದಲ ಬಾರಿಗೆ ರವಿಚಂದ್ರನ್ ಕೋರ್ಟ್ ಮೆಟ್ಟಿಲೇರಿ ತಮ್ಮ ಮೇಲೆ ಇದ್ದ ಸುಳ್ಳು ಆರೋಪವನ್ನು ಬಯಲು ಮಾಡಿದ್ದರು.

English summary
Kannada Actor 'Ravichandran' Speaks About Bindiya Controversy in Colors Super Channel's popular show 'Super talk time'.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada