»   » ದರ್ಶನ್ 'ರಾಯಣ್ಣ'ನಿಗೆ ಭರ್ಜರಿ ಟಿವಿ ರೈಟ್ಸ್

ದರ್ಶನ್ 'ರಾಯಣ್ಣ'ನಿಗೆ ಭರ್ಜರಿ ಟಿವಿ ರೈಟ್ಸ್

Posted By:
Subscribe to Filmibeat Kannada

ಬಾಕ್ಸ್ ಆಫೀಸ್ ಸುಲ್ತಾನ್ ಎಂದೇ ಕರೆಸಿಕೊಂಡಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಮತ್ತೊಂದು ಚಿತ್ರ ಹೊಸ ದಾಖಲೆ ಬರೆದಿದೆ. ಕೇವಲ ತಾನು ಬಾಕ್ಸ್ ಆಫೀಸ್ ನಲ್ಲಷ್ಟೇ ಅಲ್ಲ ಕಿರುತೆರೆಯಲ್ಲೂ ಕಿಂಗ್ ಎಂಬುದು ಮತ್ತೊಮ್ಮೆ ಸಾಬೀತಾಗಿದೆ. [ಚಿತ್ರ ವಿಮರ್ಶೆ ಓದಿ]

ದರ್ಶನ್ ಅಭಿನಯದ ಐತಿಹಾಸಿಕ ಚಿತ್ರ 'ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ' ಚಿತ್ರದ ಸ್ಯಾಟಲೈಟ್ ರೈಟ್ಸ್ ಸುವರ್ಣ ಟಿವಿ ಪಾಲಾಗಿರುವುದು ಗೊತ್ತೇ ಇದೆ. ಮೂಲಗಳ ಪ್ರಕಾರ ರಾಯಣ್ಣ ಟಿವಿ ರೈಟ್ಸ್ ಗೆ ರು.7 ಕೋಟಿ ನೀಡಲಾಗಿದೆ. ಗಣೇಶ ಚತುರ್ಥಿ (ಸೆ.8) ದಿನ 'ಸಂಗೊಳ್ಳಿ ರಾಯಣ್ಣ' ಚಿತ್ರ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದೆ.


ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಚಿತ್ರ ಈಗಾಗಲೆ ಟ್ರಿಪಲ್ ಸೆಂಚುರಿ ಬಾರಿಸಿದ್ದು ಇದ್ದೇ ಮೊದಲ ಬಾರಿಗೆ ಕಿರುತೆರೆಯಲ್ಲಿ ಪ್ರಸಾರವಾಗುತ್ತಿರುವುದು. ಕೆ.ಮಾದೇಶ್ ನಿರ್ದೇಶನದ 'ಬೃಂದಾವನ' ಚಿತ್ರದ ಸ್ಯಾಟಲೈಟ್ ರೈಟ್ಸ್ ರು.5.47 ಕೋಟಿಗೆ ಮಾರಾಟವಾಗಿದೆ. 'ಸಾರಥಿ' ಚಿತ್ರ ರು.2 ಪ್ಲಸ್ ಕೋಟಿಗೆ ಸೇಲ್ ಆಗಿತ್ತು.

ಆದರೆ ವಿಶೇಷ ಎಂದರೆ ರೀಮೇಕ್ ಚಿತ್ರ 'ಬುಲ್ ಬುಲ್' ರು.4.17 ಕೋಟಿಗೆ ಮಾರಾಟವಾಗಿರುವುದು. ಕಳೆದ ವರ್ಷದ ಅತ್ಯುತ್ತಮ ಕನ್ನಡ ಚಲನಚಿತ್ರ ಎಂದೇ ಖ್ಯಾತಿ ಆದ 'ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ' ಚಲನಚಿತ್ರವನ್ನು ಇದೇ ಸೆಪ್ಟೆಂಬರ್ 8 ರ ಭಾನುವಾರದಂದು ಸಂಜೆ 5.30ಕ್ಕೆ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದೆ.

2012ರಲ್ಲಿ ತೆರೆಕಂಡ ಐತಿಹಾಸಿಕ ಬ್ಲಾಕ್ ಬಸ್ಟರ್ ಚಿತ್ರ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ. ಇದನ್ನು ನಾಗಣ್ಣ ಅವರು ನಿರ್ದೇಶನ ಮಾಡಿದ್ದು, ಚಾಲೆಂಜಿಂಗ್ ಸ್ಟಾರ್ ದರ್ಶನ್ ತೂಗುದೀಪ, ಜಯಪ್ರದಾ ಮತ್ತು ನಿಖಿತಾ ತುಕ್ರಾಲ್ ಮುಖ್ಯ ಪಾತ್ರದಲ್ಲಿ ಅಭಿನಯಿಸಿದ್ದಾರೆ. (ಏಜೆನ್ಸೀಸ್)

English summary
Challenging Star Darshan lead Krantiveera Sangolli Rayanna TV rights acquired by Suvarna channel by paying Rs. 7 crore plus. The blockbuster film Krantiveera Sangolli Rayanna for the first time will be air on 8th September, 2013 on Suvarna Channel at 5.30pm.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada