ಸಂಜನಾ ಆರೋಗ್ಯ ತಪಾಸಣೆಗೆ ಹೈ ಕೋರ್ಟ್ ಅನುಮತಿ
ಡ್ರಗ್ಸ್ ಪ್ರಕರಣದಲ್ಲಿ ಪರಪ್ಪನ ಅಗ್ರಹಾರದ ಜೈಲಿನಲ್ಲಿರುವ ನಟಿ ಸಂಜನಾ ಅವರ ಆರೋಗ್ಯ ತಪಾಸಣೆ ಮಾಡಲು ಕರ್ನಾಟಕ ಹೈ ಕೋರ್ಟ್ ಅನುಮತಿ ನೀಡಿದೆ.
Recommended Video
ಜಾಮೀನುಗಾಗಿ ಹೈ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿರುವ ನಟಿ ಸಂಜನಾ, ಆರೋಗ್ಯ ಕಾರಣ ನೀಡಿದ್ದಾರೆ. ಸಂಜನಾ ಆರೋಗ್ಯದಲ್ಲಿ ವ್ಯತ್ಯಾಸವಾಗಿದೆ. ಹೀಗಾಗಿ, ಜಾಮೀನು ನೀಡಬೇಕೆಂದು ಮನವಿ ಮಾಡಿದ್ದರು.
ಆದರೆ, ಜಾಮೀನು ನೀಡಲು ನಿರಾಕರಿಸಿರುವ ನ್ಯಾಯಾಲಯ ಬೆಂಗಳೂರಿನ ವಾಣಿ ವಿಲಾಸ್ ಆಸ್ಪತ್ರೆಯಲ್ಲಿ ತಪಾಸಣೆ ಮಾಡಲು ಸೂಚಿಸಿದೆ. ಈ ವೇಳೆ ಮಾಧ್ಯಮಗಳ ಚಿತ್ರೀಕರಣ ಅವಕಾಶ ನೀಡಬಾರದು ಎಂದು ತಿಳಿಸಿದೆ. ಈ ಸಂಬಂಧ ಡಿಸೆಂಬರ್ 10ರೊಳಗೆ ವರದಿ ನೀಡುವಂತೆ ಹೇಳಿದೆ.

ಅಂದ್ಹಾಗೆ, ಸೆಪ್ಟೆಂಬರ್ 8 ರಂದು ನಟಿ ಸಂಜನಾ ಅವರನ್ನು ವಶಕ್ಕೆ ಪಡೆದುಕೊಂಡಿದ್ದರು. ಸಂಜನಾಗೂ ಮುಂಚೆ ಸೆಪ್ಟೆಂಬರ್ 4 ರಂದು ನಟಿ ರಾಗಿಣಿ ದ್ವಿವೇದಿ ಅವರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದರು. ಸದ್ಯ, ಇಬ್ಬರು ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾರೆ.
ಜಾಮೀನುಗಾಗಿ ನಟಿ ರಾಗಿಣಿ ದ್ವಿವೇದಿ ಸುಪ್ರೀಂಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು. ರಾಗಿಣಿ ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯ ಮುಂದಿನ ವಿಚಾರಣೆಯನ್ನು 2021ರ ಜನವರಿಗೆ ಮುಂದೂಡಿದೆ. ಈ ಮೂಲಕ ಹೊಸ ವರ್ಷದ ಆಚರಣೆಯನ್ನು ಸಹ ಜೈಲಿನಲ್ಲಿಯೇ ಆಚರಿಸಬೇಕಿದೆ.


Click it and Unblock the Notifications











