For Quick Alerts
  ALLOW NOTIFICATIONS  
  For Daily Alerts

  ಎಂಜಿ ರಸ್ತೆಯಲ್ಲಿದ್ದ ಶಂಕರ್ ನಾಗ್ ಥಿಯೇಟರ್ ಕ್ಲೋಸ್.!

  By Bharath Kumar
  |

  ಶಂಕರ್​ನಾಗ್ ಕನ್ನಡ ಚಿತ್ರರಂಗದ ಧ್ರುವತಾರೆ. ಕೋಟ್ಯಾಂತರ ಅಭಿಮಾನಿಗಳ ಆರಾಧ್ಯದೈವ. ಶಂಕರ್ ನಾಗ್ ಮರೆಯಾಗಿ ಸುಮಾರು 26 ವರ್ಷಗಳ ಕಳೆದರು ಇಂದಿಗೂ ಅವರ ಅಭಿಮಾನಿಗಳ ಮನದಲ್ಲಿ ಸಜೀವವಾಗಿದ್ದಾರೆ. ಪ್ರತಿಯೊಂದು ಆಟೋಗಳ ಮೇಲೆಯೂ ಓಡಾಡುತ್ತಿದ್ದಾರೆ. ಪ್ರತಿಯೊಂದು ಸರ್ಕಲ್ ನಲ್ಲೂ ಪ್ರತಿಮೆಯಾಗಿ ನಿಂತಿದ್ದಾರೆ. ಇನ್ನು ಚಿತ್ರರಂಗದ ಪಾಲಿಗೆ ಶಂಕರ್ ನಾಗ್ ಅಜರಾಮರ.['ಶಂಕರಣ್ಣ'ನ ಬಗ್ಗೆ ನೀವು ಕೇಳರಿಯದ ಸಂಗತಿಗಳು]

  ಶಂಕರ್ ನಾಗ್ ಅಭಿಮಾನಿ ಬಳಗಕ್ಕೆ ಈಗೊಂದು ಬೇಸರದ ಸಂಗತಿ ಬಂದಿದೆ. ಶಂಕರ್ ನಾಗ್ ಅವರ ಹೆಸರಿನಲ್ಲಿದ್ದ ಏಕೈಕ ಚಿತ್ರಮಂದಿರವನ್ನ ಮುಚ್ಚಲು ನಿರ್ಧರಿಸಿದ್ದಾರೆ. ಈ ಮೂಲಕ ದಶಕಗಳ ಕಾಲ ಕಲಾರಸಿಕರನ್ನ ಕೈ ಬೀಸಿ ಕರೆಯುತ್ತಿದ್ದ ಚಿತ್ರಮಂದಿರಕ್ಕೆ ಬೀಗ ಬೀಳುತ್ತಿದೆ. ಇದು ಕರಾಟೆಕಿಂಗ್ ಅಭಿಮಾನಿ ಬಳಗಕ್ಕೆ ಸಿಡಲು ಬಡಿದಂತಾಗಿದೆ. ಮುಂದೆ ಓದಿ.....

  ಸ್ತಬ್ದವಾಯಿತು ಶಂಕ್ರಣ್ಣನ ಚಿತ್ರಮಂದಿರ

  ಸ್ತಬ್ದವಾಯಿತು ಶಂಕ್ರಣ್ಣನ ಚಿತ್ರಮಂದಿರ

  ಎಂ.ಜಿ ರಸ್ತೆಯಲ್ಲಿರುವ ಶಂಕರ್ ನಾಗ್ ಚಿತ್ರಮಂದಿರ ಕಳೆದ ಗುರುವಾರದಿಂದ ಪ್ರದರ್ಶನವನ್ನ ನಿಲ್ಲಿಸಿದೆಯಂತೆ. ಈ ಮೂಲಕ ಬೆಂಗಳೂರಿನಲ್ಲಿ ಶಂಕರ್ ನಾಗ್ ನೆನಪಲ್ಲಿದ್ದ ಒಂದೇ ಒಂದು ಥಿಯೇಟರ್ ಕೂಡ ಕ್ಲೋಸ್ ಆಗಿದೆ.[ಶಂಕರ್ ನಾಗ್ ಹುಟ್ಟೂರಿನ ಕಥೆ ಹೇಳುತ್ತಾ 'ನಾಗರಕಟ್ಟೆ'?]

  ಮಲ್ಟಿಪ್ಲೆಕ್ಸ್ ಭರಾಟೆ ಕಾರಣ

  ಮಲ್ಟಿಪ್ಲೆಕ್ಸ್ ಭರಾಟೆ ಕಾರಣ

  ಮಲ್ಟಿಪ್ಲೆಕ್ಸ್ ಭರಾಟೆಯಿಂದ ಶಂಕರ್​ನಾಗ್ ಚಿತ್ರಮಂದಿರಕ್ಕೆ ಜನರೇ ಬರುತ್ತಿಲ್ಲ. ಹೀಗಾಗಿ ಇದನ್ನ ಮುಚ್ಚಲು ನಿರ್ಧಾರ ಮಾಡಿದ್ದೇವೆ ಎಂದು ಬಿಬಿಎಂಪಿ ಅವರು ಸ್ಪಷ್ಟನೆ ನೀಡಿದ್ದಾರೆ.[ಅಪರೂಪದ ಚಿತ್ರಕರ್ಮಿ ಮಿ. ಪರ್ಫೆಕ್ಟ್ ಶಂಕರ್]

  ಯಾವಾಗ ಸ್ಥಾಪನೆ

  ಯಾವಾಗ ಸ್ಥಾಪನೆ

  560 ಸೀಟುಗಳ ಹೊಂದಿರುವ ಶಂಕರ್​ನಾಗ್ ಚಿತ್ರಮಂದಿರ ಶುರುವಾಗಿದ್ದು 1979ರಲ್ಲಿ. ಮೊದಲು ಇಲ್ಲಿ ಇಂಗ್ಲಿಷ್ ಚಿತ್ರಗಳು ಹೆಚ್ಚಾಗಿ ಪ್ರದರ್ಶನವಾಗುತ್ತಿತ್ತು. ನಂತರ ಅದು ಕನ್ನಡ ಚಿತ್ರಗಳ ಪ್ರದರ್ಶನಕ್ಕೇ ಮೀಸಲಾಯ್ತು. ಸುಮಾರು 38 ವರ್ಷಗಳ ಕಾಲ ಕನ್ನಡ ಸಿನಿಮಾ ಸೇರಿದಂತೆ ಚಿತ್ರ ಪ್ರೇಮಿಗಳಿಗೆ ಮನರಂಜನೆ ನೀಡುತ್ತಾ ಬಂದಿದೆ. ಆದ್ರೆ, ದುರದೃಷ್ಟವಶಾತ್ ಇನ್ಮುಂದೆ ಪ್ರದರ್ಶನ ಇಲ್ಲವಂತೆ.[ಶಂಕರ್ ನಾಗ್ ಕೇಳ್ಕೊಂಡ್ ಬಂದಾಗ...]

  ಮೊದಲ ಹೆಸರು 'ಸಿಂಫೋನಿ'

  ಮೊದಲ ಹೆಸರು 'ಸಿಂಫೋನಿ'

  ಅಂದ್ಹಾಗೆ, ಈ ಚಿತ್ರಮಂದಿರಕ್ಕೆ ಮೊದಲು 'ಸಿಂಫೋನಿ' ಎಂಬ ಹೆಸರಿತ್ತಂತೆ. 1991ರಲ್ಲಿ ಶಂಕರ್​ನಾಗ್ ಅವರ ನಿಧನದ ನಂತರ ಆ ಚಿತ್ರಮಂದಿರಕ್ಕೆ ಶಂಕರ್​ನಾಗ್ ಚಿತ್ರಮಂದಿರ ಎಂದು ಹೊಸದಾಗಿ ನಾಮಕರಣ ಮಾಡಲಾಗಿತ್ತು.[ರಾತ್ರೋರಾತ್ರಿ ಶಂಕರ್ ನೆನೆದು ಗದ್ಗದಿತರಾಗಿದ್ದ ಅನಂತ್ ನಾಗ್.!]

  ಬಹುಶಃ ಇದು ಕೊನೆಯ ಅವಕಾಶ.!

  ಬಹುಶಃ ಇದು ಕೊನೆಯ ಅವಕಾಶ.!

  ಈ ಚಿತ್ರಮಂದಿರಕ್ಕೆ ಬೀಗ ಬೀಳುತ್ತಿರುವುದು ಇದೇ ಮೊದಲೇನಲ್ಲ. 2005ರಲ್ಲಿ ಮತ್ತು 2009ರಲ್ಲಿ ಇದೇ ಸಮಸ್ಯೆ ತಲೆದೋರಿತ್ತು. ಮುಂಬೈನ ಶೃಂಗಾರ್ ಸಿನಿಮಾಸ್​ನವರು ಚಿತ್ರಮಂದಿರವನ್ನು 2009ರಲ್ಲಿ ವಹಿಸಿಕೊಂಡಿದ್ದರು. ಆದರೆ, ತಿಂಗಳಿಗೆ 17.50 ಲಕ್ಷ ಬಾಡಿಗೆ ಕಟ್ಟಲಾಗದೆ, ಚಿತ್ರಮಂದಿರವನ್ನು ಕೈಬಿಟ್ಟಿದ್ದಾರೆ ಎನ್ನಲಾಗಿದೆ.

  ಶಂಕ್ರಣ್ಣನ ಅಭಿಮಾನಿಳಿಗೆ ನಿರಾಸೆ

  ಶಂಕ್ರಣ್ಣನ ಅಭಿಮಾನಿಳಿಗೆ ನಿರಾಸೆ

  ಬೆಂಗಳೂರಿನಲ್ಲಿ ಸಿಂಗಲ್ ಸ್ಕ್ರೀನ್ ಚಿತ್ರಮಂದಿರಗಳು ಒಂದೊಂದಾಗಿ ಮುಚ್ಚುತ್ತಿರುವ ಈ ಸಮಯದಲ್ಲಿ, ಚಿತ್ರರಂಗದ ಇತಿಹಾಸ ಆಗಿದ್ದ ಶಂಕರ್​ನಾಗ್ ಚಿತ್ರಮಂದಿರದ ಬಾಗಿಲು ಮುಚ್ಚಿರುವುದು ಬೇಸರದ ಸಂಗತಿ. ಇದು ಆಟೋರಾಜನ ಅಭಿಮಾನಿಗಳು ಬಹುದೊಡ್ಡ ನಿರಾಸೆ ಕೂಡ ಹೌದು.

  English summary
  The iconic single-screen theater on MG Road, Shanka­rnag Chitram­andira, has once again shut down – and this time, perhaps, permanently

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X