»   » ಬುಲೆಟ್ ಪ್ರಕಾಶ್ ಗೆ ಬೆಂಡೆತ್ತಿ ಬ್ರೇಕ್ ಹಾಕುತ್ತಿರುವ ಕಿಚ್ಚ ಸುದೀಪ್ 'ಭಕ್ತ'ರು

ಬುಲೆಟ್ ಪ್ರಕಾಶ್ ಗೆ ಬೆಂಡೆತ್ತಿ ಬ್ರೇಕ್ ಹಾಕುತ್ತಿರುವ ಕಿಚ್ಚ ಸುದೀಪ್ 'ಭಕ್ತ'ರು

Posted By:
Subscribe to Filmibeat Kannada

''ಸ್ಯಾಂಡಲ್ ವುಡ್ ನ ದೊಡ್ಡ ರಹಸ್ಯವನ್ನ ಬಯಲು ಮಾಡುತ್ತೇನೆ. 'ದೊಡ್ಡ ನಟನ ಸಣ್ಣತನ'ವನ್ನ ಜಗಜ್ಜಾಹೀರು ಮಾಡುತ್ತೇನೆ'' ಅಂತೆಲ್ಲ ನಿನ್ನೆ (ಮೇ 23) ಸಂಜೆ ಫೇಸ್ ಬುಕ್ ಹಾಗೂ ಟ್ವಿಟ್ಟರ್ ನಲ್ಲಿ ಹೇಳಿಕೊಂಡಿದ್ದ ಬುಲೆಟ್ ಪ್ರಕಾಶ್ ಇವತ್ತು ತಣ್ಣಗಾಗಿಬಿಟ್ಟಿದ್ದಾರೆ.

''ಎಮೋಷನಲ್ ಆಗಿ ಮಾತನಾಡಿದ್ದೆ'' ಎಂದು ಸಬೂಬು ಹೇಳಿ ಮುಂದೆ ಆಗಬಹುದಾದ ದೊಡ್ಡ ವಿವಾದಕ್ಕೆ ಈಗಲೇ ಶುಭಂ ಹಾಡಿದ್ದಾರೆ. ''ಯಾರಿಗಾದರೂ ನೋವಾಗಿದ್ದರೆ ದಯವಿಟ್ಟು ಕ್ಷಮಿಸಿ'' ಎಂದೂ ಬುಲೆಟ್ ಪ್ರಕಾಶ್ ಕೇಳಿಕೊಂಡಿದ್ದಾರೆ.[ಬುಲೆಟ್ ಪ್ರಕಾಶ್ ಸಿಡಿಸಿದ 'ಬಾಂಬ್' ಬೆಳಗಾಗುವಷ್ಟರಲ್ಲಿ 'ಠುಸ್' ಆಯ್ತು]

ಇಷ್ಟೆಲ್ಲ ನಡೆಯುತ್ತಿರುವಾಗಲೇ ಕಿಚ್ಚ ಸುದೀಪ್ ರವರ ಅಪ್ಪಟ ಅಭಿಮಾನಿಗಳು ಫೇಸ್ ಬುಕ್ ಮತ್ತು ಟ್ವಿಟ್ಟರ್ ನಲ್ಲಿ ರೊಚ್ಚಿಗೆದ್ದಿದ್ದಾರೆ. ಬುಲೆಟ್ ಪ್ರಕಾಶ್ ರವರ ಅಫೀಶಿಯಲ್ ಫೇಸ್ ಬುಕ್ ಪೇಜ್ ನಲ್ಲಿಯೇ, ಬುಲೆಟ್ ಪ್ರಕಾಶ್ ಗೆ ಸುದೀಪ್ ಫ್ಯಾನ್ಸ್ ಹಿಗ್ಗಾಮುಗ್ಗಾ ಜಾಡಿಸುತ್ತಿದ್ದಾರೆ. ಸುಖಾಸುಮ್ಮನೆ ವಿವಾದ ಸೃಷ್ಟಿ ಮಾಡುತ್ತಿರುವ ಬುಲೆಟ್ ಪ್ರಕಾಶ್ ಗೆ ಬೆಂಡೆತ್ತಿ ಬ್ರೇಕ್ ಹಾಕುತ್ತಿದ್ದಾರೆ ಕಿಚ್ಚನ ಭಕ್ತರು. ಮುಂದೆ ಓದಿ...

ಸುದೀಪ್ ಫ್ಯಾನ್ಸ್ ಗೂ ಇದಕ್ಕೂ ಏನು ಸಂಬಂಧ.?

'ದೊಡ್ಡ ನಟನ ಸಣ್ಣತನ ಬಯಲು ಮಾಡುವೆ' ಎಂದು ಬುಲೆಟ್ ಪ್ರಕಾಶ್ ಹೇಳಿದ್ದರು. ಅಷ್ಟಕ್ಕೆ ಅವರು ಸುಮ್ಮನ್ನಾಗಿದ್ದರೆ, ಸುದೀಪ್ ಅಭಿಮಾನಿಗಳು ಎಂಟ್ರಿ ಕೊಡುತ್ತಿರಲಿಲ್ಲ. ಯಾವಾಗ ಬುಲೆಟ್ ಪ್ರಕಾಶ್, ''ದೀಪ ಆರುವ ಮೊದಲು ಜೋರಾಗಿ ಉರಿಯುತ್ತದೆ'' ಅಂತ ಹೇಳಿದ್ರೋ... ಸುದೀಪ್ ಫ್ಯಾನ್ಸ್ ಗದೆ ಹಿಡಿದು ರಣರಂಗಕ್ಕೆ ಕಾಲಿಟ್ಟರು.[ದೊಡ್ಡ ನಟನ ಸಣ್ಣತನ ಇಂದು ಬಯಲು: ಬುಲೆಟ್ ಪ್ರಕಾಶ್ ರಿಂದ ಮಹಾ ಸ್ಫೋಟ.!]

'ದೀಪ'ದ ಮಾತು..?

'ದೀಪ' ಎಂಬ ಪದದ ಪ್ರಸ್ತಾಪ ಮಾಡುತ್ತಿದ್ದಂತೆಯೇ... ಸುದೀಪ್ ಅಭಿಮಾನಿಗಳು ಬುಲೆಟ್ ಪ್ರಕಾಶ್ ವಿರುದ್ಧ ಕಿಡಿಕಾರಲು ಆರಂಭಿಸಿದರು.

ಯಾರು ಎಂಬ ಕೆಟ್ಟ ಕುತೂಹಲ ಎಲ್ಲರಲ್ಲೂ ಇತ್ತು.!

ಫೇಸ್ ಬುಕ್ ಹಾಗೂ ಟ್ವಿಟ್ಟರ್ ನಲ್ಲಿ ಬುಲೆಟ್ ಪ್ರಕಾಶ್ 'ಮಹಾ ಸ್ಫೋಟ' ನಡೆಸುವುದಾಗಿ ಹೇಳಿದಾಗ ಅನೇಕರಲ್ಲಿ 'ಆ' ದೊಡ್ಡ ನಟ ಯಾರು ಎಂಬ ಕೆಟ್ಟ ಕುತೂಹಲ ಶುರು ಆಯ್ತು.

'ಪಬ್ಲಿಕ್ ಟಿವಿ'ಯಲ್ಲಿ ಸುಳಿವು ನೀಡಿದ್ದ ಬುಲೆಟ್ ಪ್ರಕಾಶ್

'ಆ' ನಟ ಯಾರು ಎಂದು ತಿಳಿದುಕೊಳ್ಳಲು 'ಪಬ್ಲಿಕ್ ಟಿವಿ', ಬುಲೆಟ್ ಪ್ರಕಾಶ್ ರವರೊಂದಿಗೆ ಮಾತುಕತೆ ನಡೆಸಿತು. ಆಗ ಬುಲೆಟ್ ಪ್ರಕಾಶ್ ಕೆಲವು ಸುಳಿವುಗಳನ್ನ ನೀಡಿದರು. ಅದನ್ನ ಕೇಳಿದ್ಮೇಲೆ ಕಿಚ್ಚ ಸುದೀಪ್ ಫ್ಯಾನ್ಸ್, ಬುಲೆಟ್ ಪ್ರಕಾಶ್ ವಿರುದ್ಧ ಸಮರ ಶುರು ಮಾಡಿದರು. ಅದಕ್ಕೆ ಸಾಕ್ಷಿ ಈ ಕಾಮೆಂಟ್.[ಬುಲೆಟ್ ಪ್ರಕಾಶ್ ಬೆಟ್ಟು ಮಾಡಿ ತೋರಿಸಿದ 'ಆ' ಪ್ರಖ್ಯಾತ ನಟ ಯಾರು.?]

ನೈತಿಕತೆ ಇಲ್ಲ.!

ಸುದೀಪ್ ಬಗ್ಗೆ ಮಾತನಾಡುವ ನೈತಿಕತೆ ಬುಲೆಟ್ ಪ್ರಕಾಶ್ ಗೆ ಇಲ್ವಂತೆ. ಅದಕ್ಕೆ ಕಾರಣ ತಿಳಿಯಲು ಈ ಕಾಮೆಂಟ್ಸ್ ಓದಿರಿ...

ಇದೆಲ್ಲ ಪಬ್ಲಿಸಿಟಿ ಗಿಮಿಕ್ ಅಂತೆ.!

ಪ್ರಚಾರ ಪ್ರಿಯ ಬುಲೆಟ್ ಪ್ರಕಾಶ್ ಪಬ್ಲಿಸಿಟಿಗಾಗಿ ಈ ಗಿಮಿಕ್ ಮಾಡಿದ್ರಂತೆ. ಹಾಗಂತ ಆರೋಪ ಮಾಡ್ತಿದ್ದಾರೆ ಸುದೀಪ್ ಫ್ಯಾನ್ಸ್. [ಬಾಂಬ್ ಹಾಕಿದ್ದು ಬುಲೆಟ್ ಪ್ರಕಾಶ್, ಖಡಕ್ ಉತ್ತರ ಕೊಟ್ಟಿದ್ದು ಜಗ್ಗೇಶ್.!]

ಬಾಯಿಗೆ ಬಂದಂತೆ ಬೈಯುತ್ತಿದ್ದಾರೆ

ಬುಲೆಟ್ ಪ್ರಕಾಶ್ ರವರ ಅಫೀಶಿಯಲ್ ಫೇಸ್ ಬುಕ್ ಪೇಜ್ ನಲ್ಲಿ, ಬುಲೆಟ್ ಪ್ರಕಾಶ್ ವಿರುದ್ಧ ಜನ ಬೇಕಾಬಿಟ್ಟಿ ಕಾಮೆಂಟ್ಸ್ ಮಾಡುತ್ತಿದ್ದಾರೆ.

ಟ್ರೋಲ್ ಶುರು

ಬುಲೆಟ್ ಪ್ರಕಾಶ್ ವಿರುದ್ಧ ಈಗಾಗಲೇ ಫೇಸ್ ಬುಕ್ ನಲ್ಲಿ ಟ್ರೋಲ್ಸ್ ಶುರು ಆಗಿದೆ.

ಸುದೀಪ್ ಅಭಿಮಾನಿಗಳು ಸುಮ್ನಿರಲ್ಲ.!

ಬುಲೆಟ್ ಪ್ರಕಾಶ್ ವಿರುದ್ಧ ಕಣ್ಣು ಕೆಂಪಗೆ ಮಾಡಿಕೊಂಡಿರುವ ಸುದೀಪ್ ಅಭಿಮಾನಿಯೊಬ್ಬ ಮಾಡಿರುವ ಕಾಮೆಂಟ್ ಇದು.

ಹೊಟ್ಟೆ ಉರಿ

ಸುದೀಪ್ ಕಂಡ್ರೆ ಬುಲೆಟ್ ಪ್ರಕಾಶ್ ಗೆ ಹೊಟ್ಟೆ ಉರಿಯಂತೆ.! ಯಾಕೆ ಅಂತ ನಿಮ್ಗೊತ್ತಾ.? ಗೊತ್ತಿಲ್ಲ ಅಂದ್ರೆ... ಈ ಕಾಮೆಂಟ್ ಓದಿ...

ಜಗಳ ಬೇಕಾ.?

ಈಗ ಇರುವ ಜಗಳವೇ ಸಾಕು. ಮತ್ತೊಮ್ಮೆ ವಿವಾದ ಯಾಕೆ ಬೇಕು ಎನ್ನುವುದು ಸಿನಿಪ್ರಿಯರೊಬ್ಬರ ಕಳಕಳಿ.

ಬುಲೆಟ್ ಪ್ರಕಾಶ್ ಬಗ್ಗೆ ಲೇವಡಿ

ಬುಲೆಟ್ ಪ್ರಕಾಶ್ ಬಗ್ಗೆ ಟ್ರೋಲ್ ಪೇಜ್ ಗಳು ಲೇವಡಿ ಮಾಡಿರುವುದು ಹೀಗೆ...

ಕಿತ್ತಾಟ ಶುರು

ಬುಲೆಟ್ ಪ್ರಕಾಶ್ ಫೇಸ್ ಬುಕ್ ಪೇಜ್ ನಲ್ಲಿ ಬೇರೆ ಬೇರೆ ನಟರ ಫ್ಯಾನ್ಸ್ ನಡುವೆಯೂ ಕಿತ್ತಾಟ ನಡೆಯುತ್ತಿದೆ.

ಸುದೀಪ್ ಪ್ರತಿಭಾವಂತ

ಸುದೀಪ್ ಪ್ರತಿಭಾವಂತ ಎಂದು ಕಿಚ್ಚನ ಅಭಿಮಾನಿಯೊಬ್ಬರು ಬರೆದಿರುವ ಈ ಕಾಮೆಂಟ್ ಓದಿರಿ...

ಶ್ರದ್ಧಾಂಜಲಿ

ಫೇಸ್ ಬುಕ್ ಟ್ರೋಲ್ ಗಳ ಮೂಲಕ ಕೆಲವರು ಬುಲೆಟ್ ಪ್ರಕಾಶ್ ಗೆ ಶ್ರದ್ಧಾಂಜಲಿ ಸಲ್ಲಿಸುತ್ತಿದ್ದಾರೆ.

ಏನು ಸಿಕ್ತು.?

ಒಬ್ಬ ದೊಡ್ಡ ನಟನ ಕುರಿತು ತೇಜೋವಧೆ ಮಾಡಿ 200 ರಿಂದ 850 ಫಾಲೋವರ್ಸ್ ಗಿಟ್ಟಿಸಿಕೊಂಡರಂತೆ ಬುಲೆಟ್ ಪ್ರಕಾಶ್.

ಮಾನನಷ್ಟ ಪ್ರಕರಣ

ಸುದೀಪ್ ಹೆಸರನ್ನ ಎಳೆದು ಮಾನಹಾನಿ ಮಾಡಿದ್ರೆ, ಮಾನನಷ್ಟ ಮೊಕದ್ದಮೆ ಹೂಡುವುದಾಗಿ ಸುದೀಪ್ ಅಭಿಮಾನಿಗಳು ಎಚ್ಚರಿಕೆ ನೀಡಿದ್ದಾರೆ.

ಸಾಲು ಸಾಲು ಕಾಮೆಂಟ್ಸ್

ಬುಲೆಟ್ ಪ್ರಕಾಶ್ ಮೇಲೆ ಸಿಟ್ಟು ಮಾಡಿಕೊಂಡಿರುವ ಸುದೀಪ್ ಅಭಿಮಾನಿಗಳು ಫೇಸ್ ಬುಕ್ ಹಾಗೂ ಟ್ವಿಟ್ಟರ್ ನಲ್ಲಿ ಮಾಡುತ್ತಿರುವ ಕಾಮೆಂಟ್ ಗಳು ಒಂದೆರಡಲ್ಲ. ಇವೆಲ್ಲ ಸ್ಯಾಂಪಲ್ ಅಷ್ಟೇ.

English summary
Kiccha Sudeep fans are annoyed with Kannada Actor Bullet Prakash for his statements in Facebook and Twitter.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada