For Quick Alerts
  ALLOW NOTIFICATIONS  
  For Daily Alerts

  ಒಟಿಟಿಯಲ್ಲಿ ಬರ್ತಿದೆ ಧನಂಜಯ್ 'ರತ್ನನ್ ಪ್ರಪಂಚ': ಯಾವಾಗ?

  By ಫಿಲ್ಮಿಬೀಟ್ ಡೆಸ್ಕ್
  |

  ಸ್ಯಾಂಡಲ್​ ವುಡ್ ಬಹುಬೇಡಿಕೆಯ ನಟರಲ್ಲಿ ಡಾಲಿ ಧನಂಜಯ್ ಕೂಡ ಒಬ್ಬರು. ಧನಂಜಯ್ ಸಿನಿಮಾಗಳನ್ನು ನೋಡಲು ಅಭಿಮಾನಿಗಳು ಸಹ ಕಾತರರಾಗಿದ್ದಾರೆ. ಸದ್ಯ ಧನಂಜಯ್ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಇದೀಗ ಧನಂಜಯ್ ನಟನೆಯ ಬಹುನಿರೀಕ್ಷೆಯ ರತ್ನನ್ ಪ್ರಪಂಚ ಸಿನಿಮಾ ಅಭಿಮಾನಿಗಳ ಮುಂದೆ ಬರಲು ಸಜ್ಜಾಗಿದೆ. ಈಗಾಗಲೇ ಟ್ರೈಲರ್ ಮೂಲಕ ಅಭಿಮಾನಿಗಳ ನಿರೀಕ್ಷೆ ಹೆಚ್ಚಿಸಿದ್ದ ರತ್ನನ್ ಪ್ರಪಂಚ ಸಿನಿಮಾದ ಬಿಡುಗಡೆಯ ದಿನಾಂಕ ಘೋಷಣೆಯಾಗಿದೆ.

  ಅಂದಹಾಗೆ ರತ್ನನ್ ಪ್ರಪಂಚ ಸಿನಿಮಾ ಚಿತ್ರಮಂದಿರಗಳಲ್ಲಿ ಬರ್ತಿಲ್ಲ. ಬದಲಿಗೆ ಒಟಿಟಿಯಲ್ಲಿ ಬಿಡುಗಡೆಯಾಗುತ್ತಿದೆ. ಮೊದಲ ಬಾರಿಗೆ ನಟ ಧನಂಜಯ್ ಒಟಿಟಿ ಪ್ರೇಕ್ಷಕರ ಮುಂದೆ ಬರ್ತಿದ್ದಾರೆ. ರತ್ನನ್ ಪ್ರಪಂಚ ಸಿನಿಮಾ ಅಕ್ಟೋಬರ್ 22ರಂದು ಅಮೆಜಾನ್ ಪ್ರೈಮ್ ಬಿಡುಗಡೆಯಾಗಲಿದೆ. ಈ ಕುರಿತು ಅಮೆಜಾನ್ ಪ್ರೈಮ್ ಹಾಗೂ ಧನಂಜಯ್ ಮಾಹಿತಿ ಹಂಚಿಕೊಂಡಿದ್ದಾರೆ. ಅಮೆಜಾನ್ ಪ್ರೈಮ್ ಈ ಕುರಿತು ಟ್ವೀಟ್ ಮಾಡಿದ್ದು, "ಒಂಬತ್ತು ಪಾತ್ರಗಳು, ಒಂದು ಕುತೂಹಲಕರ ಕಥೆ" ಎಂದು ಹೇಳಿದ್ದಾರೆ.

  ಇನ್ನು ಈ ಬಗ್ಗೆ ನಟ ಧನಂಜಯ್ ಟ್ವೀಟ್ ಮಾಡಿದ್ದು, "ನಗು+ ತಿರುವು+ ರೊಮ್ಯಾನ್ಸ್= ರತ್ನಕರನ ಪ್ರಪಂಚ" ಎಂದು ಬರೆದುಕೊಂಡಿದ್ದಾರೆ. ಈಗಾಗಲೇ ರತ್ನನ್ ಪ್ರಪಂಚ ಟ್ರೈಲರ್ ಮುಖಾಂತರ ಬಾರಿ ನಿರೀಕ್ಷೆ ಹುಟ್ಟುಹಾಕಿದೆ. ಅಂದಹಾಗೆ ಈ ಸಿನಿಮಾಗೆ 'ದಯವಿಟ್ಟು ಗಮನಿಸಿ' ಚಿತ್ರದ ಖ್ಯಾತಿಯ ನಿರ್ದೇಶಕ ರೋಹಿತ್ ಪದಕಿ ಆಕ್ಷನ್ ಕಟ್ ಹೇಳಿದ್ದಾರೆ.

  ಚಿತ್ರದಲ್ಲಿ ಧನಂಜಯ್ ಜೊತೆ ಕನ್ನಡದ ಹಿರಿಯ ನಟಿ ಉಮಾಶ್ರೀ ನಟಿಸಿದ್ದಾರೆ. ಧನಂಜಯ್ ತಾಯಿಯ ಪಾತ್ರದಲ್ಲಿ ಉಮಾಶ್ರೀ ಮಿಂಚಿದ್ದಾರೆ. ಅನೇಕ ವರ್ಷಗಳ ಬಳಿಕ ನಟಿ ಉಮಾಶ್ರೀ ಅಭಿಮಾನಿಗಳ ಮುಂದೆ ಬರ್ತಿದ್ದಾರೆ. ಈಗಾಗಲೇ ಬಿಡುಗಡೆಯಾಗಿರುವ ಟ್ರೈಲರ್ ಗೆ ಭಾರಿ ಮೆಚ್ಚುಗೆ ವ್ಯಕ್ತವಾಗಿರುವ ಹಿನ್ನಲೆ ಸಿನಿಮಾದ ಮೇಲೆ ನಿರೀಕ್ಷೆ ಕೂಡ ಹೆಚ್ಚಾಗಿದೆ. ಇನ್ನು ಚಿತ್ರದಲ್ಲಿ ನಾಯಕಿಯಾಗಿ ರೆಬಾ ಮೋನಿಕಾ ಕಾಣಿಸಿಕೊಂಡಿದ್ದಾರೆ.

  ಇನ್ನು ಉಳಿದಂತೆ ಸಿನಿಮಾದಲ್ಲಿ ರವಿಶಂಕರ್, ಅನುಪ್ರಭಾಕರ್, ವೈನಿಧಿ ಜಗದೀಶ್, ಅಚ್ಯುತ್ ಕುಮಾರ್, ನಟಿ ಶ್ರುತಿ ಕೂಡ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ರತ್ನನ್ ಪ್ರಪಂಚ ರತ್ನಾಕರನ ಜೀವನ ಮತ್ತು ಪ್ರಯಾಣದ ಸುತ್ತ ಕೇಂದ್ರೀಕರಿತವಾದ ಟ್ರಾವೆಲ್ ಕಾಮಿಡಿ ಡ್ರಾಮ. ಭಾರಿ ನಿರೀಕ್ಷೆಯೊಂದಿಗೆ ಒಟಿಟಿ ಪ್ರೇಕ್ಷಕರ ಮುಂದೆ ಮುಂದೆ ಬರ್ತಿರುವ ರತ್ನನ್ ಪ್ರಪಂಚನನ್ನು ಮೆಚ್ಚಿಕೊಳ್ಳುತ್ತಾರಾ ಎಂದು ಕಾದು ನೋಡಬೇಕು.

  English summary
  Actor Dhananjaya Starrer Ratnan Prapancha movie to Premiere on Amazon Prime Video from October 22.
  Tuesday, October 5, 2021, 14:24
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X