ಕನ್ನಡದ ಅಪೂರ್ವ ಪ್ರೇಮ ಚಲನಚಿತ್ರಗಳು

  ಪೌರಾಣಿಕ ಮತ್ತು ಐತಿಹಾಸಿಕ ಚಿತ್ರಗಳ ನಿರ್ಮಾಣಗಳ ಮೂಲಕ ಆರಂಭವಾದ ಕನ್ನಡ ಚಿತ್ರರಂಗ ನಂತರ ಸಮಾಜಿಕ, ಕೌಟುಂಬಿಕ ಚಿತ್ರಗಳತ್ತ ಗಮನ ಹರಿಸಿತು. ಮೊದಮೊದಲು ಹಾಸ್ಯ ಮತ್ತು ಪ್ರೀತಿ-ಪ್ರೇಮ ದೃಶ್ಯಗಳು ಚಿತ್ರಗಳ ಚಿಕ್ಕ ಭಾಗವಾಗಿದ್ದವು. ನಂತರ ಇವುಗಳನ್ನೇ ಪ್ರಮುಖ ಕೇಂದ್ರವಾಗಿರಿಸಿ ಹಲವು ಕನ್ನಡ ಚಿತ್ರಗಳು ತೆರೆಗೆ ಬಂದು ಯಶಸ್ವಿಯಾದವು. ಡಾ. ರಾಜ್ ರ ಎರಡು ಕನಸು, ನಾ ನಿನ್ನ ಮರೆಯಲಾರೆ ಮುಂತಾದ ಚಿತ್ರಗಳು, ಶಂಕರನಾಗ್ ರ ಗೀತಾ, ವಿಷ್ಣುವರ್ಧನ್ ರ ಬಂಧನ, ಅಂಬಿಯ ಒಲವಿನ ಉಡುಗೊರೆ, ರವಿಚಂದ್ರನ್ ರವರ ಪ್ರೇಮಲೋಕ, ಶಿವಣ್ಣನ ಜನುಮದ ಜೋಡಿ ಎಂಬ ಸಂಪೂರ್ಣ ಪ್ರೇಮ ಕಥಾಧರಿತ ಚಿತ್ರಗಳು ಕನ್ನಡ ಚಿತ್ರರಂಗಕ್ಕೆ ಹೊಸ ಭಾಷ್ಯಯನ್ನೇ ಬರೆದವು. 90 ರ ದಶಕದ ಪ್ರೇಮ ಚಿತ್ರಗಳಿಂದ ಹಿಡಿದು ಈ ಶತಮಾನದ ಮುಂಗಾರು ಮಳೆ ಚಿತ್ರಗಳವರೆಗೆ ಕನ್ನಡದ ಅಪೂರ್ವ ರೋಮ್ಯಾಂಟಿಕ್ ಚಿತ್ರಗಳು ಇಲ್ಲಿವೆ..

  1. ಎರಡು ಕನಸು

  ವಿಮರ್ಶಕರ ವಿಮರ್ಶೆ

  ಪ್ರವರ್ಗ

  Drama

  ಬಿಡುಗಡೆ ದಿನಾಂಕ

  1974

  ಬಾಲ್ಯದಿಂದ ಬೆಳೆದು ಬಂದ ಪ್ರೀತಿ ಮುದುಡಿ, ಮತ್ತೋರ್ವ ಯುವತಿಯನ್ನು ಕೈ ಹಿಡಿಯುವ ಅಧ್ಯಾಪಕನೊಬ್ಬ ತನ್ನ ಹೊಸ ಜೀವನಕ್ಕೆ ಹೊಂದಿಕೊಳ್ಳುವ ಸನ್ನಿವೇಶವನ್ನು ಚಿತ್ರ ಮನೋಘ್ನವಾಗಿ ಚಿತ್ರಸಿತು. ಚಿತ್ರದ ಗೀತೆಗಳು ಇಂದಿಗೂ ಜನಪ್ರಿಯವಾಗಿವೆ.

  2. ನಾ ನಿನ್ನ ಮರೆಯಲಾರೆ

  ವಿಮರ್ಶಕರ ವಿಮರ್ಶೆ

  ಪ್ರವರ್ಗ

  Romance

  ಬಿಡುಗಡೆ ದಿನಾಂಕ

  10 Sep 1976

  ಡಾ.ರಾಜ್ ಮತ್ತು ಲಕ್ಷ್ಮಿ ಜೋಡಿಯಲ್ಲಿ ಮೂಡಿಬಂದ ಈ ಚಿತ್ರ ಪ್ರೇಕ್ಷಕರ ಮನಗೆದ್ದು ಸುಮಾರು 25 ವಾರ ಪ್ರದರ್ಶನ ಕಂಡಿತು. ಉದಯಶಂಕರ್ ಸಾಹಿತ್ಯ ಮತ್ತು ರಾಜನ್-ನಾಗೇಂದ್ರ ಸಾಹಿತ್ಯದಲ್ಲಿ ಮೂಡಿಬಂದ ಹಾಡುಗಳು ಕೇಳುಗರ ಮನ ಸೆಳೆದವು. ನಾಯಕಿಯ ತಾಯಿಯ ಹಠದಿಂದ ಮುರಿದು ಬೀಳುವ ಪ್ರೀತಿ ಜೀವನದಲ್ಲಿ ಮತ್ತೊಮ್ಮೆ ಅನಿರೀಕ್ಷಿತವಾಗಿ ವಿಭಿನ್ನ ಸಂದರ್ಭದಲ್ಲಿ ಸಿಗುತ್ತದೆ,

  3. ಗೀತಾ

  ವಿಮರ್ಶಕರ ವಿಮರ್ಶೆ

  ಪ್ರವರ್ಗ

  Action

  ಬಿಡುಗಡೆ ದಿನಾಂಕ

  1981

  ಶಂಕರನಾಗ್ ನಿರ್ದೇಶನ ಮಾಡಿ ನಾಯಕನಾಗಿ ನಟಿಸಿದ್ದ ಈ ಚಿತ್ರ ಕನ್ನಡದ ಪ್ರಸಿದ್ಧ ರೋಮ್ಯಾಂಟಿಕ್ ಟ್ರ್ಯಾಜಿಡಿ ಚಿತ್ರಗಳಲ್ಲೊಂದು. ಮೊದಲ ಪ್ರೀತಿಯ ಕಳೆದುಕೊಂಡ ಬ್ಯಾಂಡ್ ಗಾಯಕನೊಬ್ಬ ಮತ್ತೆ ಪ್ರೀತಿಯಲ್ಲಿ ಬಿದ್ದಾಗ, ಆ ಪ್ರೀತಿಯೂ ಕೈ ಜಾರಿಹೋಗುವ ಸನ್ನಿವೇಶ ಉಂಟಾಗುತ್ತದೆ.

   
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X