For Quick Alerts
  ALLOW NOTIFICATIONS  
  For Daily Alerts

  ಮಾನಸಿಕ ಅಸ್ವಸ್ಥನ ಮುದ್ದಿನ 'ಮಡದಿ'ಯಾಗಿ ರಂಜಿತಾ

  By Rajendra
  |

  ಮಧ್ಯಮ ವರ್ಗದ ಕುಟುಂಬದ ಶಾರದೆಗೆ ಶ್ರೀಮಂತ ಕುಟುಂಬದ ಹುಡುಗನ ಜೊತೆ ಮದುವೆಯಾಗುತ್ತದೆ. ಆದರೆ ಅಲ್ಲಿಯವರೆಗೂ ಗೊತ್ತಿರದ ಸಂಗತಿಯೊಂದು ಶಾರದೆಗೆ ತಡವಾಗಿ ಗೊತ್ತಾಗುತ್ತದೆ. ಅದೇನೆಂದರೆ ತನ್ನ ಗಂಡ ಮಾನಸಿಕ ಅಸ್ವಸ್ಥ ಎಂದು.

  ಇದರಿಂದ ಆಘಾತಕ್ಕೊಳಗಾಗುವ ಶಾರದೆಗೆ ಆಕಾಶವೇ ಕಳಚಿ ಬಿದ್ದಂತಾಗುತ್ತದೆ. ಹಾಗೆಂದು ಗಂಡನೊಂದಿಗೆ ಸಂಬಂಧ ಕಳೆದುಕೊಳ್ಳಲು ಸಾಧ್ಯವಿಲ್ಲ. ಶ್ರೀಮಂತ ಮನೆತನದ ಸೊಸೆಯಾಗಿ ಮುಂದೇನು ಮಾಡುತ್ತಾಳೆ? ಇದು ಜೀ ಕನ್ನಡ ಆರಂಭಿಸಲಿರುವ ನೂತನ ಧಾರಾವಾಹಿ 'ಮಡದಿ' ಕಥೆ.

  ಈಟಿವಿ ಕನ್ನಡದ 'ಶುಭಮಂಗಳ' ಧಾರಾವಾಹಿಯಲ್ಲಿ ಗಮನಸೆಳೆದಿದ್ದ ರಂಜಿತಾ 'ಮಡದಿ' ಪಾತ್ರ ಪೋಷಿಸಿದ್ದಾರೆ. ಉಳಿದ ಪಾತ್ರವರ್ಗದಲ್ಲಿ ರಮೇಶ್ ಭಟ್, ಚಿತ್ರಾ ಶೆಣೈ ಇತರರಿದ್ದಾರೆ. ರಂಗನಾಥ್ ಪಾರ್ಥ ನಿರ್ದೇಶನದ ಧಾರಾವಾಹಿ ಇದು. ಸದ್ಯಕ್ಕೆ ಶ್ರೀರಂಗಪಟ್ಟಣದಲ್ಲಿ ಮಡದಿ ಚಿತ್ರೀಕರಣ ಭರದಿಂದ ಸಾಗುತ್ತಿದೆ. ಶೀಘ್ರದಲ್ಲೇ ನಿಮ್ಮ ಕನ್ನಡಿಗರ ಕಣ್ಮಣಿ ಜೀ ಕನ್ನಡದಲ್ಲಿ ಪ್ರಸಾರವಾಗಲಿದೆ. (ಏಜೆನ್ಸೀಸ್)

  English summary
  Zee Kannada has become the talk of the town for presenting heart warming stories to the audience. Now, it brings to you another compelling story "Madadi". Etv Kannada serial Shubhamangala fame Ranjitha plays lead role in Madadi. Soon the serial to be aired.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X