Don't Miss!
- News
Breaking; ಸಾಹಿತಿ, ವಿಮರ್ಶಕ ಕೆ. ವಿ. ತಿರುಮಲೇಶ್ ನಿಧನ
- Technology
ಜಿಯೋ ಗ್ರಾಹಕರೆ, ಈ ರೀಚಾರ್ಜ್ ಪ್ಲ್ಯಾನ್ ಅನ್ನು ಖಂಡಿತಾ ನೀವು ಇಷ್ಟ ಪಡ್ತೀರಿ!?
- Automobiles
'ಅಲ್ಟ್ರಾವೈಲೆಟ್ F77' ಹೇಗಿದೆ ಗೋತ್ತಾ.. ಇಲ್ಲಿದೆ ವಿಮರ್ಶೆ
- Lifestyle
ಫೆಬ್ರವರಿ ತಿಂಗಳಿನಲ್ಲಿ ಜನಿಸಿದವರ ಕುರಿತ ಆಸಕ್ತಿಕರ ಸಂಗತಿಗಳಿವು
- Sports
ನೀವೇ ನಮಗೆ ಸ್ಪೂರ್ತಿ: ಕಿರಿಯರ ಸಾಧನೆಗೆ ಹರ್ಮನ್ಪ್ರೀತ್ ಕೌರ್ ಮುಕ್ತಕಂಠದ ಶ್ಲಾಘನೆ
- Finance
ಹೊಸ ಆಫರ್: ಗೃಹ ಸಾಲದ ಬಡ್ಡಿದರ ಇಳಿಸಿದ ಎಸ್ಬಿಐ!
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
BBK9 : ಬಿಗ್ ಬಾಸ್‌ನಲ್ಲಿ ಹಳೆ ಫರೆಂಡ್ ಕಂಡು ಫುಲ್ ಖುಷಿಯಾದ ದಿವ್ಯಾ ಉರುಡುಗ!
ಬಿಗ್ ಬಾಸ್ ಮನೆಯ ಜರ್ನಿ ಇನ್ನು ಕೆಲವೇ ದಿನಗಳು ಎಂಬುದು ಎಲ್ಲರಿಗೂ ಗೊತ್ತು. ಈ ಒಂದು ವಾರ ಬಿಟ್ಟರೆ ಮುಂದಿನ ವಾರವೇ ಫೈನಲ್ ತಲುಪಲಿದ್ದಾರೆ. ಆದರೆ ಬಿಗ್ ಬಾಸ್ ಮನೆಯಲ್ಲಿ ಇನ್ನು ಕೂಡ ಎಂಟು ಜನ ಕಂಟೆಸ್ಟೆಂಟ್‌ಗಳಿದ್ದಾರೆ. ಫೈನಲ್‌ಗೆ ಹೋಗುವುದಕ್ಕೆ ಫೈನಲ್‌ಗೆ ಬರಬೇಕಾದ ಕಂಟೆಸ್ಟೆಂಟ್‌ಗಳನ್ನು ಉಳಿಸಿಕೊಂಡು ಉಳಿದವರನ್ನು ಎಲಿಮಿನೇಟ್ ಮಾಡುತ್ತಾರಾ ಅಂತ ಕಾಯ್ತಾ ಇದ್ರೆ, ಆ ಕಡೆ ಸ್ಪೆಷಲ್ ಗೆಸ್ಟ್ ಗಳ ಆಗಮನವೂ ಆಗಿದೆ.
ಯಾರು ಕೂಡ ಗೆಸ್ ಮಾಡದ ಗೆಸ್ಟ್ ಇಂದು ಮನೆಗೆ ಬಂದಿದ್ದಾರೆ. ಹಾವು ಏಣಿ ಆಟದಲ್ಲಿ ಜೊತೆಯಾಗಿದ್ದಾರೆ. ಮಂಜು ಪಾವಗಡ ಇಂದು ಬಿಗ್ ಬಾಸ್ ಮನೆಗೆ ಗೆಸ್ಟ್ ಆಗಿ ಬಂದಿದ್ದಾರೆ. ಇವತ್ತು ರಾತ್ರಿಯ ತನಕ ಸದಸ್ಯರ ಜೊತೆಗೆ ಇರಬಹುದು ಎಂದು ಅಂದಾಜಿಸಲಾಗಿದೆ.
BBK9:
ಬಿಗ್
ಬಾಸ್
ಮನೆಯೊಳಗೆ
ಅರುಣ್
ಸಾಗರ್
ಕಾಣಿಸುತ್ತಿಲ್ಲ..
ಎಲ್ಲಿ
ಹೋದ್ರು?

ಹಾಡು ಹಾಕಿ ಮಂಜಣ್ಣನ ಎಂಟ್ರಿ
ಮಾಮೂಲಿಯಂತೆ ಬಿಗ್ ಬಾಸ್ ಇಂದು ಕೂಡ ಟಾಸ್ಕ್‌ಗಳನ್ನು ನೀಡಿತ್ತು. ಅದರಂತೆ ಇಂದು ಹಾವು ಏಣಿ ಆಟವನ್ನು ನೀಡಿತ್ತು. ಆಟ ಶುರುವಾಗುವುದಕ್ಕೂ ಮುನ್ನ ಮನೆ ಮಂದಿ ಫುಲ್ ಗೊಂದಲದಲ್ಲಿ ಇದ್ದರು. ಹೇಗೆ ಆಡುವುದು, ಯಾರೆಲ್ಲಾ ಆಡುವುದು ಎಂದು. ಆ ಬಗ್ಗೆ ಯೋಚಿಸುತ್ತಿರುವಾಗಲೇ ಜೋರಾಗಿ ಹಾಡೊಂದು ಮೂಡಿ ಬಂತು. ಅದುವೇ ಕೋಲು ಮಂಡೆ ಜಂಗಮ ದೇವ. ಮನೆ ಮಂದಿಯೆಲ್ಲಾ ಯಾಕೆ ಎಂಬ ಗೊಂದಲ, ಒಂದು ಕ್ಷಣ ಗಾಬರಿಯಾಗಿದ್ದರು. ಈಗ ಯಾಕೆ ಈ ಹಾಡು ಎಂಬುದು. ಬಳಿಕ ಯಾರೋ ಬಂದಿದ್ದಾರೆ ಎಂಬುದು ಮನೆ ಮಂದಿಗೆ ಕನ್ಫರ್ಮ್ ಆಯ್ತು. ಮಂಜು ಒಳಗೆ ಬರುವುದಕ್ಕೂ ಮುನ್ನ ಮನೆ ಮಂದಿ ಹಾಡಿಗೆ ಕುಣಿದಿದ್ದಾರೆ. ಆಗ ಎಂಟ್ರಿ ಕೊಟ್ಟಿದ್ದೆ ಮಂಜು ಪಾವಗಡ.

ಹಳೆ ಗೆಳೆಯನನ್ನು ಕಂಡು ದಿವ್ಯಾ ಫುಲ್ ಖುಷಿ
ದಿವ್ಯಾ ಉರುಡುಗ ಪ್ರಸ್ತುತ ಕೂಡ ಎಲ್ಲರೊಟ್ಟಿಗೂ ಖುಷಿಯಾಗಿಯೇ ಇದ್ದಾರೆ. ಕಾಮಿಡಿ ಮಾಡಿಕೊಳ್ಳುತ್ತಾ, ಖರಾಬಾಗಿ ಹಾಡು ಬಂದರೂ ಹಾಡನ್ನು ಹೇಳುತ್ತಾ ಎಲ್ಲರೊಟ್ಟಿಗೂ ಮನರಂಜನೆಯಲ್ಲಿ ತೊಡಗಿದ್ದಾರೆ. ಆದರೆ ಹಳೆ ದೋಸ್ತಿಗಳನ್ನು ನೋಡಿದರೆ ಆಗುವ ಸಂತೋಷವೇ ಬೇರೆ. ಇವತ್ತು ಆಗಿದ್ದು ಅದೇ. ಬಿಗ್ ಬಾಸ್ ಮನೆಯೊಳಗೆ ಬಂದ ಮಂಜು ನೋಡಿದ ಕೂಡಲೇ ದಿವ್ಯಾ ಫುಲ್ ಖುಷಿಯಾಗಿದ್ದಾರೆ. ಓಡಿ ಹೋಗಿ ಹಗ್ ಮಾಡಿದ್ದಾರೆ. ಯಾಕಂದ್ರೆ ದಿವ್ಯಾ ಹಾಗೂ ಮಂಜು ಒಂದೇ ಸೀಸನ್‌ನಲ್ಲಿದ್ದವರು. ಹೀಗಾಗಿ ನೋಡಿದ ಕೂಡಲೇ ಸಿಕ್ಕಾಪಟ್ಟೆ ಖುಷಿಯಾಗಿದ್ದಾರೆ. ಬಂದ ಕೂಡಲೇ ಎಲ್ಲರನ್ನು ಹಗ್ ಮಾಡಿ ವಿಚಾರಿಸಿಕೊಂಡ ಮಂಜು, "ಡಿ ಹೇಗಿದ್ದೀಯಾ?" ಎಂದು ವಿಚಾರಿಸಿಕೊಂಡಿದ್ದಾರೆ. ದಿವ್ಯಾ ಫುಲ್ ಖುಷಿಯಾಗಿ ಚೆನ್ನಾಗಿದ್ದೀನಿ ಎಂದಿದ್ದಾರೆ.

ದಿವ್ಯಾರನ್ನು ಗೆಲ್ಲಿಸಿದ ಮಂಜು
ಹಾವು ಏಣಿ ಆಟದಲ್ಲಿ ದಿವ್ಯಾ ಹಿಂದೆ ಹಿಂದೆಯೇ ಉಳಿದುಕೊಳ್ಳುತ್ತಿದ್ದರು. ರೇಗಿಸಿಕೊಂಡು ರೇಗಿಸಿಕೊಂಡು, ಮಂಜುಗೆ ಅವಾಜ್ ಹಾಕಿದ್ದಾರೆ. ಮಂಜು ಕೂಡ ಸಮಾಧಾನ ಮಾಡುತ್ತಾ ಇದೇನು ನಾನು ಮಾಡುವುದಾ ಎಂದು ಹೇಳುತ್ತಲೆ ಕಾಯಿ ಹಾಕಿದ್ದಾರೆ. ಕಡೆಗೂ ದಿವ್ಯಾ ವಿನ್ ಆಗಿದ್ದಾರೆ. ಹಳೆ ದೋಸ್ತಿಯನ್ನು ಹಾವಿನ ಕೈಗೆ ಸಿಗದಂತೆ ಕಾಪಾಡಿದ್ದಾರೆ ಮಂಜು.

ಇವತ್ತು ಟಾಸ್ಕ್ ಆಡಿದ ಮಂಜು
ಇವತ್ತು ಬಿಗ್ ಬಾಸ್ ಮನೆಗೆ ಸೊಎಷಲ್ ಗೆಸ್ಟ್ ಆಗಿ ಮಂಜು ಪಾವಗಡ ಬಂದಿದ್ದಾರೆ. ಬಂದ ಕೂಡಲೇ ಹಾವು ಏಣಿ ಆಟದಲ್ಲಿ ಕಾಯಿ ಹಾಕುವುದು ಯಾರು ಎಂಬ ಗೊಂದಕ್ಕೆ ತೆರೆ ಬಿದ್ದಿದೆ. ಮಂಜು ಕಾಯಿ ಹಾಕುವ ಮೂಲಕ ಮನೆಯವರ ಟಾಸ್ಕ್ ಅನ್ನು ಹೆಚ್ಚಾಗಿ ಅವರೇ ಆಡಿದ್ದಾರೆ. ಆದರೆ ಮಂಜು ಎಂಟ್ರಿಯಿಂದ ಮನೆ ಮಂದಿ ಫುಲ್ ಖುಷಿಯಾಗಿದ್ದಾರೆ.