»   » ಕಲರ್ಸ್ ಕನ್ನಡದಲ್ಲಿ ಈ ವಾರದಿಂದ ಹೊಸ ಕತೆ 'ಪದ್ಮಾವತಿ'!

ಕಲರ್ಸ್ ಕನ್ನಡದಲ್ಲಿ ಈ ವಾರದಿಂದ ಹೊಸ ಕತೆ 'ಪದ್ಮಾವತಿ'!

Posted By:
Subscribe to Filmibeat Kannada

ಒಂದರ ಮೇಲೊಂದರಂತೆ ಯಶಸ್ವಿ ಕಾರ್ಯಕ್ರಮಗಳನ್ನ ನೀಡುತ್ತಿರುವ ಕಲರ್ಸ್ ಕನ್ನಡ ವಾಹಿನಿ ಈಗ ಮತ್ತೊಂದು ಹೊಸ ಧಾರವಾಹಿಯನ್ನ ವೀಕ್ಷಕರಿಗಾಗಿ ತರುತ್ತಿದೆ.

ಆಸ್ತಿಕ ಮತ್ತು ನಾಸ್ತಿಕರ ಮಧ್ಯೆ ನಡೆಯುವ ಕಥೆಯನ್ನಿಟ್ಟು ಒಂದು ಸುಂದರವಾದ ಮನರಂಜನೆಯನ್ನ ಹೊತ್ತು 'ಪದ್ಮಾವತಿ' ಧಾರವಾಹಿ ಮೂಡಿ ಬರುತ್ತಿದೆ.

ಈ ವಾರದಿಂದ ಶುರು 'ಪದ್ಮಾವತಿ'

ಕಲರ್ಸ್ ಕನ್ನಡ ವಾಹಿನಿಯಲ್ಲಿ ಈ ವಾರದಿಂದ 'ಪದ್ಮಾವತಿ' ಎಂಬ ಧಾರವಾಹಿ ಶುರುವಾಗುತ್ತಿದೆ. 'ಬಿಗ್ ಬಾಸ್' ಬೆನ್ನಲ್ಲೆ 'ಪದ್ಮಾವತಿ' ಎಂಬ ಮತ್ತೊಂದು ಧಾರವಾಹಿ ನಿಮ್ಮೆಲ್ಲರನ್ನ ರಂಜಿಸಲು ನಿಮ್ಮ ಮುಂದೆ ಬರುತ್ತಿದೆ.

ಆಸ್ತಿಕ ಮತ್ತು ನಾಸ್ತಿಕರ ಮಧ್ಯೆ ನಡೆಯುವ ಕಥೆ!

'ಪದ್ಮಾವತಿ' ಧಾರವಾಹಿ ತುಳಸಿ ಮತ್ತು ಸಾಮ್ರಾಟನ ಸುತ್ತಾ ಸಾಗುವ ಕತೆ. ಕಥಾನಾಯಕಿ ತುಳಸಿ ಹಳ್ಳಿಯಲ್ಲಿ ಬೆಳೆದ ಮುಗ್ದಮನಸ್ಸಿನ ಸ್ಪೂರದ್ರೂಪಿ ಹುಡುಗಿ. ಇಷ್ಟದೇವತೆ ಪದ್ಮಾವತಿಯೊಡನೆ ಅವಿನಭಾವ ಸಂಬಂಧ ಹೊಂದಿದ ತರುಣಿ, ಸಾಮ್ರಾಟ್ ಹೃದಯವಂತ, ತನ್ನ ಕುಟುಂಬವನ್ನ ಪ್ರೀತಿಸುವ ಜವಾಬ್ದಾರಿಯುತ ಹುಡುಗ. ಆದ್ರೆ, ನಾಸ್ತಿಕ. ಹೀಗೆ ನಾಸ್ತಿಕ ಮತ್ತು ಆಸ್ತಿಕರ ಮಧ್ಯೆ ನಡೆಯುವ ಕಥೆಯೇ ಪದ್ಮಾವತಿ.

ಕಲಾವಿದರು

ದೀಪ್ತಿ, ತ್ರಿವಿಕ್ರಮ, ಜಯಂತಿ ಅಮ್ಮ, ಚಿತ್ರ ಶಣೈ, ಅಶೋಕ್, ಅರುಣ್ ಬಾಲರಾಜ್ ಸೇರಿದಂತೆ ಹಲವರು ಅಭಿನಯಿಸುತ್ತಿದ್ದಾರೆ.

ಪ್ರತಿದಿನ ರಾತ್ರಿ 9.30 ಕ್ಕೆ

ಫೆಬ್ರವರಿ 6 ರಿಂದ ಪ್ರತಿದಿನ 9.30ಕ್ಕೆ ಪ್ರತಿ ಸೋಮವಾರದಿಂದ ಶುಕ್ರವಾರದವರೆಗೂ ಪ್ರಸಾರವಾಗಲಿದೆ.

English summary
Kannada Entertainment Channel Colors Kannada has come up with a new serial called 'Padmavathi' which will go on air from February 6th.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada