»   » ಹಾಲಿವುಡ್ ಶ್ರೇಷ್ಠ ನಿರ್ದೇಶಕನ ಧ್ವನಿ ಕೇಳಿ ಕಣ್ಣೀರಿಟ್ಟ ಪ್ರಕಾಶ್ ರೈ..

ಹಾಲಿವುಡ್ ಶ್ರೇಷ್ಠ ನಿರ್ದೇಶಕನ ಧ್ವನಿ ಕೇಳಿ ಕಣ್ಣೀರಿಟ್ಟ ಪ್ರಕಾಶ್ ರೈ..

Posted By:
Subscribe to Filmibeat Kannada

'ಮತ್ತೆ ವೀಕೆಂಡ್ ಬಂತು. ರಾತ್ರಿ 9 ಗಂಟೆ ಆಯ್ತು, ನಾನು ರಮೇಶ್ ಅರವಿಂದ್ ನಿಮ್ಮ ಮನೆಗೆ ಬಂದಾಯ್ತು..' ಎಂದು ಹೇಳುತ್ತಾ, ನಮ್ಮ ನಿಮ್ಮೆಲ್ಲರ ಅಚ್ಚುಮೆಚ್ಚಿನ, ಸದಾ ಸ್ಫೂರ್ತಿಯ ನಗೆಬೀರುವ ನಟ ರಮೇಶ್ ಅರವಿಂದ್ ಇಂದಿನಿಂದ(ಮಾರ್ಚ್ 25) ನಮಗೆಲ್ಲಾ ಸಾಧಕರ ಪರಿಚಯ ಮಾಡಿಕೊಡಲಿದ್ದಾರೆ.[ಪ್ರಕಾಶ್ ರೈ 'ಬಿರಿಯಾನಿ' ಕಥೆ ಕೇಳಿದ್ರೆ, ಯಪ್ಪಾ ಸ್ವಾಮಿ ಅಂತೀರಾ!]

ಅಂದಹಾಗೆ ನಾವು ಮೊದಲೇ ಹೇಳಿದಂತೆ 'ವೀಕೆಂಡ್ ವಿತ್ ರಮೇಶ್' ಮೂರನೇ ಸೀಸನ್ ನ ಮೊದಲ ಅತಿಥಿ ಬಹುಭಾಷಾ ನಟ ಪ್ರಕಾಶ್ ರೈ. ಇವರ ಸಾಧನೆಯ ಹಿಂದಿನ ಶ್ರಮ ಇಂದು 'ವೀಕೆಂಡ್ ವಿತ್ ರಮೇಶ್ 3' ಕಾರ್ಯಕ್ರಮದಲ್ಲಿ ಅನಾವರಣ ಗೊಳ್ಳಲಿದೆ.

ಆದರೆ ಜೀ ಕನ್ನಡ ವಾಹಿನಿ ಕಾರ್ಯಕ್ರಮಕ್ಕೂ ಮೊದಲು ಪ್ರಕಾಶ್ ರೈ ಸಾಧಕರ ಸೀಟ್ ಮೇಲೆ ಕುಳಿತು ಕಣ್ಣೀರು ಸುರಿಸಿರುವ ವಿಡಿಯೋ ತುಣುಕನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದೆ. ಈ ವಿಡಿಯೋ ದಲ್ಲಿ ಪ್ರಕಾಶ್ ರೈ 'ಗಳ ಗಳನೆ' ಕಣ್ಣೀರು ಸುರಿಸಿರುವುದಾದರೂ ಏಕೆ? ಅದನ್ನು ನಾವು ನಿಮಗೆ ಹೇಳ್ತೀವಿ....

ಜೀ ಕನ್ನಡ ವಾಹಿನಿಯ ಅದ್ಭುತ ಪ್ರಯತ್ನ

ಭಾರತದ ಕಿರುತೆರೆಯಲ್ಲೇ ಮೊದಲ ಬಾರಿಗೆ ಜೀ ಕನ್ನಡ ವಾಹಿನಿ ಅದ್ಭುತ ಸಾಹಸವೊಂದನ್ನು ಮಾಡಿದೆ. ಸಾಧಕ ಪ್ರಕಾಶ್ ರೈ ಅವರಿಗೆ ಹಾಲಿವುಡ್ ಶ್ರೇಷ್ಠ ನಿರ್ದೇಶಕರೊಂದಿಗಿನ ಕ್ಷಣಗಳನ್ನು ಮರುನೆನಪಿಸಿದೆ.['ವೀಕೆಂಡ್ ವಿತ್ ರಮೇಶ್' ಸಾಧಕರ ಆಯ್ಕೆ ಬಗ್ಗೆ ಯಾರಿಗೂ ತಿಳಿಯದ ವಿಷಯ..]

ಯಾರು ಆ ನಿರ್ದೇಶಕ?

ಅವರ ಹೆಸರು ಸ್ಟೀವನ್ ಸ್ಪೀಲ್ ಬರ್ಗ್. ಇವರು ಅಮೆರಿಕದ ಶ್ರೇಷ್ಠ ನಿರ್ದೇಶಕ, ನಿರ್ಮಾಪಕ ಮತ್ತು ಚಿತ್ರಕಥೆ ಬರಹಗಾರರು. ಹಾಲಿವುಡ್ ಚಿತ್ರರಂಗದಲ್ಲಿ ತಮ್ಮ ಸೃಜನಶೀಲತೆಯಿಂದ ಹೊಸ ಸಂಚಲನ ಹುಟ್ಟುಹಾಕಿದ ನಿರ್ದೇಶಕರು ಎಂತಲೇ ಖ್ಯಾತರಾಗಿದ್ದಾರೆ.['ವೀಕೆಂಡ್ ವಿತ್ ರಮೇಶ್'ಗೆ ಸಾಧಕರನ್ನು ಕರೆತರುವುದೇ ದೊಡ್ಡ ಚಾಲೆಂಜ್: ರಾಘವೇಂದ್ರ ಹುಣಸೂರು]

ಪ್ರಕಾಶ್ ರೈ ಗೆ ಸ್ಟೀವನ್ ಸ್ಪೀಲ್ ಬರ್ಗ್ ನೆನಪಿನ ಬುತ್ತಿ

ಅಂದಹಾಗೆ 'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮದಲ್ಲಿ ಜೀ ಕನ್ನಡ ವಾಹಿನಿ ಪ್ರಕಾಶ್ ರೈ ಗೆ ಹಾಲಿವುಡ್ ಶ್ರೇಷ್ಠ ನಿರ್ದೇಶಕನೊಂದಿಗಿನ ಹಳೇ ನೆನಪುಗಳನ್ನು ಉಣಬಡಿಸಿದೆ. ಆದರೆ ಪ್ರಕಾಶ್ ರೈ ಗೂ ಸ್ಟೀವನ್ ಸ್ಪೀಲ್ ಬರ್ಗ್ ಗೂ ಗೆಳತನ ಹೇಗೆ ಎಂಬ ಕುತೂಹಲಕಾರಿ ಮಾಹಿತಿಯನ್ನು ಇಂದು ರಾತ್ರಿ ಪ್ರಸಾರವಾಗುವ ಕಾರ್ಯಕ್ರಮ ನೋಡೇ ತಿಳಿದುಕೊಳ್ಳಿ.['ವೀಕೆಂಡ್ ವಿತ್ ರಮೇಶ್-3' ಸಾಧಕರ ಪಟ್ಟಿ ಬಹಿರಂಗ ಪಡಿಸಿದ ಜೀ ಕನ್ನಡ ವಾಹಿನಿ ಮುಖ್ಯಸ್ಥ!]

ಪ್ರಕಾಶ್ ರೈ ಹೊಗಳಿದ ಹಾಲಿವುಡ್ ನಿರ್ದೇಶಕ

'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮದಲ್ಲಿ ಕುಳಿತಿರುವ ಪ್ರಕಾಶ್ ರೈ ಗೆ ಹಾಲಿವುಡ್ ನಿರ್ದೇಶಕ ಸ್ಟೀವನ್ ಸ್ಪೀಲ್ ಬರ್ಗ್ 52 ನೇ ಹುಟ್ಟು ಹಬ್ಬದ ಶುಭಾಶಯಗಳನ್ನು ತಿಳಿಸಿದ್ದಾರೆ. ಜೊತೆಗೆ ಪ್ರಕಾಶ್ ರೈ ಜಾಗತಿಕ ಸಿನಿಮಾ ಕ್ಷೇತ್ರಕ್ಕೆ ನೀಡಿದ ಕೊಡುಗೆಯನ್ನು ಪ್ರಶಂಸಿಸಿದ್ದಾರೆ. ಈ ಬಗ್ಗೆ ಹೆಚ್ಚಿನ ಡೀಟೇಲ್ಸ್ ಅನ್ನು ಕಾರ್ಯಕ್ರಮದಲ್ಲೇ ನೋಡಿ.

ಪ್ರಕಾಶ್ ರೈ ಕಣ್ಣೀರು ಸುರಿಸಿದ್ದು ಏಕೆ?

ಹಾಲಿವುಡ್ ನಿರ್ದೇಶಕನ ಧ್ವನಿ ಕೇಳಿ ಪ್ರಕಾಶ್ ರೈ 'ಗಳ ಗಳನೆ' ಕಣ್ಣೀರು ಸುರಿಸಿದ್ದು ಏಕೆ? ಎಂಬುದನ್ನು ಇಂದು ರಾತ್ರಿ 9 ಕ್ಕೆ ಜೀ ಕನ್ನಡ ವಾಹಿನಿ ಟ್ಯೂನ್ ಮಾಡಿ 'ವೀಕೆಂಡ್ ವಿತ್ ರಮೇಶ್' ನೋಡಿ..

English summary
Prakash Rai becomes emotional in Weekend With Ramesh 3. Watch promo.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada