»   » ಕಿಚ್ಚ ಸುದೀಪ್ ಜೊತೆ ಮದುವೆಯಾಗುತ್ತಾರಂತೆ ತುಪ್ಪದ ಬೆಡಗಿ ರಾಗಿಣಿ!

ಕಿಚ್ಚ ಸುದೀಪ್ ಜೊತೆ ಮದುವೆಯಾಗುತ್ತಾರಂತೆ ತುಪ್ಪದ ಬೆಡಗಿ ರಾಗಿಣಿ!

Posted By:
Subscribe to Filmibeat Kannada

ನಟ ಕಿಚ್ಚ ಸುದೀಪ್ ಜೊತೆ ಗ್ಲಾಮರ್ ಕ್ವೀನ್ ರಾಗಿಣಿ ದ್ವಿವೇದಿ ಮದುವೆಯಾಗುತ್ತಾರಂತೆ. ಈ ವಿಷಯವನ್ನು ಸ್ವತಃ ರಾಗಿಣಿ ಅವರೇ ಇತ್ತೀಚಿಗೆ ಹೇಳಿಕೊಂಡಿದ್ದಾರೆ.

ಸುದೀಪ್ ನಟನೆಯ 'ವೀರ ಮದಕರಿ' ಸಿನಿಮಾದಲ್ಲಿ ರಾಗಿಣಿ ಮಿಂಚಿದ್ದರು. ಬಳಿಕ 'ಕೆಂಪೇಗೌಡ' ಸಿನಿಮಾದಲ್ಲೂ ಸಹ ಸುದೀಪ್ ಜೊತೆ ರಾಗಿಣಿ ನಟಿಸಿದ್ದರು. ಇದೀಗ ರಾಗಿಣಿ ದ್ವಿವೇದಿ ಕಿಚ್ಚ ಸುದೀಪ್ ಜೊತೆ ಮದುವೆಯಾಗುವ ಮಾತನ್ನು ಆಡಿದ್ದಾರೆ. ಮುಂದೆ ಓದಿ...[ತೂಕ ಇಳಿಸಿದ ರಾಗಿಣಿಗೆ ಫುಲ್ ಡಿಮ್ಯಾಂಡ್: ಒಂದೇ ದಿನಕ್ಕೆ ಸಿಕ್ಕಿದೆ 3 ಚಿತ್ರಗಳು]

ರಾಗಿಣಿ ಮಾತು

'ನಾನು ಸುದೀಪ್ ಅವರನ್ನು ಮದುವೆಯಾಗಲು ಇಷ್ಟ ಪಡುತ್ತೀನಿ' ಅಂತ ರಾಗಿಣಿ ಇತ್ತೀಚಿಗಷ್ಟೆ ಒಂದು ಮಾತನ್ನು ಹೇಳಿದ್ದಾರೆ.

ಸೂಪರ್ ಟಾಕ್ ಟೈಂ

ಕಲರ್ಸ್ ಸೂಪರ್ ವಾಹಿನಿಯ 'ಸೂಪರ್ ಟಾಕ್ ಟೈಂ' ಕಾರ್ಯಕ್ರಮದಲ್ಲಿ ರಾಗಿಣಿ ಈ ವಿಷಯವನ್ನು ಹೇಳಿದ್ದಾರೆ.[ಬರ್ತಡೇ ಪಾರ್ಟಿಯಲ್ಲಿ ಮೈಚಳಿ ಬಿಟ್ಟು ಕುಣಿದ 'ತುಪ್ಪದ ಬೆಡಗಿ' ರಾಗಿಣಿ]

Rapid ಫೈಯರ್ ರೌಂಡ್

ಕಾರ್ಯಕ್ರಮದ Rapid ಫೈಯರ್ ರೌಂಡ್ ನಲ್ಲಿ ಅಕುಲ್, ''ಸುದೀಪ್, ಯಶ್, ಲೂಸ್ ಮಾದ ಯೋಗಿ' ಈ ಮೂವರಲ್ಲಿ ನೀವು ಯಾರನ್ನು ಮದುವೆಯಾಗಲು ಇಷ್ಟ ಪಡುತ್ತೀರಾ..?'' ಅಂತ ಕೇಳಿದ ಪ್ರಶ್ನೆಗೆ ರಾಗಿಣಿ 'ಸುದೀಪ್' ಅಂತ ಉತ್ತರಿಸಿದ್ದಾರೆ.

ಯಶ್ ಜೊತೆ ಡೇಟಿಂಗ್

'ನೀವು ಯಾರ ಜೊತೆ ಡೇಟಿಂಗ್ ಮತ್ತು ಯಾರನ್ನು ಕೊಲೆ ಮಾಡುತ್ತೀರಾ' ಅಂತ ಅಕುಲ್ ಕೇಳಿದಕ್ಕೆ ರಾಗಿಣಿ ನಟ ಯಶ್ ಜೊತೆ ಡೇಟಿಂಗ್ ಮತ್ತು ಲೂಸ್ ಮಾದ ಯೋಗಿ ಅವರನ್ನು ಕೊಲೆ ಮಾಡುತ್ತೇನೆ ಅಂತ ಹೇಳಿದರು.[ಗೋವಾ ಬೀಚಲ್ಲಿ ಬಿಕಿನಿ ತೊಟ್ಟ ನಟಿ ರಾಗಿಣಿಯ ವಯ್ಯಾರ ನೋಡಿರಣ್ಣೋ.]

ಇದು ಆಟವಷ್ಟೆ

ರಾಗಿಣಿ ದ್ವಿವೇದಿ ಈ ನಟರ ಹೆಸರನ್ನು ತೆಗೆದುಕೊಂಡಿದ್ದು ಕೇವಲ Rapid ಫೈಯರ್ ಆಟಕಷ್ಟೆ. ಸೀರಿಯಸ್ ಆಗಿ ಅಲ್ಲ.

ಸೂಪರ್ ಹಿಟ್ ಜೋಡಿ

ರಾಗಿಣಿ-ಸುದೀಪ್ ಜೋಡಿಯ 'ವೀರ ಮದಕರಿ' ಮತ್ತು 'ಕೆಂಪೇಗೌಡ' ಸಿನಿಮಾ ಸೂಪರ್ ಹಿಟ್ ಆಗಿತ್ತು. ಮತ್ತೆ ಈ ಜೋಡಿ ಒಂದಾಗಿ ಹ್ಯಾಟ್ರಿಕ್ ಸಿನಿಮಾ ಮಾಡಲಿ ಎನ್ನುವುದು ಅಭಿಮಾನಿಗಳ ಆಸೆ.['ಸೂಪರ್' ಆಗೊಂದು 'ಟಾಕ್ ಶೋ', ಮೊದಲ ವಾರ ರಕ್ಷಿತಾ-ರಾಗಿಣಿ ಅತಿಥಿ]

English summary
Kannada Actress Ragini Dwivedi gives Bold answer on Sudeep in colors super channel's popular show Super Talk Time.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada