For Quick Alerts
  ALLOW NOTIFICATIONS  
  For Daily Alerts

  ನಿವೇದಿತಾ ಗೌಡ ಚೌಕಾಸಿ ಶಾಪಿಂಗ್ ಸೀಕ್ರೆಟ್!

  |

  ನಿವೇದಿತ ಗೌಡ ಮಿಸೆಸ್ ಇಂಡಿಯಾ ಸ್ಪರ್ಧೆಯಲ್ಲಿ ಭಾಗವಹಿಸಿದ ಬಗ್ಗೆ ಎಲ್ಲರಿಗೂ ಗೊತ್ತೇ ಇದೆ. ಈ ಬಗ್ಗೆ ಸದಾ ನಿವೇದಿತಾ ಗೌಡ ಮಾಹಿತಿಯನ್ನು ಹಂಚಿಕೊಳ್ಳುತ್ತಾ ಇದ್ದರು. ನಿವೇದಿತಾ ಗೌಡ ಅಭಿಮಾನಿ ಬಳಗ ಕೂಡ ದೊಡ್ಡದು. ಹಾಗಾಗಿ ನಿವೇದಿತಾ ಸಾಮಾಜಿಕ ಜಾಲತಾಣದಲ್ಲಿ ಏನೆ ಮಾಡಿದ್ರು, ಸಿಕ್ಕಾ ಪಟ್ಟೆ ವೈರಲ್ ಆಗಿ ಬಿಡುತ್ತದೆ.

  ಇತ್ತೀಚೆಗೆ ಮಿಸೆಸ್ ಇಂಡಿಯಾ ಸ್ಪರ್ಧೆಯಲ್ಲಿ ಗೆದ್ದು ಬಂದಿದ್ದರು. ಈ ಖುಷಿಯನ್ನು ನಿವೇದಿತಾ ಗೌಡ ತಮ್ಮ ಅಭಿಮಾನಿಗಳ ಜೊತೆಗೆ ಹಂಚಿಕೊಂಡಿದ್ದರು. ಕಿರೀಟ ಮುಡಿಗೇರಿಸಿಕೊಂಡ ಫೋಟೋವನ್ನು ಕೂಡ ನಿವೇದಿತಾ ಹಂಚಿಕೊಂಡಿದ್ದರು.

  ನಿವೇದಿತಾ ಗೌಡ ಹೊಸ ಡಯೆಟ್ ಪ್ಲ್ಯಾನ್: ಎಲ್ಲವೂ ಮಿಸೆಸ್ ಇಂಡಿಯಾಗಾಗಿ!ನಿವೇದಿತಾ ಗೌಡ ಹೊಸ ಡಯೆಟ್ ಪ್ಲ್ಯಾನ್: ಎಲ್ಲವೂ ಮಿಸೆಸ್ ಇಂಡಿಯಾಗಾಗಿ!

  ನಿವೇದಿತಾ ತಮ್ಮ ಯುಟ್ಯೂಬ್ ಚಾನೆಲ್‌ನಲ್ಲಿ ಹತ್ತಾರು ವಿಚಾರಗಳನ್ನು ಹಂಚಿಕೊಳ್ಳುತ್ತಾ ಇರುತ್ತಾರೆ. ಈಗ ತಮ್ಮ ಶಾಪಿಂಗ್ ವಿಚಾರಕ್ಕೆ ನಿವೇದಿತಾ ಮತ್ತೆ ಚರ್ಚೆಗೀಡಾಗಿದ್ದಾರೆ. ಚೌಕಾಸಿ ಮಾಡಿ ನಿವೇದಿತಾ ಶಾಪಿಂಗ್ ಮಾಡಿದ್ದಾರೆ. ಏನೆಲ್ಲಾ ಖರೀದಿಸಿದ್ದಾರೆ ಎನ್ನುವುದನ್ನು ಮುಂದೆ ಓದಿ...

  ಸಾಮಾನ್ಯರಂತೆ ನಿವೇದಿತಾ ಶಾಪಿಂಗ್!

  ಸಾಮಾನ್ಯರಂತೆ ನಿವೇದಿತಾ ಶಾಪಿಂಗ್!

  ಸಾಮಾನ್ಯವಾಗಿ ಸಿನಿಮಾ ತಾರೆಯರು ಅಂದ್ರೆ, ಅವರ ಲೈಫ್ ಸ್ಟೈಲ್ ಹೆಚ್ಚು ದುಬಾರಿಯಾಗಿರುತ್ತಾರೆ ಎನ್ನುವ ಕಲ್ಪನೆ ಇದೆ. ಜೊತೆಗೆ ಸೆಲೆಬ್ರೆಟಿಗಳು ಸಾಮಾನ್ಯ ಜನರ ರೀತಿ ಶಾಪಿಂಗ್ ಕೂಡ ಮಾಡುವುದಿಲ್ಲ. ಆದರೆ ನಿವೇದಿತಾ ಗೌಡ ಎಲ್ಲರಂತೆ ಅಲ್ಲ, ನಿವೇದಿತಾ ಸಾಮಾನ್ಯಳಂತೆ ಶಾಪಿಂಗ್ ಮಾಡಿ ಗಮನ ಸೆಳೆದಿದ್ದಾರೆ. ಅಲ್ಲದೇ ಚೌಕಾಸಿ ಮಾಡಿ ಹಲವು ವಸ್ತುಗಳನ್ನು ಖರೀಸಿ ಅಚ್ಚರಿ ಮೂಡಿಸಿದ್ದಾರೆ.

  ನಿವೇದಿತಾ ಗೌಡ ಚೌಕಾಸಿ ಶಾಪಿಂಗ್!

  ನಿವೇದಿತಾ ಗೌಡ ಚೌಕಾಸಿ ಶಾಪಿಂಗ್!

  ನಿವೇದಿತಾ ಕಮರ್ಷಿಯಲ್ ಸ್ಟ್ರೀಟ್‌ಗೆ ಶಾಂಪಿಂಗ್‌ಗಾಗಿ ಎಂಟ್ರಿ ಕೊಡುತ್ತಾರೆ. ಮೊದಲ ಹೆಜ್ಜೆಯಿಂದಲೇ ಚೌಕಾಸಿ ಶುರು ಮಾಡುತ್ತಾರೆ. ಯಾಕೆಂದರೆ ನಿವೇದಿತಾ ಅವರಿಗೆ 1000 ರೂಪಾಯಿಯಲ್ಲಿ ಹೆಚ್ಚಿನ ಸಾಮಾನುಗಳನ್ನು ಖರೀದಿಸುವ ಚಾಲೆಂಜ್ ಇದೆ. ಹೇರ್ ಕ್ಲಿಪ್ ತರುವುದನ್ನು ಮರೆತ ಕಾರಣ ನಿವೇದಿತಾ ಮೊದಲ ಬಾರಿಗೆ ಕ್ಲಿಪ್ಪನ್ನು ಹುಡುಕುತ್ತಾ ಕಮರ್ಷಿಯಲ್ ಸ್ಟ್ರೀಟ್‌ನಲ್ಲಿ ಓಡಾಡುತ್ತಾರೆ. ಹೇರ್ ಕ್ಲಿಪ್ ಆಯ್ಕೆ ಬಳಿಕ. ಅದನ್ನ ಚೌಕಾಸಿಮಾಡಿ ಪಡೆಯುತ್ತಾರೆ. 100 ರೂಪಾಯಿ ಬೆಲೆಯುಳ್ಳ ಹೇರ್ ಕ್ಲಿಪ್ಪನ್ನು 50 ರೂಪಾಯಿಗೆ ನಿವೇದಿತಾ ಚೌಕಾಸಿಮಾಡಿ ಖರೀದಿಸುತ್ತಾರೆ.

  200ರೂ. ಕಿವಿಯೊಲೆಗೆ ನಿವಿ ಕೊಟ್ಟಿದ್ದೆಷ್ಟು!

  200ರೂ. ಕಿವಿಯೊಲೆಗೆ ನಿವಿ ಕೊಟ್ಟಿದ್ದೆಷ್ಟು!

  ನಿವೇದಿತಾ ಶಾಪಿಂಗ್ ಲಿಸ್ಟ್‌ನಲ್ಲಿ ಕಿವಿಯೋಲೆ ಖರೀದಿಸುವ ಪ್ಲಾನ್ ಕೂಡ ಇತ್ತು. ಕಮರ್ಷಿಯಲ್ ಸ್ಟ್ರೀಟ್ ನಲ್ಲಿ ನಿವೇದಿತಾ ಗೌಡ ಕಿವಿಯೋಲೆಗಳನ್ನು ಖರೀದಿಸುತ್ತಾರೆ. ಆದರೆ ನಿವೇದಿತಾ ಆಯ್ಕೆಮಾಡಿದ ಕಿವಿಯೋಲೆಯ ಬೆಲೆ 200 ರೂಪಾಯಿ. ಹಾಗಾಗಿ ಕೊಂಚ ಕಡಿಮೆ ಬೆಲೆಗೆ ಕಿವಿಯೋಲೆಯನ್ನು ಹುಡುಕುತ್ತಾರೆ ಅದು ಕೂಡ 195 ರೂ. ಬೆಲೆಯುಳ್ಳದ್ದಾಗಿತ್ತು. ಚೌಕಾಸಿ ಮಾಡಿ ನೂರು ರೂಪಾಯಿಗೆ ಖರೀದಿಸಿದ್ದಾರೆ. ಜೊತೆಗೆ ನಿವೇದಿತಾ ಮುದ್ದಾದ ಕ್ಯಾಂಗರೂ ಗೊಂಬೆಯನ್ನು ಖರೀದಿ ಮಾಡುತ್ತಾರೆ. ಬೆಲೆ ಕಡಿಮೆ ಮಾಡಿಕೊಂಡ ಅಂಗಡಿಯವನಿಗೆ ಮತ್ತೆ ನಿಮ್ಮ ಅಂಗಡಿಗೆ ಬರುತ್ತೇನೆ ಎಂದು ಭರವಸೆಯನ್ನು ನೀಡಿದ್ದಾರೆ ನಿವೇದಿತಾ.

  1000 ರೂ.ಗೆ ಎಷ್ಟಯ ವಸ್ತು ಖರೀದಿ?

  1000 ರೂ.ಗೆ ಎಷ್ಟಯ ವಸ್ತು ಖರೀದಿ?

  ಇನ್ನು ನಿವೇದಿತ ಗೌಡ ಸಾವಿರ ರೂಪಾಯಿಯಲ್ಲಿ ಹೆಚ್ಚಿನ ಸಾಮಗ್ರಿಗಳನ್ನು ಖರೀದಿಸುವ ಚಾಲೆಂಜಿಂಗ್ ಸ್ವೀಕಾರ ಮಾಡಿದ್ದಾರೆ. ಈ ಕಾರಣಕ್ಕೆ ಆದಷ್ಟು ಹೆಚ್ಚು ಚೌಕಾಸಿ ಮಾಡಿ ಹೆಚ್ಚಿನ ವಸ್ತುಗಳನ್ನು ಖರೀದಿ ಮಾಡಿದ್ದಾರೆ. ಚೌಕಾಸಿ ಮಾಡಲು ಬರುವುದಿಲ್ಲ ಎಂದು ಹೇಳುತ್ತಲೇ ಹಲವಾರು ಐಟಂಗಳನ್ನು ಖರೀದಿಸಿದ್ದಾರೆ. ಆ್ಯಕ್ಸಕರೀಸ್, ಡೆಕೊರೇಟಿವ್ ವಸ್ತುಗಳು, ಬೊಂಬೆಗಳು, ಜಾಕೆಟ್ ಸೇರಿದಂತೆ ಹಲವು ವಸ್ತುಗಳನ್ನು ಖರೀದಿ ಮಾಡಿದ್ದಾರೆ.

  English summary
  Niveditha Gowda Shopping Seacret Reveal, Niveditha Shopping In Commercial Street. Know more.
  Tuesday, July 26, 2022, 10:00
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X