For Quick Alerts
  ALLOW NOTIFICATIONS  
  For Daily Alerts

  Actresses who reject RRR: ರಾಜಮೌಳಿ ಸಿನಿಮಾ ತಿರಸ್ಕರಿಸಿ ಮೋಸ ಹೋದ ನಟಿಯರು!

  |

  RRR ಚಿತ್ರ ರಿಲೀಸ್ ಆಗಿ ಸದ್ಯ ವಿಶ್ವಾದ್ಯಂತ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಈ ಚಿತ್ರದ ಪ್ರತಿ ಪಾತ್ರಗಳು ಕೂಡ ಪ್ರೇಕ್ಷಕರ ಮನ ಗೆದ್ದಿವೆ. ಸದ್ಯ ಚಿತ್ರ ಅಭೂತ ಪೂರ್ವ ಯಶಸ್ಸು ಕಾಣುತ್ತಿದೆ. ನಿರ್ದೇಶಕ ರಾಜಮೌಳಿ ಮತ್ತೊಮ್ಮೆ ತಮ್ಮ ನಿರ್ದೇಶನದ ಮೂಲಕ ಗೆದ್ದು ಬೀಗಿದ್ದಾರೆ. ಇಂತಹ ಚಿತ್ರದಲ್ಲಿ ಅಭಿನಯಿಸಲು ಅವಕಾಶ ಸಿಕ್ಕರೆ ಯಾರು ತಾನೆ ತಿರಸ್ಕರಿಸುತ್ತಾರೆ ಇಲ್ವಾ?.

  ಆದರೆ ಹಲವು ನಟಿಯರು ಈ ಚಿತ್ರವನ್ನು ಬಿಟ್ಟು ಕೈ ಸುಟ್ಟುಕೊಂಡಿದ್ದಾರೆ. ಬಾಲಿವುಡ್‌ ಮತ್ತು ಹಾಲಿವುಡ್‌ನ ಹಲವು ತಾರೆಯರಿಗೆ RRR ಚಿತ್ರದ ಆಫರ್ ಹೋಗಿತ್ತು. ಅದರೆ ತಮ್ಮದೆ ಕಾರಣಗಳಿಗೆ ಈ ನಟಯರು RRR ಚಿತ್ರವನ್ನು ತಿರಸ್ಕರಿಸಿದ್ದಾರೆ. ಈ ಹಿಂದೆ ಬಾಹುಬಲಿ ಚಿತ್ರದಲ್ಲಿ ನಟಿಸುವ ಅವಕಾಶವನ್ನು ಕಳೆದುಕೊಂಡಿದ್ದರು ನಟಿ ಶ್ರೀದೇವಿ. ಬಳಿಕ ಆ ಪಾತ್ರ ರಮ್ಯ ಕೃಷ್ಣ ಪಾಲಾಯಿತು.

  ಆದರೆ ಕೆಲವು ನಟಿಮಣಿಯರು ಈ ಚಿತ್ರದ ಆಫರ್ ತಿರಸ್ಕರಿಸಿದ್ದಾರೆ. ಇದು ಅಚ್ಚರಿ ಎನಿಸಿದರು ಕೂಡ ನಿಜ. ಈ ನಟಿಯರು ತಮ್ಮ ಪಾತ್ರಗಳಲ್ಲಿ ಬಿಟ್ಟ ಕಾರಣಕ್ಕೆ ಬೇರೆ ಕಲಾವಿದರು ಆಯ್ಕೆ ಆಗಿದ್ದಾರೆ. ಈ ಚಿತ್ರದ ಭಾಗವಾದ ಕಲಾವಿದರು ಸದ್ಯ ಸಕ್ಸಸ್ ಖುಷಿಯಲ್ಲಿ ಇದ್ದಾರೆ. ಈ ಚಿತ್ರ ಬಿಟ್ಟ ನಟಿಯರು ಈಗ RRR ಚಿತ್ರದ ದೊಡ್ಡ ಯಶಸ್ಸನ್ನು ಮಿಸ್ ಮಾಡಿಕೊಳ್ಳುತ್ತಾ ಇದ್ದಾರೆ. ಹಾಗಿದ್ದರೆ ಆ ನಟಿಯರು ಯಾರು ಎನ್ನುವ ಬಗ್ಗೆ ಮುಂದೆ ಓದಿ...

  RRR Day 3 Box Office Collection: ಮೂರೇ ದಿನದಲ್ಲಿ 500 ಕೋಟಿ ಲೂಟಿ ಮಾಡಿದ್ದೇಗೆ RRR?RRR Day 3 Box Office Collection: ಮೂರೇ ದಿನದಲ್ಲಿ 500 ಕೋಟಿ ಲೂಟಿ ಮಾಡಿದ್ದೇಗೆ RRR?

  ಶ್ರದ್ಧಾ ಕಪೂರ್‌ಗೆ ಬಂದಿತ್ತು RRR ಆಫರ್!

  ಶ್ರದ್ಧಾ ಕಪೂರ್‌ಗೆ ಬಂದಿತ್ತು RRR ಆಫರ್!

  ಪ್ರಭಾಸ್ ಅಭಿನಯದ ಆಕ್ಷನ್ ಥ್ರಿಲ್ಲರ್ 'ಸಾಹೋ' ಚಿತ್ರದ ಮೂಲಕ ಶ್ರದ್ಧಾ ಕಪೂರ್ ಟಾಲಿವುಡ್‌ಗೆ ಪಾದಾರ್ಪಣೆ ಮಾಡಿದರು. ನಂತರ RRR ಚಿತ್ರದ ಜೋನ್ಸ್ ಪಾತ್ರವನ್ನು ಆಫರ್ ಮಾಡಲಾಗಿತ್ತು. ಆದರೆ ಶ್ರದ್ಧಾ ಕಪೂರ್ ಮೊದಲೇ ಹೆಚ್ಚು ಸಿನಿಮಾಗಳನ್ನು ಒಪ್ಪಿಕೊಂಡ ಕಾರಣ ಅನಿವಾರ್ಯವಾಗಿ RRR ಚಿತ್ರವನ್ನು ಕೈ ಬಿಡಬೇಕಾಯಿತು.

  RRR ಕೈ ಬಿಟ್ಟ ನಟಿ ಪರಿಣಿತಿ ಚೋಪ್ರಾ!

  RRR ಕೈ ಬಿಟ್ಟ ನಟಿ ಪರಿಣಿತಿ ಚೋಪ್ರಾ!

  ಇನ್ನು ನಟಿ ಪರಿಣಿತಿ ಚೋಪ್ರಾ, ಈ ಹಿಂದೆ ತಮ್ಮ ಕೇಸರಿ ಚಲನಚಿತ್ರದ ಪ್ರಚಾರದ ವೇಳೆ ಮಾಧ್ಯಮ ಸಂವಾದದ ಸಂದರ್ಭದಲ್ಲಿ, RRR ನಲ್ಲಿ ನಟಿಸುವ ಬಗ್ಗೆ ಕೇಳಲಾಗಿತ್ತು. ಪರಿಣಿತಿ ಚೋಪ್ರಾಗೂ ಕೂಡ RRR ಚಿತ್ರದಲ್ಲಿ ಅಭಿನಯಿಸುವ ಅವಕಾಶ ಬಂದಿತ್ತಂತೆ. ಆದರೆ ಕಾರಣಾಂತರಗಳಿಂದ ಅದು ಸಾಧ್ಯವಾಗಿಲ್ಲ. ಆದರೆ ಈಗ ಚಿತ್ರದ ಯಶಸ್ಸು, ಈ ಚಿತ್ರದಲ್ಲಿ ಅಭಿನಯಿಸ ಬೇಕಿತ್ತು ಎಂದೆನಿಸುವಂತೆ ಮಾಡಿದೆ.

  RRR ಚಿತ್ರ ಕೈ ಬಿಟ್ಟ ಆಮಿ ಜಾಕ್ಸನ್!

  RRR ಚಿತ್ರ ಕೈ ಬಿಟ್ಟ ಆಮಿ ಜಾಕ್ಸನ್!

  ಆಮಿ ಜಾಕ್ಸನ್‌ ಮೊರೆ ಹೋಗಿದ್ದ ನಿರ್ದೇಶಕ ರಾಜಮೌಳಿ, ಈಕೆಗೆ ಚಿತ್ರದ ಪ್ರಮುಖ ಪಾತ್ರವನ್ನು ನೀಡಿದ್ದರಂತೆ. ಆದರೆ ಈ ಚಿತ್ರದಲ್ಲಿ ನಟಿಸಲು ಆಮಿಗೂ ಕೂಡ ಸಾಧ್ಯ ಆಗಿಲ್ಲ. ಈ ಮೊದಲು ಆಮಿ 'ಐ' ಮತ್ತು 'ರೋಬೊ 2.0'ನಲ್ಲಿ ನಾಯಕಿಯಾಗಿ ಹೆಸರು ವಾಸಿಯಾದ್ದರು. RRR ಚಿತ್ರದಲ್ಲೂ ಪ್ರಮುಖ ಪಾತ್ರವನ್ನು ಮಾಡಬೇಕಿತ್ತು. ಆದರೆ ಆಮಿ ಇತ್ತೀಚೆಗೆ ಮಗುವಿಗೆ ಜನ್ಮ ನೀಡಿದ್ದರಿಂದ ಈ ಚಿತ್ರದ ಆಫರ್‌ ಅನ್ನು ತಿರಸ್ಕರಿಸಿದರು.

  ಡೈಸಿ ಎಡ್ಗರ್ ಜೋನ್ಸ್ ಚಿತ್ರದ ಮುಖ್ಯ ಪಾತ್ರದಲ್ಲಿ ಇರಬೇಕಿತ್ತು!

  ಡೈಸಿ ಎಡ್ಗರ್ ಜೋನ್ಸ್ ಚಿತ್ರದ ಮುಖ್ಯ ಪಾತ್ರದಲ್ಲಿ ಇರಬೇಕಿತ್ತು!

  ಇನ್ನು ಬ್ರಿಟಿಷ್ ನಟಿ ಡೈಸಿ ಎಡ್ಗರ್ ಜೋನ್ಸ್ ಕೂಡ RRR ಚಿತ್ರವನ್ನು ತಿರಸ್ಕರಿಸಿದ್ದಾರೆ. ನಾರ್ಮಲ್ ಪೀಪಲ್ ಎಂಬ ಕಿರುಸರಣಿಯಲ್ಲಿ ಮರಿಯಾನ್ನೆ ಶೆರಿಡನ್ ಪಾತ್ರಕ್ಕೆ ಹೆಚ್ಚು ಪ್ರಸಿದ್ಧಿ ಪಡೆದು ಕೊಂಡಿದ್ದರು. ಈಕೆ RRR ಸಿನಿಮಾದಲ್ಲಿ ನಾಯಕಿಯಾಗಿ ನಟಿಸಬೇಕಿತ್ತು. ಆದರೆ ಈ ಚಿತ್ರವನ್ನು ತಿರಸ್ಕರಿಸಿ ಕೈ ಸುಟ್ಟು ಕೊಂಡಿದ್ದಾರೆ.

  English summary
  Here Is List Of Heroins Who Reject RRR Movie, Its Bad Luck For Them.
  Tuesday, March 29, 2022, 10:57
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X