twitter
    For Quick Alerts
    ALLOW NOTIFICATIONS  
    For Daily Alerts

    ಮಹೇಶ್ ಬಾಬು ರಾಮಾಯಣಕ್ಕೆ 500 ಕೋಟಿ ಹೂಡಿಕೆ!

    |

    ಅಬ್ಬಬ್ಬಾ ಈಗ ಎಲ್ಲಿ ನೋಡಿದರೂ, ಯಾವುದೇ ಸಿನಿಮಾ ಬಜೆಟ್, ನಟರ ಸಂಭಾವನೆ ಹೆಚ್ಚಳದ ಸುದ್ದಿಗಳನ್ನ ಕೇಳಿದರೆ ಅದು 100 ಕೋಟಿಗಳ ಲೆಕ್ಕದಲ್ಲೇ ಇರುತ್ತದೆ. ಇದು ಇತ್ತೀಚೆಗೆ ಹೆಚ್ಚಾಗಿದೆ ಕೂಡ. ಪುಷ್ಪ ಸಿನಿಮಾದ ಬಳಿಕ ಅಲ್ಲು ಅರ್ಜುನ್‌ಗೆ 100 ಕೋಟಿ ಸಂಭಾವನೆ, ಪುಷ್ಪ 2 ಚಿತ್ರಕ್ಕೆ 400 ಕೋಟಿ ಆಫರ್, ಅನುಷ್ಕಾ ಶರ್ಮಾಗೆ ಒಟಿಟಿಯಿಂದ 400 ಕೋಟಿ ಆಫರ್, ರಾಧೆ ಶ್ಯಾಮ್ ಚಿತ್ರಕ್ಕೆ 400 ಕೋಟಿ ಆಫರ್. ಹೀಗೆ ಹಲವಾರು ಸುದ್ದಿಗಳು ಈ ನೂರು ಕೋಟಿಯ ಸುತ್ತಲೂ ಹರಿದಾಡುತ್ತಿದೆ.

    ಈಗ ಈ ಸಾಲಿಗೆ ನಟ ಮಹೇಶ್ ಬಾಬು ಕೂಡ ಸೇರಿ ಕೊಂಡಿದ್ದಾರೆ. ನಟ ಮಹೇಶ್ ಬಾಬು ಪ್ಯಾನ್ ಇಂಡಿಯಾ ಸಿನಿಮಾಗೆ 500 ಕೋಟಿ ರೂ. ಬಂಡವಾಳ ಹೂಡಲಾಗಿದೆ ಎನ್ನುವ ಸುದ್ದಿ ಹೊರ ಬಂದಿದೆ.

    ನಟ ಮಹೇಶ್ ಬಾಬು ರಾಮನ ಪಾತ್ರದಲ್ಲಿ ಅಭಿನಯಿಸುತ್ತಾರೆ ಎನ್ನುವ ವಿಚಾರ ಈಗಾಗಲೇ ಹಲವು ಬಾರಿ ಸದ್ದು ಮಾಡಿದೆ‌. ಇದೇ‌ ಚಿತ್ರದ‌ ವಿಚಾರವಾಗಿಯೇ ಈಗ ನಟ ಮಹೇಶ್ ಬಾಬು ಮತ್ತೆ ಸುದ್ದಿಯಲ್ಲಿದ್ದಾರೆ. ಈ ಚಿತ್ರಕ್ಕೆ ಹೂಡಲಾಗಿರುವ ಬಂಡವಾಳದ ಬಗ್ಗೆ ಹೊಸ ಸುದ್ದಿ ಹರಿದಾಡುತ್ತಿದೆ.

    Mahesh Babu Ramayana Movie Budget Is Likely To Be 500 Crore
    ಮಹೇಶ್ ಬಾಬು ತೆಲುಗು ಸಿನಿಮಾರಂಗದ ಟಾಪ್ ನಟ. ಇವರ ಕೆಲವೊಂದು ಸಿನಿಮಾಗಳು ಹಿಂದಿಗೆ ಡಬ್ ಆಗಿ ಕಿರುತೆರೆಯಲ್ಲಿ ಪ್ರಸಾರಗೊಂಡಿವೆ. ಆದರೆ ಪ್ಯಾನ್ ಇಂಡಿಯಾ ಕಾನ್ಸೆಪ್ಟ್‌ನಲ್ಲಿ ಒಟ್ಟಿಗೆ ಹಲವು ಭಾಷೆಗಳಲ್ಲಿ ರಿಲೀಸ್ ಆಗಿಲ್ಲ. ಈಗ ಬಾಲಿವುಡ್‌ನಿಂದ ಮಹೇಶ್ ಬಾಬುಗೆ ಅಂತಹ ಆಫರ್ ಬಂದಿದೆ. ನಿರ್ದೇಶಕ ನಿತೇಶ್ ತಿವಾರಿ ನಿರ್ದೇಶನ ಮಾಡಲಿರುವ 'ರಾಮಾಯಣ' ಚಿತ್ರದಲ್ಲಿ ರಾಮ ಪಾತ್ರಕ್ಕೆ ಮಹೇಶ್ ಬಾಬು ಅವರೊಂದಿಗೆ ಮಾತುಕತೆ ನಡೆಸಲಾಗಿದೆ. ಈ ಸುದ್ದಿ ಕೆಲವು ದಿನಗಳಿಂದ ಹರಿದಾಡುತ್ತಿದೆ.

    Mahesh Babu Ramayana Movie Budget Is Likely To Be 500 Crore
    ಸದ್ಯದ ಹೊಸ ವಿಚಾರ ಅಂದರೆ ಈ ಚಿತ್ರಕ್ಕಾಗಿ ಚಿತ್ರ ತಂಡ ಬರೋಬ್ಬರಿ 500 ಕೋಟಿ ರೂ. ಬಂಡವಾಳ ಹೂಡಲಾಗುತ್ತಿದೆಯಂತೆ. ಇನ್ನು ಮಹೇಶ್ ಬಾಬು ರಾಮನ ಲುಕ್‌ಗಾಗಿ ಕೂಡ ಹೆಚ್ಚಿನ ಬಜೆಟ್ ನಿಗದಿ ಆಗಿದೆಯಂತೆ. ಚಿತ್ರದ ಬಜೆಟ್ ಬಗ್ಗೆ ಚಿತ್ರ ತಂಡದ ಮೂಲಗಳಿಂದ ರಿವೀಲ್ ಆಗಿದೆ. ಆದರೆ ಸಿನಿಮಾದಲ್ಲಿ ರಾಮನ ಪಾತ್ರ ಮಾಡಲು ಇಬ್ಬರು ನಟರನ್ನು ಚಿತ್ರತಂಡ ಅಪ್ರೋಚ್ ಮಾಡಿದೆ. ಮಹೇಶ್ ಬಾಬು ಜೊತೆಗೆ ರಣ್ಬೀರ್ ಕಪೂರ್‌ಗೂ ಕೂಡ ಚಿತ್ರದ ಸ್ಕ್ರಿಪ್ಟ್ ಹೇಳಲಾಗಿದೆಯಂತೆ. ಆದರೆ ಸಿನಿಮಾದಲ್ಲಿ ರಾಮನ ಪಾತ್ರ ಮಾಡುವವರು ಯಾರು ಎನ್ನುವ ಬಗ್ಗೆ ಇನ್ನು ಕೂಡ ನಿರ್ಧರಿಸಲಾಗಿಲ್ಲ.‌ ಅದರೆ ಹೆಚ್ಚಾಗಿ ಮಹೇಶ್ ಬಾಬು ಅವರ ಹೆಸರೇ ಕೇಳಿ ಬರ್ತಿದೆ.

    ಒಂದು ವೇಳೆ ಈ ಚಿತ್ರಕ್ಕೆ ಮಹೇಶ್ ಬಾಬು ಅವರೇ ನಾಯಕನಾದರೆ, ಅವರ ಸಿನಿಮಾ ಜರ್ನಿಯಲ್ಲಿ ಈ ಚಿತ್ರ ಹೊಸ ದಾಖಲೆ ಬರೆಯಲಿದೆ.

    English summary
    Mahesh Babu Ramayana Movie Budget Is Likely To Be 500 Crore, Know More
    Thursday, January 27, 2022, 17:13
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X