»   » ಎಲ್ಲರ ಬಾಯಿಗೆ ಗೋದ್ರೇಜ್ ಬೀಗ ಹಾಕಿದ ದರ್ಶನ್, ಸುದೀಪ್

ಎಲ್ಲರ ಬಾಯಿಗೆ ಗೋದ್ರೇಜ್ ಬೀಗ ಹಾಕಿದ ದರ್ಶನ್, ಸುದೀಪ್

Posted By: ಹರಾ
Subscribe to Filmibeat Kannada
For Quick Alerts
ALLOW NOTIFICATIONS
For Daily Alerts

  ಕುಚ್ಚಿಕ್ಕೂ ಗೆಳೆಯರು ಕಿಚ್ಚ ಸುದೀಪ್ ಮತ್ತು ಚಾಲೆಂಜಿಂಗ್ ಸ್ಟಾರ್ ದರ್ಶನ್ ಮಧ್ಯೆ ಎಲ್ಲವೂ ಸರಿಯಿಲ್ಲ. ''ನನಗೆ ನೀನು, ನಿನಗೆ ನಾನು'' ಅಂತಿದ್ದ ಆಪ್ತಮಿತ್ರರ ನಡುವೆ ವೈಷಮ್ಯ ಹೊಗೆಯಾಡುತ್ತಿದೆ. ಎಲ್ಲೇ ಹೋದರೂ ಜಂಟಿಯಾಗೇ ಹೋಗುತ್ತಿದ್ದ ಈ ಗೆಳೆಯರಿಗೆ, ಈಗ ಒಬ್ಬರ ಮುಖವನ್ನು ಕಂಡರೆ ಮತ್ತೊಬ್ಬರಿಗೆ ಆಗಲ್ಲ!

  ಹೀಗಂತ ಗಾಂಧಿನಗರದಲ್ಲಿ ಕಾಗಕ್ಕ-ಗುಬ್ಬಕ್ಕ ಕಥೆ ದಿನಕ್ಕೊಂದರಂತೆ ಕಳೆದ ಎರಡು ತಿಂಗಳಿನಿಂದ ಕೇಳಿಬರುತ್ತಲೇ ಇದೆ. ಇದಕ್ಕೆ ತಕ್ಕಂತೆ ಸುದೀಪ್ ದರ್ಶನ್ ಕೂಡ ಎಲ್ಲೂ ಮುಖಾಮುಖಿಯಾಗುತ್ತಿರಲಿಲ್ಲ. ಒಬ್ಬರು ನಾಪತ್ತೆಯಾದ ನಂತ್ರ ಮತ್ತೊಬ್ಬರು ಪ್ರತ್ಯಕ್ಷವಾಗುತ್ತಿದ್ದರು. [ಆಪ್ತಮಿತ್ರ ಸುದೀಪ್ ಎದುರಿಗೆ ದರ್ಶನ್ ಬರಲ್ಲ! ಯಾಕೆ?]

  Sudeep and Darshan seen together in Raate audio launch1

  ಅದಕ್ಕೆ ಮೊನ್ನೆಯಷ್ಟೇ ನಡೆದ ಸಿಸಿಎಲ್ 5ನೇ ಆವೃತ್ತಿಯ ಜರ್ಸಿ ಬಿಡುಗಡೆ ಸಮಾರಂಭ ಮತ್ತು ಅಣ್ಣಾವ್ರ ಸ್ಮರಣಾರ್ಥ ಅರಮನೆ ಮೈದಾನದಲ್ಲಿ ನಡೆದ ಕಾರ್ಯಕ್ರಮಗಳೇ ಸಾಕ್ಷಿ. ಒಟ್ಟಾಗಿ ಕಾಣಿಸಿಕೊಳ್ಳಬೇಕಾದ ಕಾರ್ಯಕ್ರಮಗಳಲ್ಲೇ ಮೂತಿ ತಿರುಸಿದ್ದ ಈ ಗೆಳೆಯರು, ಈಗ ಒಂದಾಗಿದ್ದಾರೆ!

  ಹಾಗೆ ಒಂದೇ ವೇದಿಕೆಯಲ್ಲಿ ಇಬ್ಬರನ್ನೂ ಒಟ್ಟಾಗಿ ನಿಲ್ಲಿಸಿದ ಖ್ಯಾತಿ ನಿರ್ದೇಶಕ ಎ.ಪಿ.ಅರ್ಜುನ್ ಗೆ ಸಲ್ಲಬೇಕು. ಚಡ್ಡಿ-ದೋಸ್ತ್ ಗಳಿಬ್ಬರು ಒಂದೇ ಸಮಯಕ್ಕೆ ಹಾಜರಾಗಿ, ಒಂದೇ ಫ್ರೇಮ್ ನಲ್ಲಿ ಸೆರೆ ಸಿಕ್ಕಿದ್ದು 'ರಾಟೆ' ಚಿತ್ರದ ಆಡಿಯೋ ಬಿಡುಗಡೆ ಸಮಾರಂಭದಲ್ಲಿ. [ಅಮರಜೀವಿ ರಾಜ್ ಹಬ್ಬದಲ್ಲಿ ಕಿಚ್ಚ, ದಚ್ಚು ಮಾಡಿದ್ದೇನು?]

  Sudeep and Darshan6

  ಹಾವು-ಮುಂಗುಸಿ ಒಂದ್ಕಡೆ ಸೇರಲ್ಲ ಅಂತಿದ್ದವರಿಗೆ ಸುದೀಪ್-ದರ್ಶನ್ ಒಟ್ಟಾಗಿ 'ರಾಟೆ' ಚಿತ್ರದ ಆಡಿಯೋ ಬಿಡುಗಡೆ ಮಾಡಿ ಎಲ್ಲರ ಬಾಯಿಗೆ ಬೀಗ ಹಾಕಿದ್ದಾರೆ. ಇನ್ನೂ ರಾಕಿಂಗ್ ಸ್ಟಾರ್ ಯಶ್ ಕೂಡ, ಇದೇ ಸುದೀಪ್ ಮತ್ತು ದರ್ಶನ್ ಜೊತೆ ನಿಂತುಕೊಂಡು ಪೋಸ್ ಕೊಟ್ಟಿರುವುದು, ಗಾಂಧಿನಗರದ ಎಂಟನೇ ಅದ್ಭುತ! [ಸ್ಯಾಂಡಲ್ ವುಡ್ ಮಹಾಚುನಾವಣೆ 2014 - ನಿಮ್ಮ ಮತ ಯಾರಿಗೆ?]

  ಅಣ್ಣಾವ್ರ ಕುಟುಂಬದ ಕ್ಯಾಂಪ್ ನಲ್ಲಿರುವ ಯಶ್ ಗೆ, ಸುದೀಪ್-ದರ್ಶನ್ ಕಂಡರೆ ಆಗಲ್ಲ ಅನ್ನುವ ಗುಲ್ಲು ಬಹಳ ದಿನಗಳ ಹಿಂದೆಯೇ ಹಬ್ಬಿತ್ತು. ಯಾವುದು ಆಗುವುದೇ ಇಲ್ಲ ಅಂತ ಎಲ್ಲರು ಭಾವಸಿದ್ದರೋ, ಅದೆಲ್ಲಾ 'ರಾಟೆ' ಪ್ರಭಾವದಿಂದ ಆಗಿದೆ.

  Sudeep and Darshan seen together in Raate audio launch2

  ಇದನ್ನೆಲ್ಲಾ ಕಣ್ತುಂಬಿಕೊಂಡ ಕರ್ನಾಟಕ ಮಹಾಜನತೆ 'ಎಲ್ಲವೂ ತಣ್ಣಗಾಗಿದೆ' ಅಂತ ನಿಟ್ಟುಸಿರುಬಿಟ್ಟಿದ್ದರೆ, ಗಾಸಿಪ್ ಪಂಡಿತರ ಹೊಟ್ಟೆಗೆ ಮಾತ್ರ ಬೆಂಕಿಬಿದ್ದಿದೆ. ಅದರ ಹೊಗೆ ಯಾವಾಗ, ಯಾವ ರೂಪದಲ್ಲಿ ಹೊರಬರುತ್ತದೋ ದೇವರೇ ಬಲ್ಲ! (ಫಿಲ್ಮಿಬೀಟ್ ಕನ್ನಡ)

  English summary
  Actor Kichcha Sudeep and Challenging Star Darshan finally have come together for 'Raate' Audio Launch, there by putting an end to all gossips. There was a news doing rounds that 'All is not well' between these close buddies. But now, it seems everything is alright. All thanks to team 'Raate'.

  Kannada Photos

  Go to : More Photos

  ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more