For Quick Alerts
  ALLOW NOTIFICATIONS  
  For Daily Alerts

  ತಮಿಳು ನಟನ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾದ ನಟಿ ತ್ರಿಷಾ?

  |

  ತಮಿಳು ನಟಿ ತ್ರಿಷಾ ಕೃಷ್ಣನ್, ದೀರ್ಘಕಾಲ ಚಿತ್ರರಂಗದಲ್ಲಿ ಹೀರೋಯಿನ್ ಆಗಿ ಖ್ಯಾತಿ ಗಳಿಸಿ ಇಂದಿಗೂ ಬಹುಬೇಡಿಕೆಯಾಗಿದ್ದಾರೆ. ತ್ರಿಷಾ ಬಣ್ಣದ ಲೋಕಕ್ಕೆ ಪ್ರವೇಶ ಮಾಡಿ ಸುಮಾರು 20 ವರ್ಷಗಳು ಕಳೆದಿವೆ. 1999ರಲ್ಲಿ ಜೋಡಿ ಸಿನಿಮಾ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ತ್ರಿಷಾ ಇಂದಿಗೂ ಅವರ ಖ್ಯಾತಿ ಕಮ್ಮಿಯಾಗಿಲ್ಲ. ಅಭಿನಯ ಮತ್ತು ಸೌಂದರ್ಯ ಮೂಲಕ ಅಭಿಮಾನಿಗಳ ಮನಗೆದ್ದಿರುವ ತ್ರಿಷಾಗೆ 37 ವರ್ಷ ಅಂದರೆ ನಂಬಲು ಅಸಾದ್ಯ.

  ಕಾಲಿವುಡ್ ನ ಎವರ್ ಗ್ರೀನ್ ಸುಂದರಿ ಯಾವಾಗ ಮದುವೆಯಾಗುತ್ತಾರೆ ಎನ್ನುವ ಸುದ್ದಿ ಆಗಾಗ ಕೇಳಿಬರುತ್ತಿರುತ್ತೆ. ತ್ರಿಷಾ ಮದುವೆ ವಿಚಾರ ಮತ್ತೆ ಸದ್ದು ಮಾಡುತ್ತಿದೆ. ಹೌದು, ತ್ರಿಷಾ ಮದುವೆಯಾಗಲು ನಿರ್ಧರಿಸಿದ್ದಾರಂತೆ. ಈಗಾಗಲೆ ಮದುವೆ ತಯಾರಿ ಸಹ ಮಾಡಿಕೊಳ್ಳುತ್ತಿದ್ದಾರೆ ಎನ್ನುವ ಮಾತು ಕಾಲಿವುಡ್ ಅಂಗಳದಲ್ಲಿ ಹರಿದಾಡುತ್ತಿದೆ. ತಮಿಳು ನಟನ ಜೊತೆ ತ್ರಿಷಾ ಹಸೆಮಣೆ ಏರಲಿದ್ದಾರೆ ಎಂದು ಹೇಳಲಾಗುತ್ತಿದೆ. ಮುಂದೆ ಓದಿ.

  ಸಿಂಬು ಮತ್ತು ನಯನತಾರಾ ಬ್ರೇಕಪ್‌ಗೆ ಕಾರಣವಾಗಿದ್ದು ಮುತ್ತಿನ ಫೋಟೊ!ಸಿಂಬು ಮತ್ತು ನಯನತಾರಾ ಬ್ರೇಕಪ್‌ಗೆ ಕಾರಣವಾಗಿದ್ದು ಮುತ್ತಿನ ಫೋಟೊ!

  ರಾಣಾ ದಗ್ಗುಬಾಟಿ ಜೊತೆ ಡೇಟಿಂಗ್

  ರಾಣಾ ದಗ್ಗುಬಾಟಿ ಜೊತೆ ಡೇಟಿಂಗ್

  ನಂತರ ನಟಿ ತ್ರಿಷಾ, ರಾಣಾ ದಗ್ಗುಬಾಟಿ ಜೊತೆ ಡೇಟಿಂಗ್ ನಲ್ಲಿದ್ದರು. ರಾಣಾ ಮತ್ತು ತ್ರಿಷಾ ಇಬ್ಬರ ಪ್ರೀತಿ ಪ್ರೇಮದ ವಿಚಾರ ದೊಡ್ಡ ಮಟ್ಟಕ್ಕೆ ಸದ್ದು ಮಾಡಿತ್ತು. ಅಲ್ಲದೆ ರಾಣಾ ಸಹ ತ್ರಿಷಾ ಜೊತೆಗಿನ ಪ್ರೀತಿ ವಿಚಾರವನ್ನು ಬಹಿರಂಗಪಡಿಸಿದ್ದರು. ಇಬ್ಬರು ಮದುವೆ ಆಗಲಿದ್ದಾರೆ ಅಂತಾನೆ ಎಲ್ಲರೂ ಅಂದುಕೊಂಡಿದ್ದರು. ಅಲ್ಲದೆ ತ್ರಿಷಾ ಮತ್ತು ವರುಣ್ ನಿಶ್ಚಿತಾರ್ಥ ಮುರಿದು ಬೀಳಲು ಕಾರಣನೇ ರಾಣಾ ದಗ್ಗುಬಾಟಿ ಎನ್ನುವ ಮಾತು ಕೇಳಿ ಬರುತ್ತಿತ್ತು. ಆದರೆ ರಾಣಾ, ಗೆಳತಿ ಮಿಹಿಕಾ ಬಜಾಜ್ ಜೊತೆ ನಿಶ್ಚಿತಾರ್ಥ ಮಾಡಿಕೊಂಡು ಅಚ್ಚರಿ ಮೂಡಿಸಿದ್ದಾರೆ. ಮಿಹಿಕಾ ಮತ್ತು ರಾಣಾ ಇಬ್ಬರು ಆಗಸ್ಟ್ ನಲ್ಲಿ ಹಸೆಮಣೆ ಏರುತ್ತಿದ್ದಾರೆ.

  <br />ಸೆಲ್ಫಿ ಮೂಲಕ ಮತ್ತೆ ಸಾಮಾಜಿಕ ಜಾಲತಾಣಕ್ಕೆ ವಾಪಸ್ ಆದ ನಟಿ ತ್ರಿಷಾ
  ಸೆಲ್ಫಿ ಮೂಲಕ ಮತ್ತೆ ಸಾಮಾಜಿಕ ಜಾಲತಾಣಕ್ಕೆ ವಾಪಸ್ ಆದ ನಟಿ ತ್ರಿಷಾ

  ತಮಿಳಿನ ವಿವಾದಾತ್ಮಕ ನಟನ ಜೊತೆ ತ್ರಿಷಾ ಮದುವೆ

  ತಮಿಳಿನ ವಿವಾದಾತ್ಮಕ ನಟನ ಜೊತೆ ತ್ರಿಷಾ ಮದುವೆ

  ನಟಿ ತ್ರಿಷಾ ಈಗ ತಮಿಳಿನ ವಿವಾದಾತ್ಮಕ ನಟ ಅಂತಾನೆ ಖ್ಯಾತಿಗಳಿಸಿರುವ ಸಿಂಬು ಜೊತೆ ಹಸೆಮಣೆ ಏರಲಿದ್ದಾರೆ ಎನ್ನುವ ಮಾತು ಹರಿದಾಡುತ್ತಿದೆ. ಲಾಕ್ ಡೌನ್ ಬಳಿಕ ಇಬ್ಬರು ಮದುವೆಯಾಗಲು ನಿರ್ಧರಿಸಿದ್ದಾರಂತೆ. ಇತ್ತೀಚಿಗೆ ಸಿಂಬು ಲಾಕ್ ಡೌನ್ ಬಳಿಕ ಮದುವೆ ಪ್ಲಾನ್ ಇದೆ ಎಂದಿದ್ದರು. ಅಲ್ಲದೆ ತ್ರಿಷಾ ಕೂಡ ಮದುವೆ ವಿಚಾರ ಬಹಿರಂಗಪಡಿಸಿದ್ದರು. ಹಾಗಾಗಿ ಇಬ್ಬರು ಹಸೆಮಣೆ ಏರಲಿದ್ದಾರೆ ಎನ್ನುವ ಸುದ್ದಿ ಜೋರಾಗಿ ಕೇಳಿಬರುತ್ತಿದೆ. ಅಲ್ಲದೆ ಸಿಂಬು ಮತ್ತು ತ್ರಿಷಾ ನಡುವೆ ಉತ್ತಮ ಬಾಂದವ್ಯವಿದೆ, ಇಬ್ಬರು ಉತ್ತಮ ಸ್ನೇಹಿತರು. ಈಗ ದಾಂಪತ್ಯ ಜೀವನಕ್ಕೆ ಕಾಲಿಡಲು ನಿರ್ಧರಿಸಿದ್ದಾರಂತೆ

  ರಾಣಾ ದಗ್ಗುಬಾಟಿ ಮದುವೆ ವಿಚಾರ ಕೇಳಿ ಮಾಜಿ ಪ್ರೇಯಸಿ ಶಾಕ್ ಆದರಂತೆರಾಣಾ ದಗ್ಗುಬಾಟಿ ಮದುವೆ ವಿಚಾರ ಕೇಳಿ ಮಾಜಿ ಪ್ರೇಯಸಿ ಶಾಕ್ ಆದರಂತೆ

  'ಏ ವಾಯ ಚೆಸಾವೆ' ತಮಿಳು ರಿಮೇಕ್ ನಲ್ಲಿ ನಟಿಸಿದ್ದ ಜೋಡಿ

  'ಏ ವಾಯ ಚೆಸಾವೆ' ತಮಿಳು ರಿಮೇಕ್ ನಲ್ಲಿ ನಟಿಸಿದ್ದ ಜೋಡಿ

  ಸಿಂಬು ಮತ್ತು ತ್ರಿಷಾ ಇಬ್ಬರು ತೆಲುಗಿನ ಏ ವಾಯ ಚೆಸಾವೆ ತಮಿಳು ರಿಮೇಕ್ ನಲ್ಲಿ ಒಟ್ಟಿಗೆ ನಟಿಸಿದ್ದಾರೆ. ತೆಲುಗಿನಲ್ಲಿ ಒಟ್ಟಿಗೆ ನಟಿಸಿದ್ದ ಸಮಂತಾ ಮತ್ತು ನಾಗಚೈತನ್ಯ ಜೋಡಿ ಪ್ರೀತಿಯಲ್ಲಿ ಬಿದ್ದು, ಈಗ ಮದುವೆಯಾಗಿ ಸಂತೋಷದ ಜೀವನ ನಡೆಸುತ್ತಿದ್ದಾರೆ. ಹಾಗೆ ತಮಿಳಿನಲ್ಲಿ ನಟಿಸಿದ್ದ ತ್ರಿಷಾ ಮತ್ತು ಸಿಂಬು ಸಹ ಮದುವೆಯಾಗಲಿದ್ದಾರೆ ಎನ್ನುವ ಮಾತು ಕಾಲಿವುಡ್ ಅಂಗಳದಲ್ಲಿ ಜೋರಾಗಿ ಕೇಳಿಬರುತ್ತಿದೆ.

  English summary
  Tollywood Actress Trisha Krishnan tie the knot with Controversial hero Simbu.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X