X
ಕನ್ನಡಿಗ

ಕನ್ನಡಿಗ

Drama | 17 Dec 2021 |
Kannada

2.5 /5 Users

3 /5 Filmibeat

ಕನ್ನಡಿಗ ಕಥೆ

ಗಿರಿರಾಜ್ ಬಿ.ಎಂ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಕನ್ನಡಿಗ ಚಿತ್ರದಲ್ಲಿ ಕ್ರೇಜಿಸ್ಟಾರ್ ರವಿಚಂದ್ರನ್ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ನಾಯಕಿಯಾಗಿ ಪಾವನಾ ಗೌಡ ಅಭಿನಯಿಸಿದ್ದಾರೆ. ಎನ್.ಎಸ್.ರಾಜಕುಮಾರ್ ನಿರ್ಮಾಣ ಮಾಡುತ್ತಿರುವ ಈ ಚಿತ್ರಕ್ಕೆ ರವಿ ಬಸ್ರೂರ್ ಸಂಗೀತ ನೀಡುತ್ತಿದ್ದಾರೆ. ಬಾಲಾಜಿ ಮನೋಹರ್, ಅಚ್ಯುತ್ ಕುಮಾರ್, ಗುರುದತ್ತ್ ಮುಖ್ಯ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ಕಥೆ: 300 ವರ್ಷದ ಹಿಂದೆ ಚೆನ್ನಭೈರಾದೇವಿ ಎಂಬ ರಾಣಿಯು ಸಮಂಥ ಭದ್ರ(ರವಿಚಂದ್ರನ್)ನಿಗೆ ಒಂದು ದ್ವೀಪ ಕೊಟ್ಟು ಅಲ್ಲಿ ಕನ್ನಡದ ಗುಡಿಯನ್ನು ಕಟ್ಟಿ, ಲಿಪಿಗಳ ಮೂಲಕ ಕನ್ನಡವನ್ನು ರಕ್ಷಿಸುವ ಜವಾಬ್ದಾರಿ ಕೊಡುತ್ತಾಳೆ. ಹೀಗೆ ಸಿನಿಮಾ ಆರಂಭ ಆಗುತ್ತದೆ. ಸಮಂಥ ಭದ್ರನ ನಂತರ ಈ ಜವಾಬ್ದಾರಿ ಮಗ ಗುಣಭದ್ರ(ರವಿಚಂದ್ರನ್) ಹೆಗಲು ಏರುತ್ತೆ. ಗುಣಭದ್ರ ಲಿಪಿಕಾರ ವಂಶ ಕೊನೆಯ ಗಂಡು ಸಂತಾನ ಹಾಗಾಗಿ ರಾಣಿ ಕೊಟ್ಟ ಜವಾಬ್ದಾರಿಯನ್ನು ಉಳಿಸಿ ಕೊಳ್ಳುವುದು. ಪರಕೀಯರ ವಶದಲ್ಲಿ ಇದ್ದ ದ್ವೀಪವನ್ನು ಹಿರಿಯರು ಸಾಲ ಮಾಡಿ ಕೊಂಡಿರುತ್ತಾರೆ. ಋಣ ತೀರಿಸಲು ಗುಣಭದ್ರ ಒದ್ದಾಡುತ್ತಿರುತ್ತಾನೆ. ಆದರೆ ಅವನು ಋಣ ಮುಕ್ತನಾಗಿ, ಆ ದ್ವೀಪವನ್ನು ಪಡೆಯುವುದು ಕನ್ನಡ ಭಾಷೆಯಿಂದಲೆ. ಫರ್ಡಿನೆಂಡ್ ಕಿಟೆಲ್‌ ಜರ್ಮನಿಯಿಂದ ಕನ್ನಡ ಕಲಿಯಲು ಗುಣಭದ್ರನ ಮೊರೆ ಹೋಗುತ್ತಾನೆ. ಗುಣಭದ್ರನ ಹೆಂಡತಿ ಸಾಂಕಮ್ಮಬ್ಬೆ(ಪಾವನ). ಗುಣಭದ್ರನಿಗೆ ಮದುವೆ ವಯಸ್ಸಿನ ಮಗಳು ಇದ್ದಾಳೆ. ಗುಣಭದ್ರನ ಹೆಂಡತಿ ಮಗಳ ಸುತ್ತಾ ಕಥೆಯನ್ನು ಕಟ್ಟಿ ಕೊಡಲಾಗಿದೆ. ಗಂಡು ಮಗು ಇಲ್ಲ ವಂಶವನ್ನು ಮುಂದುವರೆಸುವ ವಾರಸುದಾರ ಇಲ್ಲ ಎನ್ನುವ ಚಿಂತೆ ಗುಣ ಭದ್ರನಿಗೆ ಇರುವುದಿಲ್ಲ. ಹೆಂಡತಿ ಮಗಳ ಜೊತೆಗೆ ಅರಾಮಾಗಿರುವ ಗುಣಭದ್ರನ ಬದುಕಲ್ಲಿ ಕಹಿ ಬಿರುಗಾಳಿ ಎಬ್ಬಿಸುತ್ತಾಳೆ ಜರ್ಮನ್ ಮಹಿಳೆ ಆ್ಯನಾ. ಈ ಆ್ಯನಾ ಫರ್ಡಿನೆಂಡ್‌ ಕಿಟೆಲ್‌ ಜೊತೆಗೆ ಕನ್ನಡ ಲಿಪಿ ಕಲಿಯಲು ಗುಣ ಭದ್ರನ ಬಳಿ ಬಂದಿರುತ್ತಾಳೆ. ಈಕೆಯಿಂದ ದೊಡ್ಡ ಅಪವಾದ ಹೊತ್ತುಕೊಂಡು, ಹೆಂಡತಿ ಕೋಪಕ್ಕೆ ಗುರಿ ಆಗಿ, ಮಗಳನ್ನು ಕಳೆದುಕೊಳ್ಳುತ್ತಾನೆ ಗುಣಭದ್ರ. ವರ್ಷಗಳ ಹಿಂದೆ ಮನೆ ಬಿಟ್ಟು ಹೋಗಿದ್ದ ಅವನ ಕಿರಿಯ ಸಹೋದರ ಮತ್ತೆ ಮನೆಗೆ ಮರಳುತ್ತಾನೆ. ಆಗ ಆತ ಎಲ್ಲಿದ ಹಲವು ವರ್ಷಗಳ ಬಳಿಕ ಮತ್ತೆ ಯಾಕೆ ಮನೆ ಬಂದ ಎನ್ನುವ ಫ್ಲ್ಯಾಶ್‌ ಬ್ಯಾಕ್‌ ತೆರೆದುಕೊಳ್ಳುತ್ತದೆ. ಫ್ಲ್ಯಾಶ್‌ ಬ್ಯಾಕ್‌ನಲ್ಲಿ ಪೋರ್ಚುಗೀಸರ ದಬ್ಬಾಳಿಕೆಯ ಬಗ್ಗೆ ವರ್ಣಿಸಲಾಗಿದೆ. ಕನ್ನಡದಿಂದ ಶುರುವಾಗಿ ಗುಣಭದ್ರನ ಜೀವನದೊಂದಿಗೆ ಈ ಕಥೆ ಕೊನೆ ಆಗುತ್ತೆ. ಗುಣಭದ್ರನ ಮೇಲೆ ಇರುವ ಅಪವಾದಗಳು ಹೇಗೆ ಕರಗುತ್ತವೆ. ಎದುರಾಗುವ ತೊಂದರೆಗಳಿಂದ ಗುಣಭದ್ರ ತನ್ನ ಜೀವನದ ಜೊತೆಗೆ ಕನ್ನಡ ಲಿಪಿಗಳನ್ನು ಹೇಗೆ ಕಾಪಾಡಿದ ಎನ್ನುವುದು ಕ್ಲೈಮ್ಯಾಕ್ಸ್.
Read More

ಕನ್ನಡಿಗ ಕಲಾವಿದರು ಮತ್ತು ಸಿಬ್ಬಂದಿ

ಕನ್ನಡಿಗ ಕ್ರೂ ಮಾಹಿತಿ

ನಿರ್ದೇಶಕ ಗಿರಿರಾಜ್ ಬಿಎಂ
ಸಿನಿಮಾಟೋಗ್ರಫಿ NA
ಸಂಪಾದಕ NA
ಸಂಗೀತ ರವಿ ಬಸ್ರೂರ್
ನಿರ್ಮಾಪಕ ಎನ್.ಎಸ್.ರಾಜಕುಮಾರ್
ಬಜೆಟ್ TBA
ಬಾಕ್ಸ್ ಆಫೀಸ್ TBA
ಒಟಿಟಿ ಪ್ಲಾಟ್ ಫಾರ್ಮ್ TBA
ಒಟಿಟಿ ರಿಲೀಸ್ ದಿನಾಂಕ TBA

ಕನ್ನಡಿಗ ವಿಮರ್ಶಕರ ವಿಮರ್ಶೆ

ಕನ್ನಡ ಫಿಲ್ಮಿಬೀಟ್
ಕನ್ನಡ ಚಿತ್ರರಂಗದಲ್ಲಿ ಇಂಥಹ ಕಥೆಯನ್ನು ಇನ್ನೂ ಯಾರು ಮುಟ್ಟಿಲ್ಲ. ಈ ಚಿತ್ರ ಹಲವಾರು ಹೊಸ ಯೋಚನೆಗಳಿಗೆ ದಾರಿ ಮಾಡಿ ಕೊಟ್ಟಿದೆ. ಒಬ್ಬ ಲಿಪಿಕಾರನ ಬದುಕನ್ನು ಹೀಗೂ ಸಿನಿಮಾ ಮೂಲಕ ಹೇಳಬಹುದು ಎನ್ನುವುದನ್ನು ನಿರ್ದೇಕ ಸಾಬೀತು ಮಾಡಿದ್ದಾರೆ.

ಕನ್ನಡಿಗ ಟ್ರೇಲರ್

Video Thumbnail

ಕನ್ನಡಿಗ ಸಿನಿಮಾ ನೋಡುಗರ ವಿಮರ್ಶೆ

  • ಕಥೆ
  • ಕ್ರಿಯೆ
  • ದಿಕ್ಕು
  • ಚಿತ್ರ ರೇಟಿಂಗ್

×
2.5 /5 Your Rating

ಕನ್ನಡಿಗ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+