X
ಕನ್ನಡ » ಚಲಚಿತ್ರಗಳು » ಕಥೆಯೊಂದು ಶುರುವಾಗಿದೆ
ಕಥೆಯೊಂದು ಶುರುವಾಗಿದೆ

ಕಥೆಯೊಂದು ಶುರುವಾಗಿದೆ

Romance | 03 Aug 2018 | U/A |
Kannada

2.5 /5 Users

4 /5 Filmibeat

ಕಥೆಯೊಂದು ಶುರುವಾಗಿದೆ ಕಥೆ

'ಕಥೆಯೊಂದು ಶುರುವಾಗಿದೆ' ಸಿನಿಮಾದ ನಾಯಕ ತರುಣ್ (ದಿಗಂತ್) ಕಥೆ ಶುರುವಾಗುವುದು ಕ್ಲೈಮ್ಯಾಕ್ಸ್ ದೃಶ್ಯದಲ್ಲಿ. ಫಾರಿನ್ ನಲ್ಲಿ ಒಳ್ಳೆಯ ಕೆಲಸ, ಕೈ ತುಂಬ ಸಂಬಳ ಇದ್ದರೂ, ತರುಣ್ ದಿನ ನಿತ್ಯ ಅದೇ ಅದೇ ಕೆಲಸ ಮಾಡಿ ರೊಬೋಗಳ ರೀತಿ ಆಗಿದ್ದೇನೆ ಎಂದು ಕೆಲಸ ಬಿಟ್ಟು ತನ್ನೂರಿಗೆ ಬರುತ್ತಾನೆ. ಫಾರಿನ್ ನಲ್ಲಿಯೇ ಬದುಕಬೇಕು ಎನ್ನುವ ಪ್ರೇಯಸಿಯನ್ನು ಕೂಡ ಇದೇ ಕಾರಣಕ್ಕೆ ದೂರ ಮಾಡಿಕೊಳ್ಳುತ್ತಾನೆ. ಬಳಿಕ ತನ್ನ ಊರಿಗೆ ಬಂದು ತನ್ನದೇ ಆದ ರೆಸಾರ್ಟ್ ತೆರೆಯುತ್ತಾನೆ. ಆರಂಭದಲ್ಲಿ ಎಲ್ಲ ಚೆನ್ನಾಗಿರುತ್ತದೆ. ಆದರೆ, ಬರು ಬರುತ್ತಾ ರೆಸಾರ್ಟ್ ಖಾಲಿ ಆಗುತ್ತದೆ. ಸಂಪಾದನೆ ಕೂಡ ಕರಗುತ್ತದೆ. ಈ ವೇಳೆಗೆ ಆತನ ರೆಸಾರ್ಟ್ ಗೆ ನಾಯಕಿ ತಾನಿಯಾ (ಪೂಜಾ ದೇವಾರಿಯಾ) ಬರುತ್ತಾಳೆ. ಇಲ್ಲಿಂದ ಇಬ್ಬರ ನಾಲ್ಕು ದಿನದ ಕಥೆ ಶುರು ಆಗುತ್ತದೆ.ತಾನಿಯಾ ತನ್ನ ಗಂಡನ ಜೊತೆಗೆ ರೆಸಾರ್ಟ್ ಗೆ ಬರಬೇಕಿರುತ್ತದೆ. ತನ್ನ ರೆಸಾರ್ಟ್ ಗೆ ಬರುತ್ತಿರುವ ಹೊಸ ಅತಿಥಿಗಳನ್ನು ಕರೆದುಕೊಂಡು ಬರಲು ಏರ್ ಪೋರ್ಟ್ ಗೆ ತರುಣ್ ಹೋಗುತ್ತಾನೆ. ಕಾರಿನಲ್ಲಿ ಬರುವಾಗ ತಾನಿಯಾ ತನ್ನ ಗಂಡ ಸತ್ತು ಹೊದ ಎಂದು ಕಣ್ಣೀರು ಹಾಕುತ್ತಾಳೆ. ಈ ರೀತಿ ಇರುವ ಕಥೆಯಲ್ಲಿ ಬರು ಬರುತ್ತಾ ತಾನಿಯಾ ಹಾಗೂ ತರುಣ್ ಹತ್ತಿರ ಆಗುತ್ತಾರೆ. ಇನ್ನೂ ಮದುವೆ ಆಗದೇ ಇರುವ ತರುಣ್ ತಾನಿಯಳನ್ನು ಇಷ್ಟ ಪಡಲು ಶುರು ಮಾಡುತ್ತಾನೆ. ಹೀಗಿರುವ ಕಥೆ ಒಂದು ದೊಡ್ಡ ತಿರುವು ಪಡೆದುಕೊಳ್ಳುತ್ತದೆ. ಅದೇ ಇಡೀ ಚಿತ್ರದ ಹೈಲೆಟ್ ಆಗಿದೆ.
Read More

ಕಥೆಯೊಂದು ಶುರುವಾಗಿದೆ ಕಲಾವಿದರು ಮತ್ತು ಸಿಬ್ಬಂದಿ

ಕಥೆಯೊಂದು ಶುರುವಾಗಿದೆ ಕ್ರೂ ಮಾಹಿತಿ

ನಿರ್ದೇಶಕ ಸೆನ್ನಾ ಹೆಗಡೆ
ಸಿನಿಮಾಟೋಗ್ರಫಿ NA
ಸಂಪಾದಕ NA
ಸಂಗೀತ NA
ನಿರ್ಮಾಪಕ ರಕ್ಷಿತ್ ಶೆಟ್ಟಿ, ಪುಷ್ಕರ ಮಲ್ಲಿಕಾರ್ಜುನಯ್ಯ
ಬಜೆಟ್ TBA
ಬಾಕ್ಸ್ ಆಫೀಸ್ TBA
ಒಟಿಟಿ ಪ್ಲಾಟ್ ಫಾರ್ಮ್ TBA
ಒಟಿಟಿ ರಿಲೀಸ್ ದಿನಾಂಕ TBA

ಕಥೆಯೊಂದು ಶುರುವಾಗಿದೆ ವಿಮರ್ಶಕರ ವಿಮರ್ಶೆ

kannada.filmibeat.com
ಕಥೆಯೊಂದು ಶುರುವಾಗಿದೆ' ಸಿನಿಮಾದ ಬಗ್ಗೆ ಒಂದೇ ಮಾತಿನಲ್ಲಿ ಹೇಳಬೇಕು ಅಂದರೆ ಇದೊಂದು ಇದು ದಿಗಂತ್ ಅವರ ಕಮ್ ಬ್ಯಾಕ್ ಸಿನಿಮಾ. ಸರಳ..ತೀರಾ ಸರಳವಾದ ಕಥೆಯನ್ನು ಎಷ್ಟೊಂದು ಚೆನ್ನಾಗಿ ಸಿನಿಮಾದಲ್ಲಿ ತೋರಿಸಿದ್ದಾರೆ. ಪಕ್ಕಾ ಕ್ಲಾಸ್ ಆಗಿರುವ 'ಕಥೆಯೊಂದು ಶುರುವಾಗಿದೆ' ಒಂದು ಒಳ್ಳೆಯ 'ಫೀಲ್ ಗುಡ್ ಸಿನಿಮಾ'.ಅದೇ ಫೈಟ್, ಅದೇ ಲವ್, ಅದೇ ಅಬ್ಬರದ ಡೈಲಾಗ್, ಅದೇ ಡಬ್ಬಲ್ ಮಿನಿಂಗ್ ಡೈಲಾಗ್ ಇದೆಲ್ಲವನ್ನು ಬಿಟ್ಟು ಸಿನಿಮಾದಲ್ಲಿ ಹೊಸದನ್ನು ಪ್ರಯತ್ನ ಮಾಡಿದ್ದಾರೆ. ಬದಲಾಗುತ್ತಿರುವ ಕನ್ನಡ ಚಿತ್ರರಂಗಕ್ಕೆ ಈ ರೀತಿಯ ಸಿನಿಮಾಗಳು ಬೇಕು. ಮತ್ತೆ ಮತ್ತೆ ಇಂತಹ ಪ್ರಯತ್ನ ನಡೆಯಬೇಕು.

ಕಥೆಯೊಂದು ಶುರುವಾಗಿದೆ ಸಿನಿಮಾ ನೋಡುಗರ ವಿಮರ್ಶೆ

  • ಕಥೆ
  • ಕ್ರಿಯೆ
  • ದಿಕ್ಕು
  • ಚಿತ್ರ ರೇಟಿಂಗ್

×
2.5 /5 Your Rating

ಕಥೆಯೊಂದು ಶುರುವಾಗಿದೆ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+