For Quick Alerts
  ALLOW NOTIFICATIONS  
  For Daily Alerts

  ನಿವೃತ್ತಿ ವರದಿ ಕಂಡು ಗಾನ ಕೋಗಿಲೆ ಲತಾ ಸಿಡಿಮಿಡಿ

  By Mahesh
  |
  ಸಂಗೀತ ಸಾಮ್ರಾಜ್ಞಿ ಲತಾ ಮಂಗೇಶ್ಕರ್ ಅವರು ತಮ್ಮ ನಿವೃತ್ತಿ ಸಂಬಂಧಿಸಿದಂತೆ ಪತ್ರಿಕೆಗಳಲ್ಲಿ ಬಂದ ವರದಿಗಳ ಬಗ್ಗೆ ಕೆಂಡಾ ಮಂಡಲವಾಗಿದ್ದಾರೆ. ಲತಾ ಮಂಗೇಶ್ಕರ್ ಅವರು ಶೀಘ್ರದಲ್ಲೇ ನಿವೃತ್ತಯಾಗಲಿದ್ದಾರೆ ಎಂದು ಖ್ಯಾತ ಆಂಗ್ಲಪತ್ರಿಕೆಯೊಂದು ಭಾನುವಾರ ಪ್ರಕಟಿಸಿತ್ತು.

  "ನಾನು ಸುದ್ದಿ ಪತ್ರಿಕೆಯಲ್ಲಿ ಈ ಲೇಖನವನ್ನು ಈ ದಿನ ಓದಿದೆ. ಅದು ನಾನು ನಿವೃತ್ತಳಾಗಲಿದ್ದೇನೆ ಎಂದು ಪ್ರಕಟಿಸಿದೆ. ಇದು ಸಂಪೂರ್ಣ ತಪ್ಪು. ಇಂತಹ ಪ್ರತಿಷ್ಠಿತ ವೃತ್ತ ಪತ್ರಿಕೆ ಇಂತಹ ತಪ್ಪು ಹಾಗೂ ಬೇಜವಾಬ್ದಾರಿಯ ವರದಿಯನ್ನು ಪ್ರಕಟಿಸಿದ ಬಗ್ಗೆ ನಾನು ಅಚ್ಚರಿಗೊಂಡಿದ್ದೇನೆ" ಎಂದು 81 ವರ್ಷದ ಗಾಯಕಿ ಲತಾ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹೇಳಿಕೊಂಡಿದ್ದಾರೆ.

  "ನಾನು ಹುಟ್ಟಿದ್ದೇ ಹಾಡುವುದಕ್ಕಾಗಿ ಎಂದು ನಾನು ನಂಬಿದ್ದೇನೆ. ನಾನು ಬದುಕಿರುವವರೆಗೂ ಇದನ್ನು ಮುಂದುವರೆಸುತ್ತೇನೆ. ನಾನು ನಿವೃತ್ತಳಾಗುವುದಿದ್ದರೆ, ಆ ನಿರ್ಧಾರವನ್ನು ಕೈಗೊಳ್ಳಬೇಕಾದವಳು ನಾನು, ಬೇರೆ ಯಾರೂ ಅಲ್ಲ . ನನ್ನ ನಿವೃತ್ತಿ ಬಗೆಗೆ ಬೇರೆಯವರು ಯಾಕೆ ಮಾತನಾಡಬೇಕು" ಎಂದು ಲತಾ ಪ್ರಶ್ನಿಸಿದ್ದಾರೆ.

  "ನನ್ನನ್ನು ಈ ರೀತಿಯಾಗಿ ಅಪಮಾನಿಸಲು ಯಾರಿಗೂ ಹಕ್ಕಿಲ್ಲ. ಏನನ್ನೂ ಅರಿತುಕೊಳ್ಳದೆ ನಾನು ಬೆನ್ನು ನೋವಿನಿಂದ ನರಳುತ್ತಿದ್ದೇನೆ ಎಂದು ಅವರು ಬರೆದಿದ್ದಾರೆ. ಇದು ಕೂಡಾ ತಪ್ಪು. ಇಂತಹ ಪ್ರತಿಷ್ಠಿತ ಪತ್ರಿಕೆಗೆ ತನ್ನ ವಿಶ್ವಾಸಾರ್ಹಗೆ ಬಗ್ಗೆ ಒಂದಿಷ್ಟೂ ಕಾಳಜಿ ಇಲ್ಲವೇ" ಎಂದು ಲತಾ ನೊಂದು ನುಡಿದಿದ್ದಾರೆ. ಜೈಲ್ ಚಿತ್ರದಲ್ಲಿ ಹಾಡಿದ್ದ ಗಾನ ಕೋಗಿಲೆ ನಂತರ ಈಗ ತಂಗಿ ಆಶಾ ಭೋಂಸ್ಲೆ ಅವರ ಮಾಯಿ ಚಿತ್ರದ ಶೀರ್ಷಿಕೆ ಗೀತೆಯನ್ನು ಲತಾ ಹಾಡಿದ್ದಾರೆ.

  English summary
  81 year old Melody queen Lata Mangeshkar is furious over media reports of her retirement. An article in leading newspaper claimed that she will be retiring soon. But Lata denies and says article is insulting.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X