ಬಡವರ ಪಾಲಿನ 'ಅಣ್ಣಾವ್ರು' ದುನಿಯಾ ವಿಜಯ್

ಮೊನ್ನೆ, ಜನವರಿ 20, 2012ರ ಶುಕ್ರವಾರ ದುನಿಯಾ ವಿಜಯ್ ಗೆ 37 ವರ್ಷ ತುಂಬಿದೆ. ಬೆಳಗ್ಗೆಯಿಂದಲೇ ಮನೆಯಲ್ಲಿ ಸಂಭ್ರಮ-ಸಡಗರ. ಅಭಿಮಾನಿಗಳು, ಚಿತ್ರರಂಗದ ಗಣ್ಯರು ತಂಡೋಪತಂಡವಾಗಿ ನಿವಾಸಕ್ಕೆ ಆಗಮಿಸಿ ಶುಭ ಹಾರೈಸಿದ್ದಾರೆ. ಕೇಕ್ ಕತ್ತರಿಸಿದ್ದಾರೆ. ವಿಜಯ್ ಸಿಕ್ಕಾಪಟ್ಟೆ ಖುಷಿಯಾಗಿದ್ದರು.
ಜೋಶ್ ಗೆ ಕಾರಣ ಕೇವಲ ಹುಟ್ಟುಹಬ್ಬ ಮಾತ್ರವಲ್ಲ, ಬಡ ಕುಟುಂಬಕ್ಕೆ ಆಧಾರವಾದ ಖುಷಿಯೂ ಅವರಿಗಿತ್ತು. ಆತ್ಮತೃಪ್ತಿ ಅವರ ಮುಖದಲ್ಲಿ ಕಾಣಿಸುತ್ತಿತ್ತು. ಕೈಲಾಗದವರಿಗೆ ಸಹಾಯ ಮಾಡುವುದರಲ್ಲಿ ಎತ್ತಿದ ಕೈಯಾಗಿರುವ ವಿಜಯ್, ತನ್ನ ಸ್ನೇಹಿತರಿಗೆ ಹೇಳಿ ನಾಲ್ಕು ಬಡ ಕುಟುಂಬವನ್ನು ಹುಡುಕಿ ಹುಟ್ಟುಹಬ್ಬದಂದು ಆಟೋ ರಿಕ್ಷಾ ಹಸ್ತಾಂತರಿಸಿದರು.
ಬಡತನ, ನಿರುದ್ಯೋಗ, ಮಕ್ಕಳ ಅನಾರೋಗ್ಯ, ಹೀಗೆ ಹತ್ತು ಹಲವು ಸಮಸ್ಯೆಗಳಿಂದ ಬೇಸತ್ತಿದ್ದ ಕುಟುಂಬಕ್ಕೆ ವಿಜಯ್ ಸಹಾಯದಿಂದ ನೆಮ್ಮದಿ ದೊರಕಿದೆ. ಬದುಕೇ ಬೇಡವೆಂಬ ಹಂತಕ್ಕೆ ತಲುಪಿದ್ದ ಕುಟುಂಬಗಳಿಗೆ ಆಶಾಕಿರಣವಾದ ವಿಜಯ್ ರನ್ನು ಅವರು 'ಅಣ್ಣಾವ್ರು' ಎಂದೇ ಬಣ್ಣಿಸಿದರು. ನಮಗೆ ಬದುಕು ಕೊಟ್ಟ ಅಣ್ಣಾವ್ರು ಚೆನ್ನಾಗಿರಲಿ ಎಂದು ಹೃತ್ಪೂರ್ವಕವಾಗಿ ಹರಸಿದರು. (ಒನ್ ಇಂಡಿಯಾ ಕನ್ನಡ)


Click it and Unblock the Notifications











