»   » ಸಿಂಪಲ್ ನಿರ್ದೇಶಕ ಸುನಿಗೆ ಕಾಡಿದ್ದ ಭಯವೇನು ?

ಸಿಂಪಲ್ ನಿರ್ದೇಶಕ ಸುನಿಗೆ ಕಾಡಿದ್ದ ಭಯವೇನು ?

By * ಮಹೇಶ್ ಮಲ್ನಾಡ್
Subscribe to Filmibeat Kannada
For Quick Alerts
ALLOW NOTIFICATIONS
For Daily Alerts

  ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ ಚಿತ್ರ ತಂಡದ ನಾಯಕ ರಕ್ಷಿತ್ ಹಾಗೂ ನಿರ್ದೇಶಕ ಸುನಿ ಅವರು ತಮ್ಮ ಯಶಸ್ಸಿನ ಕಥೆಯನ್ನು ನಮ್ಮ ತಂಡದ ಜೊತೆ ಹಂಚಿಕೊಂಡಿದ್ದನ್ನು ಓದಿದ ಮೇಲೆ ಮಾತುಕತೆಯ ಇನ್ನಷ್ಟು ಭಾಗವನ್ನು ನಿಮ್ಮ ಮುಂದಿಡುತ್ತಿದ್ದೇವೆ.

  ಮೊದಲೇ ಹೇಳಿದಂತೆ 'ಹೆಡ್ ವೇಯ್ಡ್' ಇಲ್ಲದೆ ಸರಳವಾಗಿ ತಮ್ಮ ಕಷ್ಟ ನಷ್ಟಗಳು ನಂಬಿಕೆಗಳು ಹಾಗೂ ಆತ್ಮವಿಶ್ವಾಸದ ಹೆಜ್ಜೆಗಳು ಹಾಗೂ ಅದು ಫಲ ನೀಡಿದ ರೀತಿಯನ್ನು ಸುನಿ ಹಾಗೂ ರಕ್ಷಿತ್ ವಿವರಿಸಿದರು. ನಿನ್ನೆ ಕಾಪಿಯಲ್ಲಿ ರಕ್ಷಿತ್ ನಟನೆಗಿಂತ ನಿರ್ದೇಶನದ ಕಡೆ ವಾಲಿದ್ದು ಏಕೆ? ಚಿತ್ರರಂಗದಲ್ಲಿ ಕರಾವಳಿ, ಉತ್ತರ ಕರ್ನಾಟಕ ಭಾಷೆ ಬಳಕೆ, ಯೂ ಟ್ಯೂಬ್ ವಿಡಿಯೋ, ಫೇಸ್ ಬುಕ್ ಪ್ರಮೋಷನ್ ಬಗ್ಗೆ ತಿಳಿದುಕೊಂಡಿದ್ದೀರಾ ಈಗ

  ಪ್ರೊಮೊ ಯಶಸ್ಸು ಥೇಟರ್ ನಲ್ಲಿ ಕಂಡು ಬಂದಿತ್ತಾ?: ಸುನಿ: ನಮಗೆ ಮೊದಲಿಗೆ ಭಯ ಇತ್ತು. ಬರೀ ಯೂಥ್ ಆಡಿಯನ್ಸ್ ಮಾತ್ರ ಬಂದರೆ ಗತಿಯೇನು ಅಂತಾ? ಆದರೆ, ಹಲವು ಚಿತ್ರಮಂದಿರಗಳಲ್ಲಿ ಕುಟುಂಬ ಸಮೇತ ಚಿತ್ರ ನೋಡಿ ಮೆಚ್ಚಿದ್ದಾರೆ. ಪ್ರಸನ್ನ ಥೇಟರ್ ಬಳಿ 100 ಕಾರು ನಿಂತಿದ್ದು ನೋಡಿ ನನಗೆ ನಂಬಲಾಗಲಿಲ್ಲ

  ರಕ್ಷಿತ್: ಚಿತ್ರ ರಿಲೀಸ್ ಆದ್ಮೇಲೆ ನಮ್ಮನೆ ಅಕ್ಕಪಕ್ಕದವರು ಈಗ ಕಾಫಿ ಟೀ ಆಫರ್ ಮಾಡ್ತಾ ಇದ್ದಾರೆ. ಚಿತ್ರ ಎಲ್ಲರಿಗೂ ಮುಟ್ಟಿದೆ ಎಂಬ ಖುಷಿಯಿದೆ. ಚಿತ್ರದಲ್ಲಿ ಡೈಲಾಗ್ ಗಳು ಡಬ್ಬಲ್ ಮೀನಿಂಗ್ ಎನ್ನುತ್ತಾರೆ ಹೊರತು ವಲ್ಗಾರಿಟಿ ಇಲ್ಲ ಅದು ನಮಗೆ ಲಾಭ ತಂದಿದೆ.

  ಸಿಂಪಲ್ ಚಿತ್ರದ ಗಳಿಕೆ ಎಷ್ಟಾಗಿದೆ? ಸುನಿಗೆ ಕಾಡಿದ್ದ ಭಯವಾದರೂ ಏನು? ಎಂಬ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ..

  ಸುನಿಗೆ ಕಾಡಿದ್ದ ಭಯ

  ಚಿತ್ರದಲ್ಲಿ ಡೈಲಾಗ್ಸ್ ಹೈಲೇಟ್ ಆದರೂ ಒಂದು ದಿನ ಒಂದು ವಾರದ ನಂತರ ಯೂಥ್ ಆಡಿಯನ್ಸ್ ಮಾಯವಾಗುತ್ತಾರೆ. ನಂತರ ಕಥೆ ಏನು? ಏನಾದರೂ ಆಗಲಿ ಚಿತ್ರಮಂದಿರ ಸಿಗದಿದ್ದರೂ ಸಿಕ್ಕಿರುವ ಎರಡು ಮುಖ್ಯ ಥೇಟರ್ ನಲ್ಲಿ ಒಂದು ದಿನದ ಪ್ರದರ್ಶನ ಆದರೆ ಸಾಕು ಎನಿಸಿತ್ತು.

  ಗೊತ್ತಿರುವ ಡೈಲಾಗ್ಸ್ ಎಲ್ಲ ಒಂದೇ ಚಿತ್ರದಲ್ಲಿ ತುಂಬಿಸುವ ಪ್ರಯತ್ನ ಮಾಡಲಿಲ್ಲ. ಬದಲಿಗೆ ಮೌನದ ಬದಲಿಗೆ ಮಾತಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಿದೆ. ಇದು ಜನಕ್ಕೆ ಅರ್ಥವಾಗಲು ತಡವಾಗಿದೆ. ಕೆಲವರು ಒಂದೇ ನಟಿ ಎರಡು ಸೀನ್ ನಲ್ಲಿ ಕಾಣಿಸಿಕೊಂಡಿರೋದು ಕನ್ ಫ್ಯೂಸ್ ಆಯ್ತು ಎಂದಿದ್ದಾರೆ.

  ರಕ್ಷಿತ್ ನಿಮ್ಮ ಡ್ರೀಮ್ ರೋಲ್?

  ಬುದ್ಧನ ಪಾತ್ರ ಮಾಡಲು ಇಷ್ಟ. ಇತಿಹಾಸ ನನ್ನ ಫೆವರೀಟ್ ಸಬ್ಜೆಕ್ಟ್, ರಾಮ ಲಖನ್ ಚಿತ್ರದ ಲಖನ್ ಪಾತ್ರ ಇಷ್ಟ, ಅಲ್ ಪಾಚಿನೋ ಪಾತ್ರಗಳು ಮಾಡಲು ಇಚ್ಛೆ. ನಿರ್ದೇಶಕ ಗುರುಪ್ರಸಾದ್ ಜೊತೆ ನಟಿಸುವ ಆಸೆಯಿದೆ

  ಬೇರೆ ರಾಜ್ಯಕ್ಕೆ ವಿದೇಶಕ್ಕೆ ಹಾರಿದ್ಯಾ?

  ಬೀದರ್ ಹಾಗೂ ಗುಲ್ಬರ್ಗಾ ಬಿಟ್ಟು ಉಳಿದ ಎಲ್ಲಾ ಕಡೆ ಚಿತ್ರ ಪ್ರದರ್ಶನಗೊಳ್ಳುತ್ತಿದೆ. ಮಲ್ಟಿಫೆಕ್ಸ್ ನವರಿಗೆ ಮೊದಲ ದಿನ ನಮ್ಮ ಚಿತ್ರ ಕೊಳ್ಳಲು ಮನಸಿರಲಿಲ್ಲ. ಹಿಂದಿ ಚಿತ್ರ ಹಾಕುತ್ತೀವಿ ಎಂದಿದ್ದರು ಆದರೆ ಎರಡು ಶೋ ಆದ ನಂತರ ಬೆಂಗಳೂರಿನ ಎಲ್ಲಾ ಮಾಲ್ ಗಳಿಂದ ಬೇಡಿಕೆ ಹೆಚ್ಚಾಯಿತು, ಮಲ್ಟಿ ಸ್ಕ್ರೀನ್ ಗಳಲ್ಲಿ ಚಿತ್ರ ಓಡುತ್ತಿದೆ. ಆದರೂ ಅಪರ್ಣದಲ್ಲಿ ಇನ್ನೂ ಹೆಚ್ಚಿನ ಆಡಿಯನ್ಸ್ ನಿರೀಕ್ಷೆಯಿತ್ತು ಎಂದರು ಸುನಿ

  ಸಿಂಗಪುರ, ಅಮೆರಿಕದಿಂದಲೂ ಬೇಡಿಕೆ ಬಂದಿದೆ. ಆದರೆ, ಯಾವುದೂ ಇನ್ನೂ ಫೈನಲೈಸ್ ಮಾಡಿಲ್ಲ. ಬೇರೆ ರಾಜ್ಯದಲ್ಲಿ ಚಿತ್ರ ಇನ್ನೂ ರಿಲೀಸ್ ಆಗಿಲ್ಲ

  ಚಿತ್ರ ಲಾಭ ಮಾಡಿದ್ಯಾ? ರಿಮೇಕ್ ರೈಟ್ಸ್?

  ಚಿತ್ರಕ್ಕೆ 80 ಲಕ್ಷ ರು ತಗುಲಿತ್ತು. ಪೋಸ್ಟ್ ಪ್ರೊಡಕ್ಷನ್ ಸೇರಿ 1.2 ಕೋಟಿ ತನಕ ಆಯ್ತು. ಈಗ ಹೂಡಿದ ಬಂಡವಾಳದ ಡಬಲ್ ಮೊತ್ತ ಗಳಿಸಿದ್ದೇವೆ. ಕನ್ನಡ ಪ್ರೇಕ್ಷಕರಿಗೆ ಥ್ಯಾಂಕ್ಸ್.

  ರಿಮೇಕ್ ಮಾಡುವಂತೆ ತೆಲುಗು ತಮಿಳು ಕಡೆಯಿಂದ ಆಫರ್ ಬಂದಿತ್ತು.
  ನನಗೆ ಭಾಷೆ ಬರಲ್ಲ ನಿರ್ದೇಶಿಸಲು ಒಪ್ಪಲಿಲ್ಲ. ರಿಮೇಕ್ ರೈಟ್ಸ್ ಮಾರಾಟಕ್ಕೆ ಎಲ್ಲಾ ಭಾಷೆಗಳು ಸೇರಿ ಲಕ್ಷಗಳ ಲೆಕ್ಕದಲ್ಲಿ ರೇಟ್ ಫಿಕ್ಸ್ ಮಾಡಿದರು ನಾನು ಒಪ್ಪಲಿಲ್ಲ.

  ಚಿತ್ರದ ಮುಂದಿನ ಪಯಣ ಎಲ್ಲಿಗೆ?

  ಚಿತ್ರದ ಬಗ್ಗೆ ಪ್ರಚಾರ ಕಾರ್ಯ ಮುಂದುವರೆದಿದೆ. ಮುಂಗಾರು ಮಳೆಯಂಥ ಯಶಸ್ಸು ಸಿಗಲಿದೆ ಎಂದು ಎಲ್ಲರೂ ಹೇಳುತ್ತಿದ್ದಾರೆ. ನಮಗೆ ಆ ರೀತಿ ಹಗಲುಕನಸು ಇಲ್ಲ. 25 ದಿನವಾದ ಮೇಲೆ ರಾಜ್ಯದ ಪ್ರಮುಖ ನಗರಗಳಲ್ಲಿ ಸಂವಾದ ಕಾರ್ಯಕ್ರಮ ನಡೆಸುವ ಯೋಜನೆಯಿದೆ. ಗಂಧದಗುಡಿ.ಕಾಂ ಸೇರಿದಂತೆ ಸಿನಿಮಾ ಫೋರಂ ಹುಡುಗರು ಕೂಡಾ ವಿಶೇಷ ಪ್ರದರ್ಶನಕ್ಕೆ ಬೇಡಿಕೆ ಇಟ್ಟಿದ್ದಾರೆ.

  ಹಾಡುಗಳ ವಿಡಿಯೋ ಸಿಡಿ, ಚಿತ್ರ ತಂಡದ ಯಶಸ್ಸು ಹಾಗೂ ಪರಿಶ್ರಮದ ಕಥನವನ್ನು ಅಕ್ಷರದಲ್ಲಿ ತುಂಬಿಸಿ ಡಾಕ್ಯುಮೆಂಟ್ ಮಾಡುವ ಆಸೆಯೂ ಇದೆ ಎಂದರು.

  English summary
  Delighted, thrilled, surprised, yet calm! This is how the team Simple Agi Ondh Love Story looked when they visited Oneindia to share their moments of success. Lead actor Rakshith Shetty, without his leading lady in the movie along with the captain of the ship Suni aka Sunil Kumar came to our office on Mar.20

  Kannada Photos

  Go to : More Photos

  ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more