»   » 'ಗಲ್ಲಿ ಗಾಸಿಪ್' ಕೇಳಿ ಫುಲ್ ಗರಂ ಆದ ಮದುಮಗಳು ಅಮೂಲ್ಯ.!

'ಗಲ್ಲಿ ಗಾಸಿಪ್' ಕೇಳಿ ಫುಲ್ ಗರಂ ಆದ ಮದುಮಗಳು ಅಮೂಲ್ಯ.!

Posted By:
Subscribe to Filmibeat Kannada

ನಟಿ ಅಮೂಲ್ಯ ಈಗಷ್ಟೇ ಹೊಸ ಬದುಕಿಗೆ ಕಾಲಿಟ್ಟಿದ್ದಾರೆ. ಜಗದೀಶ್ ರವರೊಂದಿಗೆ ನವ ಬಾಳಿಗೆ ಅಡಿಯಿಟ್ಟಿದ್ದಾರೆ. ಅಷ್ಟಕ್ಕೂ, ನಟಿ ಅಮೂಲ್ಯ ಹಾಗೂ ಜಗದೀಶ್ ಒಂದಾಗಲು ಪ್ರಮುಖ ಕಾರಣ ಗೋಲ್ಡನ್ ಸ್ಟಾರ್ ಗಣೇಶ್ ಹಾಗೂ ಪತ್ನಿ ಶಿಲ್ಪಾ ಗಣೇಶ್.

ಗಣೇಶ್ ದಂಪತಿಗೆ ಎರಡೂ ಫ್ಯಾಮಿಲಿ (ಅಮೂಲ್ಯ ಕುಟುಂಬ ಹಾಗೂ ಜಗದೀಶ್ ಕುಟುಂಬ) ತುಂಬಾ ಕ್ಲೋಸ್. ಹೀಗಾಗಿ ಗಣೇಶ್ ನಿವಾಸ 'ಗಣಪ'ದಲ್ಲಿಯೇ ಅಮೂಲ್ಯ-ಜಗದೀಶ್ ಮದುವೆ ನಿಶ್ಚಯ ಆಗಿದ್ದು, ಹಾಗೂ ಅಮೂಲ್ಯ ಮೆಹಂದಿ ಸಂಭ್ರಮ ಕೂಡ ನಡೆದಿದ್ದು. ಇದನ್ನ ತಪ್ಪಾಗಿ ಅರ್ಥೈಸಿದ ಕೆಲವರು ಏನೇನೋ ತಳುಕು ಹಾಕಲು ಆರಂಭಿಸಿದರು.

ಅಮೂಲ್ಯ ಮೇಲೆ ಗಣೇಶ್ ದಂಪತಿ ಇಟ್ಟಿರುವ ಪ್ರೀತಿ, ಮಮತೆಯನ್ನ ಅರ್ಥ ಮಾಡಿಕೊಳ್ಳದೆ ಗುಸುಗುಸು ಆರಂಭಿಸಿದವರ ವಿರುದ್ಧ ಗಣೇಶ್ ಕೋಪಗೊಂಡಿದ್ದಾರೆ. 'ಗಲ್ಲಿ ಗಾಸಿಪ್' ಕೇಳಿ ಮದುಮಗಳು ಅಮೂಲ್ಯ ಕೂಡ ಗರಂ ಆಗಿದ್ದಾರೆ. ಮುಂದೆ ಓದಿ...

ಏನು ಆ ಗಾಸಿಪ್.?

ಬಿಜೆಪಿ ಪಕ್ಷದ ರಾಜ್ಯ ಮಹಿಳಾ ಮೋರ್ಚಾ ಉಪಾಧ್ಯಕ್ಷೆ ಆಗಿರುವ ಶಿಲ್ಪಾ ಗಣೇಶ್, ಮುಂಬರುವ ವಿಧಾನ ಸಭೆ ಚುನಾವಣೆಯ ಟಿಕೆಟ್ ಪಡೆಯಲು, ಬಿಜೆಪಿಯ ಮಾಜಿ ಕೌನ್ಸಿಲರ್ ರವರ ಪುತ್ರ ಜಗದೀಶ್ ರವರಿಗೆ ಅಮೂಲ್ಯ ರವರನ್ನ ಕೊಟ್ಟು ಮದುವೆ ಮಾಡಿಸಿದ್ದಾರೆ ಎಂದು ಗುಲ್ಲೆಬ್ಬಿದೆ.

ಕಿಡಿಕಾರಿದ ಗಣೇಶ್

''ಟಿಕೆಟ್ ಪಡೆಯುವುದಕ್ಕೆ ಈ ತರಹ ಮಾಡುವ ಅವಶ್ಯಕತೆ ಶಿಲ್ಪಾಗಿಲ್ಲ. ಮದುವೆ ಮಾಡಿಸಿ ರಾಜಕೀಯದಲ್ಲಿ ಬೆಳೆಯುವ ಸ್ಥಿತಿ ನಮಗೆ ಬಂದಿಲ್ಲ. ಒಳ್ಳೆಯ ಕೆಲಸದ ಹಿಂದೆ ತಳುಕು ಹಾಕುವುದು ಅದೆಂಥ ವಿಕೃತಿ'' ಎಂದು ದಿನಪತ್ರಿಕೆಯೊಂದಕ್ಕೆ ಬೇಸರದಿಂದ ನುಡಿದಿದ್ದಾರೆ ನಟ ಗಣೇಶ್.[ಅಮೂಲ್ಯ ಮೆಹೆಂದಿ ಶಾಸ್ತ್ರಕ್ಕೆ ಸಿಂಗಾರಗೊಂಡ ಗಣೇಶ್ ಮನೆ: ಈ ದಿನದ ವಿಶೇಷತೆಗಳೇನು?]

ರಾಜಕೀಯಕ್ಕೂ ಮದುವೆಗೂ ಯಾವುದೇ ಸಂಬಂಧ ಇಲ್ಲ!

''ಅಮೂಲ್ಯ ಮದುವೆ ಹಿಂದೆ ನಾವಿದ್ದಿದ್ದಕ್ಕೆ ಕಾರಣ ಆಕೆಯ ಸ್ನೇಹ. ಅಮೂಲ್ಯ ನನ್ನ ಸಹ ನಟಿ ಮಾತ್ರ ಅಲ್ಲ. ನಮ್ಮ ಫ್ಯಾಮಿಲಿ ಫ್ರೆಂಡ್ ಕೂಡ ಹೌದು. ಜಗದೀಶ್ ಕುಟುಂಬ ಕೂಡ ನನ್ನ ಫ್ಯಾಮಿಲಿ ಫ್ರೆಂಡ್. ಹೀಗಾಗಿ ನಮ್ಮ ಮನೆಯಲ್ಲಿಯೇ ಅವರಿಬ್ಬರ ಮದುವೆ ವಿಷಯ ಪ್ರಸ್ತಾಪ ಆಯಿತು. ಎರಡೂ ಮನೆಯವರು ಜಾತಕ ನೋಡಿ, ಪರಸ್ಪರ ಒಪ್ಪಿದ್ದರಿಂದ ಮದುವೆ ಆಯ್ತು. ಇಲ್ಲಿ ರಾಜಕೀಯಕ್ಕೂ, ಮದುವೆಗೂ ಯಾವುದೇ ಸಂಬಂಧ ಇಲ್ಲ'' - ಗಣೇಶ್, ನಟ

ಗರಂ ಆದ ಅಮೂಲ್ಯ

''ನನ್ನ ಮದುವೆಗೆ ಗಣೇಶ್ ಸರ್ ಮತ್ತು ಶಿಲ್ಪಾ ಮೇಡಂ ಮುಂದೆ ಬಂದಿದ್ದು, ನನ್ನ ಹಾಗೂ ಜಗದೀಶ್ ಕುಟುಂಬದ ಮೇಲೆ ಅವರಿಟ್ಟಿರುವ ಇಟ್ಟಿರುವ ಪ್ರೀತಿ ಹಾಗೂ ಗೌರವದಿಂದ ಮಾತ್ರ. ಅದು ಬಿಟ್ಟು ಬೇರೆ ಉದ್ದೇಶಕ್ಕಾಗಿ ಅಲ್ಲ'' ಎಂದು ಟ್ವೀಟ್ ಮಾಡಿದ್ದಾರೆ ಮದುಮಗಳು ಅಮೂಲ್ಯ.[ಅಮೂಲ್ಯ ಮದುವೆಗೆ ಮುಂಚೆ ಶಿಲ್ಪಾ ಗಣೇಶ್ ಕೊಡ್ತಿರುವ ಗಿಫ್ಟ್!]

ಅವರಿಬ್ಬರು ನನ್ನ ಪ್ರಾಣ

''ಬೇರೆ ಬೇರೆ ವಿಷಯಗಳಿಗೆ ತಳುಕು ಹಾಕಬೇಡಿ. ಜೀವನದಲ್ಲಿ ಏನು ಬೇಕೋ, ಅದೆಲ್ಲವನ್ನೂ ಪಡೆಯುವ ಶಕ್ತಿ ಅವರಿಬ್ಬರಿಗೆ (ಗಣೇಶ್ ಹಾಗೂ ಶಿಲ್ಪಾ) ಇದೆ. ಅವರಿಬ್ಬರು ನನ್ನ ಪ್ರಾಣ'' ಎಂದಿದ್ದಾರೆ ನಟಿ ಅಮೂಲ್ಯ.[ಚಿತ್ರಗಳು: ಪಂಚತಾರಾ ಹೋಟೆಲ್ ನಲ್ಲಿ 'ಅಮೂಲ್ಯ-ಜಗದೀಶ್' ವೆಡ್ಡಿಂಗ್ ಪಾರ್ಟಿ]

ನಾನ್ ಸೆನ್ಸ್ ಎಂದ ಹರ್ಷಿಕಾ

''ಇದು ನಾನ್ ಸೆನ್ಸ್. ಸತ್ಯ ತಿಳಿದುಕೊಳ್ಳದೇ ಬೇಕಾಬಿಟ್ಟಿ ಮಾತನಾಡಬಾರದು. ಅಮೂಲ್ಯ ಮೇಲೆ ಶಿಲ್ಪಾ ಗಣೇಶ್ ಇಟ್ಟಿರುವ ಪ್ರೀತಿ ನಮಗೆಲ್ಲ ಗೊತ್ತು'' ಎಂದು ನಟಿ ಹರ್ಷಿಕಾ ಪೂಣಚ್ಚ ಕೂಡ ಟ್ವೀಟ್ ಮಾಡಿದ್ದಾರೆ.[ಗಣೇಶ್ ಹಾಗೂ ಶಿಲ್ಪಾ ಗಣೇಶ್ ಗೆ 'ಥ್ಯಾಂಕ್ಸ್' ಹೇಳಿದ ನಟಿ ಅಮೂಲ್ಯ]

English summary
Kannada Actress Amulya has taken her twitter account to express her displeasure against baseless statements on Shilpa Ganesh.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada