»   » 'ಕಿರಿಕ್ ಪಾರ್ಟಿ' ನಿರ್ದೇಶಕ ರಿಷಬ್ ಶೆಟ್ಟಿ ಚಿತ್ರದಲ್ಲಿ ನಟಿಸುವ ಸುವರ್ಣಾವಕಾಶ

'ಕಿರಿಕ್ ಪಾರ್ಟಿ' ನಿರ್ದೇಶಕ ರಿಷಬ್ ಶೆಟ್ಟಿ ಚಿತ್ರದಲ್ಲಿ ನಟಿಸುವ ಸುವರ್ಣಾವಕಾಶ

Posted By:
Subscribe to Filmibeat Kannada

'ಕಿರಿಕ್ ಪಾರ್ಟಿ' ಸಿನಿಮಾದ ನಿರ್ದೇಶಕ ರಿಷಬ್ ಶೆಟ್ಟಿ ಈಗ ಹೊಸ ಸಿನಿಮಾ ಮಾಡುತ್ತಿದ್ದಾರೆ. 'ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೂಡು' ಎಂಬ ವಿಭಿನ್ನ ಸಿನಿಮಾವನ್ನು ರಿಷಬ್ ಶೆಟ್ಟಿ ಕೈಗೆತ್ತಿಕೊಂಡಿದ್ದು, ಈ ಚಿತ್ರದಲ್ಲಿ ನಟಿಸಲು ಪ್ರತಿಭಾವಂತರಿಗೆ ಅವಕಾಶ ಕಲ್ಪಿಸಲಾಗಿದೆ.

ರಿಷಬ್ ಶೆಟ್ಟಿ ತಮ್ಮ ಈ ಹೊಸ ಸಿನಿಮಾಗಾಗಿ ಕಲಾವಿದರ ಹುಡುಕಾಟದಲ್ಲಿದ್ದಾರೆ. ಸಿನಿಮಾದ ನಟ ಮತ್ತು ನಟಿಯಿಂದ ಹಿಡಿದು ಚಿತ್ರದ ಪ್ರಮುಖ ಪಾತ್ರಗಳಿಗೆ ಈಗ ಆಡಿಷನ್ ಕರೆದಿದ್ದಾರೆ. 10 ವರ್ಷದಿಂದ 60 ವರ್ಷದ ಒಳಗಿನ ಯಾರೂ ಬೇಕಾದರೂ ಈ ಆಡಿಷನ್ ನಲ್ಲಿ ಭಾಗವಹಿಸಬಹುದಾಗಿದೆ.

Casting Call For Director Rishab Shetty New Movie

ಇದೇ ಆಗಸ್ಟ್ 13 ರಂದು ಸಿನಿಮಾದ ಆಡಿಷನ್ ಇದ್ದು, ಬೆಳ್ಳಗೆ 9 ಗಂಟೆಯಿಂದ ಸಂಜೆ 6 ಗಂಟೆ ವರೆಗೆ ನಡೆಯಲಿದೆ. ಕಾಸರಗೂಡಿನ ಕೂಡ್ಲು ಗ್ರಾಮದ ಶ್ರೀ ಗೋಪಾಲಕೃಷ್ಣ ಪ್ರೌಢ ಶಾಲೆಯಲ್ಲಿ ಆಡಿಷನ್ ಏರ್ಪಡಿಸಲಾಗಿದೆ. ಸಿನಿಮಾದ ಚಿತ್ರೀಕರಣ ಕಾಸರಗೂಡಿನ ಸುತ್ತ ಮುತ್ತ ನಡೆಯಲಿದ್ದು, ಆ ಪ್ರದೇಶದ ನಟ ನಟಿಯರಿಗೆ ಪ್ರಮುಖ ಆದ್ಯತೆ ನೀಡಲಾಗಿದೆ.

English summary
Casting Call For Director Rishab Shetty New Movie

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada