For Quick Alerts
  ALLOW NOTIFICATIONS  
  For Daily Alerts

  ರಾಮ ಮಂದಿರ ನಿರ್ಮಾಣಕ್ಕೆ ರಾಕಿಂಗ್ ಸ್ಟಾರ್ ಯಶ್ 50 ಕೋಟಿ ರೂ. ದೇಣಿಗೆ?

  |

  ಇದು ಕಲಿಗಾಲ. ಪ್ರತ್ಯಕ್ಷವಾಗಿ ಕಂಡರೂ ಪ್ರಮಾಣಿಸಿ ನೋಡು ಎನ್ನುವ ಗಾದೆ ಮಾತೇ ಇದೆ. ಅಯೋಧ್ಯೆ ರಾಮಮಂದಿರ ನಿರ್ಮಾಣಕ್ಕೆ ಯಶ್ 50 ಕೋಟಿ ರೂ. ದೇಣಿಗೆ ಕೊಟ್ಟಿದ್ದಾರೆ ಎನ್ನುವ ಸುದ್ದಿ ಕಳೆದೆರಡು ದಿನಗಳಿಂದ ಹರಿದಾಡ್ತಿದೆ. 'KGF- 2' ಸಿನಿಮಾ 1300 ಕೋಟಿ ರೂ. ಕಲೆಕ್ಷನ್ ಮಾಡಿ ಸದ್ದು ಮಾಡಿದ್ದ ಬೆನ್ನಲ್ಲೇ ಈಗೊಂದು ಸುದ್ದಿ ನೋಡಿ ಕೆಲವರು ನಿಜ ಎಂದುಕೊಂಡಿದ್ದಾರೆ.

  ರಾಕಿಂಗ್ ಸ್ಟಾರ್ ಯಶ್ 'KGF- 2' ಸೂಪರ್ ಹಿಟ್ ಖುಷಿಯಲ್ಲಿದ್ದಾರೆ. ಇತ್ತೀಚೆಗೆ ಮಡದಿ ರಾಧಿಕಾ ಪಂಡಿತ್ ಜೊತೆ ವಿದೇಶ ಪ್ರವಾಸಕ್ಕೂ ಹೋಗಿ ಬಂದಿದ್ದರು. ಯಶ್‌ ಮುಂದಿನ ಸಿನಿಮಾ ಯಾವುದು ಅನ್ನುವ ಕುತೂಹಲ ಅಭಿಮಾನಿಗಳಲ್ಲಿ ಇದೆ. ರಾಕಿಂಗ್ ಸ್ಟಾರ್ ಮಾತ್ರ ಸರಿಯಾದ ಕಥೆ ಸಿಗುವವರೆಗೂ ಮಾತನಾಡುವುದು ಬೇಡ ಎಂದು ನಿರ್ಧರಿಸಿದ್ದಾರೆ. 'KGF' ಸರಣಿ ಸಿನಿಮಾಗಳ ರೀತಿಯಲ್ಲೇ ಮತ್ತೊಂದು ಹೈವೋಲ್ಟೇಜ್ ಪ್ರಾಜೆಕ್ಟ್‌ಗೆ ತೆರೆಮರೆಯಲ್ಲಿ ಕಸರತ್ತು ನಡೆಸುತ್ತಿದ್ದಾರೆ. ಇತ್ತೀಚೆಗೆ ನಟಿ, ಸಂಸದೆ ಸುಮಲತಾ ಅಂಬರೀಶ್ ಬರ್ತ್‌ಡೇ ಪಾರ್ಟಿಯಲ್ಲಿ ಯಶ್ ಭಾಗವಹಿಸಿದ್ದರು.

  Recommended Video

  Yash | ಈ ಸುದ್ದಿ ಕೇಳಿ ಚರ್ಚೆಗೆ ಇಳಿದ ಜನ | Ram Mandir | Filmibeat Kannada

  ಯಶ್ ಮುಂದಿನ ಸಿನಿಮಾ ಯಾವುದು ಅನ್ನುವ ಚರ್ಚೆಯ ನಡುವೆ ಹೊಸ ಸುದ್ದಿ ಅಭಿಮಾನಿಗಳ ಹುಬ್ಬೇರಿಸಿದೆ. ಯಶ್ ರಾಮ ಮಂದಿರ ನಿರ್ಮಾಣಕ್ಕೆ 50 ಕೋಟಿ ರೂ. ದೇಣಿಗೆ ಕೊಟ್ಟಿದ್ದಾರೆ ಎನ್ನುವ ಸುದ್ದಿ ಕೇಳಿ ಕೆಲವರು ಅಚ್ಚರಿಗೊಂಡಿದ್ದಾರೆ. ಆದರೆ ಇದು ಸುಳ್ಳು ಎನ್ನುವುದು ಖಚಿತವಾಗುತ್ತಿದೆ. ಒಂದು ವೇಳೆ ಯಶ್ ನಿಜಕ್ಕೂ ಅಷ್ಟು ದೊಡ್ಡ ಮೊತ್ತದ ಹಣವನ್ನು ದೇಣಿಗೆಯಾಗಿ ನೀಡಿದ್ದರೆ ಇಷ್ಟೊತ್ತಿಗೆ ದೊಡ್ಡ ಸುದ್ದಿ ಆಗುತ್ತಿತ್ತು. ಇದು ಕೇವಲ ಗಾಳಿಸುದ್ದಿ ಅಷ್ಟೆ ಅನ್ನುವುದು ಸ್ಪಷ್ಟವಾಗುತ್ತಿದೆ.

  50 ಕೋಟಿ ದೇಣಿಗೆ ಸುದ್ದಿ ಹುಟ್ಟಿಕೊಂಡಿದ್ದು ಹೇಗೆ?

  50 ಕೋಟಿ ದೇಣಿಗೆ ಸುದ್ದಿ ಹುಟ್ಟಿಕೊಂಡಿದ್ದು ಹೇಗೆ?

  ಇತ್ತೀಚೆಗೆ ಸಂತೋಷ್ ತ್ರಿಪಾಠಿ ಅನ್ನುವ ಫೇಸ್‌ಬುಕ್ ಖಾತೆಯಲ್ಲಿ ಯಶ್ ದೇವಸ್ಥಾನದಲ್ಲಿ ಇರುವ ಫೋಟೊವೊಂದರನ್ನು ಶೇರ್ ಮಾಡಿದ್ದರು. "ದಕ್ಷಿಣದ ಸ್ಟಾರ್ ನಟ ಯಶ್‌ ಕುಮಾರ್ ಅಯೋಧ್ಯೆ ರಾಮಮಂದಿರದ ರಾಮ್‌ಲಲ್ಲಾಗೆ ಭೇಟಿ ನೀಡಿದ್ದರು. ಈ ವೇಳೆ ಮಂದಿರ ನಿರ್ಮಾಣಕ್ಕೆ 50 ಕೋಟಿ ರೂ. ದೇಣಿಗೆ ಘೋಷಿಸಿದ್ದಾರೆ" ಎಂದು ಫೋಟೊ ಜೊತೆಗೆ ಬರೆದಿದ್ದರು. ಈ ಪೋಸ್ಟ್ ವೈರಲ್ ಆಗಿ ಇಂತಾದೊಂದು ಸುದ್ದಿ ಹರಿದಾಡಲು ಶುರುವಾಗಿತ್ತು.

  ಯಶ್ ತಿರುಪತಿಗೆ ಭೇಟಿ ನೀಡಿದ್ದ ಫೋಟೊ

  ಯಶ್ ತಿರುಪತಿಗೆ ಭೇಟಿ ನೀಡಿದ್ದ ಫೋಟೊ

  ಅಸಲಿಗೆ ರಾಕಿಂಗ್ ಸ್ಟಾರ್ ಯಶ್ ರಾಮಮಂದಿರಕ್ಕೆ ಭೇಟಿ ಕೊಟ್ಟೇ ಇಲ್ಲ. 'KGF- 2' ಸಿನಿಮಾ ರಿಲೀಸ್ ಹೊಸ್ತಿಲಲ್ಲಿ ಯಶ್ ತಿರುಪತಿಗೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ದರು. ಈ ವೇಳೆ ದೇವಸ್ಥಾನದಲ್ಲಿ ತೆಗೆದ ಫೋಟೊ ಇದು. ಇದೇ ಫೋಟೋವನ್ನು ಯಾರೋ ರಾಮಮಂದಿರಕ್ಕೆ ಭೇಟಿ ನೀಡಿದ್ದ ಫೋಟೊ ಎಂದು ಹೇಳಿ 50 ಕೋಟಿ ರೂ. ದೇಣಿಗೆ ಸುದ್ದಿಯನ್ನು ಹಬ್ಬಿಸಿದ್ದಾರೆ.

  ಬದಲಾಯ್ತು ರಾಕಿಂಗ್ ಸ್ಟಾರ್ ಖದರ್

  ಬದಲಾಯ್ತು ರಾಕಿಂಗ್ ಸ್ಟಾರ್ ಖದರ್

  ಆರೇಳು ವರ್ಷಗಳ ಕಾಲ ಯಶ್ 'KGF' ಸರಣಿ ಚಿತ್ರಗಳಿಗಾಗಿ ವ್ಯಯಸಿದ್ದರು. ಅದರ ಫಲವಾಗಿ ಇವತ್ತು ಪ್ಯಾನ್ ಇಂಡಿಯಾ ಸೂಪರ್ ಸ್ಟಾರ್ ಮೆರೆಯುತ್ತಿದ್ದಾರೆ. ಚಿತ್ರವೊಂದಕ್ಕೆ 30ರಿಂದ 40 ಕೋಟಿ ರೂ. ಸಂಭಾವನೆ ಪಡೆಯುವ ಮಟ್ಟಿಗೆ ಬೆಳೆದಿದ್ದಾರೆ. ಬಾಲಿವುಡ್ ನಿರ್ಮಾಪಕರು ಕೂಡ ಯಶ್ ಜೊತೆ ಸಿನಿಮಾ ಮಾಡಲು ಮುಗಿಬಿದ್ದಿದ್ದಾರೆ. ಅಕ್ಕಪಕ್ಕದ ಇಂಡಸ್ಟ್ರಿಗಳ ಸ್ಟಾರ್ ನಿರ್ದೇಶಕರು ರಾಕಿಭಾಯ್‌ಗೆ ಕಥೆ ಸಿದ್ಧಪಡಿಸುತ್ತಿದ್ದಾರೆ.

  ಯಶ್ 19 ಸಿನಿಮಾ ಯಾವುದು?

  ಯಶ್ 19 ಸಿನಿಮಾ ಯಾವುದು?

  'KGF- 2' ನಂತರ ವಾಟ್ ನೆಕ್ಸ್ಟ್ ಎಂದು ಅಭಿಮಾನಿಗಳು ಕೇಳುತ್ತಿದ್ದಾರೆ. ಯಶ್ ಮುಂದಿನ ಸಿನಿಮಾ ಯಾವುದು ಅನ್ನು ಮಿಲಿಯನ್ ಡಾಲರ್ ಪ್ರಶ್ನೆಗೆ ಇನ್ನು ಉತ್ತರ ಸಿಕ್ಕಿಲ್ಲ. ನರ್ತನ್ ಕಾಂಬಿನೇಷನ್ ಸಿನಿಮಾ ತಡವಾಗುತ್ತಿದೆ. ಹಾಗಾದರೆ ಯಶ್ ಮುಂದಿನ ಚಿತ್ರಕ್ಕೆ ಯಾರು ಆಕ್ಷನ್ ಕಟ್ ಹೇಳುತ್ತಾರೆ? ಕತೆ ಏನು? ಸಿನಿಮಾ ಯಾವಾಗ ಸೆಟ್ಟೇರುತ್ತದೆ ಎಂದು ಕಾತರದಿಂದ ಎಲ್ಲರೂ ಕಾಯುವಂತಾಗಿದೆ.

  English summary
  Did KGF Star Yash Donated Rs 50 Crore For Ram Mandir Construction Here’s The Truth. Know More.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X