»   » ನಿಖಿಲ್ 2ನೇ ಚಿತ್ರದಿಂದ ಹಿಂದೆ ಸರಿದ್ರಾ 'ಬಹುದ್ದೂರ್' ಚೇತನ್?

ನಿಖಿಲ್ 2ನೇ ಚಿತ್ರದಿಂದ ಹಿಂದೆ ಸರಿದ್ರಾ 'ಬಹುದ್ದೂರ್' ಚೇತನ್?

Posted By:
Subscribe to Filmibeat Kannada

ಎಲ್ಲ ಅಂದುಕೊಂಡಂತೆ ಆಗಿದ್ದರೇ, ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರ ಪುತ್ರ ನಿಖಿಲ್ ಕುಮಾರ್ ಅವರ 2ನೇ ಚಿತ್ರ ಇಂದು (ಜೂನ್ 5) ಶುರುವಾಗಬೇಕಿತ್ತು. ಆದ್ರೆ, ಸಿನಿಮಾ ಸೆಟ್ಟೇರಲಿಲ್ಲ. ಈ ಮಧ್ಯೆ ನಿಖಿಲ್ 2ನೇ ಚಿತ್ರದ ಬಗ್ಗೆ ಹೊಸ ಸುದ್ದಿಯೊಂದು ಹರಿದಾಡುತ್ತಿದೆ.[ಜೂನ್ 5 ರಿಂದ ನಿಖಿಲ್ ಕುಮಾರ್ 2ನೇ ಸಿನಿಮಾ ಚಿತ್ರೀಕರಣ ಆರಂಭ]

ಈಗಾಗಲೇ ಖಚಿತವಾಗಿರುವಂತೆ 'ಬಹುದ್ದೂರ್' ಖ್ಯಾತಿಯ ಚೇತನ್ ಕುಮಾರ್ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಆದ್ರೆ, ಚೇತನ್ ಈ ಚಿತ್ರದಿಂದ ಹಿಂದೆ ಸರಿದಿದ್ದಾರೆ ಎಂಬ ಶಾಕಿಂಗ್ ಸುದ್ದಿ ಈಗ ಗಾಂಧಿನಗರದಲ್ಲಿ ರೌಂಡ್ ಹೊಡಿತಿದೆ. ಈ ಬಗ್ಗೆ ನಿರ್ದೇಶಕ ಚೇತನ್ ಕುಮಾರ್ ಕೂಡ ಮಾತನಾಡಿದ್ದು, ಏನು ಹೇಳಿದ್ರು ಅಂತ ಮುಂದೆ ಓದಿ......

ನಿಖಿಲ್ ಚಿತ್ರದಿಂದ ಚೇತನ್ ಹಿಂದೆ ಸರಿದ್ರಾ!

ಪ್ಲಾನ್ ಪ್ರಕಾರ ನಿಖಿಲ್ ಅವರ 2ನೇ ಚಿತ್ರ ಜೂನ್ 5 ರಂದು ಸೆಟ್ಟೇರಬೇಕಿತ್ತು. ಆದ್ರೆ, ಈ ಹಿಂದಿನ ನಿರ್ಧಾರದಂತೆ ಚಿತ್ರಕ್ಕೆ ತಯಾರಿ ಆಗಿಲ್ಲದ ಕಾರಣ ಇದು ಸಾಧ್ಯವಾಗಲಿಲ್ಲ. ಇದರಿಂದ ಮತ್ತಷ್ಟು ದಿನ ತಡವಾಗುವ ಸಾಧ್ಯತೆ ಇದೆಯಂತೆ. ಇಂತಹದೊಂದು ಸುದ್ದಿ ಹುಟ್ಟಿಕೊಳ್ಳಲು ಕಾರಣ ಚೇತನ್ ಕುಮಾರ್ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಇನ್ನೊಂದು ಚಿತ್ರ.[ನಿಖಿಲ್ ಕುಮಾರ್ ಎರಡನೇ ಚಿತ್ರಕ್ಕೆ ನಿರ್ದೇಶಕರು ಫಿಕ್ಸ್?]

'ಭರ್ಜರಿ'ಯಿಂದ ನಿಖಲ್ ಸಿನಿಮಾ ಲೇಟ್ ಆಯ್ತಾ!

ಚೇತನ್ ಕುಮಾರ್ ನಿರ್ದೇಶನ ಮಾಡುತ್ತಿರುವ 'ಭರ್ಜರಿ' ಸಿನಿಮಾ ಬಹುತೇಕ ಚಿತ್ರೀಕರಣ ಮುಗಿಸಿದೆ. ಸದ್ಯ, ಪೋಸ್ಟ್ ಪ್ರೊಡಕ್ಷನ್ ಕೆಲಸ ಬಾಕಿಯಿದ್ದು, ಅದಕ್ಕಾಗಿ ಚೇತನ್ ಅವರಿಗೆ ಮತ್ತಷ್ಟು ಸಮಯ ಬೇಕಾಗಿದೆ ಅಂತೆ. ಇದರಿಂದ ನಿಖಿಲ್ ಸಿನಿಮಾ ನಿಗಧಿಯಂತೆ ಶುರುವಾಗಲು ಕಷ್ಟವಾಗುತ್ತಿದೆ ಎನ್ನಲಾಗಿದೆ.[ನಿಖಿಲ್‌ಗೆ ಫಿಕ್ಸ್ ಆಗಿದ್ದ 'ಹೊಯ್ಸಳ' ಟೈಟಲ್ ಶಿವಣ್ಣನಿಗೆ ಮೀಸಲಂತೆ..]

ನಿರ್ದೇಶಕ ಚೇತನ್ ಹೇಳಿದ್ದೇನು?

''ಈ ರೀತಿಯಾದ ಸುದ್ದಿ ಹೇಗೆ ಹಬ್ಬಿಕೊಂಡಿದೆ ಎಂಬುದು ಗೊತ್ತಿಲ್ಲ. ನಾನು ತಿರುಪತಿಗೆ ಹೋಗಿದ್ದೇ. 'ಭರ್ಜರಿ' ಚಿತ್ರದ ಕೆಲಸ ಇದೆ. ಅದು ಮುಗಿಸಿ ನಿಖಿಲ್ ಸಿನಿಮಾ ಶುರು ಮಾಡ್ತೀವಿ. ಅದನ್ನ ಬಿಟ್ಟರೇ ಬೇರೆ ಏನೂ ಸಮಸ್ಯೆ ಇಲ್ಲ'' ಎಂದು ಚೇತನ್ ಕುಮಾರ್ ಫಿಲ್ಮಿಬೀಟ್ ಗೆ ತಿಳಿಸಿದರು.

ಮತ್ಯಾವಾಗ ಶುರುವಾಗುತ್ತೆ?

ಜೂನ್ 5 ರಿಂದ ನಿಖಿಲ್ ಎರಡನೇ ಸಿನಿಮಾದ ಚಿತ್ರೀಕರಣ ಶುರುವಾಗಬೇಕಿತ್ತು. ಈ ವಿಷ್ಯವನ್ನ ಖುದ್ದು ನಿಖಿಲ್ ಕುಮಾರ್ ಅವರೇ ತಮ್ಮ ಫೇಸ್ ಬುಕ್ ನಲ್ಲಿ ಹೇಳಿಕೊಂಡಿದ್ದರು. ಆದ್ರೆ, ಇಂದು (ಜೂನ್ 5) ಸಿನಿಮಾ ಸ್ಟಾರ್ಟ್ ಆಗಲಿಲ್ಲ. ಮತ್ಯಾವಾಗ ಶುರುವಾಗುತ್ತೆ ಅಂತ ಕಾದು ನೋಡಬೇಕಿದೆ?

ಕಾದು ನೋಡಬೇಕಿದೆ!

ನಿರ್ದೇಶಕ ಚೇತನ್ ಕುಮಾರ್, ಚೆನ್ನಾಂಬಿಕ ಫಿಲ್ಮಂಸ್ ಸಂಸ್ಥೆಯ ಜೊತೆ ಈ ಬಗ್ಗೆ ಮಾತನಾಡಲಿದ್ದಾರೆ. ಅದಾದ ನಂತರ ನಿಖಿಲ್ 2ನೇ ಚಿತ್ರದ ಮತ್ತಷ್ಟು ಮಾಹಿತಿ ಸಿಗಲಿದೆ. ಜಾಗ್ವಾರ್ ಚಿತ್ರದ ನಂತರ ನಿಖಿಲ್ ಅಭಿನಯಿಸುತ್ತಿರುವ ಚಿತ್ರ ಇದಾಗಿದ್ದು, ಈ ಚಿತ್ರದಲ್ಲಿ ಮಾಡೆಲ್ ರಿಯಾ ನಲವಾಡೆ ನಿಖಿಲ್ ಗೆ ಜೋಡಿಯಾಗಲಿದ್ದಾರೆ.['ಜಾಗ್ವಾರ್' ನಾಯಕನಿಗಾಗಿ ಬಂದ್ಲು ಬೆಳಗಾವಿ ಸುಂದರಿ!]

English summary
According to the Latest Buzz in Sandalwood, Director Chethan Kumar Dropped From Nikhil Kumar's 2nd Movie.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada