»   » ರವಿಚಂದ್ರನ್ ಹುಟ್ಟುಹಬ್ಬವನ್ನು ಮತ್ತಷ್ಟು ಸ್ಪೆಷಲ್ ಮಾಡಿದ ಮಗ

ರವಿಚಂದ್ರನ್ ಹುಟ್ಟುಹಬ್ಬವನ್ನು ಮತ್ತಷ್ಟು ಸ್ಪೆಷಲ್ ಮಾಡಿದ ಮಗ

Posted By:
Subscribe to Filmibeat Kannada

ಕರುನಾಡ ಕನಸುಗಾರ, ಕ್ರೇಜಿಸ್ಟಾರ್ ವಿ.ರವಿಚಂದ್ರನ್ ಅವರ ಈ ವರ್ಷದ ಹುಟ್ಟುಹಬ್ಬ ನಿಜಕ್ಕೂ ಸ್ಪೆಷಲ್ ಆಗಿದೆ. ಅದನ್ನು ಸ್ಪೆಷಲ್ ಆಗಿ ಮಾಡಿರುವುದು ಬೇರೆ ಯಾರೂ ಅಲ್ಲ.. ಅವರ ಪುತ್ರ ನಟ ಮನೋರಂಜನ್.

ಇಂದು ರವಿಚಂದ್ರನ್ ತಮ್ಮ 56ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಅಭಿಮಾನಿಗಳೊಂದಿಗೆ ತಮ್ಮ ನಿವಾಸದಲ್ಲಿ ರವಿಚಂದ್ರನ್ ಬರ್ತಡೇ ಸಂಭ್ರಮ ಸಖತ್ ಜೋರಾಗಿದೆ. ಒಂದು ಕಡೆ ಅಭಿಮಾನಿಗಳ ಉಡುಗೊರೆಯಾದರೆ, ಇತ್ತ ಮಗ ಮನೋರಂಜನ್ ಸಹ ಒಂದು ವಿಶೇಷ ಉಡುಗೊರೆ ನೀಡಿದ್ದಾರೆ.[ಮನೋರಂಜನ್ 'ಸಾಹೇಬ' ತೆರೆಗೆ ಬರಲು ದಿನಾಂಕ ನಿಕ್ಕಿ ಆಯ್ತು]

ಅಪ್ಪ ರವಿಚಂದ್ರನ್ ಅವರ ಈ ವರ್ಷದ ಹುಟ್ಟುಹಬ್ಬದ ಆಚರಣೆಯನ್ನು ಮಗ ಮನೋರಂಜನ್ ಹೇಗೆ ಸಂಥಿಂಗ್ ಸ್ಪೆಷಲ್ ಮಾಡಿದ್ದರು ಅಂತ ತಿಳಿಯಲು ಫೋಟೋ ಸ್ಲೈಡ್ ಪ್ಲೀಸ್...

'ಸಾಹೇಬ' ಟ್ರೇಲರ್

ರವಿಚಂದ್ರನ್ ಹುಟ್ಟುಹಬ್ಬದ ವಿಶೇಷವಾಗಿ ಮನೋರಂಜನ್ ನಟನೆಯ 'ಸಾಹೇಬ' ಸಿನಿಮಾದ ಎರಡನೇ ಟ್ರೇಲರ್ ರಿಲೀಸ್ ಆಗಲಿದೆ.

ರವಿಚಂದ್ರನ್ ಗಾಗಿ ಒಂದು ಹಾಡು

'ಸಾಹೇಬ' ಚಿತ್ರತಂಡ ಟ್ರೇಲರ್ ನೊಂದಿಗೆ ಸಿನಿಮಾದ ಒಂದು ವಿಡಿಯೋ ಸಾಂಗ್ ಸಹ ರವಿಚಂದ್ರನ್ ಬರ್ತಡೇ ವಿಶೇಷವಾಗಿ ರಿಲೀಸ್ ಮಾಡಲಿದೆ. ಆ ಮೂಲಕ ಅಪ್ಪನ ಹುಟ್ಟುಹಬ್ಬಕ್ಕೆ ಮಗ ಸ್ಪೆಷಲ್ ಗಿಫ್ಟ್ ಕೊಡಲಿದ್ದಾರೆ.[ರವಿಚಂದ್ರನ್ ಪುತ್ರ ಮನೋರಂಜನ್ 'ರಣಧೀರ' ಸಿನಿಮಾ ನಿಂತ್ಹೋಯ್ತಾ?]

ಮೊದಲ ಸಿನಿಮಾ

'ಸಾಹೇಬ' ಮನೋರಂಜನ್ ನಟನೆಯ ಮೊದಲ ಸಿನಿಮಾವಾಗಿದ್ದು, ಈ ಚಿತ್ರದ ಮೂಲಕ ಜೂನಿಯರ್ ಕ್ರೇಜಿ ಸ್ಟಾರ್ ಚಿತ್ರರಂಗಕ್ಕೆ ಎಂಟ್ರಿ ಕೊಡಲಿದ್ದಾರೆ.[ಅಪ್ಪನ ಎವರ್ ಗ್ರೀನ್ ಹಾಡಿಗೆ 'ಮನೋರಂಜನ್' ಮಸ್ತ್ ಡ್ಯಾನ್ಸ್ !]

'ಸಾಹೇಬ'ನ ಆಗಮನ

ಮನೋರಂಜನ್ ಅಭಿನಯದ 'ಸಾಹೇಬ' ಸಿನಿಮಾ ಜೂನ್ 9ಕ್ಕೆ ಬಿಡುಗಡೆಯಾಗಲಿದೆ.['ಸಾಹೇಬ' ಚಿತ್ರದ ಬಗ್ಗೆ ಅಚ್ಚರಿಯ ಸಂಗತಿ ಬಿಚ್ಚಿಟ್ಟ ಶಾನ್ವಿ ಶ್ರೀವಾತ್ಸವ]

ಅಪ್ಪ ಮಗನ ಸಿನಿಮಾ ಯಾವಾಗ?

ಅಂದುಕೊಂಡಂತೆ ಆಗಿದ್ದರೆ ಮನೋರಂಜನ್ ಅವರ ಮೊದಲ ಸಿನಿಮಾವನ್ನು ರವಿಚಂದ್ರನ್ ನಿರ್ದೇಶನ ಮಾಡಬೇಕಿತ್ತು. ಆದರೆ ಕಾರಣಾಂತರಗಳಿಂದ ಆ ಚಿತ್ರ ಮುಂದೆ ಹೋಗಿದೆ.['ವಿಐಪಿ' ಮನೋರಂಜನ್ ಜೊತೆ 'ಈ' ಚೆಲುವೆ ಡ್ಯುಯೆಟ್ ಹಾಡ್ತಾರಾ.?]

English summary
Kannada Actor V.Ravichandran's Son Manoranjan starrer 'Saheba' movie trailer and song will be released today (May 30th) as Ravichandran’s 56th birthday special.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada