For Quick Alerts
  ALLOW NOTIFICATIONS  
  For Daily Alerts

  'ಹಾಯ್ ಎಲ್ರಿಗೂ, ನಾನು ಫೇಸ್‌ಬುಕ್‌ಗೆ ಬರ್ತಾ ಇದೀನಿ'; ಅಪ್ಪು ವಿಡಿಯೊ ವೈರಲ್

  |

  ನಟ ಪುನೀತ್ ರಾಜ್‌ಕುಮಾರ್ ನಿಧನ ಹೊಂದಿ ಮುಂದಿನ ತಿಂಗಳ 28ಕ್ಕೆ ಒಂದು ವರ್ಷ ತುಂಬಲಿದೆ. ಹೀಗೆ ಅಪ್ಪು ನಿಧನ ಹೊಂದಿ ಹನ್ನೊಂದು ತಿಂಗಳಾಗುತ್ತಿದ್ದರೂ ಸಹ ಅಪ್ಪು ನೆನಪು ಮಾಸಿಲ್ಲ. ಪ್ರತಿದಿನ ಪುನೀತ್ ರಾಜ್‌ಕುಮಾರ್ ಅವರನ್ನು ನೆನಪು ಮಾಡಿಕೊಳ್ತಾನೇ ಇದ್ದಾರೆ ಅಭಿಮಾನಿಗಳು. ಇನ್ನು ಅಪ್ಪು ಅಭಿಮಾನಿಗಳು ಈ ಹಿಂದೆ ಪುನೀತ್ ರಾಜ್‌ಕುಮಾರ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದ ಪೋಸ್ಟ್‌ಗಳನ್ನು ಶೇರ್ ಮಾಡುವುದರ ಮೂಲಕ ಹಳೆಯ ದಿನಗಳನ್ನು ಸ್ಮರಿಸುತ್ತಿದ್ದಾರೆ.

  ಯಾವುದೇ ಹಬ್ಬವಿರಲಿ, ದಿನಾಚರಣೆಯಿರಲಿ ಹಾಗೂ ಓರ್ವ ಸೆಲೆಬ್ರಿಟಿಯ ಹುಟ್ಟುಹಬ್ಬವಿರಲಿ ಆ ವಿಶೇಷ ದಿನಕ್ಕಾಗಿ ಅಪ್ಪು ಈ ಹಿಂದೆ ಮಾಡಿದ್ದ ಶುಭಾಷಯದ ವಿಡಿಯೋ ಹಾಗೂ ಫೋಟೊಗಳು ಈ ವರ್ಷ ವೈರಲ್ ಆಗಿದ್ದವು. ಅದೇ ರೀತಿ ಇದೀಗ ಪುನೀತ್ ರಾಜ್‌ಕುಮಾರ್ ಫೇಸ್‌ಬುಕ್‌ ಪ್ರವೇಶಿಸಿದ ದಿನ ಮಾಡಿದ್ದ ವಿಡಿಯೊ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಹೌದು, 2016ರ ಸೆಪ್ಟೆಂಬರ್ 29ರಂದು ತಮ್ಮ ಅಧಿಕೃತ ಫೇಸ್‌ಬುಕ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಳ್ಳುವುದರ ಮೂಲಕ ತಾನು ಇನ್ನು ಮುಂದೆ ಫೇಸ್‌ಬುಕ್ ಬಳಸುತ್ತೇನೆ ಎಂಬುದನ್ನು ತಮ್ಮ ಅಭಿಮಾನಿಗಳಿಗೆ ತಿಳಿಸಿದ್ದರು.

  20 ನಿಮಿಷ ಬೆಟ್ಟದ ಹೂ ನೋಡಿ ಹೊರನಡೆದ ಅಶ್ವಿನಿ ಪುನೀತ್ ರಾಜ್‌ಕುಮಾರ್; ಅಪ್ಪು ನಮನದಲ್ಲೂ ಕಣ್ಣೀರು20 ನಿಮಿಷ ಬೆಟ್ಟದ ಹೂ ನೋಡಿ ಹೊರನಡೆದ ಅಶ್ವಿನಿ ಪುನೀತ್ ರಾಜ್‌ಕುಮಾರ್; ಅಪ್ಪು ನಮನದಲ್ಲೂ ಕಣ್ಣೀರು

  'ಹಾಯ್ ಎಲ್ಲರಿಗೂ ಇದು ನನ್ನ ಅಧಿಕೃತ ಫೇಸ್‌ಬುಕ್ ಪೇಜ್. ನಾನು ಇನ್ನುಮುಂದೆ ಫೇಸ್‌ಬುಕ್‌ಗೆ ಬರ್ತಾ ಇದೀನಿ, ಯಾಕ್ ಬರ್ತಾ ಇದೀನಿ ಅಂದ್ರೆ ಇನ್ನುಮುಂದೆ ನಾನು ನನ್ ವಿಷಯಗಳನ್ನು ಫೇಸ್‌ಬುಕ್‌ನಲ್ಲಿ ಅಪ್‌ಡೇಟ್‌ ಮಾಡ್ತಾ ಹೋಗ್ತೀನಿ, ಬೈ' ಎಂಬ ಸೆಲ್ಫೀ ವಿಡಿಯೊ ಹಂಚಿಕೊಳ್ಳುವುದರ ಮೂಲಕ ಆರು ವರ್ಷಗಳ ಹಿಂದೆ ಫೇಸ್‌ಬುಕ್ ಜಗತ್ತಿಗೆ ಎಂಟ್ರಿ ಕೊಟ್ಟಿದ್ದರು ಪುನೀತ್ ರಾಜ್‌ಕುಮಾರ್.

  ಇನ್ನು ಈ ವಿಡಿಯೊಗೆ ಇದೀಗ ಆರು ವರ್ಷಗಳು ತುಂಬಿದ್ದು, ವೈರಲ್ ಆಗಿದೆ. ಪುನೀತ್ ರಾಜ್‌ಕುಮಾರ್ ಅವರ ಅಭಿಮಾನಿಗಳು 'ಬನ್ನಿ ಅಪ್ಪು, ನಿಮ್ಮ ಫೇಸ್‌ಬುಕ್ ಖಾತೆಯಲ್ಲಿ ಯಾವುದಾದರೊಂದು ಅಪ್‌ಡೇಟ್ ಕೊಡಿ' ಎಂದು ಕಾಮೆಂಟ್ ಮಾಡುತ್ತಿದ್ದಾರೆ.

  English summary
  Actor Puneeth Rajkumar old video about his facebook entry is now going viral now. Read on
  Thursday, September 29, 2022, 8:46
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X