For Quick Alerts
  ALLOW NOTIFICATIONS  
  For Daily Alerts

  ಡ್ರಗ್ಸ್ ಪ್ರಕರಣ: ನಟಿ ಸಂಜನಾ-ರಾಗಿಣಿ ಜಾಮೀನು ಅರ್ಜಿ ವಜಾ

  |

  ಡ್ರಗ್ಸ್ ಪ್ರಕರಣದಲ್ಲಿ ಪರಪ್ಪನ ಅಗ್ರಹಾರದ ಜೈಲಿನಲ್ಲಿರುವ ನಟಿ ರಾಗಿಣಿ ದ್ವಿವೇದಿ ಮತ್ತು ಸಂಜನಾ ಗಲ್ರಾನಿ ಅವರ ಜಾಮೀನು ಅರ್ಜಿ ವಜಾಗೊಂಡಿದೆ. ಈ ಮೂಲಕ ಜೈಲಿನಿಂದ ಹೊರಬರುವ ನಿರೀಕ್ಷೆಯಲ್ಲಿದ್ದ ನಟಿಯರಿಗೆ ನಿರಾಸೆಯಾಗಿದೆ.

  ಡ್ರಗ್ಸ್ ಪಕರಣದಲ್ಲಿ ಬಂಧಿತರಾಗಿರುವ ನಟಿಯರ ಜಾಮೀನು ಅರ್ಜಿ ವಿಚಾರಣೆ ನಡೆಸಿದ ವಿಶೇಷ ನ್ಯಾಯಾಲಯದಲ್ಲಿ ರಾಗಿಣಿ ಮತ್ತು ಸಂಜನಾಗೆ ಜಾಮೀನು ನೀಡಲು ನಿರಾಕರಿಸಿದೆ. ಕೇವಲ ನಟಿಯರ ಅರ್ಜಿ ಮಾತ್ರವಲ್ಲ ಪ್ರಕರಣದ ಪ್ರಮುಖ ಆರೋಪಿ ಶಿವಪ್ರಕಾಶ್, ರಾಹುಲ್, ವಿನಯ್ ಜಾಮೀನು ಅರ್ಜಿ ಸಹ ವಜಾಗೊಂಡಿದೆ.

  ಡ್ರಗ್ಸ್ ದಂಧೆಯಲ್ಲಿರುವ 'ಸ್ಟಾರ್ ನಟರ' ಹೆಸರು ಏಕೆ ಹೊರಬರುತ್ತಿಲ್ಲ?ಡ್ರಗ್ಸ್ ದಂಧೆಯಲ್ಲಿರುವ 'ಸ್ಟಾರ್ ನಟರ' ಹೆಸರು ಏಕೆ ಹೊರಬರುತ್ತಿಲ್ಲ?

  NDPS ವಿಶೇಷ ನ್ಯಾಯಾಲಯದ ಜಡ್ಜ್ ಜಿ.ಎಂ ಶೀನಪ್ಪ ಆದೇಶ ಹೊರಡಿಸಿದ್ದಾರೆ. ಹೀಗಾಗಿ, ನ್ಯಾಯಾಂಗ ಬಂಧನದ ಅವಧಿ ಮುಗಿಯವರೆಗೂ ಜೈಲಿನಲ್ಲಿಯೇ ಕಾಲಕಳೆಯಬೇಕಿದೆ. ಸದ್ಯಕ್ಕೆ ರಾಗಿಣಿಯ ಹದಿನಾಲ್ಕು ದಿನ ಜೈಲು ವಾಸ ಪೂರೈಸಿದ್ದರೆ, ಸಂಜನಾ ಹನ್ನೆರೆಡನೇ ದಿನಕ್ಕೆ ಕಾಲಿಟ್ಟಿದ್ದಾರೆ.

  ಜೊತೆ ಜೊತೆಯಲಿ ಮೇಘ ಶೆಟ್ಟಿಗೆ ಬಂತು ಬಂಪರ್ ಆಫರ್ | Filmibeat Kannada

  ಮತ್ತೊಂದೆಡೆ ಸಂಜನಾ ಮತ್ತು ರಾಗಿಣಿ ವಿರುದ್ಧ ಆದಾಯಕ್ಕೆ ಮೀರಿದ ಆಸ್ತಿ ಗಳಿಕೆ ಅನುಮಾನದ ಹಿನ್ನೆಲೆ ಜಾರಿ ನಿರ್ದೇಶನಾಲಯ ಸಹ ದೂರು ದಾಖಲಿಸಿಕೊಂಡು, ತನಿಖೆ ಆರಂಭಿಸಿದೆ. ಇದು ಸಹ ನಟಿಯರಿಗೆ ಕಂಟಕವಾಗಬಹುದು.

  ನಟಿಯರ ಜಾಮೀನು ಅರ್ಜಿ ವಜಾಗೊಳ್ಳುತ್ತಿದ್ದಂತೆ ಸಂಜನಾ ಮತ್ತು ರಾಗಿಣಿಯನ್ನು ವಿಶೇಷ ಕೊಠಡಿಯಿಂದ ಸೆಲ್‌ಗೆ ಸ್ಥಳಾಂತರಿಸಲು ಸಿದ್ಧತೆ ನಡೆಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

  English summary
  Sandalwood Drug Racket: NDPS special court rejects Bail plea of Actress Sanjana galrani and Ragini dwivedi.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X