»   » ಅಂತೂ ತೆಲುಗಿನ 'ಕಿರಿಕ್ ಪಾರ್ಟಿ' ಸಿನಿಮಾಗೆ ಸಾನ್ವಿ ಸಿಕ್ಕಳು.!

ಅಂತೂ ತೆಲುಗಿನ 'ಕಿರಿಕ್ ಪಾರ್ಟಿ' ಸಿನಿಮಾಗೆ ಸಾನ್ವಿ ಸಿಕ್ಕಳು.!

Posted By:
Subscribe to Filmibeat Kannada
ಕಿರಿಕ್ ಪಾರ್ಟಿ ರಿಮೇಕ್ ಕಿರ್ರಕ್ ಪಾರ್ಟಿಗೆ ಸಾನ್ವಿ ಸಿಕ್ಕಾಯ್ತು | Filmibeat Kannada

ಕನ್ನಡದ 'ಕಿರಿಕ್ ಪಾರ್ಟಿ' ಸಿನಿಮಾ ತೆಲುಗು ಭಾಷೆಗೆ ರಿಮೇಕ್ ಆಗುತ್ತಿರುವ ವಿಷಯ ಎಲ್ಲರಿಗೂ ತಿಳಿದಿದೆ. ಈಗ ಈ ಚಿತ್ರಕ್ಕೆ ನಾಯಕಿಯ ಆಯ್ಕೆ ಆಗಿದೆ. ಸಿನಿಮಾದ ಮುಖ್ಯ ಪಾತ್ರವಾದ ಸಾನ್ವಿ ಪಾತ್ರಕ್ಕೆ ಇದೀಗ ಚಿತ್ರತಂಡ ಒಬ್ಬ ಚೆಲುವೆಯನ್ನು ಆಯ್ಕೆ ಮಾಡಿಕೊಂಡಿದೆ.

'ಕಿರಿಕ್ ಪಾರ್ಟಿ' ಸಿನಿಮಾದಲ್ಲಿ ಇಬ್ಬರು ನಾಯಕಿಯರಾಗಿರುವ ಕಾರಣ ಸಾನ್ವಿ ಪಾತ್ರ ಚಿತ್ರದ ಅರ್ಧ ಭಾಗ ಮಾತ್ರ ಇತ್ತು. ಜೊತೆಗೆ ಆ ಪಾತ್ರಕ್ಕೆ ತುಂಬ ಪ್ರಾಮುಖ್ಯತೆ ಇತ್ತು. ಸಿನಿಮಾ ರಿಲೀಸ್ ಆದ ಮೇಲೆ ನಿರೀಕ್ಷೆಗೂ ಮೀರಿ ಆ ಪಾತ್ರ ಜನರಿಗೆ ಹತ್ತಿರವಾಗಿತ್ತು. ಈ ಕಾರಣದಿಂದ ತೆಲುಗಿನಲ್ಲಿ ಬರುತ್ತಿರುವ ಈ ಚಿತ್ರದಲ್ಲಿ ಯಾರು ನಟಿಸುತ್ತಾರೆ ಎಂಬುದು ದೊಡ್ಡ ಪ್ರಶ್ನೆಯಾಗಿತ್ತು. ಈಗ ಟಾಲಿವುಡ್ 'ಕಿರಿಕ್ ಪಾರ್ಟಿ'ಗೆ ಮುದ್ದಾದ ಸಾನ್ವಿ ಸಿಕ್ಕಿದ್ದಾಳೆ. ಮುಂದೆ ಓದಿ....

ಸಿಮ್ರನ್ ಪಾರೀಂಜಾ

ತೆಲುಗಿನ 'ಕಿರಿಕ್ ಪಾರ್ಟಿ' ಸಿನಿಮಾದಲ್ಲಿ ಸಾನ್ವಿ ಆಗಿ ಬಾಲಿವುಡ್ ಕಿರುತೆರೆ ನಟಿ ಸಿಮ್ರನ್ ಪಾರೀಂಜಾ ಕಾಣಿಸಿಕೊಳ್ಳುತ್ತಿದ್ದಾರೆ. ಇಲ್ಲಿ ರಶ್ಮಿಕಾ ಮಂದಣ್ಣ ಮಾಡಿದ್ದ ಪಾತ್ರವನ್ನು ಟಾಲಿವುಡ್ ನಲ್ಲಿ ಸಿಮ್ರನ್ ನಿರ್ವಹಿಸಲಿದ್ದಾರೆ.

ಕಿರುತೆರೆ ನಟಿ

ಸಿಮ್ರನ್ ಪಾರೀಂಜಾ ಹಿಂದಿ ಸೀರಿಯಲ್ ಗಳಲ್ಲಿ ಒಳ್ಳೆಯ ಹೆಸರು ಮಾಡಿದ್ದಾರೆ. 'ಭಾಗ್ಯಲಕ್ಷ್ಮಿ' ಸೇರಿದಂತೆ ಜೀ ವಾಹಿನಿಯ ಕೆಲ ಧಾರಾವಾಹಿಯ ಲೀಡ್ ರೋಲ್ ನಲ್ಲಿ ಇವರು ನಟಿಸಿದ್ದಾರೆ.

ಸಂಯುಕ್ತ ಹೆಗ್ಡೆ

ಚಿತ್ರದ ಮತ್ತೊಬ್ಬ ನಾಯಕಿಯಾಗಿ ತೆಲುಗಿನಲ್ಲಿಯೂ ತಮ್ಮ ಪಾತ್ರವನ್ನು ಸಂಯುಕ್ತ ಹೆಗ್ಡೆ ಅವರೇ ನಿರ್ವಹಿಸಲಿದ್ದಾರೆ. ಈ ಚಿತ್ರ ಮೂಲಕ ಸಂಯುಕ್ತ ಟಾಲಿವುಡ್ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ.

ಚಿತ್ರದ ಬಗ್ಗೆ

ಟಾಲಿವುಡ್ 'ಕಿರಿಕ್ ಪಾರ್ಟಿ'ಗೆ ಚಿತ್ರಕ್ಕೆ 'ಕಿರ್ರಕ್ ಪಾರ್ಟಿ' ಎಂಬ ಟೈಟೆಲ್ ಫಿಕ್ಸ್ ಆಗಿದೆ. ಈ ಹಿಂದೆ 'ಹ್ಯಾಪಿ ಡೇಸ್' ಸಿನಿಮಾದಲ್ಲಿ ನಟಿಸಿದ್ದ ನಟ ನಿಖಿಲ್ ಈ ಚಿತ್ರದಲ್ಲಿ ನಾಯಕನಾಗಿದ್ದಾರೆ. ರಕ್ಷಿತ್ ಶೆಟ್ಟಿ ಪಾತ್ರದಲ್ಲಿ ನಿಖಿಲ್ ಮಿಂಚುವುದಕ್ಕೆ ಸಜ್ಜಾಗಿದ್ದಾರೆ.

ಶರಣ್ ನಿರ್ದೇಶನ

ಸಿನಿಮಾವನ್ನು ಶರಣ್ ಎಂಬುವವರು ನಿರ್ದೇಶನ ಮಾಡುತ್ತಿದ್ದಾರೆ. ಹೈದರಾಬಾದ್ ನಲ್ಲಿಯೇ ಚಿತ್ರದ ಶೂಟಿಂಗ್ ನಡೆದಿದ್ದು, 70 ರಷ್ಟು ಚಿತ್ರೀಕರಣ ಮುಗಿದಿದೆ.

ಅಜನೀಶ್ ಲೋಕನಾಥ್

'ಕಿರಿಕ್ ಪಾರ್ಟಿ' ಸಿನಿಮಾಗೆ ಸಂಗೀತ ನೀಡಿದ್ದ ಅಜನೀಶ್ ಲೋಕನಾಥ್ ಅವರೇ ತೆಲುಗು ಚಿತ್ರಕ್ಕೆ ಮ್ಯೂಸಿಕ್ ನೀಡುತ್ತಿದ್ದಾರೆ. ಕನ್ನಡದ ಛಾಯಾಗ್ರಾಹಕ ಅಧ್ವೈತ್ ಗುರುಮೂರ್ತಿ ಈ ಚಿತ್ರದಲ್ಲಿ ಕೆಲಸ ಮಾಡುತ್ತಿದ್ದಾರೆ.

English summary
Hindi tv actress Simran Pareenja will play lead role in 'Kirrak Party' Telugu Movie. 'Kirrak Party' is a remake of kannada movie Kirik Party.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada